ಪೋಸ್ಟ್‌ಗಳು

ಜುಲೈ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಅಣ್ಣ ತಂಗಿಯ. ಸಂಬಂಧ ಎಂದರೇ ಒಂದೇ ಜೀವ ಎರಡು ದೇಹಗಳಿದಂತ್ತೆ

        ವಿವಿದೆತೆಲ್ಲಿ ಏಕತೆಯನ್ನು  ಹೊಂದಿರುವ  ದೇಶವೆಂದರೆ ಅದು ನಮ್ಮ ಭಾರತ. ಭಾರತದಲ್ಲಿ ಅಣ್ಣ -ತಂಗಿಯ ಸಂಬಂಧವನ್ನು ಬಿಗಿಯಾಗಿಸಲು   ರಕ್ಷಾ  ಬಂಧವನ್ನು  ಆಚರಿಸುತ್ತಾರೆ.ರಕ್ಷಾ ಬಂಧನ    ಎಂಬ  ಹಬ್ಬವು  ಒಡಹುಟ್ಟಿದವರ  ನಡುವೆ ಇರುವ ಅವಿನಾಭಾವ ಆಚರಣೆಯಾಗಿದೆ. .                 "  ರಕ್ಷಾ  ಬಂದವನ್ನು  ಶ್ರಾವಣ ಮಾಸದ  ಹುಣ್ಣಿಮೆಯ " ದಿನದಂದು  ಈ ಹಬ್ಬವನ್ನು ಆಚರಿಸುತ್ತಾರೆ . ಉದಾ : ಹಿಂದೂ ಪುರಾಣಗಳ ಪ್ರಕಾರ  ಮಹಾಭಾರತ  ಮಹಾಕಾವ್ಯ, ಮಹಾಭಾರತದಲ್ಲಿ  ಕೃಷ್ಣನ  ಮಣಿಕ  ರಕ್ತಸ್ರಾವ್ ವಾಗುದನ್ನು ತಡೆಯಲು  ದ್ರೌಪದಿ ತನ್ನ  ಸೀರೆಯನ್ನು ಹರಿದು ಕೃಷ್ಣನಿಗೆ ಕಟ್ಟಿದಳು  ಈ ವೇಳೆ ದ್ರೌಪದಿಯೋ  ಕೃಷ್ಣನ  ಮೇಲೆ ಇಟ್ಟಿದ  ವಾತ್ಸಲ್ಯ, ಕಾಳಜಿ, ಕಂಡ  ಕೃಷ್ಣ  ಆಕೆಯನ್ನು ರಕ್ಷಣೆ ಮಾಡುವ  ಭರವಸೆb ನೀಡುತ್ತಾನೆ. .                .             ಪ್ರತಿಯೊಂದು ಹೆಣ್ಣಿಗೊ ತನ್ನ  ತಂದೆಯೇ ಮೊದಲ ಹೀರೊ.ತಂದೆಯ ನಂತರ  ಮುಖ್ಯವಾದ ವ್ಯಕ್ತಿ ಅಣ್ಣ. ಅಣ್ಣ ಎಂದರೇ  ಆಕೆಗೆ ಕೇವಲ  ಒಂದು ಪದವಲ್ಲ  ಅದಕ್ಕೂ  ಮೀರಿದ್ದು.  ಎಷ್ಟೇ ಕಷ್ಟಇದ್ದರೂ ಅದನ್ನು ಹೋಗಲಾಡಿಸಿ  ತಂಗಿ  ಬೆನ್ನೆಲುಬಾಗಿರುವನೇ ಅಣ್ಣ.  ತಂಗಿಗೋ ಅಷ್ಟೇ  ಬಾಲ್ಯದಿಂದಲೇ  ಅಣ್ಣನೇ ಆಕೆಯ  ಪ್ರಪಂಚ ಕಲ್ಮಶ  ಇಲ್ಲದ  ಪ್ರೀತಿ,ಕಾಳಜಿ, ಕಿತ್ತಾಟ, ಮಮತೆ, ಗೆಳತನ, ವಾತ್ಸಲ್ಯ, ಈ ಎಲ್ಲವನ್ನು ಒಬ್ಬ ವ್ಯಕ್ತಿಯಲ್ಲಿ ಕಾಣಬಹುದೇದರೆ  ಅದು ಅಣ್ಣನಲ್ಲಿ ಮಾತ್ರ. ಅಣ್ಣ  ಅವ

"ಗೆಳೆತನ"

