"ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂಬ ಪುರಂದರದಾಸರ ಮಾತು ಸತ್ಯವಾಗಿಯೂ ಪ್ರಸ್ತುತವಾದದ್ದು. ಅದೆಷ್ಟೊ ಸಾವಿರ ವರ್ಷಗಳಿಂದ ಮನುಷ್ಯತ್ವಕ್ಕೆ ಒಂದು ವಿಶೇಷ ಪ್ರಾಮುಖ್ಯತೆಯನ್ನು ಕೊಡುತ್ತಾ ಬಂದಿರುವ ಸಂಸ್ಕೃತಿ ನಮ್ಮದು. ಮನುಷ್ಯತ್ವ ಕೇವಲ ಕರುಣೆಯೋ ಕಾಳಜಿಯೋ ಖಂಡಿತವಾಗಿ ಅಲ್ಲ ಬಹುಶಃ ಮನುಷ್ಯತ್ವ ಎಂಬ ಪದಕ್ಕೆ ನಿರ್ದಿಷ್ಟ ಅರ್ಥ ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯತ್ವ ನಮ್ಮ ಒಳಮನಸ್ಸಿನ ಸದ್ಭಾವನೆ. ಮನುಷ್ಯತ್ವದಿಂದ ಒಬ್ಬ ಮನುಷ್ಯನ ಬದುಕಿಗೆ ಬೆಲೆ ನಾವು ತಿಳಿಯಬಹುದೇ ಹೊರತು ಮನುಷ್ಯತ್ವಕ್ಕೆ ಬೆಲೆ ಕಟ್ಟಲು ಎಂದಿಗೂ ಆಗದು. ಇನ್ನೊಬ್ಬರ ಭಾವನೆಗಳಿಗೆ, ಕಷ್ಟಗಳಿಗೆ, ಸ್ಪಂದಿಸುವ ಮನಸ್ಸು ನಮ್ಮದಾಗಿದ್ದರೆ ಖಂಡಿತವಾಗಿಯೂ ನಮ್ಮಲ್ಲಿನ 'ಮನುಷ್ಯತ್ವ' ಜೀವನದ ಪ್ರತಿ ಸಂದರ್ಭದಲ್ಲೂ ನಮ್ಮನ್ನು ಎಚ್ಚರಿಸುತ್ತ ಬರುತ್ತದೆ. ಬದಲಾಗುತ್ತಿರುವ ಕಾಲಮಾನದಲ್ಲಿ ಮನುಷ್ಯತ್ವ ಎಂಬುದು ಗಾಳಿಗೆ ತೂರಿರುವ ತರಗೆಲೆಯಾಗಿರುವುದು ಖಂಡಿತವಾಗಿ ವಿಷಾದನೀಯ. ಎಲ್ಲೋ ರಸ್ತೆಯಲ್ಲಿ ಅಪಘಾತ ವಾದದ್ದು ಕಂಡರೆ ನಮಗೇತಕೆ ಉಸಾಬರಿ? ಎಂದು ಅಲ್ಲಿಂದ ಜಾಗ ಖಾಲಿ ಮಾಡಲು ನೋಡುವ ಮಂದಿ ಒಂದುಕಡೆಯಾದರೆ ಇಂತಹ ಸನ್ನಿವೇಶ ಕಂಡರೆ ಸಾಕು ತಮ್ಮ ಕಿಸೆಯೊಳಗೆ ಕೈ ತುರುಕಿ ಮೊಬೈಲಿನಲ್ಲಿ ಆ ದೃಶ್ಯವನ್ನು ಸೆ...
ಪೋಸ್ಟ್‌ಗಳು
ಅಕ್ಟೋಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