ಪೋಸ್ಟ್‌ಗಳು

ಮೇ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಳ್ಳಿಯ ಬಾಳು

  ನಮ್ಮ ದೇಶದ ರೈತ ನಮ್ಮ ದೇಶದ ಬೆನ್ನು ಮೂಳೆ . ಅವನೇ ನಮ್ಮ ಜನತೆಯ ಜೀವಾಳ. ಅವನಲ್ಲಿ ಅಡಗಿರುವ ಸಂಸ್ಕೃತಿಯೇ ನಮ್ಮ ಪ್ರಾಣವಾಯು. ಪರದೇಶದ ನಾಗರಿಕತೆ ಪ್ರಭಾವಕ್ಕೆ ಒಳಗಾದ ನಾವು  ನಮ್ಮದೆನ್ನುವುದನ್ನೆಲ್ಲ ಕಳೆದುಕೊಂಡಿದ್ದೇವೆ. ಪಾಶ್ಚಾತ್ಯ ನಾಗರಿಕತೆಗೆ ವಿದ್ಯಾವಂತರೆನಿಸಿಕೊಂಡವರು ಬಲಿಯಾಗಿರುವಷ್ಟು ಅವಿದ್ಯಾವಂತರಾದ ಹಳ್ಳಿಯವರು ಒಳಗಾಗಿಲ್ಲವೆಂಬುದು ನಿಜ. ಅಧಿಕ ವಿದ್ಯೆಯನ್ನು ಹೊಂದಿದ ವಿದ್ಯಾವಂತರಿಗೆ ರಾಮಾಯಣ, ಮಹಾಭಾರತ ಚರಿತ್ರೆಗಳು ಕನ್ನಡ ನಾಡಿನಲ್ಲಿದ್ದರೂ ಸಹ ಅದರ ಬಗ್ಗೆ ಸರಿಯಾಗಿ ತಿಳಿದಿಲ್ಲ .ಅಷ್ಟರಮಟ್ಟಿಗೆ ಕೇವಲ ಪಾಶ್ಚಾತ್ಯ ಶಿಕ್ಷಣಕ್ಕೆ ಮಾರುಹೋಗಿದ್ದಾರೆ.                                   ಕಾಲಕ್ರಮೇಣವಾಗಿ  ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಕಾಲದ ಸುಳಿಯಲ್ಲಿ ಹಳ್ಳಿಗಳು ಸಿಲುಕಿಕೊಂಡಿಲ್ಲ. ಇದಕ್ಕೆ ಕಾರಣ ಇಂಗ್ಲಿಷರ  ರಾಜ್ಯ ಇಲ್ಲಿ 200 ವರ್ಷಗಳಿಂದ ಆಳಿದರೂ  ಹಳ್ಳಿಗಳಿಗೆ ಆ ನಾಗರಿಕತೆಯ ಪ್ರಭಾವ ಹೆಚ್ಚಾಗಿ ಸೋಕಿಲ್ಲದಿರುವುದು, ನಮ್ಮ ಜನ ಯಾವುದನ್ನು ಸ್ವೀಕರಿಸುವುದೂ  ನಿಧಾನ, ಹಳೆಯ ಆಚಾರ- ವಿಚಾರವನ್ನು ಬಿಡುವುದೂ ನಿಧಾನ, ಇದರಿಂದಲೇ ಹಳ್ಳಿಗಳಲ್ಲಿ ಉಳಿದಿರುವ ಸಂಸ್ಕೃತಿ ನಮ್ಮ ಜೀವನದ ನಿಜವಾದ ಜೀವಾಳ.                 ನಾಗರಿಕತೆಗಳಹೋರಾಟಗಳಲ್ಲಿ ನಮ್ಮ ವೈಶಿಷ್ಟಗಳನ್ನು ಕಾಪಾಡಿಕೊಂಡಿರುವುದೇ ಹಳ್ಳಿಗಳ ಸಂಸ್ಕೃತಿ. ರವೀಂದ್ರನಾಥ್  ಟಾಗೂರ್   ಹೇಳಿರುವಂತೆ,
 ಅಭಿನಂದನೀಯ ಸನಾತನ ಶೈಲಿ ಕೋವಿಡ್-19 ಎಂಬ ಮಹಾಮಾರಿ ಸೋಂಕು ಕೆಲ ವರ್ಷಗಳ ಹಿಂದೆ  ಎಲ್ಲರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಕ್ಷಣ. ವ್ಯಾಪಕವಾಗಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ  ಭಾರತದ ಪ್ರಾಚೀನ ಜೀವನ ಶೈಲಿ ,ಆಯೂರ್ವೇದ ಸೇರಿದಂತೆ  ವೈದ್ಯಕೀಯ ಪದ್ದತಿಯು ಮುನ್ನಲೆಗೆ ಬಂದಿದೆ.    "ಓಲ್ಡ್ ಇಸ್ ಗೋಲ್ಡ್ "     ಎಂಬ ಮಾತು  ಸರಿ ಎಂಬ ಅಭಿಪ್ರಾಯಕ್ಕೆ ಜನ ತಲೆದೂಗುತ್ತಿದ್ದಾರೆ.                    