ಪೋಸ್ಟ್‌ಗಳು

ಏಪ್ರಿಲ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುರು ಮತ್ತು ಶಿಷ್ಯರ ನಡುವಿನ ಸಂಬಂಧ

                         ಗುರು ಬ್ರಹ್ಮ ಗುರು ವಿಷ್ಣು                           ಗುರು ದೇವೋ ಮಹೇಶ್ವರ                           ಗುರು ಸಾಕ್ಷಾತ್ ಪರಬ್ರಹ್ಮ                           ತಸ್ಮೈ ಶ್ರೀ ಗುರುವೇ ನಮಃ          ಎಂದು ಶ್ಲೋಕ ಹೇಳುತ್ತಾ ಗುರು ಮತ್ತು ಶಿಷ್ಯರ ನಡುವಿನ ಇರುವ ಸಂಬಂಧದ ಬಗ್ಗೆ ನಾಲ್ಕು ಸಾಲುಗಳನ್ನು ಬರೆಯೋಣ.                      ತಾಯಿ ಜೀವ  ನೀಡಿದರೆ ಗುರು ಜೀವನವನ್ನೇ ನೀಡುತ್ತಾರೆ ಎಂಬ ಮಾತು ಸತ್ಯವಾದದ್ದು ಏಕೆಂದರೆ ನಾವೆಲ್ಲಾ ಗುರುಗಳನ್ನು ಪ್ರೀತಿಸೋಣ ಗೌರವಿಸೋಣ ಮತ್ತು ಅವರನ್ನು ಪೂಜಿಸೋಣ.                 ಒಂದು ಕಲ್ಲು ಸುಂದರವಾದ ಮೂರ್ತಿಯಾಗಿ  ಮಾಡಲು ಅದರ ಹಿಂದೆ ಒಬ್ಬ ಅತ್ಯುತ್ತಮ ಶಿಲ್ಪಿ ಇದ್ದೇ ಇರುತ್ತಾರೆ ಅದರಂತೆ ಒಬ್ಬ ವಿದ್ಯಾರ್ಥಿಯ ಸಾಧನೆಯ ಬೆನ್ ಹಿಂದೆ ಗುರು ಎಂಬ...

ನಮ್ಮ ಅರಳೇಶ್ವರ

ಇಮೇಜ್
    ಮುಸ್ಸಂಜೆಯ ತಂಪಿನಲ್ಲಿ ಭಾವಕ್ಕೆ ಭಾವ ಬದಲಾಗಿ ನೋಟಕ್ಕೆ ನೋಟ ಜೊತೆಯಾಗಿ ತಿಳಿ ನೀರಿನ ಮನಸ್ಸಿನಲ್ಲಿ ಹುಣ್ಣಿಮೆಯ ಮಧುಚಂದ್ರ ಅಬ್ಬಬ್ಬಾ ಇದು ಹೊಸ ಲೋಕ ಅದುವೇ ನಮ್ಮ ಅರಳೇಶ್ವರ ಲೋಕ.                   ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಯಾಲಕ್ಕಿ ಕಂಪಿನ ನಾಡು ಎಂದೇ ಪ್ರಸಿದ್ಧಿ ಪಡೆದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಪುಟ್ಟ ಗ್ರಾಮ ಅದುವೇ ನಮ್ಮ ಅರಳೇಶ್ವರ.                  ಇದು ಪ್ರಾಚೀನ ಕಾಲದಲ್ಲಿ ಭತ್ತದ ಕಣಜದ ನಾಡು ಎಂದೇ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಮೊದಲು ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ.ವಿಜಯನಗರದ ಅರಸರು,ಕದಂಬರು ಮುಂತಾದ ಅರಸರು ಮುತ್ತು,ರತ್ನ, ಹವಳಗಳನ್ನ ಇಲ್ಲಿ ಮಾರುತಿದ್ದರು.                  ಈ ಗ್ರಾಮದಲ್ಲಿ ಒಟ್ಟು 540 ಕುಟುಂಬಗಳನ್ನು ಕಾಣಬಹುದು. ಒಟ್ಟು ಜನಸಂಖ್ಯಾ ಪ್ರಮಾಣ 2595.ಅದರಲ್ಲಿ 1338 ರಷ್ಟು ಪುರುಷರು, 1257ರಷ್ಟು ಮಹಿಳೆಯರ ಪ್ರಮಾಣವನ್ನು 2011ರ ಜನಗಣತಿಯ ಪ್ರಕಾರ ತಿಳಿಸಲಾಗಿದೆ. ಅದೇ ರೀತಿಯಲ್ಲಿ ಅರಳೇಶ್ವರ ಗ್ರಾಮ ಸದಾ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ .ಈ ಗ್ರಾಮವು ಗ್ರಾಮದ ಪಂಚಾಯತ್ ವ್ಯವಸ್ಥೆಯನ್ನು ಹೊಂದಿರುವುದರ ಜೊತೆಗೆ ಊರಿನ ಜನರ ಹಿತರಕ್ಷಣೆಗಾಗಿ ಎಲ್ಲ ಸೌಲಭ್ಯಗಳನ್ನು ಹಾ...

