ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಂದೆಂದಿಗೂ ಅಳಿಯದ ಅಪ್ಪಟ ಕ್ರಾಂತಿಕಾರಿ....

ಜನವರಿ 23 ಭಾರತೀಯರು ಪಾಲಿಗೆ ಯಾವತ್ತೂ ಮರೆಯಲಾಗದ ದಿನವಾಗಿದೆ. ಒಂದು ಸ್ವತಂತ್ರ ಸೇನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತು ಭಾರತದ ಭೂಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ಸ್ವತಂತ್ರ ಭಾರತದ ಧ್ವಜ ಹಾರಿಸಿ ಭಾರತೀಯರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ನಾಯಕರಾದ ಸುಭಾಷ್  ಚಂದ್ರಬೋಸರ ಹುಟ್ಟಿದ ದಿನವಾಗಿದೆ. ಜಡಗಟ್ಟಿದ  ಭಾರತೀಯರ ಮನಸ್ಸುಗಳಿಗೆ ಹೊಸ ಉತ್ಸಾಹವನ್ನು ತುಂಬಿ ಭಾರತಕ್ಕಾಗಿ ಹೊರದೇಶಗಳಲ್ಲಿ ಮಿಡಿಯುವ ಹೃದಯಗಳನ್ನು ಸಂಪಾದಿಸಿದ ಮಹಾನ್ ನಾಯಕರು ಇವರು.. ಜೈ ಹಿಂದ್.. ಎನ್ನುವ ವಿರಘೋಷದ ಮೂಲಕ ಬ್ರಿಟಿಷರ ಎದೆನಡುಗಿಸಿದವರು ಇವರು. ಈ ಘೋಷ ವಾಕ್ಯವು ಹುಟ್ಟಿದ್ದು 1907 ರಲ್ಲಿ. ಇದರ ಕರ್ತೃ ನಮ್ಮ ದಕ್ಷಿಣದ "ಶಣ್ಬಾಗ್ ರಾಮನ್ ಪಿಳ್ಳೆ". ಅವತ್ತು ಜೈ ಹಿಂದ್ ಘೋಷವನ್ನು ಸುಭಾಷರಿಗೆ ಪರಿಚಯಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಾದ 'ಜೈನಲುದ್ದೀನ್'. ಜನವರಿ 23 1897 ರಲ್ಲಿ ಇವತ್ತಿನ ಒರಿಸ್ಸಾದ ಕಟಕ್ನಲ್ಲಿದ್ದ ಬಂಗಾಳಿ ಕುಟುಂಬದ ಪ್ರಭಾವತಿ ದತ್ತ ಬೋಸ್ ಹಾಗೂ ಜಾನಕಿ ನಾಥ್ ಬೋಸರ ಹದಿನಾಲ್ಕು ಮಕ್ಕಳ ಪೈಕಿಯಲ್ಲಿ ಒಂಬತ್ತನೇಯವರಾದ ಸುಭಾಷ್ ಚಂದ್ರ ಬೋಸ್. ಇವರ ತಂದೆ ಬಂಗಾಳ ಪ್ರಾಂತ್ಯದ ಪ್ರಸಿದ್ಧ ವಕೀಲರಾಗಿದ್ದರಿಂದ  ಇವರಿಗೆ ಶಿಕ್ಷಣವನ್ನು ಪಡೆಯುವಲ್ಲಿ ಯಾವುದೇ ರೀತಿಯ ತೊಂದರೆಯು ಉಂಟಾಗಲಿಲ್ಲ.. 1918 ರ ವೇಳೆಗೆ ಇವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಸ್ಟ್ ಚರ್ಚ್ ಕಾಲೇಜಿನಿಂದ ಬಿ