ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
 ಎತ್ತ ಕಡೆ,ನಮ್ಮ ನಡೆ.                                   ಭಾರತ ಭವ್ಯ ಪರಂಪರೆ ಹೊಂದಿದ ರಾಷ್ಟ್ರ.ಸಂಸ್ಕೃತಿ,ಸಂಪ್ರದಾಯಗಳ ತವರೂರು.ವೇದ,ಉಪನಿಷತ್ತುಗಳು,ಪುರಾಣಗಳೆಂಬ ಜ್ಞಾನನಿಧಿಗಳಿಂದ ತುಂಬಿದ ಗ್ರಂಥಾಲಯ. ವಿವಿಧ ಧರ್ಮೀಯರು,ಸಂಪ್ರದಾಯಗಳು  ಆಚಾರಣೆಗಳ,ಭಾಷೆಗಳ ನೆಲೆಬೀಡು.ವಿಶ್ವದಲ್ಲಿರುವ ವೈಶಿಷ್ಟ್ಯಗಳೆಲ್ಲ ಒಂದೆಡೆ ವಿಹರಿಸುವ ವಸುಧಾ ವಲಯ.ಒಟ್ಟಾರೆ ಒಬ್ಬ ಮನುಷ್ಯ ಉತ್ತಮ ಜೀವನ ಮತ್ತು ಸ್ವಾಸ್ತ್ಯ ಸಮಾಜ ರೂಪಿಸಿಕೊಳ್ಳಲು ಅವಶ್ಯಕ ವಾದ ಎಲ್ಲಾ ಅಂಶಗಳು ಭಾರತದಲ್ಲಿವೆ.ಆದರೂ ಭಾರತದಲ್ಲಿ ಇಂದು ಅನೇಕ ಸಮಸ್ಯೆ ತಾಂಡವವಾಡುವತ್ತಿವೆ.       ಭವ್ಯ ಪರಂಪರೆಯ ಬೃಹತ್ ವೃಕ್ಷಕ್ಕೆ ಕೊಡಲಿ ಪೆಟ್ಟುಬೀಳುತ್ತಿದೆ.ಭವ್ಯ ಭಾರತದ ಹಿರಿಮೆ ಹೆಚ್ಚಿಸಬೇಕಾಗಿದ್ದ ಭಾರತೀಯರೇ ಭಾರತದ ಹಿರಿಮೆಯನ್ನು ಮಣ್ಣು ಪಾಲು ಮಾಡುತ್ತಿರುವುದು ವಿಷಾದನೀಯ.                                          ವಿವಿಧ ಧರ್ಮಿಯರು ನೆಲೆಸಿರುವ ಏಕೈಕ ರಾಷ್ಟ್ರ ಭಾರತ.ಅಂದು ಯಾವುದೇ ಭೇಧವಿಲ್ಲದೇ ಎಲ್ಲಾ ಧರ್ಮೀಯರಿಗೂ ಮಮತೆಯ ಮಡಿಲು ಹಂಚಿದ ಭಾರತಮಾತೆಯ ಮಡಿಲಲ್ಲಿಂದು ಧರ್ಮಯುದ್ದಗಳ ಆರ್ಭಟ ಶುರುವಾಗಿದೆ.ವಿವಿಧತೆಯಲ್ಲಿ ಏಕತೆ ಸಾಧಿಸಬೇಕಾದ ಭಾರತೀಯರು ಇಂದು ವಿವಿಧತೆಯಲ್ಲಿ ಮತ್ತೂ ವೈವಿದ್ಯತೆಯನ್ನು ಸೃಷ್ಟಿಸುತ್ತಿದ್ದಾರೆ.ಧರ್ಮದ ತತ್ವಗಳ ಪಾಲನೆಯನ್ನು ತ್ಯಜಿಸಿ ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಧರ್ಮದ ಹಿತೋಪದೇಶಗಳನ್ನು,ತತ್ವಗಳನ್ನು ಗಾಳಿಗೆ
*ಶೀರ್ಷಿಕೆ :- ಕಾರುಣ್ಯ ಕನ್ನಡಕೆ ಜಾನಪದ ಕಲೆಯೇ ಕಳೆ*  ಅಬ್ಬಾ! ನನ್ನೀ ನೆಲದಲ್ಲಿ ಎಲ್ಲರ ಮನಸೆಳೆಯುವ ಕಲೆಯ ಆಗರವೆಂದರೆ ಜಾನಪದ ಕಲೆ. ಕಲಾ ಆರಾಧಕರಿಗೆ "ಜಾನಪದವೇ ಜೀವಾಳ" ಪ್ರತಿಯೊಂದು ಜಾನಪದ ಕಲೆಯು ಕೂಡ ತನ್ನದೇ ಆದ ವೈಶಿಷ್ಟವನ್ನು, ವೈಭೋಗವನ್ನು ನಮ್ಮ ನಮ್ಮ ಪ್ರಾಚೀನತೆಯ ಕುರುಹುಗಳನ್ನು ತಿಳಿಸುವ ರಸಸ್ವಾದಭರಿತ ರಸಮಂಜರಿಯಾಗಿದೆ. ಖೇದ ಮನಸ್ಸಿಗೂ ಕೂಡ ಮುದ ನೀಡುವ ಶಕ್ತಿ ನಮ್ಮ ಜಾನಪದ ಕಲೆಗಳಿಗಿವೆ. ಈ ಜಾನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದದ್ದು. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜಾನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ. ಈ ನಾಡಿನಲ್ಲಿ ಅನೇಕ ಶೈಲಿಯ ಜಾನಪದ ಕಲೆಗಳಿವೆ ಅವುಗಳನ್ನು ನಾವು ಕಾಣಬಹುದು. ಕಂಸಾಳೆಯು  ಬಹುಮುಖ್ಯವಾದ ಜಾನಪದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ವಿಶಿಷ್ಟ ಜಾನಪದ ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿದೆ. ಕಂಸಾಳೆಯ ಕಲಾವಿದರು ಮೈಸೂರು ಜಿಲ್ಲೆಯ ಮಹದೇಶ್ವರರ ಭಕ್ತರು. ಇದರ ನಿಷ್ಪತ್ತಿ 'ಕಾಂಸ್ಯ' ( ಕಂಚು ) ತಾಳವೆ ಕಂಸಾಳೆಯಾಗಿದೆ. ಇದಕ್ಕೆ ಕೇಶಿರಾಜನ ಸಮರ್ಥನೆಯೆಂದರೆ " ಪೂರ್ವ ಪದಂತಕ್ಕೆ ದೀರ್ಘಮುಂ ಉತ್ತರ ಪದಾವಿಗೆ ಲೋಪಮುಮಾಗಿ ಕಾಂಸ್ಯತಾಳಕ್ಕೆ ಕಂಸಾಳಂ ಎಂದಾಯ್ತು ಎಂಬ ಅರ್ಥ ವಿವರಣೆ ನೀಡಿದ್ದಾರೆ. ಕಂಸಾಳೆ ಮೇಳದಲ್ಲಿ ಮೂರರಿಂದ ಎಂಟು ಜನ ಭಾಗವಹಿಸುತ್ತಾರೆ. ಕಂಸಾಳೆಯ ಪ್ರಕಾರ
ಇಮೇಜ್