ಒಂದು ದೋಷವು ಅನೇಕ ಗುಣಗಳನ್ನು ನುಂಗುವುದು

            ಪ್ರಾಮಾಣಿಕತೆಗೆ ಇನ್ನೊಂದು ಹೆಸರಾದ ಪುಣ್ಯಕೋಟಿ ಕಥೆಯನ್ನು ನಾವು ಬಾಲ್ಯದಿಂದ ಕೇಳುತ್ತಲೇ ಬಂದಿದ್ದೇವೆ. ಅಂತಹ ಪ್ರಾಮಾಣಿಕತೆಗೆ ಪಾತ್ರವಾದ ಹಸುವಿನ ತಾಳ್ಮೆ ಮತ್ತು ಧೈರ್ಯ ಪ್ರಾಮಾಣಿಕ ಅಂಶಗಳನ್ನು ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಳ್ಳುವ ಅಂಶ. ಪ್ರಾಮಾಣಿಕತೆಗೆ ಒಂದು ಚಿಕ್ಕದಾದ ಕಥೆ ಇದೆ.                     ಒಂದು ಊರಿನಲ್ಲಿ ಶಾಮ, ಭೀಮ, ರಾಮ, ಎಂಬಂತಹ ಮೂವರು ಗೆಳೆಯರು ಇದ್ದರು. ಈ ಗೆಳೆಯರು ಬಾಲ್ಯದಿಂದಲೇ ಒಟ್ಟಿಗೆ ಇದ್ದವರಾಗಿದ್ದರು. ತಮ್ಮ ಉನ್ನತ ಶಿಕ್ಷಣಕ್ಕೆ ಎಂದು ಪಟ್ಟಣಕ್ಕೆ ವಲಸೆ ಹೋದರು.  ಶಾಮ ಈತನು  ತುಂಬಾ ಬುದ್ಧಿವಂತ. ಆದರೆ ಅವನಿಗೊಂದು ಕಾಯಿಲೆ ರೀತಿ ಇದ್ದಂತದ್ದು ಓದಿದ್ದು ಏನು ತಲೆಗೆ ಹತ್ತದಿರುವುದು. ಭೀಮ ಈತನು ಬಾಲ್ಯದಲ್ಲಿ ತುಂಬಾ ಚುರುಕನಾಗಿದ್ದ ಆದರೆ ದಿನಗಳು ಕಳೆದಂತೆ ಗೆಳೆಯರ ಬಳಗದಲ್ಲಿ ಸೇರಿ ತುಂಬಾ ಸೋಮಾರಿ ಮತ್ತು ದುರಾಬ್ಯಾಸಕ್ಕೆ ತೊಡಗಿ ತನ್ನ ಜೀವನದ ದಿಕ್ಕನ್ನೇ ಬದಲಿಸಿಕೊಂಡನು. ರಾಮ ಈತನು ತುಂಬಾ ಸಭ್ಯವಂತ ಸಂಯೋಮವು ಉಳ್ಳವನಂಥವನು ಮತ್ತು ತಂದೆ- ತಾಯಿಗಳಿಗೆ ಪ್ರಾಮಾಣಿಕವಾದ ಮಗನಾಗಿದ್ದನು. ಈ ಮೂವರು ಸ್ನೇಹಿತರು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಒಳ್ಳೆಯ ಹುದ್ದೆಗಳ ಅರ್ಜಿ ಆಹ್ವಾನಕ್ಕೆ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಶಾಮ ತನಗೆ ವಿದ್ಯಾಭ್ಯಾಸದ ಸಾಮರ್...

