ಮಡಿ
ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನತೆಯನ್ನು ನೀಡಿರುವನು. ಉಸಿರಾಡುವ ಗಾಳಿ ,ಜಲ, ಗಿಡಮರಗಳು ಬೆಳಕು ಪ್ರಕೃತಿ ಇವೆಲ್ಲವುಗಳ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಕೃತಿಯು ಇಷ್ಟೆಲ್ಲಾ ಸಮಾನತೆಯನ್ನು ನೀಡಿದರು ಮನುಷ್ಯನಾದವನು ಮಾತ್ರ ತನ್ನ ಜಾತಿ ಧರ್ಮ ಮತಗಳ ಅಂಧಕಾರದ ಸುಳಿಯಲ್ಲಿ ಸಿಲುಕಿರುವುದು ದುರಂತವೆ ಸರಿ. ಅದು ಹೊಸಪೇಟೆ ಸಮಾಜದಲ್ಲಿ ಎಲ್ಲಾ ಆಯಾಮಗಳಲ್ಲೂ ಉನ್ನತವಾದ ಹಂತದಲ್ಲಿದ್ದ ಒಂದು ವರ್ಗದ ದೀಕ್ಷಾ ಕಾರ್ಯಕ್ರಮವಿತ್ತು. ನಾನು ಹಾಗೂ ನನ್ನ ಮೂರು ಜನ ಸ್ನೇಹಿತರು ಆ ಕಾರ್ಯಕ್ರಮಕ್ಕೆ ಹೋಗಿದ್ದೆವು ಅತಿಥಿಗಳಗಿ ಅಲ್ಲಾ ,ಕ್ಯಾಟರಿಂಗ್ ಕೆಲಸಕ್ಕಾಗಿ. ಸಾಮಾನ್ಯವಾಗಿ ಊಟ ಎಂದರೆ ಹಸಿದಾಗ ಹೊಟ್ಟೆ ತುಂಬಿಸುವುದಾಗಿದೆ ಅಲ್ಲವೇ? ಆದರೆ ಅಲ್ಲಿ ನಾವು ಬಡಿಸುವ ಊಟಕ್ಕೂ ಮಡಿ ಊಟ ಹಾಗೂ ಹೊರಗಿನ ಊಟ ಎಂಬೆರಡು ವಿಧಗಳು ಇದ್ದವು. ಮನುಷ್ಯರು ತಮ್ಮನ್ನು ಜಾತಿ ಮತ-ಧರ್ಮಗಳ ಆಧಾರದಲ್ಲಿ ವಿಂಗಡಣೆ ಮಾಡಿಕೊಂಡಿದ್ದಲ್ಲದೆ ಕುಡಿಯುವ ನೀರು, ತಿನ್ನುವ ಅನ್ನಕ್ಕೂ ಜಾತಿ ಭೇದ ಮಾಡುತ್ತಿರುವರು.ಎಂತಹ ದುರಂತ. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಿದರು. ಭಾರತೀಯ ಪರಂಪರೆಯಲ್ಲಿ ಮದುವೆ,ಮುಂಜಿ,ದೀಕ್ಷಾ ಕಾರ್ಯಕ್ರಮ ಯಾವುದೇ ಇರಲಿ ಊಟ ಹಾಕಿಸುವುದು ಸರ್ವಶ್ರೇಷ್ಠ...