ಹುಟ್ಟಿನಿಂದಲೇ ನಾವು ಹಲವಾರು ಸಂಬಂಧಗಳ ಜೊತೆಗೆ ಜನಿಸುತ್ತೇವೆ. ಇನ್ನು ಕೆಲವು ಸಂಬಂಧಗಳು ನಾವು ಸ್ವಯಂಕಾಲ ಕಳೆದಂತೆ ಮಾಡಿಕೊಳ್ಳುತ್ತೇವೆ. ಅಂತಹ ಸಂಬಂಧಗಳ ಸಾಲಿನಲ್ಲಿ ಗೆಳೆತನವು ಒಂದು. ಗೆಳೆತನ ಈ ಜಗತ್ತಿನ ಅತ್ಯಂತ ಸುಂದರವಾದ ಸಂಬಂಧ. ನಮ್ಮ ಜೀವನದಲ್ಲಿ ಬಹಳಷ್ಟು ಸ್ನೇಹಿತರಿರಬಹುದು ಆದರೆ ಅದರಲ್ಲಿ ಕೆಲವು ಸ್ನೇಹಿತರು ಮಾತ್ರ ಅತ್ಯಂತ ಆತ್ಮೀಯರಾಗಿರುತ್ತಾರೆ.  ನಿಜವಾದ ಸ್ನೇಹಿತ ನಮ್ಮ ಕಷ್ಟಕಾಲದಲ್ಲಿ ನಮ್ಮ ಜೊತೆಯಲ್ಲಿ ಇರುವವನು ಎಂದು ಜನ ಹೇಳುತ್ತಾರೆ. ಗೆಳೆತನ ಎಂದರೆ ಒಂದು ಅದ್ಭುತ ಸಂಬಂಧ ಏಕೆಂದರೆ ಯಾವ ಸಮಸ್ಯೆಗಳ ಬಗ್ಗೆ ನಾವು ನಮ್ಮ ಕುಟುಂಬಸ್ಥರ ಬಳಿ ಮಾತನಾಡಲು ಹಂಚುತ್ತೇವೆ ಆ ವಿಷಯವನ್ನು ಯಾವುದೇ ಪೀಠಿಕೆ ಇಲ್ಲದೆ ಅವರ ಮುಂದೆ ಇಡುತ್ತೇವೆ.  ನಮ್ಮ ಜೀವನದ ಉಲ್ಲಾಸ, ಹರ್ಷ, ಖುಷಿ ಮತ್ತು ಶೋಕದ ವಿಷಯವನ್ನು ತಿರುಚೆದೆ ಅದು ಹೇಗಿದ್ದೀಯಾ ಹಾಗೆ ಗೆಳೆಯರ ಮುಂದೆ ಪ್ರಸ್ತುತಪಡಿಸುತ್ತೇವೆ.  ಅವರು ಆ ಸಮಯದಲ್ಲಿ ನಮಗಿಂತಲೂ ಜಾಸ್ತಿ ಖುಷಿ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಾರೆ.  ಗೆಳೆತನವನ್ನು ಯಾವಾಗಲೂ ವ್ಯಕ್ತಿಯ ನಡುವಳಿಕೆ ಚಾರಿತ್ರೆಯನ್ನು ನೋಡಿ ಮಾಡಲಾಗುತ್ತದೆಯೇ ಹೊರತು ಬಡವ -ಶ್ರೀಮಂತ,  ಜಾತಿ- ಧರ್ಮ ಅಥವಾ ನಿಜಿ ಯೋಜನೆ ಎಂದು ಮಾಡಿಕೊಳ್ಳಲಾಗುವುದಿಲ್ಲ. ಒಳ್ಳೆ ಗೆಳೆಯರ ಪರಿಚಯ ಮತ್ತು ಸಂಬಂಧಿಗಳ ಪರಿಚಯ ಕೆಟ್ಟ ಕಾಲದಲ್ಲಿ ಆಗುತ್ತದೆ ಎಂಬುದು ಸಹಜ ಸತ್ಯ.  ಒಂದು ಮಗುವಿನ ಜನ್ಮಕಿಂತಲೇ ಮೊದಲು ಬಹಳಷ್ಟು ಸಂಬಂಧದ ಕೊಂಡಿಗಳು ಪೋ

ಮಳೆಗಾಲದ ಆ‌ ದಿನಗಳು

  ಮಳೆಗಾಲ ಅಂದ್ರೆನೇ ಒಂಥರಾ ಮಜಾ. ಮಳೆಗಾಲ ಬರ್ಲಿ ಅಂತಾನೆ ಕಾಯ್ತಾ ಇರುವಂತಹ ರೈತರು, ಈಗ ಈಗಾ ಕಾಲೇಜು ಮೆಟ್ಟಿಲನ್ನ ಹತ್ತಿರುವಂತಹ ಹುಡುಗ್ರು. ಇವ್ರೆಲ್ಲಾ ಇದಕ್ಕಾಗಿಯೇ ಕಾಯ್ತಾ ಇರ್ತಾರೆ. ರೈತರು ಮಳೆ ಬರ್ಲಿ ಬೆಳೆ ಬೆಳೆಯೋಣ ಅಂತಾ ಕಾಯ್ತಿರ್ತಾರೆ ಆದ್ರೆ ನಮ್ ಹುಡುಗರು ಮಳೆ ಬಂದ್ರೆ ಅದರಲ್ಲೂ ಮಲೆನಾಡಿನವರು ಅಂತೂ ಬೈಕ್ ತಗೊಂಡು ಸ್ನೇಹಿತರ ಜೊತೆ ಬೆಟ್ಟ ಗುಡ್ಡ ಹತ್ತೋಕೆ, ಒಳ್ಳೊಳ್ಳೆ ಪಾಲ್ಸ್ ನೋಡೋಕೆ ಅಂತಾನೆ ರೆಡಿ ಆಗಿ ನಿಂತಿರ್ತಾರೆ. ಮಳೆಗಾಲದ ಸಮದಯಲ್ಲಿ ನಮ್ಮ ಹಳ್ಳಿ ಕಡೆ ಇರಬೇಕು ಆ ಜೀವನಾ ಅನುಭವಿಸಬೇಕು ಒಂಥರಾ ಸ್ವರ್ಗಕ್ಕೆ ಇನ್ನೊಂದೆ ಮೆಟ್ಟಿಲು ಇರುವ ಹಾಗೆ ಅನುಭವವಾಗುತ್ತದೆ.   ಮುಗಿಲಿಗೆ ತೂತು ಬಿದ್ದಿರುವ ಹಾಗೆ ಮನೆಯಿಂದ ಹೊರಗಡೆ ಕಾಲಿಡೊದಕ್ಕೂ ಸಾಧ್ಯ ಆಗೋದಿಲ್ಲ ಅಂತಹ ರಭಸವಾಗಿ ಬೀಳುವ ಮಳೆ. ಕೆರೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಉಕ್ಕಿ ಹರಿಯುತ್ತಾ ಇರುತ್ತವೆ. ಈ ಕಾಲದಲ್ಲಿ ಇಲ್ಲಿ ಒಂದಿಷ್ಟು ವಿದವಿಧವಾದ ಆಹಾರಗಳನ್ನು ಸವಿಯಬಹುದು. ಕಳಲೆ, ಅಣಬೆ, ಏಡಿ ಮತ್ತು ಜಬ್ಬು ಮೀನು ಹೀಗೆ ಹಲವಾರು ದೊರೆಯುತ್ತದೆ. ಇವುಗಳ ರುಚಿಯಂತು ಅದನ್ನು ವರ್ಣಿಸಲಾಗದು. ಹಲವಾರು ಮಂದಿ ಇದಕ್ಕಾಗಿಯೇ ಕಾಯ್ದು ಕೂತಿರುತ್ತಾರೆ. ಇಂತಹ ವಿಶೇಷವನ್ನು ಎಲ್ಲೆಡೆ ನೋಡಲು ಸಾಧ್ಯವಿಲ್ಲ  ಅದು ಮಲೆನಾಡಿನಲ್ಲಿ ಮಾತ್ರಾ ದೊರೆಯುತ್ತದೆ. ಮಲೆನಾಡಿನಲ್ಲಿ ಹುಟ್ಟಬೇಕೆಂದರೆ ಪುಣ್ಯ ಮಾಡಿರಬೇಕು ಎಂದು ಹೇಳುವುದಂತು ಸತ್ಯದ ಮಾತು.    ಮಲೆನಾಡಿನ ಹೆಬ್ಬಾಗಿಲು ಎಂದೇ