"ಇದು ನಮ್ಮ ಯೋಧರ ಬದುಕು"

    ಹುಟ್ಟಿ ಬೆಳೆದ ಊರು ಅದೆಷ್ಟೋ ದೂರವಿದೆ ಒಡಹುಟ್ಟಿದವರ ನೆನಪು ಅದೆಷ್ಟೇ ಬಂದರು ಮನದ ಗೂಡಿನೊಳಗೆ ಬಚ್ಚಿಟ್ಟುಕೊಂಡಿರಬೇಕಾದ ಪರಿಸ್ಥಿತಿ. ಮಳೆ ಇರಲಿ, ಚಳಿ ಇರಲಿ, ಅದೆಂತದ್ದೇ ಕಷ್ಟಕರ ಸನ್ನಿವೇಶವಿರಲಿ ಗಡಿನಾಡಿನ ರಣರಂಗದಲ್ಲಿ ಹೋರಾಡಲೇಬೇಕು. ಇದು ದೇಶವೇ ಉಸಿರು ಎನಿಸಿಕೊಂಡಿರುವ ನಮ್ಮ ಯೋಧರ ಬದುಕು.           ನಮ್ಮೂರಿನ ಹುಡುಗರೆಲ್ಲ ಮೈದಾನದಲ್ಲಿ ಕ್ರಿಕೆಟ್,ವಾಲಿಬಾಲ್ ಆಡಿದರೆ ನಮ್ಮ ಯೋಧರು ಕಣಿವೆ ಕಂದರಗಳನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಹೋರಾಡುತ್ತಾರೆ. ಅಲ್ಲಿ ಯಾವ ಕೆಕೆ-ಶಿಳ್ಳೆಗಳು ಇಲ್ಲ. ಬರಿಯ ರಕ್ತ-ಸಿಕ್ತ ಮಾಂಸ ಖಂಡಗಳು,ಅಲ್ಲಲ್ಲಿ ಚದುರಿದ ದೇಹದ ತುಣುಕುಗಳು,ಹೃದಯ ವಿದ್ರಾವಕ ಸನ್ನಿವೇಶಗಳು, ಕಣ್ತೆರೆದರೆ ಮೈ ಜುಂ ಎನ್ನಿಸುವ ದೃಶ್ಯಗಳು.ನಾವಿಲ್ಲಿ ಖುಷಿಯಿಂದ ಹಬ್ಬ-ಹರಿದಿನಗಳನ್ನು ಆಚರಿಸುತ್ತಿದ್ದರೆ ನಮ್ಮ ಯೋಧರು ತಾಯ್ನಾಡಿನ ಸೇವೆಗೈಯುವುದರಲ್ಲೇ ನಿರತರಾಗಿರುತ್ತಾರೆ. ವೈರಿಯೊಡನೆ ಕಾಳಗದಲ್ಲಿ ಗೆದ್ದರೆ ಅದೇ ಅವರಿಗೆ ವಿಜಯದಶಮಿ. ನಮ್ಮ ಊಹೆಗೂ ನಿಲುಕದ ನೋವು ಅವರಲ್ಲಿದೆ ಆದರೆ ನೋವಿಗೆ ಸ್ಪಂದಿಸಬೇಕಾದ ಹೆತ್ತವರಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಯಾರು ಜೊತೆ ಇಲ್ಲ.   ಹಾಯಾಗಿ ಹಾಸಿಗೆಯ ಮೇಲೆ ಗಂಟೆ ಎಂಟಾದರೂ ನಿದ್ದೆ ಮಾಡುವ ನಮಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು ಹೇಳಿ? ದಿನವಿಡೀ ಮೊಬೈಲ್ ನಲ್ಲಿ ಕಾಲ ಕಳೆಯುವ ನಾವು ಒಂದು ದಿನವಾದರೂ ನಮ್ಮ ವೀರರ ಬಗ್ಗೆ ಯೋಚಿಸ...

