ಹಳ್ಳಿಯ ಬಾಳು
ನಮ್ಮ ದೇಶದ ರೈತ ನಮ್ಮ ದೇಶದ ಬೆನ್ನು ಮೂಳೆ . ಅವನೇ ನಮ್ಮ ಜನತೆಯ ಜೀವಾಳ. ಅವನಲ್ಲಿ ಅಡಗಿರುವ ಸಂಸ್ಕೃತಿಯೇ ನಮ್ಮ ಪ್ರಾಣವಾಯು. ಪರದೇಶದ ನಾಗರಿಕತೆ ಪ್ರಭಾವಕ್ಕೆ ಒಳಗಾದ ನಾವು ನಮ್ಮದೆನ್ನುವುದನ್ನೆಲ್ಲ ಕಳೆದುಕೊಂಡಿದ್ದೇವೆ. ಪಾಶ್ಚಾತ್ಯ ನಾಗರಿಕತೆಗೆ ವಿದ್ಯಾವಂತರೆನಿಸಿಕೊಂಡವರು ಬಲಿಯಾಗಿರುವಷ್ಟು ಅವಿದ್ಯಾವಂತರಾದ ಹಳ್ಳಿಯವರು ಒಳಗಾಗಿಲ್ಲವೆಂಬುದು ನಿಜ. ಅಧಿಕ ವಿದ್ಯೆಯನ್ನು ಹೊಂದಿದ ವಿದ್ಯಾವಂತರಿಗೆ ರಾಮಾಯಣ, ಮಹಾಭಾರತ ಚರಿತ್ರೆಗಳು ಕನ್ನಡ ನಾಡಿನಲ್ಲಿದ್ದರೂ ಸಹ ಅದರ ಬಗ್ಗೆ ಸರಿಯಾಗಿ ತಿಳಿದಿಲ್ಲ .ಅಷ್ಟರಮಟ್ಟಿಗೆ ಕೇವಲ ಪಾಶ್ಚಾತ್ಯ ಶಿಕ್ಷಣಕ್ಕೆ ಮಾರುಹೋಗಿದ್ದಾರೆ. ಕಾಲಕ್ರಮೇಣವಾಗಿ ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಕಾಲದ ಸುಳಿಯಲ್ಲಿ ಹಳ್ಳಿಗಳು ಸಿಲುಕಿಕೊಂಡಿಲ್ಲ. ಇದಕ್ಕೆ ಕಾರಣ ಇಂಗ್ಲಿಷರ ರಾಜ್ಯ ಇಲ್ಲಿ 200 ವರ್ಷಗಳಿಂದ ಆಳಿದರೂ ಹಳ್ಳಿಗಳಿಗೆ ಆ ನಾಗರಿಕತೆಯ ಪ್ರಭಾವ ಹೆಚ್ಚಾಗಿ ಸೋಕಿಲ್ಲದಿರುವುದು, ನಮ್ಮ ಜನ ಯಾವುದನ್ನು ಸ್ವೀಕರಿಸುವುದೂ ನಿಧಾನ, ಹಳೆಯ ಆಚಾರ- ವಿಚಾರವನ್ನು ಬಿಡುವುದೂ ನಿಧಾನ, ಇದರಿಂದಲೇ ಹಳ್ಳಿಗಳಲ್ಲಿ ಉಳಿದಿರುವ ಸಂಸ್ಕೃತಿ ನಮ್ಮ ಜೀವನದ ನಿಜವಾದ ಜೀವಾಳ. ನಾಗರಿಕತೆಗಳಹೋರಾಟಗಳಲ್ಲಿ ನಮ್ಮ ವೈಶಿಷ್ಟಗಳನ್ನು ಕಾಪಾಡಿಕೊಂಡಿರುವುದೇ ಹಳ್ಳಿಗಳ ಸಂಸ್ಕೃತಿ. ರವೀಂದ್ರನಾಥ್ ಟಾಗೂರ್ ಹೇಳಿರುವಂತೆ,