"ವೈದ್ಯವೃತ್ತಿ"

ಸಂಕಟ ಬಂದಾಗ ವೆಂಕಟರಮಣ' ಎನ್ನುವ ಹಾಗೆ ನಾವೆಲ್ಲರೂ, ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರನ್ನು ನೆನೆಸಿಕೊಳ್ಳುತ್ತೇವೆ. 'ವೈದ್ಯೋ ನಾರಾಯಣೋ ಹರಿ' ಎಂದು ಆತ (ಆಕೆ) ನನ್ನು ಹೊಗಳಿ ನಮ್ಮ ಕಷ್ಟ ಕೋಟಲೆಗಳನ್ನು ತೋಡಿಕೊಳ್ಳುತ್ತೇವೆ. ಆತನ (ಆಕೆಯ) ಉಪಚಾರದಿಂದ ರೋಗ ವಾಸಿಯಾದ ತಕ್ಷಣ ಆತ (ಆಕೆ ನನ್ನು ಮರೆತು ಬಿಡುತ್ತೇವೆ. 'ತಮ್ಮ ಕೆಲಸ ಆದ ಮೇಲೆ ಉಪಾಧ್ಯಾಯ ಮತ್ತು ವೈದ್ಯ ನಿಷ್ಪಯೋಜಕರಾಗುತ್ತಾರೆ' ಎನ್ನುವ ವಚನವನ್ನು ನಿಜ ಮಾಡುತ್ತೇವೆ. ಇದರಲ್ಲಿ ಅತಿಶಯವೇನಿಲ್ಲ. ನಮ್ಮ ದೇಹ ಮತ್ತು ಮನಸ್ಸಿನ ಬಗ್ಗೆ ಕಾಳಜಿಯಿಂದ ಆಳವಾಗಿ ಅಭ್ಯಾಸ ಮಾಡಿ ಚಿಂತಾಕ್ರಾಂತರಾಗಿ ನರಳುತ್ತಿರುವವರನ್ನು ಮತ್ತೆ 'ಜೀವನ್ಮುಖಿ'ಗಳಾಗಿ ಮಾಡುವ ವೈದ್ಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ, ಈ ಕರ್ತವ್ಯ ಋಣ ಸಂದಾಯ ಎಂದರೆ ತಪ್ಪೇನಿಲ್ಲ ವನ್ನು ನೆನಪಿಸಲು ಪ್ರತಿ ವರ್ಷ ಜುಲೈ ಒಂದೇ ದಿನಾಂಕ 'ರಾಷ್ಟ್ರೀಯ ವೈದ್ಯದಿನ", ವನ್ನಾಗಿ ಆಚರಿಸುವುದು ರೂಢಿಗೆ ಬಂದಿದೆ. ಶಿಕ್ಷಕ ವೃತ್ತಿಯಷ್ಟೇ ಪವಿತ್ರ ಎನ್ನಿಸುವ ವೈದ್ಯ ವೃತ್ತಿ ನಮ್ಮ ದೇಶದಲ್ಲಿ ಸುಮಾರು 2500 ವರ್ಷಗಳಿಂದ ಆಚರಣೆಯಲ್ಲಿದೆ. ವೇದಗಳಲ್ಲಿ ಎಲ್ಲೆಲ್ಲೋ ಅಡಕವಾಗಿದ್ದ ಆಯುರ್ವೇದ ತತ್ತ್ವಗಳನ್ನು ಕ್ರೋಢೀಕರಿಸಿ, ತಮ್ಮ ಚಿಂತನೆಗಳನ್ನು ಸೇರಿಸಿ ಬರೆದ 'ಸುಶ್ರುತ ಸಂಹಿತೆ'ಯನ್ನು ಹಿಂದೂ ವೈದ್ಯ ವಿಜ್ಞಾನದ ಬೈಬಲ್‌ ಎಂತಲೂ, ಇದನ್ನು ರಚಿಸಿದ ಸುಶ್ರುತರನ್ನು (ಸುಮಾರು ಕ