ನಮ್ಮ ಹಳೆಯ ಆಚಾರ ವಿಚಾರಗಳನ್ನು ಗಮನಿಸಿದರೆ ಹಿರಿಯರು ನಮಗೆ ಏನೇ ಹೇಳಿದರು ಅದು ನಮ್ಮ ಒಳ್ಳೆಯದಕ್ಕೆ ಆಗಿರುತ್ತದೆ, ಎಂದು ಅದು ಕೋವಿಡ್ ನ ಸಮಯದಲ್ಲಿ ಅರಿವಾಯಿತು.         ಉದಾ: ನೋಡುವುದಾದರೇ ಕುಟುಂಬದ ಹಿರಿಯರು ಪ್ರತಿ ಊಟದ ಮೊದಲು ನೀವು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ತೊಳೆದುಕೊಳ್ಳಿ ಎಂದು ಒತ್ತಾಯಿಸಿದ್ದು ನಿಮಗೆ ಇನ್ನು ನೆನಪಿರಬಹುದು.....             ಯಾವುದೇ ಋತುವಾದರೂ ಸರಿ  ಎದ್ದೊಡನೆ ಸ್ನಾನ ಮಾಡಬೇಕು ಬಾಗಿಲ ಹೊರಗೆ ಚಪ್ಪಲಿಯನ್ನು ಬಿಡಬೇಕು. ಇತ್ತೀಚಿನ ದಿನಗಳವರೆಗೂ ಇವೆಲ್ಲವೂ ಹಳೆಯ ಕಾಲದ ಪದ್ಧತಿಗಳು ಎಂದುಕೊಳ್ಳಲಾಗಿತ್ತು. ಆದರೆ ಕೋವಿಡ್ 19 ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿಕೊಂಡಿರುವುದರಿಂದ ದಿಢೀರ್ ಎಂದು  ಈ ಎಲ್ಲಾ ಅಭ್ಯಾಸಗಳಿಗೂ ಹೊಸ ಅರ್ಥ ಬಂದಿದೆ.                   ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಿರ್ದೇಶನದಂತೆ ನಾವೆಲ್ಲರೂ 20 ಸೆಕೆಂಡುಗಳಿಗೆ ಸಾಬೂನಿನಿಂದ ಮತ್ತು ನೀರ

ಗುಡಿಗಾರ ಸಮಾಜ

     ಮರೆಗೆಲಸ ಮಾಡುವವರನ್ನು ಬಡಗಿ ಆಚಾರಿ ಎಂದು ಕರೆಯುವುದು ವಾಡಿಕೆ. ಆದರೆ ಶ್ರೀಗಂಧದ ಮರದ ಕೆತ್ತನೆ ಮಾಡುವವರನ್ನು ಗುಡಿಕಾರರೆಂದು ಕರೆಯುತ್ತಾರೆ. ಕಟ್ಟಿಗೆಯ ಕೆಲಸದೊಂದಿಗೆ ಕೆಲ  ಮಟ್ಟಿಗೆ ಬೆಂಡು ಮಣ್ಣು ಕೊಂಬು ದಂತಗಳ ಕೆಲಸವನ್ನು ಇವರು ಮಾಡುತ್ತಾರೆ. ಬೆಂಡಿನಿಂದ ಹೂಮಾಲೆ ತಯಾರಿಸುತ್ತಾರೆ. ಮಣ್ಣಿನಿಂದ ಮೂರ್ತಿ ತಯಾರಿಸುತ್ತಾರೆ. ಕೊಂಬು ದಂತಗಳಿಂದ ವಿವಿಧ ವಸ್ತುಗಳನ್ನು ರಚಿಸುತ್ತಾರೆ. ಆದರೆ ಹೆಚ್ಚಾಗಿ ಗಂಧದ ಕಟ್ಟಿಗೆಯಿಂದ ಇವರು ತಮ್ಮ ಕೌಶಲ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮೂಡಿಸುತ್ತಾರೆ. ಗಂಧದ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಗುಡಿಗಾರ ಎಂದು ಕರೆಯುತ್ತಾರೆ. ಈ ಗುಡಿಗಾರರನ್ನು ಕೆಲವೆಡೆ ಶೇಟ್ ಎಂದು ಶೆಟ್ಟಿ ಎಂದು ಹೀಗೆ ಗೋವಾದಲ್ಲಿ ಚಿತಾರಿ ಎಂದು ಕರೆಯುತ್ತಾರೆ. ಅವರ ಕೆಲಸವನ್ನು ನೋಡಿಯೇ ಅವರನ್ನು ಗುಡಿಗಾರರೆಂದು ಗುರುತಿಸಬೇಕಾದ ಪರಿಸ್ಥಿತಿ ಕೆಳಗಡೆ ಉಂಟು.           