ಶಿರಸಿಯಲ್ಲಿ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಯಶಸ್ವಿ  ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಿತ ಹೊಸ ಮಾರುಕಟ್ಟೆ ಠಾಣೆ ಹಾಗೂ ಎನ್ ಎಸ್ ಎಸ್ ವಿಭಾಗ ಇವರ ವತಿಯಿಂದ ಇಂದು ಮಾದಕ-ದ್ರವ್ಯ ಬಹಿಷ್ಕಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಿಎಸ್ಐ ಭೀಮಶಂಕರ್ ಇವರು ಮಾತನಾಡಿ ಡ್ರಗ್ಸ್ ಸೇವನೆ ಬಹಳ ಅಪಾಯಕಾರಿಯಾಗಿದ್ದು ಇದರ ಸೇವನೆಯಿಂದ ಸಮಾಜದ ಸುವ್ಯವಸ್ಥೆಗೆ ಲೋಪ ಬರುವಂತಹ ಕೃತ್ಯ ನಡೆಯುತ್ತದೆ ಹಾಗೂ ಡ್ರಗ್ಸ್ ಸೇವನೆ ಮಾರಾಟ ಕಂಡುಬಂದಲ್ಲಿ ಎನ್ ಡಿ ಪಿ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಸಿರಸಿ ವ್ಯಾಪ್ತಿಯಲ್ಲಿ 15 ಜನರನ್ನು ಪರೀಕ್ಷೆಗೊಳಪಡಿಸಿದಾಗ 12 ಜನರಿಗೆ ಸೇವನೆ ದ್ರಢಪಟ್ಟಿದೆ ಎಂದರು.  ಪೊಲೀಸ್ ಸಿಬ್ಬಂದಿ ಅಶೋಕ್ ನಾಯಕ್ ಮಾತನಾಡಿ ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುತ್ತಿರುವುದು ಸೆಷನ್ ಕೋರ್ಟ್ ನಲ್ಲಿ ಸಾಬೀತಾದಲ್ಲಿ ಹತ್ತು ಲಕ್ಷ ದಂಡ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗಡಿಭಾಗದಲ್ಲಿ ಕಂಡುಬಂದಲ್ಲಿ ಇಂಡಿಯನ್ ಆರ್ಮಿ ಕೂಡ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.  ಪ್ರಾಚಾರ್ಯರು ಟಿಎಸ್ ಹಳೆಮನೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು  ಪ್ರೊ ರಾಘವೇಂದ್ರ ಹೆಗಡೆ ಜಾಜಿ ಗುಡ್ಡೆ ಅವರು ವಂದಿಸಿದರು. Akshay bhat  B.A 1 journalism Chinmay hegde 
ಪ್ರಕೃತಿಯಲ್ಲಿ ಅಡಗಿದೆ ಸೌಂದರ್ಯ......      ಪ್ರಕೃತಿ ಮಾತೆಯ ಅಡಿಯಲ್ಲಿ ಮಾನವ ಜಗತ್ತು ಬದುಕುತ್ತಾ ಇದೆ. ನಾವೆಲ್ಲ ಪ್ರಕೃತಿಯ ಒಂದು ಭಾಗ ಎಂದು ಹೇಳಬಹುದು. ಒಂದು ಕಾಲದಲ್ಲಿ ಪ್ರಕೃತಿ ತನ್ನ ಸೌಂದರ್ಯವನ್ನು ಹಚ್ಚ ಹಸಿರಿನಿಂದ ಕಂಗೊಳಿಸುತಿತ್ತು. ಆದರೆ ಈಗ ಮಾನವ ಸ್ವಾರ್ಥ ಹೆಚ್ಚಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಪ್ರಕೃತಿಯ ವಿನಾಶಕ್ಕೆ ಮಾನವನೆ ಕಾರಣನಾಗಿದ್ದಾನೆ. ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿದರೆ ಮುದೊಂದು ದಿನ ಪ್ರಕೃತಿ ನಮ್ಮನ್ನು ಉಳಿಸುವುದಿಲ್ಲ.               ಪ್ರಕೃತಿಯನ್ನು ನೋಡುತ್ತಾ ಹೋದರೆ ಕಣ್ಣಿಗೆ ಸೊಬಗನ್ನು ನೀಡುತ್ತದೆ. ಅಲ್ಲಿಯ ಗಿಡ,ಮರ, ಹೂ,ಹಣ್ಣು, ನಾನಾ ರೀತಿಯಾಗಿ ಕೂಗುವ ಪ್ರಾಣಿಗಳು, ಪಕ್ಷಿಗಳ ಕಲರವ, ಬಣ್ಣ,ಬಣ್ಣದ ಚಿಟ್ಟೆಗಳು, ಹಕ್ಕಿಗಳು ಇವೆಲ್ಲಾ ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸಿಗೆ ಮುದವನ್ನು ನೀಡಿ ನಮ್ಮನ್ನು ಆಕರ್ಷಿಸುವಂತೆ ಮಾಡಿದೆ. ಪ್ರಕೃತಿ ಮನಸಿಗೆ ಒಂದುರೀತಿಯ ಶಾಂತಿಯನ್ನು ನೀಡುತ್ತದೆ. ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟು ಪ್ರಕೃತಿಯನ್ನು ಉಳಿಸುವಲ್ಲಿ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಜಾಗೃತಿಯನ್ನು ಪ್ರತಿಯೊಬ್ಬರಲ್ಲೂ ಮೂಡಿಸುವಂತಾಗಬೇಕು.             ನಿಸರ್ಗ ಒಂದು ಕೊಡುಗೆ, ಅದನ್ನು ವರ್ಣಿಸಲು ಪದಗಳೇ ಸಾಲದು. ಪ್ರಕೃತಿಯ ಒಡಲು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವಸಂಕುಲಕ್ಕೆ ಮಗುವಾಗಿ ಪಾಲನೆ ಮಾ
ಇಮೇಜ್
ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಡ್ರಗ್ ವಿರೋಧಿ ಕಾರ್ಯಕ್ರಮ” ಶಿರಸಿ: ಕಾಲೇಜಿನ ಮೊಟೆನ್ಸರ ಹಾಲ್ ನಲ್ಲಿ ಐಕ್ಯೂ ಎಸ್ ಸಿ ಸಂಯೋಜಿತ,ಮಾರುಕಟ್ಟೆ ಪೋಲೀಸ್ ಠಾಣೆ ಹಾಗು ಎನ್.ಸಿ.ಸಿ ವಿಭಾಗದ ವತಿಯಿಂದ ರಾಷ್ಟ್ರೀಯ ಡ್ರಗ್ ವಿರೋಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡ್ರಗ್ ಸೇವನೆ ಅತ್ಯಂತ ಅಪಾಯಕಾರಿಯಾಗಿದ್ದು,ಸಮಾಜದ ಶಾಂತಿ, ಸುವ್ಯವಸ್ಥೆ ಹಾಳುಮಾಡುತ್ತದೆ ಹಾಗು ಆರೋಗ್ಯ ಹದಗೆಡಿಸುತ್ತದೆ. ಗಾಂಜಾ ಸೇವನೆ ಕಂಡುಬಂದಲ್ಲಿ ಅಥವಾ ಅನುಮಾನಾಸ್ಪದ ಘಟನೆ ನಡೆದಲ್ಲಿ ' ಎನ್ ಡಿ ಪಿ ಎಸ್ ' ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ವರ್ಷ ೮ ಮಂದಿಯನ್ನು ನಿನ್ನೆ ಬಂಧಿಸಿದ್ದು,ಅವರಲ್ಲಿ ೬ ಮಂದಿಗೆ ಪಾಸಿಟಿವ್ ಬಂದಿರುವದಾಗಿ ಪಿ.ಎಸ್.ಆಯ್.ಭೀಮಾಶಂಕರ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅಶೋಕ್ ನಾಯಕ್ ಮಾತನಾಡಿ, ೧೮೩೫ ರಲ್ಲಿ ಎನ್ ಡಿ ಪಿ ಕಾಯ್ದೆಯನ್ನು ರಾಜೀವ ಗಾಂಧಿ ಅವರು ಜಾರಿ ತಂದಿದ್ದು, ಇದು ಮಾದಕ ವಸ್ತು ಮಾರಾಟ ,ಸಾಗಾಟ ಮತ್ತು ಬೆಳೆಯುವದನ್ನು ವಿರೋಧಿಸುತ್ತದೆ. ಮತ್ತು ಶೇನ್ ಕೋರ್ಟ್ ನಲ್ಲಿ ಪ್ರಕರಣ ಸಾಬೀತಾದರೆ ೧೦ ಲಕ್ಷ ದಂಡ ಮತ್ತು ೧ ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಲಾಗುವದು. ಅಬಕಾರಿ ಇಲಾಖೆ ಮತ್ತು ಗಡಿ ಪ್ರದೇಶಗಳಲ್ಲಿ ಬಿ ಎಸ್ ಎಫ್ ,ಆರ್ಮಿ ಅವರು ಕೂಡ ಮಾದಕ ವಸ್ತು ಪ್ರಕರಣ ದಾಖಲಿಸಬಹುದು. ಎಂದು ಮಾಹಿತಿಯನ್ನು ಹಂಚಿಕೊಂಡರು. ಪ್ರಾಚಾರ್ಯ ಟಿ ಎಸ್ ಹಳೇಮನೆ ಅವರು ಇವತ್ತಿನ
 ಸಮಾಜದಲ್ಲಿ ಧಾರ್ಮಿಕತೆ ಅರಿವು ಕ್ಷೀಣಿಸುತ್ತಿದೆಯೇ?           ಪ್ರಾಕ್ಕ್ರತಿಕವಾಗಿ ಮನುಷ್ಯ ಜನ್ಮತಾಳಿದ,ಸಮಾಜ ನಿರ್ಮಿಸಿಕೊಂಡ ಅದರ ಚೌಕಟ್ಟಿನಲ್ಲಿ ಧರ್ಮ ಆಚರಣೆ ಮಾಡಿದ. ಸಮಾಜದಲ್ಲಿ ಧರ್ಮ ಎಂಬ ವಿಚಾರ ಬೆಳೆದ ಮೇಲೆ ಪರಸ್ಪರ ಒಬ್ಬನ್ನೊಬ್ಬರು ಮೇಲು - ಕೀಳು  ಎಂಬ ಭಾವನೆಯಿಂದ ನೋಡಲಾರಂಭಿಸಿದ್ದು ವಿಷಾದನೀಯ..  ಹೀಗೆ ಹೇಳಿದಾಗ ಎಲ್ಲ ಒಗ್ಗಟ್ಟಿನಿಂದ ಇದ್ದೇವೆ ಎಂಬ ಮಾತುಗಳು ಬರಬಹುದು. ಆದರೆ ಒಳ ಮನಸ್ಸಿನ ಯೋಚನೆಗೆ ಏನು ಹೇಳಲಾಗದ ತೊಳಲಾಟ.        " ಧರ್ಮೋ ರಕ್ಷತಿ ರಕ್ಷಿತಃ " ಎಂದು ಸಂಸ್ಕೃತದಲ್ಲಿ ಹೇಳಲಾಗಿದೆ. ಅಂದರೆ, ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಅರ್ಥವಿದೆ.         ಈ ಮಾತು ತ್ರೇತಾಯುಗ ಮತ್ತು ದ್ವಾಪರಯುಗಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಕಲಿಯುಗಕ್ಕೂ ಅನ್ವಯವಾಗುವಂಥ ಸಂಗತಿ. ಅನ್ವಯವಾಗಿಲ್ಲ ಎಂಬುದು ಇದರರ್ಥವಲ್ಲ. ಕಲಿಯುಗದ ಆರಂಭದಲ್ಲಿ ಇದರ ಅನ್ವಯವಾಗುತ್ತಿತ್ತು. ಸಮಯ ನಿಲ್ಲದು ಎಂಬಂತೆ, ಸಮಯ ಕಳೆದಂತೆ ಇದರ ಮಹತ್ವವೂ ಕಡಿಮೆ ಆಗುತ್ತ ಬರುತ್ತಿದೆ.      ಇದನ್ನು ಓದಿದವರು ಇದು ಕಲಿಯುಗ ಅಲ್ಲವೇ?? ಅಂದರೆ ಕಲಿಯುವ ಯುಗ ಎಂದು ಹೇಳುತ್ತಾರೆ.    ಆದರೆ ಮೊದಲು ತಿಳಿದ ವಿಷಯವನ್ನು ಮರೆಯುವದು  ಸರಿಯಲ್ಲ.                               ಧಾರ್ಮಿಕತೆ ಅರಿವು ಕ್ಷೀಣಿಸುತ್ತಿದೆ ಎಂಬುದನ್ನು ಪುಷ್ಠಿಕರಿಸುವ ಘಟನೆಗಳಿವೆ. ಪ್ರಜ್ಞಾವಂತ ವ್ಯಕ್ತಿಗಳು ಧರ್ಮಾಚರಣೆ ಏಕೆ
 *'ಲಿಪಿಗಳ ರಾಣಿ 'ಕನ್ನಡದ ಮೇಲೆ ಹಿಂದಿ ಹೇರಿಕೆ ಸಲ್ಲದು*. ಭಾರತದ ರಾಷ್ಟೀಯ ಭಾಷೆ 'ಹಿಂದಿ' ಎಂದು ಸ್ವಾತಂತ್ರ್ಯ ನಂತರ ಬಹುತೇಕ ಭಾರತೀಯರನ್ನು ನಂಬಿಸಿಬಿಡಲಾಗಿತ್ತು. ಇದರ ಪರಿಣಾಮವಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದೆಲ್ಲೆಡೆ ಹಿಂದಿ ತನ್ನ ಪ್ರಭಾವವನ್ನು ಬೀರಿ  ಸಣ್ಣ ಪುಟ್ಟ ಭಾಷೆಗಳ ಸ್ಥಾನವನ್ನು ತಾನು ಗಿಟ್ಟಿಸಿಕೊಂಡು ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಪಟ್ಟಿಯಲ್ಲಿ ಹಿಂದಿ ಅಗ್ರಗಣ್ಯ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಸುಮಾರು 590 ಮಿಲಿಯನ್ ಜನರು ಹಿಂದಿ ಮಾತನಾಡುತ್ತಿರುವರು. 