ಮೊಬೈಲ್ ಎಂಬ ಮಾಯಾಲೋಕ

 ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರಚೆನ್ನಾಗಿದೆ  ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ     ನನಗೆ ನೆಮ್ಮದಿ ಸಿಕ್ಕಿದೆ ಮೊದಲು ನಿಂದಲೂ ನಾನು ಅತಿ ಸಂತೋಷವಾಗಿದ್ದೇನೆ. ಎಂದು ಹೇಳಲಿ ನೋಡೋಣ ಮೊಬೈಲ್ ಇದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಆಗ ತಾನೇ ಅಮ್ಮ ಎಂದು ಹೇಳಲು ಕಲಿತ ಮಗುವಿನಿಂದ ಹಿಡಿದು ಬಿಳಿ ಗಡ್ಡ ಬೆಳೆದ  ಜೀವಕ್ಕೂ ಬೇಕು. ಮನುಷ್ಯನ ಎಲ್ಲಾ ಸಂಬಂಧಿಗಳಿಗಿಂತಲೂ ಶ್ರೇಷ್ಠ ಎಂದು ಅಂದುಕೊಂಡಿದ್ದೇವೆ. ಮೊಬೈಲ್ ಎಂಬ ಮಾಯಾವಿಯು ಮೊದಮೊದಲು ಬಂದಾಗ ಬಿಗಿದ್ದೇವೆ. ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತದೆ ಎಂದು ಆದರೆ ಇಂದು ನಾವು ಅದರ ಸುಳ್ಳಿಗೆ ಸಿಲುಕಿದ್ದೇವೆ ಮೊಬೈಲ್ ಇದು ಕೇವಲ ಫೋನ್ ಮಾಡುಲು ಮೆಸೇಜ್ ಮಾಡಲು ಅಷ್ಟೇ  ಉಳಿದಿದ್ದರೆ ಬಹುಶ: ಮೊಬೈಲ್ ಒಂದು ಮೆಸೇಜ್ ಆಗುತ್ತಿರಲಿಲ್ಲ. ಇದು ಮೊಬೈಲ್ ಮಾಡಬೇಕಾದ ಕೆಲಸವನಷ್ಟು ಮಾಡದೇ ಟಿವಿ ರೇಡಿಯೋ ಪುಸ್ತಕ ಹೀಗೆ ಅನೇಕ ವಸ್ತುವಿನ ಕೆಲಸದ ಪಾರ್ಟ್ ಟೈಮ್ ಲೆಕ್ಕದಲ್ಲಿ ಕೆಲಸ ಮಾಡುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಅನಿರ್ವಾಯತೆ ಇದೆ .ಎಷ್ಟರಮಟ್ಟಿಗೆ ಎಂದರೆ ಮೊಬೈಲ್ ಇಲ್ಲದೆ ನಾವಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ .ಮೊಬೈಲ್ ಈ ಪ್ರಪಂಚಕ್ಕೆ ಕಾಲಿಡುವುದಕ್ಕಿಂತ ಮೊದಲು ನಮ್ಮ ಪೂರ್ವಜರು ಅದು ಹೇಗೆ ಬದುಕಿದ್ದಾರೋ ಎಂಬ ಅನುಮಾನ ಬರುವಷ್ಟು. ಆದರೆ ಈಗ ಅದ್ಯಾವ ಮನೆಯಲ್ಲಿ ಕೂಡ ಚಿಕ್ಕ ಮಕ್ಕಳ ಚಿರಾಟ ಕೇಳ

