ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
 *"ಮೇಘರಾಜನ ಜೊತೆಯಲ್ಲಿ ಮಲೆನಾಡಿನ ಮಳೆಗಾಲದ ಮೋಜನ್ನು ಮನರಂಜಿಸುವ ಬನ್ನಿ*"     ಆಹಾ! ಮಳೆಗಾಲ ಬಂತೆಂದರೆ ಸಾಕು ಅದು ಮೋಜು - ಮಸ್ತಿಯ ಮಹಾ ಮಜಲನ್ನು ಎಲ್ಲರೂ ಹೆಜ್ಜೆ ಹೆಜ್ಜೆಯಾಗಿ ಅನುಭವಿಸುವರು. ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಆಸಕ್ತಿ,ಅಭಿರುಚಿ ನನಗಂತೂ ಹರಿಯುವ ಜಲಧಾರೆಯನ್ನು ವೀಕ್ಷಿಸುವುದೇ ಮಹದಾನಂದ.    ಅಶ್ವಿನಿ ಇಂದ ಶುರುವಾದ ಮಳೆಯ ಆರ್ಭಟ ಸಿಡಿಲ ಭರದಂತೆ ಮೋಡ ಕರಗಿ ಹನಿಯ ರೂಪದಿ ವಸುಂಧರೆ ಸೇರುವುದು. ಹನಿ ಹನಿ ಕೂಡಿ ಹಳ್ಳವಾಗಿ ಹಳ್ಳಕೊಳ್ಳಗಳು ಒಂದೆಡೆ ಸೇರಿ ನದಿಯಾಗಿ ಮಾರ್ಪಡುತ್ತದೆ. ಹರಿವ ನದಿಯಿಂದ ಧುಮುಕುವ ಆ ನೀರಿನ ರಭಸಕ್ಕೆ ಅಡಿಯಿಂದ ಮುಡಿವರೆಗೆ ಶುಭ್ರಶೋಭಿತೆಯಾಗಿ ಸ್ವಚ್ಚಂದದ ಸೆಲೆಯಾಗಿ ಗೋಚರಿಸುವುದು. ಈ ಪ್ರಾಕೃತಿಕ ಸೌಂದರ್ಯವನ್ನು ನಮ್ಮ  ಅಕ್ಷಿಕಮಲಗಳಿಗೆ ತೋರಿಸಿದೊಡೆ ಹಿಂತಿರುಗಲು ಸಮ್ಮತಿಯನ್ನು ಕೊಡಲಾರವು.ಅದೇ ಈ ಜಲಪಾತಗಳ ವೈಶಿಷ್ಟ್ಯ.            ಖಾದ್ಯ ಪ್ರಿಯರಿಗಂತೂ ಈ ಮಳೆಗಾಲದಲ್ಲಿ ಬಗೆಬಗೆಯಾದ ವಿಭಿನ್ನ ರೀತಿಯ ವಿಭಿನ್ನ ರೀತಿಯ ಸೊಪ್ಪು-ಸೆದೆಗಳುದೆಗಳು ಅದರಲ್ಲೂ ಅಣಬೆ, ಕಳಲೆಯಂತೂ ಬಹುಬೇಡಿಕೆಯ ವಸ್ತುಗಳಾಗಿವೆ. ಸೊಪ್ಪು ಪ್ರಿಯರಿಗೆ ಕೆಸುವಿನ ಎಲೆ,ತಟ್ಟೆ ಸೊಪ್ಪು, ಎಲೆ ದುರ್ಗೆ ಸೊಪ್ಪು, ಸಾಂಬಾರ್ ಸೊಪ್ಪು,ಹೊನ್ನಗನ್ನೇ  ಸೊಪ್ಪು, ಅಮಟೆಕಾಯಿ,ಬೃಂಗರಾಜ,ಇವೆಲ್ಲವನ್ನು ಸವಿದರೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.           ಜಿಟಿ-ಜಿಟಿ ಮಳೆಯಲ್ಲಿ ನೆಂದು ಚಳಿಯಲ್ಲಿ ನಡುಗುವ ಜ