ನಮ್ಮ ಮುಂಡಗೋಡ

ಇಮೇಜ್
    ಭಾರತದ ಕರ್ನಾಟಕ ರಾಜ್ಯದ. ಪ್ರವಾಸಿತಾಣಗಳಿಗೆ ಹೆಸರು ವಾಸಿಯಾದ ಉತ್ತರ ಕನ್ನಡ ಜಿಲ್ಲೆಯ ಒಂದು ಪಟ್ಟಣ ವಾಗಿದೆ. ಮುಂಡಗೋಡ ಭತ್ತದ ವ್ಯಾಪಕ ಕೃಷಿಗೆ ಹೆಸರು ವಾಸಿಯಾಗಿದೆ.     ಪ್ರವಾಸಿಯ ತಾಣಗಳಿಗೆ ಹೆಸರು ವಾಸಿಯಾದ ಉತ್ತರ ಕನ್ನಡ ಜಿಲ್ಲೆಯಂತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಗೋಡ ಕೂಡ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುತ್ತದೆ.   " ಮುಂಡಗೋಡ ಟಿಬೇಟಿಯನ್ ಕ್ಯಾಂಪ್ "   ಪ್ರಸಿದ್ಧಿಯಾಗಿರುವ ಟಿಬೇಟಿಯನ್ ಕ್ಯಾಂಪ್ ಭಾರತದಲ್ಲಿ ಬೇರೆಲ್ಲೂ ಕಾಣಸಿಗದ ವಿಶಿಷ್ಟ ವಾಸ್ತುಶಿಲ್ಪದ ಬೃಹತ ಕಟ್ಟಡ, ಒಟ್ಟು ಏಳು ಭೌದ್ಧ ವಿಹಾರ, ಬುದ್ಧನ ಪ್ರತಿಮೆ, ಟಿಬೇಟಿಯನ್ಸ ಪೇಟೆ, ಟಿಬೇಟಿಯನ ಚಿತ್ರಕಲೆ ನೋಡುಗರನ್ನು ಬೇರೆಯ ಲೋಕಕ್ಕೆ ಕರೆದೊಯ್ಯುತ್ತೆ.      ಇವರು ತಮ್ಮ ಮೂಲ ದೇಶವಾದ " ಟಿಬೇಟ " ಮೇಲೆ ಚೀನಾ ದಾಳಿಯನ್ನು ಮಾಡಿದಾಗ ತಮ್ಮ ಜೀವ ಉಳಿಸಿಕೊಳ್ಳಲು ಬೇರೆ -ಬೇರೆ ದೇಶದಲ್ಲಿ ಆಶ್ರಯತಾಣವನ್ನು ಹುಡುಕಿಕೊಂಡು ಬಂದು 1959 ರಲ್ಲಿ ಅಲ್ಲಿಂದ ಹೋರಟು  ಭಾರತಕ್ಕೆ ಬಂದರು.   ಭಾರತದ ಐದು ಪ್ರದೇಶಗಳಲ್ಲಿ 1966 ರಿಂದಲೇ ನೆಲೆಗೊಂಡಿದ್ದಾರೆ.       ಬೇರೆ ನಾಲ್ಕು ಪ್ರದೇಶಗಳಿಗಿಂತ ಮುಂಡಗೋಡ ಟಿಬೇಟ ಜಾಸ್ತಿ ಮತ್ತು ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕಾಣವಾಗಿದೆ.     ಮುಂಡಗೋಡ ತಾಲೂಕಿನ ಮತ್ತೊಂದು ಪ್ರವಾಸಿಗರ ತಾಣವೆಂದರೆ.  ...