ಜ್ಞಾನ ದೀವಿಗೆ

 ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ ಗ್ರಂಥಗಳನ್ನು ಓದಿ ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಇಂದಿನ ಯುಗದಲ್ಲಿ ನಾವು ನಮ್ಮ ಜ್ಞಾನವನ್ನು ಅಭಿವೃದ್ಧಿಗೊಳಿಸಲು  ಗ್ರಂಥಾಲಯದ ಉಪಯೋಗ ಬಹಳ ಅವಶ್ಯಕವಾಗಿದೆ. ಗ್ರಂಥಗಳಿರುವ ಆಲಯವೇ ಗ್ರಂಥಾಲಯವಾಗಿದೆ. ಅದರ ಸದುಪಯೋಗವನ್ನು ನಾವು ಹೆಚ್ಚು ಹೆಚ್ಚು ಪಡೆದುಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ಎಲ್ಲಾ  ಶಾಲಾ- ಕಾಲೇಜುಗಳಲ್ಲಿ ಗ್ರಂಥಾಲಯ ತೆರೆದಿದೆ. ಅದೇ ರೀತಿ ನಮ್ಮ ಕಾಲೇಜಿನಲ್ಲಿಯೂ ಇದೆ.ಶೈಕ್ಷಣಿಕ, ಧಾರ್ಮಿಕ,ರಾಜಕೀಯ, ಸಾಮಾಜಿಕ ತಂತ್ರಜ್ಞಾನ, ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಸಂಬಂಧಿಸಿದೆ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿರುತ್ತದೆ. ಅದರ ಜೊತೆ ಕಥೆ,ಕವನ,ನಾಟಕಮತ್ತು ಸಾಹಿತ್ಯ ಪ್ರಬಂಧಗಳು ಹೇಗೆ ಮುಂತಾದ ಪುಸ್ತಕಗಳು ಸಿಗುತ್ತವೆ. ಪುಸ್ತಕಗಳ ಜೊತೆ  ವಾರಪತ್ರಿಕೆಗಳು ಮಾಸಪತ್ರಿಕೆಗಳು ಕೂಡ ಲಭ್ಯವಿರುತ್ತದೆ.  ನಾವು ನಮ್ಮ ಅಮೂಲ್ಯವಾದ ಸಮಯವನ್ನು ಪುಸ್ತಕಗಳನ್ನು ಓದುವುದರ ಮೂಲಕ  ಅದರ ಬಳಕೆಯನ್ನು ಮಾಡಿಕೊಳ್ಳಬೇಕು. ಗ್ರಂಥಾಲಯವು ಒಂದು ವಿಶ್ವವಿದ್ಯಾಲಯವಿದ್ದಂತೆ.  ಮನುಷ್ಯನ ದೇಹಕ್ಕೆ ಅನ್ನ,ನೀರು,ಗಾಳಿ ಎಷ್ಟು ಮುಖ್ಯವಾಗಿರುತ್ತದೆಯೋ ಹಾಗೆ ಮಾನವನ ವಿಕಾಸಕ್ಕೆ ಪುಸ್ತಕಗಳು ಅವಶ್ಯಕವಾಗಿರುತ್ತದೆ. ನನ್ನನ್ನು ತಲೆತಗ್ಗಿಸಿ ಓದು ನಾನು ನಿನ್ನನ್ನು ತಲೆಯೆತ್ತಿ ನೋಡುವಂತೆ ಮಾಡುತ್ತೇನೆ.  ನಾವು ಗ್ರಂಥಾಲಯಕ್ಕೆ ಹೋದಾಗ ಗಂಭೀರವಾಗಿ ಅಧ್ಯಯನ ಮಾಡಬೇಕು. ಮಾ

" ಭೂಮಿ ಬರಿದಾಗಿದೆ "

ಭೂಮಿಯನ್ನು ದೇವರು ಎಂದು ಪೂಜಿಸಲಾಗುತ್ತದೆ. ಭೂ ತಾಯಿಯ ತಾಳ್ಮೆ ಮತ್ತು ಸಹನಾ ಶಕ್ತಿಯಿಂದಾಗಿ ಇಡೀ ಜಗತ್ತು ತಲೆ ಎತ್ತಿ ನಿಂತಿದೆ.ಲಕ್ಷ ಕೋಟಿ ಜೀವ ಸಂಕುಲವನ್ನು ಜೀವ ವೈವಿದ್ಯತೆಯನ್ನು ಈ ಭೂಮಿ ಸಲಹುತಿದ್ದಾಳೆ. ನಮಗೆ  ಅಗತ್ಯವಿರುವ ಎಲ್ಲ ವಸ್ತುಗಳನ್ನು ಭೂಮಿ ನಮಗೆ ಒದಗಿಸುತ್ತಾ ಬಂದಿದೆ. ಆದರೆ ನಾವು ದುರಾಸೆಯ ಮನುಷ್ಯರಾದ ಕಾರಣ ನಮ್ಮ ಸ್ವಾರ್ಥ ಸಾಧನೆಗಾಗಿ ಭೂಮಿಯನ್ನೇ ಹಾಳು ಗೆಡವಲು ಹೊರಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಒಂದಿಲ್ಲೊಂದು ಅನಾಹುತ ಸಂಭವಿಸುತ್ತಿರುವುದನ್ನು ನೋಡಿದ್ದೇವೆ,ಈ ಘಟನೆಗಳು ಸಂಭವಿಸಲು ಮುಖ್ಯ ಕಾರಣಿಕರ್ತನೆಂದರೆ ಮಾನವ. ಹೆಚ್ಚಾತ್ತಿರುವ ಆತನ ದುರಾಸೆಯ ಪರಿಣಾಮದಿಂದಾಗಿ ಜಗತ್ತು ವಿನಾಶದೆಡೆಗೆ ಸಾಗುತ್ತಿದೆ. ಕಾಲದಿಂದ ಕಾಲಕ್ಕೆ ಪ್ರಕೃತಿಯ ಸೌಂದರ್ಯ ಕ್ಷಿಣಿಸುತ್ತಾ ಬರುತ್ತಿದೆ ಅರಣ್ಯನಾಶ, ಯತೆಚ್ಚ ಗಣಿಗರಿಕೆಯ ಪರಿಣಾಮದಿಂದಾಗಿ ಭೂಮಿಯ ಅಂತರ್ಜಲ ಮಟ್ಟ ಕುಸಿಯುತ್ತಿದೆ ಕುಡಿಯುವ ನೀರಿಗಾಗಿ ಆಹಾಕಾರ ಕೇಳುತ್ತಿದೆ ಕೆರೆ ಕಟ್ಟೆಗಳೆಲ್ಲ ಬತ್ತಿ ಬರಿದಾಗಿದೆ ನೀರನ್ನೇ ಅವಲಂಬಿಸಿರುವ ಪಕ್ಷಿಗಳು ಬೇರೆ ಊರುಗಳಿಗೆ ವಲಸೆ ಹೋಗುವ ಸಂದರ್ಭ ಏರ್ಪಟ್ಟಿದೆ ಇನ್ನು ನೀರಿನಲ್ಲೇ ಜೀವಿಸುವ ಜಲಚರಗಳು ನೀರಿಲ್ಲದೆ ಸಾವನ್ನಪ್ಪುತ್ತಿವೆ. ಇವೆಲ್ಲದಕ್ಕೂ ಮುಖ್ಯ ಕಾರಣ ಕಾಡಿನ ನಾಶ. ಸಕಾಲಕ್ಕೆ ಬಾರದ ಮಳೆಯಿಂದ ಅದನ್ನೇ ಅವಲಂಬಿಸಿರುವ ರೈತ ಆತಂಕಕ್ಕೆ ಈಡಾಗುವ ಪರಿಸ್ಥಿತಿ ಬಂದೋದಗಿದೆ.ಇದರ ಜೊತೆಗೆ ಬಿಸಿಲಿನ ಜಳ ಹಾಗು ಜಾಗತಿ