ಎಮ್ಮೆ ಶೀರ್ಲ ವಜ್ರ ಜಲಪಾತಹಸಿರನ್ನೇ ಹೊದ್ದು ಮಲಗಿದಂತೆಕಾಣುವ ವೃಕ್ಷ ಸಮೊಹ.ಹೆಜ್ಜೆ ಹೆಜ್ಜೆಗೂಮುಂದೆ ಸಾಗುವ ಉತ್ಸಾಹವನ್ನು ನೀಡುವಪ್ರಕೃತಿಯ ನೋಟ ಸರಣಿಗಳ ನಡುವೆ ಹಾದುಹೋಗುತ್ತಿದ್ದರೆ ಪಕ್ಷಿಗಳ ಇಂಚರ ವು ಕಿವಿಗೆಬಿದ್ದಾಗ ಹೊಸ ಬಗೆಯ ಸಂಗೀತ ಲೋಕಕ್ಕೆಹೋದ ಅನುಭವ.ಅಂಕು ಡೊಂಕಿನ ದಾರಿಯಲ್ಲಿಸಾಗುತ್ತಾ ಹೋದರೆ ಪ್ರಕೃತಿ ಸೌಂದರ್ಯ ವುಹೊಸ ಸಸ್ಯ ಕಾಶೀಯ ಸುಂದರ ಸ್ವರ್ಗದಂತೆವಿಶಾಲವಾದ ನಯನದ ಅಂಚಿನಲ್ಲಿತೆರೆದುಕೊಳ್ಳುತ್ತದೆ.ನಿಸರ್ಗದ ಸೂಬಗಿನ ವೈಭವವನ್ನುಹೆಚ್ಚಿಸುವ ಜಲಪಾತಗಳು ಅಲ್ಲಲ್ಲಿಭೋರ್ಗರೆಯುತ್ತವೆ.ಅಂತಹುಗಳ ಸಾಲಿನಲ್ಲಿಎಮ್ಮೆ ಶಿರ್ಲ ವಜ್ರ ಜಲಪಾತವು ಒಂದು.ನಿಸರ್ಗದ ಅದ್ಭುತ ಸೃಷ್ಟಿಗಳಲ್ಲಿಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು ಸೇರಿವೆ.ಅಂತವರು ಗಳಲ್ಲಿ ಅನೇಕ ಜಲಪಾತಗಳನ್ನುಹೊಂದಿರುವ ಯಲ್ಲಾಪುರ ತಾಲೂಕು ಅಕಷರ್ಷಣೀಯ ತಾಣವಾಗಿದೆ. ಇನ್ನೂ ಬೆಳಕಿಗೆಬಾರದೆ ಸರಿಯಾದ ರಸ್ತೆ ದಾರಿಗಳಿಲ್ಲದೆ,ಹೊರಪ್ರಪಂಚದ ಸಂಪರ್ಕ ಕಾಣದ ಸ್ಥಳೀಯರಿಗೆಮಾತ್ರ ಗೊತ್ತಿರುವಂತಹ ಅಪರೂಪದಜಲಧಾರೆ ಈ ಎಮ್ಮೆ ಶಿರ್ಲ ವಜ್ರ ಜಲಪಾತ..ಯಲ್ಲಾಪುರ ತಾಲೂಕಿನಅಂಬಗಂವ ಗ್ರಾಮದ ಕಂಚಿಮನೆಕಾಡಿನಲ್ಲಿರುವ ಈ ಜಲಪಾತವು ಯಲ್ಲಾಪುರತಾಲೂಕು ಕೇಂದ್ರದಿಂದ 32 ಕೀಲೋಮಿಟರದೂರದಲ್ಲಿದ್ದು, ಇಡಗುಂಜಿ ವಜ್ರಳ್ಳಿಮಾರ್ಗವಾಗಿ ಸಾಗಬೇಕಾಗುತ್ತದೆ ಸೂರ್ಯನಬಿಸಿಲು ನೆಲಕ್ಕೆ ತಾಗದಂತೆ ದಟ್ಟ ಹೆಮ್ಮರಗಳ ನಡುವೆ, ಮುಳ್ಳು ಹಾದಿಯಲ್ಲಿ ಹೊರಟರೆ 200 ಅಡಿಯಿಂದ ಆಳಕ್ಕೆ ಜಿಗಿಯುವ ಎಮ್ಮೆ ಶಿರಲ್ ವಜ್ರದ ದರ್ಶನವಾಗುತ್ತದೆ.ಬೇಸಿಗೆಯ ದಿನಗಳಲ್ಲಿಯು ಮೈ ದುಂಬಿ ಹರಿಯುತ್ತದೆ.ಜಲಪಾತದ ಸುತ್ತಲೂ ಎತ್ತರದ ಕಲ್ಲುಗಳಿದ್ದು ಹಸಿರು ಹುಲ್ಲುಗಳು ಎದ್ದು ನಿಂತಿವೆ, ಅಪರೂಪದ ವನ್ಯ ಜೀವಿಗಳ ಜೊತೆಗೆ ಪಕ್ಷಿಗಳು, ವಿವಿಧ ಬಗೆಯ ಕಾಡು ಹೂವುಗಳು ಇಲ್ಲಿ ಕಾಣಬಹುದು.ಮಲೆನಾಡಿನ ಘಟ್ಟದಲ್ಲಿ ಇಳಿಜಾರಿನಲ್ಲಿ ಧುಮ್ಮಿಕ್ಕುವ ಈ ಜಲಪಾತವು ಇನ್ನೂ ಪರಿಚಯ ವಾಗಬೇಕಿದೆ ಈ ತಾಣ ಇನ್ನೂ ಅಭಿವೃದ್ಧಿ ಯಾಗಬೇಕಿದೆ. ಅಜ್ಞಾತವಾದ ಹಾಗು ರುದ್ರ ರಮಣೀಯವಾದ ಈ ಜಲಪಾತದ ದರ್ಶನ ಸುಲಭಸಾಧ್ಯವಲ್ಲ.ಸ್ಥಳೀಯರ ಸಂಪರ್ಕದೊಂದಿಗೆ ಸಾಗಿದರಷ್ಟೆ ಜಲಪಾತದ ದರ್ಶನವಾದೀತು..