ಇಂದಿನ ಬಡಗಿಗಳು ವಿಶ್ವಕರ್ಮನ ವಂಶಸ್ಥರು ನಾವು ಎಂದು ಹೇಳಿಕೊಳ್ಳುತ್ತಾರೆ. ಗುಡಿಗಾರರಲ್ಲಿಯೇ ಮರದ ಕೆತ್ತನೆಯ ಬಾಗಿಲು ರಥ ತಯಾರಿಕೆ ದೇವರ ಮಂಟಪ ಗುಡಿ ಗೋಪುರ ನಿರ್ಮಾಣ ಗುಡಿ ಒಳಗಿನ ಕೆತ್ತನೆ ಮೇಲ್ಚಾವಣಿ ವೃತ್ತು ಕೆತ್ತುವುದರಲ್ಲಿಯೂ ಕೆಲವರು  ಸಿದ್ಧಿ ಪಡೆಯುವುದು ಈ ಮಾತಿಗೆ ಸಮರ್ಥನೆಯನ್ನು ಕೊಡುತ್ತದೆ.         ಕನ್ನಡ ನಾಡಿನ ಗುಡಿಗಾರರು ಮೂಲತಃ ಗೋವಾದವರು. ಅರಮನೆ ಶೃಂಗಾರಕ್ಕೂ, ಗುಡಿ ನಿರ್ಮಾಣಕ್ಕೆ. ವಿಜಯನಗರದ ಅರಸರುಗಳು ಇವರನ್ನು ಕನ್ನಡ
 ಯಾಣ, ಭಾರತ ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರಕನ್ನಡ ಜಿಲ್ಲೆಗೆ ಸೇರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಕುಮಟಾದಿಂದ ೩೧ ಕಿಲೋಮೀಟರ್ ದೂರದಲ್ಲಿದೆ. ಕಾರವಾರದಿಂದ ೯೦ ಕಿಲೋಮೀಟರ್ ದೂರದಲ್ಲಿದೆ. ಅಂಕೋಲಾದಿಂದ ೫೬ ಕಿಲೋಮೀಟರ್ ಇದೆ. ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಭೈರವೇಶ್ವರ ಶಿಖರ ಮತ್ತು ಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀಟರ್(೩೯೦ಅಡಿ) ಎತ್ತರವಿದೆ. ಮೋಹಿನಿ ಶಿಖರವು ೯೦ ಮೀಟ‌ರ್ (೩೦೦ಅಡಿ) ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ್ ಎತ್ತರವಾಗಿದೆ. ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ. ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್

ಶಿಲಾ ರೂಪಿ ಕೈಟಬೇಶ್ವರ

ಇಮೇಜ್
   ಅಟ್ಟಹಾಸ ಎಲ್ಲೇ ಮೀರಿದಾಗ ಸರ್ವ ಶಕ್ತನಾದ ಭಗವಂತ ಭೂಮಿಯಲ್ಲಿ ಅವತರಿಸಿ ನಂಬಿ ಬಂದ ಭಕ್ತರನ್ನ ಬೆನ್ನ ಬಿಡದೆ ಕಾಪಾಡುತ್ತಾನೆ. ಹಾಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರದಲ್ಲಿ ಕೈಟಬೇಶ್ವರ ನೆಲೆ ನಿಂತು ತನ್ನ ನಂಬಿ ಬಂದ ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ.                ಚಿನ್ಮಯಿ ರೂಪದಲ್ಲಿರುವ ಈಶ್ವರನು ದೇವರ ಗರ್ಭಗುಡಿಯೊಳಗೆ ಶಾಂತವಾದ ಮುಖ ಮುದ್ರೆಯಿಂದ ಕಂಗೊಳಿಸುತ್ತಿದ್ದಾನೆ .