'ಒಂದು ದೇಶ ಒಂದು ಭಾಷೆ ' ಎಂಬ ತತ್ವದಡಿಯಲ್ಲಿ ಲಿಪಿಗಳ ರಾಣಿ ಎಂದು ಕರೆಯಲ್ಪಡುವ ಕನ್ನಡ ನೆಲದ ಮೇಲೂ ಕೂಡ ಹಿಂದಿಯನ್ನು ಹೇರುತ್ತಾ ಬಂದಿದ್ದಾರೆ. ೨೫೦೦ ವರ್ಷಗಳ ಅಗಾಧ ಇತಿಹಾಸ ಇರುವ ಕನ್ನಡದ ಮೇಲೆ ಹಿಂದಿ ಇನ್ನು ಅಂಬೆಗಾಲು ಇಡುತ್ತಿರುವ ಹಸುಗೂಸಿದ್ದಂತೆ. ಕನ್ನಡಿಗರು ಹಳೆಗನ್ನಡದಿಂದ ನಡುಗನ್ನಡ ಕಾಲಕ್ಕೆ ಬಂದಾಗಲೂ ಹಿಂದಿ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಿರಲಿಲ್ಲ. 19 ನೆ ಶತಮಾನದಲ್ಲಿ ಹಿಂದಿ ತನ್ನ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವೀಯಾಯಿತು. 'ಹಿಂದಿ ನಮ್ಮ ರಾಷ್ಟೀಯ ಭಾಷೆ ' ಎನ್ನುವ ಮತಿಹೀನರಿಗೆ ಹಿಂದಿ ಹೇಗೆ ಕವಲೊಡೆಯಿತು ಎಂಬುವುದೇ ಇನ್ನು ಸರಿಯಾಗಿ ತಿಳಿದಿಲ್ಲ. ಭಾರತಕ್ಕೆ ಪರ್ಶಿಯನ್ನರ ಆಕ್ರಮಣದಿಂದ ಪರ್ಶಿಯನ್ ಭಾಷೆಯು ಹಿಂದಿಯ ಮೇಲೆ ಪ್ರಭಾವ ಬೀರಿತು ಪ್ರಭಾವ ಬೀರಿತು. ಅಲ್ಲದೆ ಪ್ರಾಕೃತ ಭಾಷೆ
 ಭಾರತೀಯ ಸೇನೆ ‌                                                 ಒಂದು ದೇಶಕ್ಕೆ ಭೂ ಪ್ರದೇಶ, ಜನ ಸ೦ಖ್ಯೆ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ, ಧಾರ್ಮಿಕ, ರಾಜಕೀಯ ಸಮಾನತೆ, ಕ್ರಷಿ ವ್ಯವಸ್ಥೆ ಹೇಗೆ ಮುಖ್ಯವೋ ಅಂತೆಯೇ ರಕ್ಷಣಾ ಪಡೆಯು ಕೂಡ ಅಷ್ಟೇ ಮುಖ್ಯ ಹಲವಾರು ದೇಶ  ಇನ್ನೊಂದು ದೇಶದೊಂದಿಗೆ ವ್ಯವಹಾರ ಸಂಬಂಧವನ್ನು ಬೆಳೆಸುವಲ್ಲಿ  ಆ  ದೇಶದ ಆರ್ಥಿಕ ವ್ಯವಸ್ಥಯನ್ನಲ್ಲದೆ ರಕ್ಷಣಾ ವ್ಯವಸ್ಥೆಯ ಭಾಳಾದ್ಯತೆಯನ್ನು ಗಮನಿಸುವರು.                                                           ರಕ್ಷಣಾ  ಪಡೆ ಕೇವಲ ಗಡಿಯ ರಕ್ಷಣೆ ಮಾತ್ರವಲ್ಲ ನೆರೆಯ ಸಂದರ್ಭದಲ್ಲಿ, ಕಾಡ್ಗಿಚ್ಚು  ಮತ್ತಿತ್ತರ ಸಂದರ್ಭ ಬಂದಾಗ ರಕ್ಷಣಾ ಪಡೆಯು ನೆರವಿಗೆ ಬರುತ್ತವೆ ರಕ್ಷಣಾ ಪಡೆ ಎಂಬುದು ಒಂದು ದೇಶದ ಘನತೆ ಮತ್ತು ಪ್ರತಿಷ್ಟೆಯ ಬಿಂಬಕ. ಭಾರತದ ರಾಷ್ಟ್ರೀಯ ಸೈನ್ಯದ ಕುರಿತಾಗಿ ಹೇಳುವುದಾದರೆ ಇದು ೧೯೪೨ ರಲ್ಲಿ ಪ್ರಾರಂಭವಾದ ಒಂದು ಸಶಸ್ತ್ರ  ಪಡೆ ಇದರ ಸಂಸ್ಥಾಪಕರು ಖ್ಯಾತ ಕ್ರಾಂತಿಕಾರಿ ರಾಸ್ ಬಿಹಾರಿ ಭೋಸ್ ಇವರು 2ನೇ ಮಹಾ ಯುದ್ದದ ಸಂದರ್ಭದಲ್ಲಿ ಈ ಪಡೆಯ ನಿರ್ವಹಣಾ ಕಾರ್ಯವನ್ನು ನೇತಾಜಿರವರಿಗೆ  ವಹಿಸಿದರು.                          ಭಾರತವು ತನ್ನ ವಿಶಾಲತೆಗೆ ತಕ್ಕನಾದ ರಕ್ಷಣಾ ಸಾಮರ್ಥ್ಯವನ್ನು ಹೊಂದಿದ್ದು ಭೂ ಸೇನೆ, ವಾಯು ಸೇನೆ, ಜಲ ಸೇನೆ ಎಂಬ 3  ಮುಖ್ಯ ಅಂಶಗಳನ್ನು ಹೊಂದಿದೆ. ನೌಕಾ ಪಡೆಯು ಜಗತ್ತಿನ 5 ನೇ ದೊಡ್ಡ್  ನೌಕಾಪ
 ಬಸ್ ನಿಲ್ದಾಣ  ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಸ್ ನಿಲ್ದಾಣ ಇರುತ್ತದೆ.ನಗರ ಮತ್ತು ಗ್ರಾಮೀಣ ಪ್ರದಶಗಳಲ್ಲಿರುವ ಬಸ್ ನಿಲ್ದಾಣದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ ಏನೆಂದರೆ ನಗರದಲ್ಲಿನ ಬಸ್ ನಿಲ್ದಾಣಗಳಲ್ಲಿ ಸುಮಾರು ಎಲ್ಲ ಬಸ್ ಗಳನ್ನು ನಿಲ್ಲಿಸುತ್ತಾರೆ.ಆದರೆ ಗ್ರಾಮಣ ಬಸ್ ನಿಲ್ದಾಣದಲ್ಲಿ ಕೆಲವೊಂದು ಬಸ್ ಗಳನ್ನು ಮಾತ್ರ ನಿಲ್ಲಿಸುತ್ತಾರೆ.                                                                             