ಡಮಾಮಿ

ಇಮೇಜ್
      ಸಿದ್ದಿ ಜನಾಂಗದ ವೈಶಿಷ್ಟ್ಯ ಕಲಾ ಪ್ರಕಾರಗಳಲ್ಲಿ ಡಮಾಮಿ ನೃತ್ಯವು ಒಂದು. ಸಿದ್ದಿಗಳು ಶ್ರಮಜೀವಿಗಳು ಹಿಂದಿನ ಕಾಲದಲ್ಲಿ ದಿನವಿಡಿ ಗುಲಾಮರಾಗಿ ದುಡಿದು ದಣಿದ ಅವರು ಸಂಜೆ ಮನೋರಂಜನೆಗೆಂದು ಮತ್ತು ತಮ್ಮ ಹಿರಿಯರ ಕಾಲಾನಂತರದಲ್ಲಿ ಅವರ ಆರಾಧನೆಯ ದಿನದಂದು ಪ್ರಮುಖವಾಗಿ ಈ ನೃತ್ಯವನ್ನು ಮಾಡುತಿದ್ದರು.                      ಡಮಾಮಿ ಎಂಬುದು ಒಂದು ವಿಶಿಷ್ಟವಾದ ಚರ್ಮವಾದ್ಯ . ಇದನ್ನು ನುಡಿಸುತ್ತಾ ಮಹಿಳೆಯರು ಅಥವಾ ಪುರುಷರು ಇಲ್ಲವೇ ಇಬ್ಬರು ಸೇರಿ ಜೋಡಿಯಾಗಿ ಕುಣಿಯುತ್ತಾರೆ . ಹಾಡಿಗೆ ತಕ್ಕಂತೆ ಬಾರಿಸುತ್ತಾ  ವಿವಿಧ ಮಜಲುಗಳಲ್ಲಿ ಕುಣಿಯುವ ಕುಣಿತ ಇದಾಗಿದ್ದು ನೋಡುಗರಿಗೆ ರೋಮಾಂಚನಕಾರಿಯಾದ ನೃತ್ಯ.       ಸಿದ್ದಿಗಳು ಕಾಡುವಾಸಿಗಳಾಗಿದ್ದರಿಂದ ಇದರ ವೇಷ ಭೂಷಣಗಳು ಸಹಜವಾಗಿ ಕಾಡಿನಲ್ಲಿ ದೊರೆಯುವ ವಸ್ತುಗಳೇ ಆಗಿವೆ. ತಲೆಗೆ ನವಿಲುಗರಿಗಳನ್ನು ಕಟ್ಟಿಕೊಂಡು ಮುಖಕ್ಕೆ ಕಪ್ಪು ಬಿಳಿ ಬಣ್ಣ ಬಳಿದು ಕುತ್ತಿಗೆಗೆ ಸರಗಳು ಸೊಂಟಕ್ಕೆ ಮರದ ಎಲೆಗಳು ಮತ್ತು ಹಿಂದೆ ಪ್ರಾಣಿಗಳ ಚರ್ಮವನ್ನು ಸುತ್ತಿಕೊಳ್ಳುತ್ತಿದ್ದರು.ಬದಲಾಗಿ ಈಗ ಚರ್ಮದ ಬಣ್ಣದ ನಕಲಿ ಬಟ್ಟೆಗಳನ್ನು ಸುತ್ತಿಕೊಂಡು, ಒಟ್ಟಾರೆಯಾಗಿ ಕಾಡಿನಲ್ಲೇ ಸಿಗುವ ವಸ್ತುಗಳಿಂದ ಅಲಂಕಾರ ಮಾಡಿಕೊಂಡು ನೃತ್ಯವನ್ನು ಮಾಡುತ್ತಿದ್ದರು.         ...
 ಈಗಿನ ಕಾಲದಲ್ಲಿ ಯಾರ ಕೈಯಲ್ಲಿಯೂ ಸಹ ಮೊಬೈಲ್ ಗಳು ಇಲ್ಲವೆಂದು ಹೇಳುವ ಹಾಗೆಯೇ ಇಲ್ಲ. ಪ್ರತಿಯೊಬ್ಬರ ಕೈಯಲ್ಲಿಯೂ ಸಾಮಾನ್ಯವಾಗಿ ಕ ಕಾಣಬಹುದಾದಂತ ಒಂದು ಸಾಧನವಾಗಿದೆ.ಮೊಬೈಲ್ ಗಳು ಇಲ್ಲದೆ ಹೋದರೆ ಬೆಳಗಿನ ಪ್ರಾರಂಭವೇ ಆಗುವುದಿಲ್ಲ ಎನ್ನುವ ಪರಿಸ್ಥಿತಿಯು ಸೃಷ್ಟಿಯಾಗಿದೆ.                                   ಮೊದಲು ಯಾರ ಹತ್ತಿರವೂ ಸಾಮಾನ್ಯವಾಗಿ ಮೊಬೈಲ್ ಫೋನ್ ಗಳು ಲಭ್ಯವಿರುತ್ತಿರಲಿಲ್ಲ. ಊರಿನಲ್ಲಿ ಒಂದು ಅಥವಾ ಎರಡು ಪೋನ್ ಗಳುಇದ್ದರೆ ಹೆಚ್ಚು. ಆ ಸಮಯದಲ್ಲಿ ಮಕ್ಕಳು ತಂದೆ- ತಾಯಿಗಳೊಡನೆ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಿದ್ದರು .