ಇವನನ್ನ ನಂಬಿ ಬಂದ ಭಕ್ತರಿಗೆ ತನ್ನ ಬಲವು ಅನುಗ್ರಹವನ್ನು ಎಂದಿಗೂ ಇಟ್ಟು ಕಾಪಾಡುತ್ತಿರುವ ಪರಮೇಶ್ವರನು.                      ಈ ದೇವಾಲಯವು ಕ್ರಿಸ್ತಶಕ 100 ರಲ್ಲಿ ಹೊಯ್ಸಳರ ರಾಜ್ಯ ವಿಕ್ರಮಾದಿತ್ಯನಿಂದ ನಿರ್ಮಿತವಾಗಿದೆ.ಎಲ್ಲಾ ದೇವಾಲಯದಲ್ಲಿಯೂ ಸಾಮಾನ್ಯವಾಗಿ ಲಿಂಗಗಳು ಕಪ್ಪು ಬಣ್ಣದಲ್ಲಿದ್ದರೆ ಇಲ್ಲಿ ಮಾತ್ರ ನೀಲವರ್ಣ ಪರಮೇಶ್ವರನ ಲಿಂಗವು ಕಂಗೊಳಿಸುತ್ತದೆ. ಈ ಅಪರೂಪದ ಪರಮಾತ್ಮನನ್ನು ನೋಡುವುದೇ ಒಂದು ಅದ್ಭುತವಾಗಿದೆ.               ಈ ಕ್ಷೇತ್ರದ ಮತ್ತೊಂದು ಮಹಿಮೆ ಏನೆಂದರೆ ಯುಗಾದಿ ಹಬ್ಬದ ದಿನ ಸೂರ್ಯನ ಕಿರಣಗಳು ನೇರವಾಗಿ ಪರಶಿವನ ನೆತ್ತರದ ಮೇಲೆ ಸ್ಪರ್ಶವಾಗಿ ಬೀಳುತ್ತದೆ. ಆ ದಿನ ಸಾವಿರಾರು ಭಕ್ತರು ಈ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಕಾದು ಕುಳಿತಿರುತ್ತಾರೆ. ಈ ಕೈಟಬೇಶ್ವರ ನನ್ನ ಗಿರಿಜಮ್ ಗಣೇwwಶಂ ಗಳೇ ನೀಲ ವರ್ಣಂ| ಗಜೇಂದ್ರದಿ ರೂಢಮ್ ಗುಣಾತೀತ ರೂಪಂ| ಭವಂ ಭಾಸ್ವರಂ ಭಸ್ಮಾನುಭೋಷಿತ | ಭವಾನಿ ಕುಲಂದ
 ತ್ಯಾಗಮಯಿ  ಅಮ್ಮ ಅಮ್ಮನಿಗಾಗಿ ಒಂದೇ ಒಂದು ದಿನವೂ ಅವರ ತ್ಯಾಗಕ್ಕೆ ಪ್ರೀತಿಗೆ ಪ್ರತಿಕ್ಷಣ ಅವರ ಸೇವೆಯನ್ನು ಮಾಡಿದರು ಅವರ ಋಣ ತೀರಿಸಲಾಗದು...... ಆದರೂ ಸಹ ನನ್ನ ಅಮ್ಮನ ಬಗ್ಗೆ ಬರೆಯಬೇಕೆಂಬುದು ನನ್ನದೊಂದು ಆಸೆ....... ಅಮ್ಮನ ಕುರಿತು ಬರೆಯಲು ಪದಗಳೇ ಸಾಲದು. ನನ್ನ ಅಮ್ಮ ಅಂತಲ್ಲ, ಅಮ್ಮ ಅಂದರೆ ಹಾಗೆ ಪದಗಳಿಂದ ವರ್ಣಿಸಲಾಗದು. ನಾನು ಕಂಡ ಪ್ರತ್ಯಕ್ಷ ದೇವತೆ ಅಂದರೆ ಬಿಡುವಿಲ್ಲದೆ ದುಡಿಯುವ ತ್ಯಾಗಮಯಿ ನನ್ನ ಅಮ್ಮ...... ಮತ್ತೆ ಮರುಜನ್ಮ ಅಂತಿದ್ದತೆ ಈ ಮಹಾತಾಯಿಗೆ ಮಗಳಾಗಿ ಅಲ್ಲದಿದ್ದರೂ ಅವರ ಪಾದ ಧೂಳಿನ ಕಣವಾದರೂ ನಾನು ಧನ್ಯ.... ತಾಯಿಯು ಜಗತ್ತಿನಲ್ಲಿ ಮತ್ತೊಂದು ರೂಪ. ತಾಯಿ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಧ್ಯವಿಲ್ಲ. ತಾಯಿಯು ಜೀವ ನೀಡುವವಳು ಮಾತ್ರವಲ್ಲದೆ ಇನ್ನು ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ...... ಒಂದು ತಾಯಿಯ ಜೀವನವು ಹೋರಾಟಗಳಿಂದ ತುಂಬಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ತಾಯಿಗೆ ಹಲವಾರು ಜವಾಬ್ದಾರಿಗಳಿವೆ. ನಮ್ಮ ಯಶಸ್ಸಿಗಾಗಿ ತಾಯಿಯು ಯಾವಾಗಲು ಶ್ರಮಿಸುತ್ತಾಳೆ. ನಾವು ತಪ್ಪು ದಾರಿಯಲ್ಲಿ ಹೋದಾಗ ಅಥವಾ ನಮಗೆ ದಾರಿ ಅರ್ಥವಾಗದಿದ್ದಾಗ ತಾಯಿ ನಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾಳೆ. ಅದಕ್ಕಾಗಿಯೇ ನನ್ನ ತಾಯಿಯು ನನ್ನ ಸ್ಫೂರ್ತಿಯ ಮೂಲವಾಗಿದೆ..... ಅಮ್ಮನ ಕೈ ರುಚಿಯ ಬಗ್ಗೆ ಹೇಳಲೇ ಬೇಕು... ಎಲ್ಲಾ ಅಮ್ಮಂದಿರು ಅಡುಗೆಯಲ್ಲಿ ಅತ್ಯದ್ಭುತ ಕಲೆಗಾರರು ಎಂದರು ತಪ್ಪಾಗಲಾರದು. ಅವರು ಯಾವ ರೀತಿಯ
 My first day at college      My first day at college is the most memorable day in my life. The day was so thrilling and memorable that i can still remember it clearly. It opened before me a new horizon of life. At last the long cherished day came to my life in the month of October, 2023. I reached the college by my mother's Scooty early in the morning. I entered the college campus with curiosity and found that most of the faces where unknown to me I was walking here and there until I met one of my school friends.    She advised me to note down the routine from the notice board. I followed her advise and took down the routine. It was the first thing that I did on my first day at college. I experienced that the system in the college was different from what I was accustomed to in the school. There my first surprise came when I found that I would have to change my classroom after every period. I also did not know that roll-call was done in each period.    When the bell rang for the fi
ಇಮೇಜ್