ಇಮೇಜ್
  ಮಲೆನಾಡಿನ ಮಳೆಯ ಸೊಬಗು ಮೂಡಣದ ಅಂಚಿನಲ್ಲಿ ಸುಯ್ ಎಂದು ಗಾಳಿ ಅಲೆ ಮಿರಿಮಿರಿ ಹೊಳೆಯುವ ಮಿಂಚುಗಳ ಥಳಕು ಬೆಳಕು ಮೊಡ ಮೊಡವು ತಾಕಿ ಗುಡುಗುಗಳ ಆರ್ಭಟ ತಾನೇನು ಹಿಂದಿಲ್ಲ ಎನ್ನುವ ಆನೇಕಲ್ಲಿನ ಸುರಿಮಳೆ ಜೊಜ್ಜೊತೆಗೆ ಮೇಘರಾಜನು ಮುತ್ತಿನ ರಾಶಿಯಂತೆ ಸುರಿದು ಭುವಿಗೆ ತಂಪನ್ನೆರೆಯುವ ಸಂಭ್ರಮವೇ ಮಳೆಗಾಲದ ಆಗಮನ. ಮಳೆಗಾಲ ಬಂದೊಡನೆ ಮಲೆನಾಡಿನ ಜನರಿಗೆ ಏನೋ ಒಂದು ತರಹದ ಸಂತಸ. ರೈತನಿಗಂತೂ ' ಸ್ವರ್ಗಕ್ಕೆ ಮೂರೇ ಗೇಣು ' ಎಂಬಂತೆ ಆಗುತ್ತದೆ. ಮಳೆಗಾಲದಲ್ಲಿ ಮಲೆನಾಡ ತಾಯಿ ಕಂಗೊಳೆಸುವದೊಂದೆಡೆಯಾದರೆ,  ರೈತರು ಹೊಲಕ್ಕೆ ಹೋಗುವದು ಇನ್ನೊಂದೆಡೆ. ಅದನ್ನು ಕಂಡಾಗ 'ನೇಗಿಲ ಹಿಡಿದಾ ಹೊಲದೊಳು ಹಾಡುತ' ಎಂಬ ಸಾಲೇ ನೆನಪಾಗುತ್ತದೆ. ಹೊಲದ ಹೂಳೆತ್ತುವ ಸಮಯದಲ್ಲಿ ಅದರ ಮೇಲೆ ನಡೆಯುವದೇ ಒಂದು ಸಂತಸ. ವಿಪರ್ಯಾಸವೆಂದರೆ, ರೈತರು ಕಡಿಮೆಯಾಗಿದ್ದಾರೆ ಮತ್ತು ಇರುವ ರೈತರು ನೇಗಿಲ ಬದಲು ಯಂತ್ರ ಬಳಸುತ್ತಿದ್ದಾರೆ. ಇದರ ನಡುವೆ, ಮಳೆರಾಯನ ಆರ್ಭಟ. ಮಳೆಗಾಲದಲ್ಲಿ ಮಳೆ ಹುಳಗಳ ಶಬ್ದ, ಕಪ್ಪೆಗಳ ಸದ್ದು, ಪಕ್ಷಿಗಳು ಸುಮಧುರವಾಗಿ ಹಾಡಿದರೆ ಮಳೆರಾಯ ತಾನೇನು ಕಮ್ಮಿ ಇಲ್ಲ ಎಂಬಂತೆ ಬರುತ್ತಾನೆ. ಮಳೆರಾಯನ ಆರ್ಭಟಕ್ಕೆ ಓಡಾಡುವ ರಸ್ತೆ ಮುಚ್ಚಿ ಹೋಗುತ್ತದೆ. ಓಡಾಟದ ಮೇಲಿರುವವರಿಗೆ ಮಳೆಗಾಲ ಒಂದು ಜೈಲಿನಂತೆ. ಮಳೆ ಮತ್ತು ಗಾಳಿ ಹೆಚ್ಚಾದರೆ, ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಆಧುನಿಕ ಮೊಬೈಲ್ ಗಳಿಗೆ ಸಿಗ್ನಲ್ ನ ಕೊರತೆ ಅತೀ