ಅವರು ಶಾಲೆ, ಮನೆ ,ಆಟ ,ಪಾಠ ಇವುಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿದ್ದರು. ಶಾಲಾ ದಿನಗಳಲ್ಲಿ ಶಾಲೆಯಲ್ಲಿ ತಮ್ಮ ಸಹಪಾಠಿಗಳೊಡನೆ ಆಟ, ಮನೋರಂಜನೆ ,ಗುಂಪು ಆಟಗಳು, ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಊಟ ಮಾಡುವುದು. ಎಲ್ಲವೂ ಸೇರಿ ಒಂದು ದಿನ ಹೇಗೆ ಕಳಿಯಿತು ಎಂಬುದರ ಬಗೆಗೆ ಅರಿವೇ ಇಲ್ಲದ ರೀತಿಯಲ್ಲಿ ಶಾಲಾ ದಿನಗಳು ಮುಗಿದು ಹೋಗುತ್ತಿದ್ದವು.                                   ಶಾಲಾ ದಿನಗಳ ನಂತರ ಬರುತ್ತಿದ್ದಂತಹ ರಜ ದಿನಗಳು ಎಂದರೆ  ಮಕ್ಕಳಿಗೆ ಅತ್...
 ನಾನು ಹುಟ್ಟಿ ಬೆಳೆದದ್ದು ಎಲ್ಲದೂ ಹಳ್ಳಿಯಲ್ಲಿ. ನಾವೇನು ಹೇಳುವಷ್ಟು ಶ್ರೀಮಂತರಲ್ಲ ಮಧ್ಯಮವರ್ಗದವರು. ನಮ್ಮದೇ ಆದ ಸ್ವಂತ ಸ್ವಲ್ಪ ತೋಟ ಹಾಗೂ ಗದ್ದೆಯನ್ನು ನನ್ನಪ್ಪ ಹೊಂದಿದ್ದರು.          ಸುಮಾರು ಏಳು ಎಂಟು ವರ್ಷಗಳ ಹಿಂದಿನ ಘಟನೆದು. ಆಗ ನಮ್ಮೂರಿನಲ್ಲಿ ಟ್ಯಾಕ್ಟರ್ ನಂತರ ಯಾವುದೇ ರೀತಿಯ ಉಪಕರಣಗಳಿರಲಿಲ್ಲ. ಎಲ್ಲರೂ ಎತ್ತಿನ ಸಹಾಯದಿಂದ ನೇಗಿಲನ್ನು ಬಳಸಿ ಉಳುಮೆಯನ್ನು ನಡೆಸುತ್ತಿದ್ದರು.ಆಗಿಲ್ಲ ನಮಗೆ ಮಳೆಗಾಲ ಶುರುವಾಗುವ ಜೂನ್ ತಿಂಗಳು ಎಂದರೆ ತುಂಬಾ ಅಚ್ಚು ಮೆಚ್ಚು.ಆ ವೇಳೆಗೆ ಮೊದಲ ಮಳೆ ಆಗುವಾಗ ನಮ್ಮೂರಿನಲ್ಲಿ ಕೋಳಿ ಹಬ್ಬ ಆಚರಿಸುವರು. ಇದೇ ವೇಳೆಗೆ ಗದ್ದೆ ಅಕ್ಕ-ಪಕ್ಕದಲ್ಲಿದ್ದ ಹಳ್ಳಗಳ ಮೀನು, ಎಡಿಗಳೆಲ್ಲವೂ ಗದ್ದೆಗೆ ಬರುತ್ತಿದ್ದವು.            ಆಗೆಲ್ಲ ಈಗಿನ ತರ ಕೊಡೆ ಅಥವಾ ರೇನ್ಕೋಟನ್ನು ಅಷ್ಟಾಗಿ ಬಳಸುತ್ತಿರಲಿಲ್ಲ. ಅದರ ಬದಲಾಗಿ ಪ್ಲಾಸ್ಟಿಕ್ ಕೋಳಿಗೆಯನ್ನು ಧರಿಸಿ ಮೀನನ್ನು ಹಿಡಿಯಲು ನಾವೆಲ್ಲ ಊರಿನ ಸಣ್ಣ ಮಕ್ಕಳು ಹೋಗುತ್ತಿದ್ದೆವು ಒಂದು ಬೆಳಗ್ಗೆ ತಿಂಡಿ ತಿಂದು ಎಲ್ಲರೂ ಒಟ್ಟಿಗೆ ಹೊರಟರೆ ಕತ್ತಲಾಗುವ ವೇಳೆಗೆ ಮನೆಗೆ ಮರಳುತ್ತಿದ್ದೆವು. ಮಳೆ ಚಳಿ ಹಸಿವು ಏನನ್ನು ಲೆಕ್ಕಿಸದೆ ಮೀನು ಹಿಡಿಯುವುದೆಂದರೆ ನಮಗಾಗ ಏನೋ ಸಾಧಿಸಿದ ಖುಷಿ. ಒಂದು ಬೆಳಗ್ಗೆ ಹೊಂಟರೆ ಕತ್ತಲಾಗುವಾಗ ಎಲ್ಲರೂ ಒಬ್ಬರ ಮನೆಗೆ ಎಲ್ಲರ ಮೀನನ್ನು ರಾಶಿ ಹಾಕಿ ಹಂಚಿಕೊಳ್ಳು...