ಮನಸ್ಸಿಗೆ ಇರುವ ಶಕ್ತಿ

 ಮನಸ್ಸಿಗೆ ಇರುವ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆಯ ಪ್ರಸಂಗವನ್ನು ನೋಡಬೇಕು. ಮಹಾಭಾರತದ ವನ ಪರ್ವತಗಳಲ್ಲಿ ಅದರ ವಿವರಣೆ ಬರುತ್ತದೆ . ಕೊಳದ ಬಳಿ  ಯಕ್ಷನು  ಧರ್ಮರಾಯನಿಗೆ ಸುಮಾರು 125 ಪ್ರಶ್ನೆಗಳನ್ನು ಕೇಳುತ್ತಾನೆ ಅವೆಲ್ಲದಕ್ಕೂ ಸಮರ್ಪಕವಾಗಿ ಉತ್ತರ ನೀಡಿದ್ದರಿಂದ ಧರ್ಮರಾಯನ ಸಹೋದರರೆಲ್ಲರೂ ಮತ್ತೆ ಜೀವ ಪಡೆಯುತ್ತಾರೆ. ಆ ಎಲ್ಲಾ ಪ್ರಶ್ನೆಗಳಲ್ಲಿ ಎರಡು ಪ್ರಶ್ನೆಗಳು:- ಒಂದನೆಯದು ಗಾಳಿಗಿಂತ ವೇಗವಾಗಿ ಚಲಿಸುವುದು ಯಾವುದು ಮತ್ತು ಎರಡನೆಯದು ಯಾವುದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಶೋಕ ಉಂಟಾಗುವುದಿಲ್ಲ? ಎಂಬುದು ಈ ಎರಡು ಪ್ರಶ್ನೆಗೆ  ಯುಧಿಷ್ಠಿರ  "ಮನಸ್ಸು" ಎಂದು ಉತ್ತರಿಸುತ್ತಾನೆ.      ಮಾನವನ ಇತರ ಅವಯವಗಳಂತೆ ಸ್ಪಷ್ಟವಾಗಿ ಗುರುತಿಸಲಾಗದ ಆದರೆ ಮನುಷ್ಯನ ಇಡೀ ಜೀವನದ ಸಾಧನೆ-ವಿಫಲತೆಗಳನ್ನು ನಿರ್ಧರಿಸುವ ಶಕ್ತಿಯ ಮನಸ್ಸು.ಇದನ್ನು ಮೆದುಳು ಮತ್ತು ನರಮಂಡಲದೊಂದಿಗೆ ಗುರುತಿಸಲಾಗುತ್ತದೆ. ಆದರೂ ಸ್ಪಷ್ಟವಾಗಿ ಇದು ಇಲ್ಲೇ ಇದೆ ಎಂದು ಮುಟ್ಟಿ ತೋರಿಸುವಂತಹದ್ದಲ್ಲ. ಮನಸ್ಸನ್ನು ಒಟ್ಟು ಅರಿವಿನ ಅಂಶಗಳಾದ ಪ್ರಜ್ಞ , ಕಲ್ಪನೆ , ಗ್ರಹಿಕೆ,ಚಿಂತನೆ, ಭಾಷೆ, ನೆನಪಿನ ಶಕ್ತಿಯೊಂದಿಗೆ ಹಾಗೂ ಅಜ್ಞಾತ ಅಂಗಾಂಶಗಳಾದ ಭಾವನೆ ಮತ್ತು ಪ್ರವೃತ್ತಿಯೊಂದಿಗೆ ಜೋಡಿಸಲಾಗುತ್ತದೆ. ಸಹಜವಾಗಿ ಮಾತನಾಡುವಾಗ "ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ " ಎಂದು  ಜನ ಹ