ಗ್ರಾಮೀಣ ಬಸ್ ನಿಲ್ದಾಣ ಒಂದು ದಿನಕ್ಕೆ ಎರಡು ಮೂರು ಬಸ್ ಮಾತ್ರ ನಿಲ್ಲಿಸಲಾಗುತ್ತದೆ. ಬೆಳಿಗ್ಗೆ ಶಾಲಾ ಕಾಲೇಜು ಮಕ್ಕಳಿಗೆ ನಂತರ ಮದ್ಯಾಹ್ನ ಒಂದು ಹಾಗೂ ಸಾಯಂಕಾಲಕ್ಕೆ ಒಂದು ಬಸ್ ಇರುತ್ತದೆ. ಇಂತಹ ಬಸ್ ನಿಲ್ದಾಣಗಳ ಗೋಡೆಯಮೇಲೆ ನೂರಾರು ಜನರ ಕಲೆ ಮತ್ತು ಅವರ ಕಲ್ಪನಾಲೋಕದ ಚಿತ್ರಣಗಳು ಮತ್ತು ಗೋಡೆಯ ಮೂಲೆಗಳಲ್ಲಿ ಭಿತ್ತಿಪತ್ರಗಳು ಅಂತಿಸಿರುತ್ತರೆ. ಕೆಲವೊಂದು ಪ್ರದೇಶಗಳಲ್ಲಿ ಬಸ್ ನಿಲ್ದಾಣವೆಂದರೆ ಇಂಟರ್ನೆಟ ಅಥವಾ ನೆಟ್ವರ್ಕ್ ಬಳಸಲಾಗುವಂತಹ ಸ್ಥಳವೆಂದು ಹೇಳಬಹುದು. ಆದರೆ ಬಸ್ ನಿಲ್ದಾಣ ವೆಂದರೆ ನಮ್ಮೆಲ್ಲರ ಅನುಕೂಲಕ್ಕೆ ಮಾಡಿದಂತಹ ಒಂದು ವ್ಯವಸ್ಥೆಯಾಗಿದೆ ಅಂತಹ ವ್ಯವಸ್ಥೆಯನ್ನು ನಾವು ಸ್ವಚ್ಛಂದವಾಗಿ ಇಡಬೇಕು. ಬಸ್ ನಿಲ್ದಾಣವು ಮಳೆಗಾಲದ ಅಂತಹ ಸಮಯದಲ್ಲಿ ನಮಗೆ ಆಶ್ರಯವನ್ನು ನೀಡುತ್ತದೆ ಹಾಗೂ ರಕ್ಷಣೆಯನ್ನು ಒದಗಿಸುತ್ತದೆ ಸ್ವಚ್ಛತಾ ದಿನವನ್ನು ಹೊರತುಪಡಿಸಿ ಉಳಿದಂತಹ ದಿ
 ಅಪ್ಪ 'ಅಪ್ಪ' ಎನ್ನುವ ಈ ಶಬ್ದದಲ್ಲಿ ಅದೆಂಥಾ ಗತ್ತು ಗಾಂಭೀರ್ಯ, ದೇವರು ತಾನೂ ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ, ಅಂತಾ ಗೊತ್ತಾಗಿ 'ತಾಯಿ'ನ ಸೃಷ್ಟಿ ಮಾಡಿದ, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ, ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಎನಿಸುವ ಶಿಸ್ತು, ಅನುಮಾನ, ಹಾಗಂತ ಆತನಲ್ಲಿ ಪ್ರೀತಿಯಿಲ್ಲ ಎಂದುಕೊಂಡರೇ ಅದು ತಪ್ಪಾಗುತ್ತದೆ. ಆತನಲ್ಲಿ ಅತಿಯಾದ ಒಲವಿದೆ. ಆದರೆ  ತಾಯಿಯ ಹಾಗೆ ತನ್ನ ಪ್ರೀತಿಯನ್ನು ತೋರಗೊಡಲಾರ.                 ಅಪ್ಪನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಅಪ್ಪ ಎಂದರೆ ನಮಗೆ ಬೇಕಾಗುವ ಮ್ಯಾಜಿಕ್ ಬಾಕ್ಸ್, ಸಣ್ಣ ಸ್ಲೇಟಿನಿಂದ, ಹಿಡಿದು ದೊಡ್ಡ ಕಾರಿನವರೆಗೂ ನಮ್ಮೆಲ್ಲ ಬಯಕೆಗಳನ್ನ ತನ್ನ ಶಕ್ತಿಗೆ ಅನುಸಾರವಾಗಿ ತುಂಬಿದವನು. ಮಕ್ಕಳ ಪಾಲಿಗೆ  ಅಪ್ಪನೇ ಮೊದಲ ಹೀರೋ, ಅಪ್ಪನ ತೋರು ಬೆರಳು ಹಿಡಿದು ಸಂತೆಯಲ್ಲಿ ಜಗತ್ತನ್ನೆ  ತೋರಿದವ. ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮಾಡುತ್ತಿದ್ದ ಭಾವ ಭಯ. ಆದರೆ ಮಕ್ಕಳ ಡಿಮ್ಯಾಂಡುಗಳು ಮೊದಲ ತಾಯಿಯ ಬಳಿಯೇ ಹೇಳಿಕೊಳ್ಳುತ್ತಾರೆ. ಏನ್ನೇ ವಸ್ತುವನ್ನು ಅಪ್ಪನ ಹತ್ತಿರ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೆಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ. ಹಾಗೆಂದು ಆತ ಸರ್ವಾಧಿಕಾರಿಯಲ್ಲ, ಬದಲಿಗೆ ಸರಿ ತಪ್ಪುಗಳನ್
 ಸ್ವಾತಂತ್ರ್ಯ ಸಂಗ್ರಾಮ ಬಾಲ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಹಬ್ಬದ ಸಂಭ್ರಮ ನನ್ನ ಮನಸ್ಸಿನಲ್ಲಿ ಇತ್ತು . ಹೊಸ ಬಟ್ಟೆ ಹಾಕಿಕೊಂಡು ಶಾಲೆಯಲ್ಲಿ ಧಿಘಿ ಧಿಘಿ ಕುಣಿದು ಯಾರೋ ಮಾಡಿದ ಭಾಷಣ ಅರ್ಥವಾಗದೆ , ಮುಕ್ತಾಯದಲ್ಲಿ ನಮಗೆ ತಿನ್ನಲು ಸಿಹಿ ಕೊಡುತ್ತಿದ್ದರು. ತಿಂದು ಮನೆಗೆ ಬರುತ್ತಿದ್ದೆವು. ಜೀವನದ ಮೊದಲ ಘಟ್ಟದ ಅನುಭವ ಇದಾಗಿತ್ತು.  ಮುಂದೆ ಪ್ರೌಢ ಶಾಲೆಗೆ ಬಂದ ನಂತರ ಸ್ವಾತಂತ್ರ್ಯವೆಂದರೆ ಏನು ? ಯಾಕೆ ಒಂದು ರಾಷ್ಟ್ರಕ್ಕೆ ಆಳ್ವಿಕೆಯ ಹಕ್ಕು, ಸಾರ್ವಭೌಮತ್ವ ಏಕೆ ಬೇಕು ? ಇಂದಿತ್ಯಾದಿ ಪ್ರಶ್ನೆಗಳು ಮಿದುಳನ್ನು ಕೊರೆಯಲು ಶುರು ಮಾಡಿದವು. ಎಸ್.ಎಸ್.ಎಲ್.ಸಿ.ಯಲ್ಲಿರುವಾಗ ಇಂದು ನಾವು ಅನುಭವಿಸುವ ' ಸ್ವಾತಂತ್ರ್ಯ ಸಂಗ್ರಾಮದಿಂದ , ತ್ಯಾಗ  ಬಲಿ ದಾನಗಳಿಂದ ದೊರಕಿದ್ದು ಎಂಬ ತಿಳುವಳಿಕೆ ಬಂತು . ಅದರ ಪೂರ್ಣ ಅರ್ಥ ತಿಳಿಯಲು ಶಾಲೆಯಲ್ಲಿದ್ದ ವಾಚನಾಲಯದಲ್ಲಿ  ಇರುವ ಪುಸ್ತಕಗಳನ್ನು ಹುಡುಕಾಡಿದೆ . ಆಗ ನಾನು ಕಲಿಯುವ ಇತಿಹಾಸ ನನ್ನ ನೆರವಿಗೆ ಬಂತು .  