 ವಿಶ್ವ ರೆಡ್ ಕ್ರಾಸ್ ದಿನ  ವಿಶ್ವ ರೆಡ್ ಕ್ರಾಸ್ ದಿನವು ಮೇ 8 ರಂದು ಆಚರಿಸಲಾಗುತ್ತದೆ. ಇದು ರೆಡ್ ಕ್ರಾಸ್ ಮತ್ತು ರೆಡ್ ಕ್ರಸೆಂಟ್ ಚಲನೆಯ ಜನಕ ಹೆನ್ರಿ ಡ್ಯೂನಾಂಟ್‌ ಅವರ ಜನ್ಮ ದಿನವಾಗಿದೆ. ಈ ದಿನವನ್ನು ರೆಡ್ ಕ್ರಾಸ್ ಮತ್ತು ರೆಡ್  ಕ್ರೆಸೆಂಟ್ ಚಲನೆಯನ್ನು ಪ್ರಚಾರ ಮಾಡಲು ಮತ್ತು ಮಾನವೀಯ ತತ್ವ ಮಹತ್ವವನ್ನು ಗುರುತಿಸಲು ನಿಶ್ಚಯಿಸಲಾಗಿದೆ. ಈ ದಿನವು ರೆಡ್ ಕ್ರಾಸ್ ಸಂಸ್ಥೆಯು ಮಾಡುತ್ತಿರುವ ಮಾನವೀಯ ಕಾರ್ಯಗಳನ್ನು ಪ್ರಚಾರ ಮಾಡುತ್ತದೆ, ಇದು ಜಗತ್ತಿನಾದ್ಯಂತ ಬಾಂಧವ್ಯವನ್ನು ಮತ್ತು ಮಾನವೀಯತೆ ತತ್ವವನ್ನು ಬಲಪಡಿಸಲು ಸಹಾಯಕವಾಗಿದೆ.  ರೆಡ್ ಕ್ರಾಸ್ ಸಂಸ್ಥೆಯು ಜೀವ ಉಳಿಸುವ ಹಲವಾರು ಸೇವೆಗಳನ್ನು ಒದಗಿಸುತ್ತದೆ, ಉದಾಹರಣೆಗೆ, ರಕ್ತದಾನ, ತುರ್ತು ನೆರವು, ಮತ್ತು ವಸತಿ ನೀಡುವುದು. ಈ ದಿನವು ಈ ಎಲ್ಲಾ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಉಂಟುಮಾಡಲು ಸಹಾಯ ಮಾಡುತ್ತದೆ. ವಿಶ್ವ ರೆಡ್ ಕ್ರಾಸ್ ದಿನವು ರೆಡ್ ಕ್ರಾಸ್ ಮತ್ತು ರೆಡ್ ಕ್ರಸೆಂಟ್ ಚಲನೆಯಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಕರ ಶ್ರದ್ಧಾಂಜಲಿಯನ್ನು ನೀಡಿ, ಅವರ ತ್ಯಾಗ ಮತ್ತು ಸೇವೆಗಳನ್ನು ಮೆಚ್ಚಿಸುತ್ತದೆ. ಈ ದಿನವು ಹೊಸ ಸ್ವಯಂಸೇವಕರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ, ಅದು ಮುಂದೆ ಹೆಚ್ಚಿನ ಸೇವೆಗಳನ್ನು ಮತ್ತು ನೆರವನ್ನು ಒದಗಿಸಲು ಸಂಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರೆಡ್ ಕ್ರಾಸ್ ಸಂಸ್ಥೆಯು ತುರ್ತು ಪರಿಸ್ಥಿತಿಗಳಿಗೆ ತಯಾರಿಯಾಗಲು ಮತ್ತು ಅದಕ್ಕೆ ಪರ

ಬೇಡರ ವೇಷ

ಇಮೇಜ್
    ಸಿರ್ಸಿ, ಸುತ್ತಮುತ್ತಲಿನ ಕೆಲ ಕಡೆಯಲ್ಲಿ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕೊಮ್ಮೆ ಕಾಣಿಸಿಕೊಳ್ಳುತ್ತದೆ.ಸಿರ್ಸಿ ಮಾರಿಕಾಂಬಾ ಜಾತ್ರೆ ನಡೆಯುವ ವರ್ಷ  ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳದು ಹೋಳಿ ಹುಣ್ಣಿಮೆಯ ಮುನ್ನ ದಿನಗಳಲ್ಲಿ ಬೇಡರ ವೇಷದ ಸಂಭ್ರಮ ಮುಗಿಲು ಮುಟ್ಟುತ್ತದೆ.ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತಿದೆ. ಇಪ್ಪತ್ತು ದಿವಸಗಳಿಂದಲೇ ಬೇಡರ ವೇಷದ ತಲಿಮು,ತಮಟೆ ಸದ್ದು ಸರ್ವೇ ಸಾಮಾನ್ಯವಾಗಿರುತ್ತದೆ.