ತುಳಸಿ

       ತುಳಸಿಯ ದರ ಪವಿತ್ರತೆಗೆ ಹೆಸರುವಾಸಿ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಇದು ಸುಖ ಮತ್ತು ಕಲ್ಯಾಣದ ಪ್ರತಿಕ ಎಂದು ನಂಬಲಾಗಿದೆ. ಇದು ಪೌರಾಣಿಕವಾಗಿ ಎಷ್ಟು ದೊಡ್ಡ ಇತಿಹಾಸವನ್ನು ಹೊಂದಿದೆಯೋ ಅದಕ್ಕೂ ಮಿಗಿಲಾದ ಔಷಧಿ ಗುಣಗಳನ್ನು ಇದು ಒಳಗೊಂಡಿದೆ.          ತುಳಸಿ ಗಿಡ ಒಂದು ಪುಟ್ಟ ಸಸ್ಯ ಜಾತಿಯ ಎಳೆಯದಾದ, ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯ. ಸಸ್ಯದ ಜಾತಿ ಹಾಗೂ ತಳಿಯನ್ನು ಅವಲಂಬಿಸಿ ಎಲೆಗಳು ಸ್ವಲ್ಪಮಟ್ಟಿಗೆ ವಾಯುಹರ ಔಷಧಿಗೆ ಉಪಯೋಗಿಸುವ ಸೋಪು ಬೀಜದ ಮಾದರಿಯ ರುಚಿಯನ್ನು ಹೊಂದಿರುತ್ತದೆ. ಜೊತೆಗೆ ಗಾಡ್ ತೀಕ್ಷ್ಣವಾದ ಸಾಮಾನ್ಯವಾಗಿ ಮೋಹಕ ಪರಿಮಳವನ್ನು ಹೊಂದಿರುತ್ತದೆ.         ತುಳಸಿ ಸಚಿವ ಮೂಲತಃ ಇರಾನ್, ಭಾರತ ಹಾಗೂ ಏಷ್ಯಾದಉಷ್ಣವಲಯದ ಪ್ರದೇಶಗಳ ಸಸ್ಯವಾಗಿದೆ. ಇದು ಈ ಪ್ರದೇಶದಲ್ಲಿ 5,000ಕ್ಕೂ ಹೆಚ್ಚು ವರ್ಷಗಳಿಂದ ಬೆಳೆಯುತ್ತಾ ಬಂದಿದೆ. ಇದು ಮುಖ್ಯವಾಗಿ ಪ್ರತಿಯೊಬ್ಬ ಭಾರತೀಯ ಹಿಂದೂ ಸಂಪ್ರದಾಯ ಅನುಯಾಯಕರ ಮನೆಯಂಗಳದಲ್ಲಿ ಕಂಗೊಳಿಸುತ್ತಿರುವುದನ್ನು ಕಾಣಬಹುದು.         ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚು ಪವಿತ್ರತೆ ಇದೆ. ಇಲ್ಲಿ ಪವಿತ್ರ ತೀರ್ಥಗಳನ್ನು ಸಿದ್ಧಪಡಿಸುವಾಗ ತುಳಸಿಯನ್ನು ಬಳಸಲಾಗುತ್ತದೆ. ಅಲ್ಲದೆ ತುಳಸಿಯ ಕುಂಡಗಳನ್ನು ನಾವು ಸಾಮಾನ್ಯವಾಗಿ ಚರ್ಚಿನ ವಿವೇಧನ ಪೀಠದ ಕೆಳಗಡೆ ಇಟ್ಟಿರುವುದನ್ನು ನೋಡುತ್ತೇವೆ. ಅಂದರೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಇತರ ಧರ್ಮದಲ್ಲಿಯೂ

ಹುಟ್ಟು ಶಾಪವಾದರೇನು? ಬದುಕು ವರವಾಗಲಿ.

"ನನ್ನಲ್ಲಿ ಹಣವಿಲ್ಲ, ನಾನು ಬಡವ, ನಾನೂ ಶ್ರೀಮಂತನಾಗಿದ್ದರೆ ಇಂದು ಕಷ್ಟವೇ ಬರುತ್ತಿರಲಿಲ್ಲ.ನನ್ನ ಕುಟುಂಬ ಸರಿಯಿಲ್ಲ. ನಾನು ದುರದೃಷ್ಟ ವ್ಯಕ್ತಿ . ನಾನು ಏನೇ ಮಾಡಿದರೂ ಅದು ಸಾಧ್ಯವಾಗುವುದಿಲ್ಲ.ನನ್ನಲ್ಲಿ ಅದಿರಬೇಕಿತ್ತು. ಇದಿರಬೇಕಿತ್ತು " ಒಂದೇ ಎರಡೇ?.ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳಲು ಇಂದು ಅದೆಷ್ಟೋ ಜನ ಇಂತಹ ಹಲವು ನೆಪಗಳಿಗೆ ತಾವೇ ಶರಣಾಗುತಿದ್ದಾರೆ. ಅದೆಷ್ಟೋ ಸಮಸ್ಯೆಗಳನ್ನು ಎದುರಿಸಲಾರದೇ ಬದುಕ ಬಂಡಿಯಲ್ಲಿ ಜರ್ಜರಿತರಾಗುತ್ತಿದ್ದಾರೆ. ಮನಸ್ಸನ್ನು ಚಿಂತೆಯ ಗೂಡಾಗಿಸಿಕೊಂಡು ಹೊರಬರಲಾರದೇ ಚಡಪಡಿಸುತಿದ್ದಾರೆ.ಲೆಕ್ಕವಿಲ್ಲದಷ್ಟು ಜನ ಸಾವಿನಲ್ಲಿ ಸಮಸ್ಯೆಗೆ ವಿದಾಯ ಹೇಳುತಿದ್ದಾರೆ.                  ಮನುಷ್ಯನೆಂಬುವವ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುವ ಶಕ್ತಿ ಹೊಂದಿದಾತ.ಕೆಲವೊಮ್ಮೆ ಅವನನ್ನು ಸಮಸ್ಯೆಗಳು ಪಾತಾಳಕ್ಕೆ ತಳ್ಳುತ್ತವೆ.ಪರಿಸ್ಥಿತಿ ಗಳ ಸರಪಳಿಯಿಂದ ಕಟ್ಟಿ ಹಾಕುತ್ತದೆ.ಆದರೆ ಅವೆಲ್ಲವನ್ನೂ ಮೀರಿ ನಡೆದವ ಮಾತ್ರ ಸಾಧಕನೆನಿಸಿಕೊಳ್ಳುತ್ತಾನೆ.ಆದರೆ ಸಾಧನೆಗೆ ಮುಖ್ಯವಾಗಿ ಬೇಕಾದದ್ದು. ಕಠಿಣ ಶ್ರಮ. ಹಾಗೂ ನಿರಂತರ ಹೋರಾಟ.                          "ಅದೃಷ್ಟವೆಂಬುದು ಹಣೆಯ ಬರಹದಲ್ಲಿ ಇಲ್ಲ.ಅಂಗೈ ರೇಖೆಯಲ್ಲೂ ಇಲ್ಲ.ಅದಿರುವುದು ಪ್ರಯತ್ನದಲ್ಲಿ ಮಾತ್ರ "ಎಂಬ ಅಂಬೇಡ್ಕರರ ವಾಣಿ ನಿಜವಾಗಿಯೂ ಮೆಚ್ಚುವಂತಹದು.ಮಾಡಬೇಕಾದ ಕಾರ್ಯದ ತಿಳುವಳಿಕೆ, ಆಂತರಿಕ ಶಿಸ್ತು,ಅನುಕೂಲಕರ ವಾತಾವ