ಜಗತ್ತು ಮಲಗಿರುವಾಗ ಭಾರತ ಎಚ್ಚರವಾಗಿತ್ತು ಎಂಬ ತಿಳುವಳಿಕೆ ಮನಸ್ಸಿಗೆ ಬಂದಾಗ ಭಾರತಕ್ಕೆ ಇರುವ ಪರಂಪರೆ , ರಾಮಾಯಣ , ಮಹಾಭಾರತದ ಕಥೆಗಳು , ಋಷಿ ಮುನಿಗಳ ಬೀಡಾದ ಭಾರತ ಅಂದು ದೊಡ್ಡ ಜ್ಞಾನಭಂಡಾರವೇ ಆಗಿತ್ತು ಎಂಬುದು ತಿಳಿದುಬಂತು. ಭಾರತದ ನೆಲ,ಜಲ,ಧರ್ಮಗಳ ಮೌಲ್ಯ, ವೇದ-ಉಪನಿಷತ್ತುಗಳ ತಿರುಳು, " ವಸುದೈವ ಕುಟುಂಬಕಂ"  ಜಗತ್ತೇ ಒಂದು ಕುಟುಂಬ ಎಂಬ ವಿಶಾಲ ಪರ
 "ಸಮಾನತೆಯಲ್ಲಿ ಸ್ತ್ರೀ ಸಶಕ್ತಿಕರಣ" ಬ್ರಹ್ಮ ಸೃಷ್ಟಿಸಿದ ಸಮಾಜದಲ್ಲಿ ಲಿಂಗಭೇದ ಗಳು ಸೃಷ್ಟಿಯಾಯಿತು. ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎನ್ನುವ ಎರಡು ಪ್ರಭೇದಗಳು ಉಂಟಾದವು, ಅವರ ಬೆಳವಣಿಗೆ ಮತ್ತು ಉದ್ಯೋಗಗಳು ವಿಭಿನ್ನವಾಗಿದ್ದವು.  ಕಾಲಾನಂತರ ಸ್ವಾವಲಂಬಿ ಜೀವನ ಅಸ್ತಿತ್ವಕ್ಕೆ ಬರತೊಡಗಿತು. ಪ್ರಾರಂಭದಲ್ಲಿ ಪುರುಷಪ್ರಧಾನ ಸಮಾಜ ನಮ್ಮದಾಗಿತ್ತು. ಮನೆ ಯಜಮಾನನು ದುಡಿದು ತರುವುದು ಹಾಗೂ ಯಜಮಾನಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ದು ಆಗಿನ ಸಂಪ್ರದಾಯವಾಗಿತ್ತು. ಶಿಕ್ಷಣದಲ್ಲಿ ಸ್ತ್ರೀಯರಿಗೆ ಸೀಮಿತತೆ ಇತ್ತು.ಸಮಯ ಕಳೆದಂತೆ ಶಿಕ್ಷಣದ ಮಹತ್ವ ಹೆಚ್ಚಿತು. . ನಂತರ ಮುಂದುವರೆದುಕೊಂಡು ಬಂದಿತು. ಕೆಲ ಮೂಢನಂಬಿಕೆ ಕಾರಣ ಶಿಕ್ಷಣದ ಸ್ತ್ರೀ ಪ್ರಗತಿಯಲ್ಲಿ ಅಂಧಕಾರದ ಛಾಯೆಯಿತ್ತು. ಅದರ ತೆರವಿಗೆ ಅನೇಕ ವರ್ಷಗಳು ಬೇಕಾದವು.  ಸ್ತ್ರೀಯರು ಹೆಚ್ಚು ಶಿಕ್ಷಣ ಕಲಿಯಲಾರಂಭಿಸಿದ ನಂತರ "ನಾವು ಯಾರಿಗೂ ಕಮ್ಮಿ ಇಲ್ಲ". ಎಂಬ ಯೋಚನೆ ಮೂಡಿತು. ಅದರ ಅಡಿಯಲ್ಲಿ ಸಮಾನತೆ ಹಕ್ಕು ಮತ್ತು ಸ್ತ್ರೀ ಸಶಕ್ತಿಕರಣ ಎಂಬ ಯೋಜನೆ ರಚನೆಯಾಯಿತು. ಪುರುಷರು ಮತ್ತು ಸ್ತ್ರೀಯರಿಗೆ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕೊಡುವುದು ಸಮಾನತೆ ಯಾದರೆ,  ಸ್ತ್ರೀಯರನ್ನು ಎಲ್ಲಾ ಸಂದರ್ಭಗಳಲ್ಲೂ ಧೈರ್ಯಗುಂದದೆ ಮುನ್ನಡೆಸಲು ಸಶಕ್ತಿಕರಣ ಸಹಾಯಮಾಡುತ್ತದೆ. ಆರಂಭದಲ್ಲಿ ಸಮಾನತೆ ಯನ್ನು ಅಲಕ್ಷಿಸಿ ದರಾದರೂ ನಂತರ ಸ್ತ್ರೀಯರು ಸೇನೆ, ವ್ಯವಹಾರ, ಮತ್ತ
 ಇದೇನಾ ಸ್ವಾತಂತ್ರ್ಯ...?ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಅಧಿಕಾರಿಗಳ ಟೇಬಲ್ ಕೆಳಗೆ ಬಂತು,ಉಳ್ಳವರ ಮನೆಗೆಬಂತು.                      ಸ್ವಾತಂತ್ರ್ಯ ಸಿಕ್ಕು 74 ವರ್ಷಗಳಾದರೂ ನಿಜವಾಗಿಯೂ ನಾವು ಸ್ವತಂತ್ರರೇ? ಎಂದು ನಮ್ಮನ್ನ ನಾವು ಕೇಳಿಕೊಂಡಾಗ ನಮ್ಮಲ್ಲಿ ಉದಯಿಸುವ ಪ್ರಶ್ನೆ..   ಸ್ವಾತಂತ್ರ್ಯ ಎಂದರೇನು? ದೇಶಕ್ಕೆ ಬ್ರಿಟಿಷರ ಆಳ್ವಿಕೆಯಿಂದ ಸಿಕ್ಕಿದ್ದೇನೋ ನಿಜ ,ಆದರೂ ನಾವು ನಿಜವಾಗಿಯೂ ಸ್ವತಂತ್ರರೇ? ಎಂಬುದು ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.            ನಾವು ಭಾರತೀಯರು ಇಂದು ಸಹ, ಭಾರತಕ್ಕೆ ಸ್ವಾತಂತ್ರ್ಯ ತಂದ ಶ್ರೇಯಸ್ಸನ್ನ ಕೆಲವೇ ಜನರಿಗೆ ನೀಡುತ್ತಿದ್ದೇವೆ.. ಸ್ವಾತಂತ್ರ್ಯಹೋರಾಟದ ನೇತೃತ್ವ ವಹಿಸಿ ಬಲಿದಾನ ನೀಡಿದವರು ಅನೇಕರಿದ್ದಾರೆ.  ಇಂದು ನಾವು ಕೆಲವರನ್ನ ಅಷ್ಟೇ ಆರಾಧಿಸುತ್ತೇವೆ..ಅಂದರೆ ಲಾಲ್ ಬಹದ್ದೂರ್ ಶಾಸ್ತ್ರಿಯಂತಹವರನ್ನು ಮರೆತೇ ಬಿಡುತ್ತೇವೆ.  ಹಾಗೆಯೇ ನವೆಂಬರ್19 ಝಾನ್ಸಿರಾಣಿಯ ಜನುಮ ದಿನವೊಂದು ನಗಣ್ಯವೇ ಆಗಿ ಬಿಡುತ್ತದೆ. ತನ್ನ ಮಗನನ್ನು ಕಟ್ಟಿಕೊಂಡು ಅಲ್ಲಿಂದಲೇ ಭಾರತದ ಕ್ಷಾತ್ರತೇಜವನ್ನು ಸುರಿಸಿದ್ದ ಮಹಿಳೆಯ ಜನುಮದಿನ ನಮಗೆ ವಿಶೇಷ ದಿನವಲ್ಲ. ಬದಲಿಗೆ,ದೇಶವನ್ನು ಇಬ್ಬಾಗ ಮಾಡಿ ಹೋದವರೆಲ್ಲ ನಮಗೆ ಆದರ್ಶವಾಗುತ್ತಾರೆ ಮತ್ತೆ ನಾವು ಮುಂದಿನ ಪೀಳಿಗೆಗೂ ಹೇಳಿಕೊಡುವುದು ಮತ್ತದೇ ಗುಲಾಮ ಗಿರಿಯನಷ್ಟೇ ಹೊರತು ಬೇರೇನು ಅಲ್ಲ....   ಇದನ್ನೆಲ್ಲವನ್ನು ಈಗ ಒಬ್ಬ ಶ್ರೀ ಸಮಾನ್