ಬೇಡರ ವೇಷ ಹಾಕುವ ಗುಂಪೂನಂದನ್ನು ಬಂಡಿ  ಎಂದು  ಕರೆಯಲಾಗುತ್ತದೆ.ದಶಕಗಳ ಹಿಂದೆ ಕೆಲವೇ ಕೆಲವಿದ್ದ  ಬಂಡಿಗಳ  ಸಂಖ್ಯೆ ಈಗ ಹೆಚ್ಚಾಗಿದೆ.ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ ಇಪ್ಪತ್ತು ಬಂಡಿಗಳು ಸಂಚರಿಸಿ ಬೇಡರ ವೇಷವನ್ನು ಮಾಡ್ತಾರೆ.ಈ ವಿಶಿಷ್ಟ ಆಚರಣೆ ನಡೆಸೋದು ಇಡೀ ರಾಜ್ಯದಲ್ಲಿ  ಸಿರ್ಸಿಯಲ್ಲಿ ಮಾತ್ರ ಅನ್ನೋದು ವಿಶೇಷ.ಸಿರ್ಸಿ ಮಾರಿಕಾಂಬೆ   ಜಾತ್ರೆ ನಡೆಯುವ ವರ್ಷ ಬೇಡರ ವೇಷ ನಡೆಯುದಿಲ್ಲ. ಉಳಿದ ವರ್ಷದಲ್ಲಿ ನಡೆಯುತ್ತದೆ. ಬೇಡರ ವೇಷ ಹಾಕಿಕೊಳ್ಳುವವರಿಗೆ ತಿಂಗಳು ಕಾಲ ಕುಣಿತದ ತಾಳಿಮು ನಡೆಯುತ್ತದೆ.ಕುಣಿತದ ದಿನ ನವಿಲು ಗರಿಬಣ್ಣ, ಗೆಜ್ಜೆ, ಮೀಸೆ,ಹತ್ತಿ, ಕೆಂಪುಬಟ್ಟೆ, ಕತ್ತಿ,ಡಾಲು, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡಿರುತ್ತಾರೆ.ನಗರದ ಜನ ರಾತ್ರಿಯಿಡಿ ನೋಡಿ ಕಣ್ತುಂಬಿಕೊಳ್ಳುತ್ತಾರೆ.ಸಂಜೆಯಿಂದಲೇ ಬಣ್ಣ ಬಡಿದುಕೊಂಡು ನವಿಲು ಗರಿ ಸಿಕ್ಕಿಸಿಕೊಂಡು ಕತ್ತಿ ಹ

ನಮ್ಮ ಹಾವೇರಿ

ಹಾವೇರಿ..... ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲೊಂದು  ತನ್ನದೇ ಆದ ಹಲವು ವಿಸ್ಮಯಗಳನ್ನು ಹೊಂದಿದೆ. ಈ ಜಿಲ್ಲೆಯು ಜಾನಪದ ಕಲೆ, ಸಂಸ್ಕೃತಿಗಳ ತವರೂರು ಎನಿಸಿದೆ.ಕರ್ನಾಟಕದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಹೆಗ್ಗಳಿಕೆಯನ್ನು ಹೊಂದಿರುವ ಹಾವೇರಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಜಿಲ್ಲೆ ಎಂದು ಮತ್ತು ಏಲಕ್ಕಿ ಕಂಪಿನನಾಡು ಎಂದೇ ಪ್ರಸಿದ್ಧಿಯಾಗಿದೆ.   ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲಿನಿಂದಲೂ ಅನೇಕ ಇತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಮ್ಮ ಜಿಲ್ಲೆಯವರಾದ ಮೈಲಾರ ಮಹದೇವಪ್ಪ, ಗುದ್ಲೆಪ್ಪ ಹಳ್ಳಿಕೇರಿ, ಎನ್ ಎಸ್ ಹರಡೆಕರ್, ಸಿದ್ದಪ್ಪ ಹೊಸಮನಿ, ರಮಾನಂದ ಮುನ್ನುಡಿ ಅನೇಕ ಹಿರಿಯರ ಹೋರಾಟವು ನಮಗೆ ಮಾದರಿಯನಿಸಿದೆ. ಶಿಗ್ಗಾಂವಿಯ ಸಿದ್ದಮ್ಮ ಬಳ್ಳಾರಿಯಂತಹ ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆಂಬುದು ಜಿಲ್ಲೆಗೆ  ಹೆಮ್ಮೆಯ ವಿಚಾರ.  