ಯುಗಾದಿ

ಇಮೇಜ್
 ಭಾರತವು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದ ರಾಷ್ಟ್ರ . ಇಲ್ಲಿ ಹಬ್ಬ ಹರಿ ದಿನಗಳಿಗೆ ಕೊರತೆಯೇನಿಲ್ಲ. ಮನಸ್ಸುಗಳ ಭಾವಗಳನ್ನು ಬಂಧಿಸುವ ಸಂತಸ,ಸಡಗರದ ದಿನಗಳನ್ನು ನಾವಿಲ್ಲಿ ಕಾಣಬಹುದು. ಅಂತಹ ಹಬ್ಬಗಳಲ್ಲಿ ಒಂದು ಯುಗಾದಿ.                      ಯುಗಾದಿ ಹಿಂದೂ ಸಂಪ್ರದಾಯದಂತೆ ಹೊಸ ವರ್ಷದ ಆರಂಭಗೊಳ್ಳುವ ದಿನ. ಈ ಹಬ್ಬವನ್ನು ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭ ಮತ್ತು ಸುದ್ದಿಯ ಸಮಯವನ್ನು ಸಂಕೇತಿಸುತ್ತದೆ.                      ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಹಬ್ಬವು ಜನಪ್ರಿಯವಾಗಿದೆ. ಈ ಹಬ್ಬಕ್ಕೆ ಅದರದೇ ಆದ ಪೌರಾಣಿಕ ಹಿನ್ನೆಲೆಯೂ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾ ಮಾತೆ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಬಂದ ದಿನವೆಂದು ಹಾಗೂ ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕೊಂಡೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ತ್ಯಾವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು, ಅನಂತರ ಬ್ರಹ್ಮನು ಸೃಷ್ಟಿಕಾರ್ಯ ಆರಂಭ ಮಾಡಿದ...