ಪೋಸ್ಟ್‌ಗಳು

ಜೂನ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಹಸಿರೆಲೆಯ ಮೇಲೆ ಹಳ್ಳಿಯ ಹೊಂಗನಸು "

 ಬೆಳಿಗ್ಗೆ ಎದ್ದ ತಕ್ಷಣ ಶುರುವಾಗುವ ನಮ್ಮ ಜೀವನ ಎಂಬ ದಿನಚರಿಯು ಅದರಲ್ಲೂ ಹಳ್ಳಿಯ ಜೀವನ ಶೈಲಿಯನ್ನು ನೋಡುತ್ತಾ ಹೋದಂತೆ ಈಗ ಕೋಳಿ ಕೂಗುವ ಶಬ್ದ ಕೇಳಿ ಎದ್ದೇಳುವ ಪರಿಸ್ಥಿತಿ ಇಂದು ಎಲ್ಲ ಮನೆಗಳಲ್ಲಿ ಕಾಣ ಬರುತ್ತಿರುವುದೇ ಸಹಜ.  ಹಾಗೆಯೇ ಹಳ್ಳಿಯ ವಿವಿಧ ಕೆಲಸ ಕಾರ್ಯಗಳನ್ನು ನೋಡುತ್ತಾ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಕಾಡುಗಳು ಈಗ ನೋಡಲು ಸಿಗುವುದು ತುಂಬಾ ಕಡಿಮೆ. ಹಾಗೆಯೇ ಹಸಿರು ಗದ್ದೆಗಳುಬಯಲುಗಳಂತು ಇಲ್ಲವೇ ಇಲ್ಲ. ಆರಾಮದಾಯಕವಾದ ಕಾರು ಬೈಕುಗಳು ಹೊಗೆಗಳು ಅಂತಹ ಯಂತ್ರೋಪಕರಣಗಳ ಬಳಕೆಯಿಂದ ಅದರ ಎಲ್ಲಾ ಕೆಲಸಗಳನ್ನು ಮಾಡುವ ಪರಿಸ್ಥಿತಿ ಎದುರಾಗಿದೆ.  ಹಳ್ಳಿಗಳು ಜನರ ಜೀವನಾಡಿ ಗಳಾಗಿದ್ದವು ಆದರೆ ಈಗ ಹರಿದು ಚಿದ್ರ ಚಿದ್ರವಾದ ಜೇಡರ ಬಲೆ ಹೇಗೆ ನಮ್ಮ ಕಣ್ಣಿಗೆ  ಕಾಣುತ್ತದೆಯೋ ಹಳ್ಳಿಗರ ಜೀವನ ಶೈಲಿಯೂ ಹಾಗೆ ಆಗಿದೆ. ಇದಕ್ಕೆ ಕಾರಣ ಜನರ ತಾನು ತನ್ನದು ಎಂಬ ಮನಸ್ಥಿತಿ. ಆದರೆ ಅವರಿಗೆ ಮೊದಲು ತಿಳಿದಿರುವುದಿಲ್ಲ ಒಂದೊಂದು ದಿನ ಕಳೆದಂತೆ ಗೊತ್ತಾಗುತ್ತದೆ ಸುಖಕರ ಜೀವನದ ಸುಧೀರ್ಘ ನಿಟ್ಟುಸಿರು ಹಳ್ಳಿಯ ಜನರೇ ಎಂದು. ಸಂಪ್ರದಾಯದಿಂದ ಕೂಡಿದ ಹಳ್ಳಿಯ ಸೊಗಡು ಇಂದು ಬರಡಾಗುವ ಸನ್ನಿವೇಶ ಎದುರಾಗಿದೆ.  ಇಂದು ಮನುಷ್ಯ ಆರೋಗ್ಯವನ್ನು ಲೆಕ್ಕಿಸದೆ ಹಣಗಳಿಸುವತ್ತ ಮುಖ ಮಾಡಿದ್ದಾನೆ. ಕುಡಿಯುವ ನೀರಿಗೂ ಕಷ್ಟ ಪಡುತ್ತಿರುವ ಸ್ಥಿತಿಗೆ ಇಂದು ಮಾನವ ಸಮಾಜ ಹಾಗೂ ಹಳ್ಳಿಗಳು ಲಗ್ಗಿಟ್ಟಿವೆ. ಹಳ್ಳಿಯ ಹಸಿರು ಮರಗಳು ಧರೆಗುರುಳಿ ಹೆದ್ದಾರಿಗಳು ನಿ

ಆಕಾಶದಲ್ಲಿ ಮೀನಿನಂತೆ....