 ಭ್ರಷ್ಟ ಜಗತ್ತು...     ವಸುದೈವ ಕುಟುಂಬಕಂ, ಸರ್ವೇಜನ ಸುಖಿನೋಭವಂತು ಎಂಬ ನಾಣುಡಿಯನ್ನು ನೀಡಿದ ದೇಶ ನಮ್ಮ ಭಾರತ.ಎಲ್ಲರೂ ಒಂದೇ  ಎನ್ನುವ ದೇಶದಲ್ಲಿ ಅನಾದಿ ಕಾಲದಿಂದಲೂ ಬೆಂಬಿಡದೆ ಕಾಡುತ್ತ ಬಂದ ಒಂದು ದೊಡ್ಡ ರೋಗ ಅಂದರೆ ಅದು ಭ್ರಷ್ಟಾಚಾರ. ಭ್ರಷ್ಟಾಚಾರದ ಮೂಲ ಸ್ವಾರ್ಥ, ಸೃಜನಪಕ್ಷಪಾತ, ದೇಶಪ್ರೇಮದ ಕೊರತೆ ,ಅವಶ್ಯಕತೆಗಿಂತ ಮೀರಿದ ಆಸೆಬುರುಕುತನ ಮುಖ್ಯವಾಗಿ ಬದುಕಿನ ಮೌಲ್ಯವಾದ ನೈತಿಕ ಶಿಕ್ಷಣದ ಕೊರತೆಯಾಗಿದೆ. ಪ್ರಜಾಪ್ರಭುತ್ವ ಅಥವಾ ಸರ್ವಾಧಿಕಾರಿಯ ಅಧ್ಯಕ್ಷ ರಾಷ್ಟ್ರ ಗಳಲ್ಲಿ ಅವಿಭಕ್ತ ಕುಟುಂಬ ಮಾಯವಾಗಿ ವಿಭಕ್ತಿ ಕುಟುಂಬಗಳು ಸೃಷ್ಟಿಯಾಗಿ ನಾನು,ನನ್ನದು ಎಂಬ ಸ್ವಾರ್ಥದಿಂದ ಕ್ಷಣಿಕ ಸುಖಕ್ಕಾಗಿ ಮೋಜು ಮಸ್ತಿಗಾಗಿ ದುಡಿಯದೆ ಅನ್ಯಮಾರ್ಗದಲ್ಲಿ ಸಂಪಾದಿಸುವ ವ್ಯವಸ್ತೆಯೇ ಭ್ರಷ್ಟಾಚಾರ.. ಇದು ಸಮಾಜದ ಒಂದು ಭಾಗವಾಗಿ ಬಿಟ್ಟಿದೆ. ನಾವೆಲ್ಲಾ ಸಾಮಾನ್ಯವಾಗಿ ಇತ್ತೀಚಿನ ಸುದ್ದಿಗಳಲ್ಲಿ ನೋಡುತ್ತಾ ಕೇಳುತ್ತಾ ಇದ್ದೇವೆ. ಒಂದು ಮಗು ಹುಟ್ಟಿದಾಗಿನಿಂದ ಸಾಯುವವರೆಗೂ ಲಂಚಕೊಡಬೇಕು. ಎಲ್ಲಿ ನೋಡಿದರೂ ಭ್ರಷ್ಟಾಚಾರ.. ಇತ್ತೀಚೆಗೆ ನಡೆದ PSI ನೇಮಕಾತಿ ಪರೀಕ್ಷೆಯಲ್ಲಾದ ಹಗರಣ.ಇಲ್ಲಿ ನಾನು ಯಾರೋ ಒಬ್ಬರನ್ನು ದೂಷಿಸುತ್ತಿಲ್ಲ ಆದರೆ ಒಟ್ಟಾರೆ ನಮ್ಮ ಜನರ ಮನಸ್ಥಿತಿ ಹದಗೆಟ್ಟಿದೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ಬಯಸುತ್ತಿದ್ದೇನೆ. ಏಕೆಂದರೆ ಈ ಹಗರಣದಲ್ಲಿ ವಿದ್ಯಾರ್ಥಿಗಳಿದ್ದಾರೆ, ಅವರ ತಂದೆ - ತಾಯಿಗಳಿದ್ದಾರೆ, ಶಿಕ್ಷಕರಿದ್ದಾರೆ, ಶಿಕ್ಷಣ
 ಸಮಯ ಪ್ರಜ್ಞೆ "ನಾಳೆ ಮಾಡುವುದನ್ನು ಇಂದು ಮಾಡು, ಇಂದು  ಮಾಡುವುದನ್ನು ಈಗಲೇ ಮಾಡು" ಎಂದು ದಾಸರು ತಮ್ಮ ನುಡಿಗಳ ಮೂಲಕ ಸಮಯ ಇರುವಾಗಲೇ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸಿಬೇಕು ಎಂದು ಹೇಳಿದ್ದಾರೆ. ಯಾವ ವ್ಯಕ್ತಿಗೆ ಸಮಯ ಪ್ರಜ್ಞೆ ಇರುತ್ತೋ ಆ ವ್ಯಕ್ತಿ ತನ್ನ ಗುರಿಯನ್ನು ಮುಟ್ಟವುದರಲ್ಲಿ ಬೇರೆ ಮಾತಿಲ್ಲ. ಅದೇ ಯಾವ ವ್ಯಕ್ತಿಗೆ ಸಮಯದ ಬೆಲೆ ಹಾಗೂ ಪರಿಜ್ಞಾನ ಇರುವುದಿಲ್ಲವೋ ಆ ವ್ಯಕ್ತಿ ಮುಂದೊಂದು ದಿನ ಕಣ್ಣೀರು ಹಾಕುತ್ತಾನೆ. ಅವನು ಆ ಸಮಯದ ಸದುಪಯೋಗ ಸರಿಯಾಗಿ ಪಡೆದುಕೊಂಡರೆ ತನಗೆ ಈ ಗತಿ ಬರುತ್ತಿರಲ್ಲಿಲ್ಲವೆಂದು ಮನದಲ್ಲಿ ಕೊರಗುತ್ತಾನೆ.                          ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಕಾಯಕ, ಇವೆಲ್ಲವೂಗಳಿಂದ ಕೂಡಿದಾಗ ಮಾತ್ರ ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ. ಸಮಯವನ್ನು ಸರಿಯಾಗಿ ಬಳಕೆ ಮಾಡುವುದು ಚಿತ್ತಾವಧಾನ, ಚಾಕಚಕ್ಯತೆ, ಪ್ರಸಂಗವಧಾನ ಎಂಬ ಅರ್ಥಗಳು ಕೊಡುತ್ತದೆ. ಇದನ್ನು ಬೆಳೆಸಿಕೊಳ್ಳಲು ಹೇಳುವ ನಾವು ನೀವುಗಳು ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಕಾರ್ಯಗಳನ್ನು ಚಾಚು ತಪ್ಪದೆ ಮಾಡಬೇಕು. ವಿದ್ಯಾರ್ಥಿಗಳು ಪಾಠವನ್ನು ಗಮನ ಹರಿಸಿ ಕೇಳಬೇಕು ಹಾಗೆ ನಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನಾವು ಬೇರೆ ಕಡೆಗೆ ಲಕ್ಷ್ಯ ವಹಿಸಬಾರದು, ಆ ಸಮಯ ವ್ಯರ್ಥವಾಗಿ ಹೋಗುತ್ತದೆ.                    ಯಾವಾಗಲೂ ಒಳ್ಳೆಯ ಕಾರ್ಯ ಮಾಡಲು ಹೆಚ್ಚು ಸಮಯ ಅವಕಾಶ ತೆಗೆದುಕೊಳ್ಳಬಾರದು ಬಹ