ಸೋಲು ಗೆಲುವಿನ ದಾರಿ ದೀಪ

  ಸೋಲು ಎಂಬ ಎರಡಕ್ಷರವು ಎಷ್ಟೊಂದು ನೋವು ಕೊಡುತ್ತದೆಯೆಂದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.ಆದರೆ ಸೋಲಿಗೆ ಹಿಂಜರಿಯದೆ ಸೋಲು ಗೆಲುವಿನ ಮೆಟ್ಟಿಲುಗಳೆಂದು ಮುನ್ನಡೆಯಬೇಕು. ಸೋತ ನಮಗೆ ಮುಂದಿನ ಸತತ ಪ್ರಯತ್ನ ಗೆಲುವು ತಂದುಕೊಡುತ್ತದೆ.ಒಂದಲ್ಲ ಒಂದು ದಿನ ಗೆದ್ದು, ಅವಮಾನ ಮಾಡಿಸಿಕೊಂಡವರಲ್ಲಿ ಸನ್ಮಾನವನ್ನು ಮಾಡಿಸಿಕೊಳ್ಳಬೇಕು. ಅದನ್ನೇ  ಜೀವನದ ಪರಮೋಚ್ಚ ಗುರಿಯಾಗಿಟ್ಟು ಕೊಳ್ಳಬೇಕು. ಗುರಿಯೆಡೆಗೆ ಗಮನವಿದ್ದಾಗಾ ಸದಾ ಮನಸ್ಸಿನಲ್ಲಿ ಸಾಧನೆಯ ಕನಸು ಕಾಣುವಂತಾಗಬೇಕು. ಡಾ/ ಎ. ಪಿ. ಜೆ ಅಬ್ದುಲ್ ಕಲಾಂ ಅವರು ಒಂದು ಮಾತು ಹೇಳಿದ್ದಾರೆ." ಸೋಲುವುದು ತಪ್ಪಲ್ಲ ಅವು ಭವಿಷ್ಯದ ಹೆದ್ದಾರಿಗಳು. ಭಯ ಪಟ್ಟವನು ಇದ್ದಲ್ಲಿಯೇ ಇರುತ್ತಾನೆ." ಎಂದು ಸೋಲುಗಳನ್ನು ಕೈ ಚಾಚಿ  ಸ್ವೀಕರಿಸಿದರೆ ಮಾತ್ರ  ಗೆಲುವೆಂಬ ಪದದ ಅರ್ಥ ಹಾಗೂ ಆ ಪದದ ಬೆಲೆ ತಿಳಿದು ಬರುತ್ತದೆ. ಸೋತವನಿಗೆ ಅವಕಾಶಗಳಿರುವುದಿಲ್ಲ.ಅವಕಾಶಗಳನ್ನು ನಾವೇ ಸೃಷ್ಟಿಸಿ ಕೊಳ್ಳಬೇಕು ಅಷ್ಟೇ. ನನಗೆ ನನ್ನ ಸರ್ ಒಬ್ರು ಹೇಳುವ ಮಾತು ನೆನಪಾಯಿತು." ಎಂತಹದ್ದೇ ಕಷ್ಟಗಳಾದರೂ ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ" ಎಂದು. ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿದವರಿಗೆ ಒಂದಲ್ಲ ಒಂದು ಹಾದಿಯಲ್ಲಿ ಗೆಲುವಿದ್ದೆ ಇರುತ್ತದೆ. ಆದರೆ ಪರಿಶ್ರಮ ಹಾಗೂ ಆತ್ಮವಿಶ್ವಾಸಗಳೆರದು ಬಹುಮುಖ್ಯ. ಮೊದಲ ಪ್ರಯತ್ನದಲ್ಲಿಯೇ ಗೆದ್ದವನು ಬದುಕಲ್ಲಿ ಗೆಲ್ಲುತ್ತಾನೆ. ಆದರೆ ಸೋತವನು