ಆಕಾಶಕ್ಕೆ ಏಣಿ ಯಾರೂ ಹಾಕೋಕೆ ಆಗಲ್ಲ!" ಯಾರೋ ಹೇಳಿದ ಮಾತು ನೆನಪಾಯಿತು. ಹೀಗೆ ಬರುವಾಗ 'ಪ್ರತಿ ಕನಸುಗಳು ನಮ್ಮ ಮನಸ್ಸಿನ ಹಿಡಿತದಲ್ಲಿರಬೇಕು'.ಯಾರೋ ಹಿರಿಯರು ಅವರ ಸಹದ್ಯೋಗಿಗಳಿಗೆ ಹೇಳುತ್ತಿರುವ ಮಾತಿನ ಸಂದರ್ಭ ನನ್ನ ಎದುರಿತ್ತು.    ನನಗೆ ಒಂದು ಕ್ಷಣ ಮೋಗದಲ್ಲಿ ಮಂದಹಾಸ ಬೀರಿತ್ತು. ಅದೇಕೆಂದರೆ ನನ್ನ ಮನಸಿನಲ್ಲಿ ನಡೆಯುತ್ತಿರುವ ಯೋಚನೆಗೂ, ಇಲ್ಲಿ ನಡೆಯುತ್ತಿರುವ ಸಂದರ್ಭಕ್ಕೂ ಸಾಮ್ಯತೆ ಇದೆ ಅಲ್ಲವೇ!ಎಂದು ಮನಸಿನಲ್ಲಿಯೇ, ಅಂದುಕೊಂಡೆ. ಹೀಗೆ ಯೋಚಿಸುತ್ತ ಹೋದರೇ, 'ಎಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ.ಆದರೆ ಇನ್ನೆಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ. ಸಾಧಿಸುವ ಹುಮ್ಮಸ್ಸು ಇರುವುದಿಲ್ಲ?  ನಮಗೆ ಕನಸುಗಳು ಅತೀ ಆದರೆ, ದೇವರು ಕೂಡ ಒಮ್ಮೊಮ್ಮೆ ಶತ್ರುವಾಗಿ ಬಿಡುತ್ತಾನೆ. ಏಕೆಂದರೆ ಮನದಲ್ಲಿ ಸಾವಿರ ಚಿಂತೆ ಇದ್ದರೂ, ಇರುಳಲ್ಲಿ ಚಂದ್ರನನ್ನು ಮರೆತು ಹಗಲಲ್ಲಿ ನಕ್ಷತ್ರಗಳನ್ನು ಹುಡುಕುವ ಆಸೆ. ಈ ಒಂದೊಂದು ಟೈಮಲ್ಲಿ ವಿಚಿತ್ರವಾಗಿ ಆಡುವುದನ್ನ ನೋಡಿದರೆ, ಹುಟ್ಟಿಸುವ ದೇವರಿಗೂ ಮಾನವನ ಬಗ್ಗೆ ತಿಳಿಯುವುದಿಲ್ಲ ಅಂತ ಅನಿಸುತ್ತದೆ.   ಹೀಗೆ ಹುಟ್ಟಿದ ಮಗು ಅದರ ಪೋಷಕರ ಸ್ವಾಧೀನದಲ್ಲಿ ಬೆಳೆಯುತ್ತದೆ. ಹಾಗೇ ಪಾಲಕರ ಕನಸುಗಳು ಆ ಮಗುವಿನಲ್ಲಿ ಕಾಣುತ್ತಾರೆ. ಪಾಲಕರು ಮಕ್ಕಳಿಗೂ ಹೊಸ ಹೊಸ ಆಕಾಶದಂತೆ ವಿಶಾಲವಾದ ಕನಸುಗಳು ಕಾಣುವಂತೆ ಓಲೈಸುತ್ತಾರೆ. ಆ ಮಗು ಬೆಳೆಯುತ್ತ ಹೊಸ ಕಾಣುತ್ತಾ, ಅದನ್ನು ಗುರಿ ತಲುಪಲು ಪ್ರಯ