 "ಅಪ್ಪಾಜಿ ಎಂಬ ಅಪರೂಪದ ವಜ್ರ"       ಅಪ್ಪಾಜಿ ಅಂದರೆ ಒಂದು ಶಕ್ತಿ,ಸ್ಫೂರ್ತಿ.. ಅಪ್ಪಾಜಿ ಅಂದರೆ ಧೈರ್ಯ,ಆಕಾಶ,ಆ ಮನೆಯ ಕಾಳಜಿ,ಸಂಸಾರದ ಜವಾಬ್ದಾರಿಯನ್ನು ಹೊತ್ತ ಯಜಮಾನ. ತನಗಾಗಿ ಏನನ್ನು ಬಯಸದ ಜೀವ, ಎಲ್ಲವನ್ನು ತನ್ನವರಿಗಾಗಿ ತ್ಯಾಗ ಮಾಡುವ ತ್ಯಾಗಮಯಿಗಾರ. ಪ್ರೀತ-ಪ್ರೇಮ, ಸುಖ-ದುಃಖ, ಸಂತೋಷ,ಸ್ನೇಹವನ್ನು ಹಂಚುವ ಸಾಹುಕಾರ.  ಜೀವನದಲ್ಲಿ ಕಷ್ಟಗಳು ಬಂದಾಗ ಹೆದರದೆ ಸಮಾಧಾನದಿಂದ ಕಷ್ಟವನ್ನು ಎದುರಿಸಿದ ಸರದಾರ ಅಪ್ಪಾಜಿ...  ಮೊದಲಿನಿಂದಲೂ ಅಪ್ಪಾಜಿ ಎಂದರೆ ಏನೋ ಭಯ , ಅವರೊಂದಿಗೆ ಮಾತು ಕಡಿಮೆ ಅವಶ್ಯಕತೆಗಿಂತ ಮೀರಿದ ಮಾತಿಲ್ಲ ಏನೇ ಕೇಳಬೇಕಾದರು ಅಮ್ಮನ ಮಧ್ಯಸ್ಥಿಕೆಯಲ್ಲಿಯೆ. ಚಿಕ್ಕವರಿದ್ದಾಗಲೇಲ್ಲಾ ರಾತ್ರಿ ನಾವು ಮಲಗಿದ್ದಾಗ ಬರುತ್ತಿದ್ದರು,ನಾವು ಶಾಲೆಗೆ ಹೋದ ಮೇಲೆ ಏಳುತ್ತಿದ್ದರು. ನಮ್ಮ ಒಡನಾಟ ದೊಡಪ್ಪಾಜಿಯ ಜೊತೆ ಇದ್ದಷ್ಟು ಅಪ್ಪಾಜಿಯ ಜೊತೆ ಇರುತ್ತಿರಲಿಲ್ಲ.ಆದರೂ ರಾತ್ರಿ ಏನಾದ್ರೂ ಊಟ ಮಾಡದೆ ಮಲಗಿದ್ರೆ ಅದೆಷ್ಟೇ ಹೊತ್ತಾದ್ರೂ ಎಬ್ಬಿಸಿ ಊಟ ಮಾಡಿಸುತ್ತಿದ್ದರು. ಏನಾದರೂ ಹೊರಗಿನಿಂದ ತಿಂಡಿ ತಂದಿದ್ದರೆ ಬೆಳಗಿನವರಗೂ ಕಾಯದೆ ಮಲಗಿದ ನಮ್ಮನ್ನು ಎಬ್ಬಿಸಿ ತಿನ್ನಿಸುತ್ತಿದ್ದ ನೆನಪು  ಇನ್ನು ಹಚ್ಚಹಸಿರು. ರಾತ್ರಿ ನಿದ್ದೆಯಲ್ಲಿ ತಿಂದ ನನಗೆ ಬೆಳಗ್ಗೆ ಎಚ್ಚರ ಆದಾಗ ಕನಸಲ್ಲಿ ತಿಂದಂತೆ ಆಗಿರುತ್ತಿತ್ತು.  ಅಪ್ಪಾಜಿಗೆ ನಾವು  ಇಬ್ಬರು ಮಕ್ಕಳು ಇಬ್ಬರೂ ಅನ್ನೋದಕ್ಕಿಂತ ನಾವು ನಾಲ್ವರು. ನಮ್ಮದು ಅವಿಭಕ್ತ ಕುಟುಂಬ ದ

"ಸಮಾನತೆಯಲ್ಲಿ ಸ್ತ್ರೀ ಸಶಕ್ತಿಕರಣ"

ಬ್ರಹ್ಮ ಸೃಷ್ಟಿಸಿದ ಸಮಾಜದಲ್ಲಿ ಲಿಂಗಭೇದ ಗಳು ಸೃಷ್ಟಿಯಾಯಿತು. ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎನ್ನುವ ಎರಡು ಪ್ರಭೇದಗಳು ಉಂಟಾದವು, ಅವರ ಬೆಳವಣಿಗೆ ಮತ್ತು ಉದ್ಯೋಗಗಳು ವಿಭಿನ್ನವಾಗಿದ್ದವು.  ಕಾಲಾನಂತರ ಸ್ವಾವಲಂಬಿ ಜೀವನ ಅಸ್ತಿತ್ವಕ್ಕೆ ಬರತೊಡಗಿತು. ಪ್ರಾರಂಭದಲ್ಲಿ ಪುರುಷಪ್ರಧಾನ ಸಮಾಜ ನಮ್ಮದಾಗಿತ್ತು. ಮನೆ ಯಜಮಾನನು ದುಡಿದು ತರುವುದು ಹಾಗೂ ಯಜಮಾನಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ದು ಆಗಿನ ಸಂಪ್ರದಾಯವಾಗಿತ್ತು. ಶಿಕ್ಷಣದಲ್ಲಿ ಸ್ತ್ರೀಯರಿಗೆ ಸೀಮಿತತೆ ಇತ್ತು.ಸಮಯ ಕಳೆದಂತೆ ಶಿಕ್ಷಣದ ಮಹತ್ವ ಹೆಚ್ಚಿತು. . ನಂತರ ಮುಂದುವರೆದುಕೊಂಡು ಬಂದಿತು. ಕೆಲ ಮೂಢನಂಬಿಕೆ ಕಾರಣ ಶಿಕ್ಷಣದ ಸ್ತ್ರೀ ಪ್ರಗತಿಯಲ್ಲಿ ಅಂಧಕಾರದ ಛಾಯೆಯಿತ್ತು. ಅದರ ತೆರವಿಗೆ ಅನೇಕ ವರ್ಷಗಳು ಬೇಕಾದವು.  ಸ್ತ್ರೀಯರು ಹೆಚ್ಚು ಶಿಕ್ಷಣ ಕಲಿಯಲಾರಂಭಿಸಿದ ನಂತರ "ನಾವು ಯಾರಿಗೂ ಕಮ್ಮಿ ಇಲ್ಲ". ಎಂಬ ಯೋಚನೆ ಮೂಡಿತು. ಅದರ ಅಡಿಯಲ್ಲಿ ಸಮಾನತೆ ಹಕ್ಕು ಮತ್ತು ಸ್ತ್ರೀ ಸಶಕ್ತಿಕರಣ ಎಂಬ ಯೋಜನೆ ರಚನೆಯಾಯಿತು. ಪುರುಷರು ಮತ್ತು ಸ್ತ್ರೀಯರಿಗೆ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕೊಡುವುದು ಸಮಾನತೆ ಯಾದರೆ,  ಸ್ತ್ರೀಯರನ್ನು ಎಲ್ಲಾ ಸಂದರ್ಭಗಳಲ್ಲೂ ಧೈರ್ಯಗುಂದದೆ ಮುನ್ನಡೆಸಲು ಸಶಕ್ತಿಕರಣ ಸಹಾಯಮಾಡುತ್ತದೆ. ಆರಂಭದಲ್ಲಿ ಸಮಾನತೆ ಯನ್ನು ಅಲಕ್ಷಿಸಿ ದರಾದರೂ ನಂತರ ಸ್ತ್ರೀಯರು ಸೇನೆ, ವ್ಯವಹಾರ, ಮತ್ತು ಆಡಳಿತ, ಹೀಗೆ ಮುಂತಾದ ಅತ್ಯುತ್ತಮ ಕ್ಷೇತ್ರಗಳಲ್