 "ಯಾವುದಯ್ಯಾ ಧರ್ಮ...!!!        "ದಯವೇ ಧರ್ಮದ ಮೂಲವಯ್ಯ "ಎಂದರು ಅಂದಿನ ಶರಣರು "ಹಿಂಸೆಯೆ ಧರ್ಮಕೆ ರಕ್ಷೆಯಯ್ಯ" ಎಂದರು ಇಂದಿನ ಮತಾಂಧರು.ಧರ್ಮ ಮಾನವನನ್ನು ನಿಯಂತ್ರಿಸಿ ಸನ್ಮಾರ್ಗದಲ್ಲಿ ಸಾಗುವಂತೆ ಮಾಡಲು ಸಂಸ್ಕೃತಿ,ಸಂಪ್ರದಾಯ, ಆಚಾರ,ವಿಚಾರ,ನೀತಿ ತತ್ವ ಬೋಧನೆ,ದೈವ ನಂಬಿಕೆಯೊಂದಿಗೆ ಆಚರಣೆಗೆ ಬಂದ ಒಂದು ಆಧ್ಯಾತ್ಮಿಕ ಅಂಶ.ಪ್ರಸ್ತುತ ಭಾರತದಲ್ಲಿ ಧರ್ಮ ಧ್ವೇಷ,ಅಸೂಹೆಯ ಕಿಚ್ಚೆಬ್ಬಿಸಿ,ಸಾಮರಸ್ಯ ಭರಿತ ಸಹಬಾಳ್ವೆಗೆ ಹುಳಿಹಿಂಡುತ್ತಿರುವ,ಪರಸ್ಪರ ಹಿಂಸಾಚಾರದಲ್ಲಿ ತೊಡಗುವಂತೆ ಮಾಡುತ್ತಿರುವ ರಾಕ್ಷಸತ್ವವಾಗಿ ಬದಲಾಗುತ್ತಿದೆ.ದಿನ ಬೆಳಗಾದರೆ   ಮತೀಯ ಗಲಭೆಗಳು,ಕೊಲೆ ಹಿಂಸಾಚಾರದ ಸುದ್ದಿಗಳೇ ಶುಭೋದಯ ತಿಳಿಸುವಂತೆ ಕಣ್ಣೆದುರಿಗೆ ಬರುತ್ತವೆ.ಧರ್ಮ ನೀರಪೇಕ್ಷ ರಾಷ್ಟ್ರ ಭಾರತ ಧರ್ಮ ರಕ್ಷಾ ಸಂಗ್ರಾಮದ ಕುರುಕ್ಷೇತ್ರವಾಗಿದೆ.                                   ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದವರೆಲ್ಲ ಧರ್ಮರಕ್ಷಕರೆಂಬ ಹಣೆಪಟ್ಟಿ ಹಚ್ಚಿ ಕೊಂಡಿದ್ದಾರೆ.ಇವರೆಲ್ಲ ನಿಜವಾಗಿಯೂ ಧರ್ಮರಕ್ಷಕರೆ?.ಧರ್ಮ ರಕ್ಷಕರೇ ಆಗಿದ್ದರೆ ಧರ್ಮವಿರೋದಿ ಕೆಲಸವನ್ನೆಕೆ ಮಾಡುತಿದ್ದಾರೆ.ಧರ್ಮ ರಕ್ಷಣೆಯ ಹೆಸರಿನಲ್ಲಿ ಕೊಲೆ,ಹಿಂಸಾಚಾರಮಾಡುತ್ತಿರುವರಲ್ಲ, "ದಯವೇ ಧರ್ಮದ ಮೂಲ,ಹಿಂಸೆ ಮಹಾಪಾಪವೆಂದು" ಹೇಳಿದ್ದು ಧರ್ಮವೆ ಅಲ್ಲವೇ ?.                              ಧರ್ಮ ರಕ್ಷಣೆಯ ಹೆಸರಿನಲ್ಲಿ ಎಷ್ಟೋ