ನೋಡ ಬಾ ನಮ್ಮೂರ ಸಸ್ಯಲೋಕ "

ಉತ್ತರಕನ್ನಡ ಜಿಲ್ಲೆಯ ಸಹ್ಯಾದ್ರಿಯ ಶೃಂಗ ಶಿರಸಿಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಬಕ್ಕಳ ಎಂಬ ಪುಟ್ಟ ಹಳ್ಳಿ ನಮ್ಮೂರು. ಬಕುಲಾಪುರ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮ ಇಂದು ಬಕ್ಕಳ ಎಂದು ತನ್ನ ಹೆಸರನ್ನು ಕಿರಿದಾಗಿಸಿಕೊಂಡಿದೆ. ಹೆಸರೇನೋ ಚಿಕ್ಕದಾಗಿರಬಹುದು ಆದರೆ ಊರಿನ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಕಾರಣ ಮಾನವನ ಪರಿಸರ ಪ್ರೀತಿಯ ಪ್ರತೀಕವಾಗಿ ನಿರ್ಮಿಸಿರುವ ಬಕ್ಕಳ ಸಸ್ಯಶಾಸ್ತ್ರೀಯ ವನ ಹಾಗೂ ನಿಸರ್ಗದ ಮಡಿಲಿನಲ್ಲಿರುವ ಧಾರ್ಮಿಕ ಕೇಂದ್ರ ಶ್ರೀ ಸತ್ಯನಾಥೇಶ್ವರ ದೇವಾಲಯ.     ಸಾಮಾನ್ಯವಾಗಿ ಉತ್ತರಕನ್ನಡ ಪ್ರವಾಸ ಕೈಗೊಂಡವರು ಶಾಸ್ತ್ರೀಯ ವನಕ್ಕೆ ಭೇಟಿ ಕೊಡದೆ ತಮ್ಮ ಯಾನವನ್ನು ಕೊನೆಗೊಳಿಸುವುದೇ ಇಲ್ಲ ಅದರಲ್ಲೂ ಜೀವ ವೈವಿಧ್ಯತೆಯ ಪ್ರೀತಿ ಹೊಂದಿರುವ, ವೈದ್ಯಕೀಯ ಆಸಕ್ತಿ ಹೊಂದಿರುವ ಆಯುರ್ವೇದದ ಕುರಿತು ಜ್ಞಾನ ಪಡೆಯಲಿಚ್ಚಿಸುವ ಜನರಿಗೆ ಶಾಸ್ತ್ರೀಯ ವನ ಒಂದು ಹಾಟ್ ಝೋನ್ ಇದ್ದಂತೆ.   ಸಸ್ಯ ಸಂಕುಲದ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಆ ಮೂಲಕ ಔಷದೀಯ ಸಸ್ಯಗಳ ಉಪಯುಕ್ತತೆಯನ್ನು ಬಹಿರಂಗಪಡಿಸುವುದು ಶಾಸ್ತ್ರೀಯ ವನದ ಮುಖ್ಯ ಉದ್ದೇಶ ಆದುದರಿಂದಲೇ ವಿಭಿನ್ನ ರೀತಿಯ ಸಸ್ಯಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳನ್ನು ಬೆಳೆಸಲಾಗುತ್ತಿದೆ ಕರ್ನಾಟಕ ಅರಣ್ಯ ಇಲಾಖೆಯು ಈ ವನದ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ   ಶಾಸ್ತ್ರೀಯ ವನದ ವಿಶೇಷತೆ: ಮರದಿಂದ ನಿರ್ಮಿ