ಹಾವೇರಿಯನ್ನು ಹಲವಾರು  ರಾಜವಂಶಗಳು ಆಳಿದ್ದು ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಅವರಲ್ಲಿ ಪ್ರಮುಖವಾದವು.  ಹಾವೇರಿ ಜಿಲ್ಲೆಯು ವಿಶೇಷ ಭೌಗೋಳಿಕ ಲಕ್ಷಣಗಳನ್ನು ಹೊಂದಿದ್ದು ಇದು ಕರ್ನಾಟಕದ ಮಧ್ಯಭಾಗದಲ್ಲಿದ್ದು.ಮತ್ತು ಕೇಲವು ತಾಲೂಕುಗಳು ಬಯಲುಸೀಮೆ ಪಟ್ಟಿಗೆ ಸೇರದರೆ. ಕೇಲವು ತಾಲೂಕುಗಳು ಅರೆಮಲೆನಾಡಿನ ಪಟ್ಟಿಗೆ ಸೇರಿವೆ. ಮತ್ತು ಸಮತಟ್ಟಾದ ಬಯಲು ಪ್ರದೇಶದ ಜ
 ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಕರ್ನಾಟಕ ರಾಜ್ಯದ ಅತ್ಯಂತ ಚಿಕ್ಕ ತಾಲೂಕುಗಳಲ್ಲಿ ಇದು ಒಂದು ಆದರೂ ಈ ತಾಲೂಕಿನಿಂದ 208ಮಹಿಳೆಯರೂ ಸೇರಿದಂತೆ 975ಕ್ಕೂ ಹೆಚ್ಚು ಗಂಡು ಗಲಿ ಗಳು ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿ ಬ್ರಿಟಿಷರಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ   500ಕ್ಕೂ ಹೆಚ್ಚು ಕುಟುಂಬ ಗಳು ಮನೆ ಮಠ ಕಳೆದುಕೊಂಡು ತಮ್ಮ ತ್ಯಾಗ ಮೆರೆದಿವೆ. ತುಂಬು ಗರ್ಭಿಣಿ ಯರು, ಮಕ್ಕಳು, ವಯೋ ವ್ರದ್ದರು ಬಾಣಂತಿಯರು, ಸಹ 1917ರಿಂದಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.        ದೇಶದಲ್ಲಿ ಹೋಮ್ ರೋಲ್ ಚಳುವಳಿ ಆರಂಭಗೊಂಡಾಗ ಅದಕ್ಕೆ ಸಿದ್ದಾಪುರದಲ್ಲಿ ಸಂಘಟನೆ ಮಾಡಿ ಚಳುವಳಿ ನಡೆಸಿದ್ದರು. 1920ರಲ್ಲಿ ಖಿಲಾಫತ್ ಚಳುವಳಿ ಆರಂಭ ವಾದಾಗ ಆ ಚಳುವಳಿ ಯನ್ನು ಸಿದ್ದಾಪುರ ತಾಲೂಕಿನ ಸಾವಿರಾರು ಜನರು ಬೆಂಬಲಿಸಿ ಅದಕ್ಕೆ ಸದಸ್ಯರಾಗಿದ್ದು ಒಂದು ದಾಖಲೆ ಭೂ ಕಂದಾಯ ನಿರಾಕರಣೆ ಸಿದ್ದಾಪುರದಲ್ಲಿ ನಡೆದಿತ್ತು ಎನ್ನುವದನ್ನು ನಾವು ಗಮನಿಸಬಹುದು.   ಒಂದೇ ದಿವಸ 27ಪೊಲೀಸ್ ಪಟೇಲರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಂದಿನ ಬ್ರಿಟಿಷ್ ಆಡಳಿತ ಯಂತ್ರಕ್ಕೆ ಬಿಸಿ ತಾಗಿಸಿದ್ದು ಸಿದ್ದಾಪುರ ತಾಲೂಕಿನಲ್ಲಿ ಕರಾನಿರಾಕರಣೆ ಪ್ರತಿಜ್ನೆ ನಡೆದು ಮಹಿಳೆಯರಾದಿಯಾಗಿ ಕರತುಂಬುವ 1400 ಜನರು ಆ ಪ್ರತಿಜ್ನೆಗೆ ಸಹಿಮಾಡಿ ಕರವನ್ನು ತುಂಬದೆ ಆಂದೋಲನ ಮಾಡಿದ್ದರು.   1917ರಲ್ಲಿ ಪ್ರಾರಂಭ ವಾದ ಆಂದೋಲನ ಮೂರು ದಶಕಗ