ಎಂದೆಂದಿಗೂ ಅಳಿಯದ ಅಪ್ಪಟ ಕ್ರಾಂತಿಕಾರಿ....


ಜನವರಿ 23 ಭಾರತೀಯರು ಪಾಲಿಗೆ ಯಾವತ್ತೂ ಮರೆಯಲಾಗದ ದಿನವಾಗಿದೆ. ಒಂದು ಸ್ವತಂತ್ರ ಸೇನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತು ಭಾರತದ ಭೂಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ಸ್ವತಂತ್ರ ಭಾರತದ ಧ್ವಜ ಹಾರಿಸಿ ಭಾರತೀಯರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ನಾಯಕರಾದ ಸುಭಾಷ್  ಚಂದ್ರಬೋಸರ ಹುಟ್ಟಿದ ದಿನವಾಗಿದೆ. ಜಡಗಟ್ಟಿದ  ಭಾರತೀಯರ ಮನಸ್ಸುಗಳಿಗೆ ಹೊಸ ಉತ್ಸಾಹವನ್ನು ತುಂಬಿ ಭಾರತಕ್ಕಾಗಿ ಹೊರದೇಶಗಳಲ್ಲಿ ಮಿಡಿಯುವ ಹೃದಯಗಳನ್ನು ಸಂಪಾದಿಸಿದ ಮಹಾನ್ ನಾಯಕರು ಇವರು..


ಜೈ ಹಿಂದ್.. ಎನ್ನುವ ವಿರಘೋಷದ ಮೂಲಕ ಬ್ರಿಟಿಷರ ಎದೆನಡುಗಿಸಿದವರು ಇವರು. ಈ ಘೋಷ ವಾಕ್ಯವು ಹುಟ್ಟಿದ್ದು 1907 ರಲ್ಲಿ. ಇದರ ಕರ್ತೃ ನಮ್ಮ ದಕ್ಷಿಣದ "ಶಣ್ಬಾಗ್ ರಾಮನ್ ಪಿಳ್ಳೆ". ಅವತ್ತು ಜೈ ಹಿಂದ್ ಘೋಷವನ್ನು ಸುಭಾಷರಿಗೆ ಪರಿಚಯಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಾದ 'ಜೈನಲುದ್ದೀನ್'. ಜನವರಿ 23 1897 ರಲ್ಲಿ ಇವತ್ತಿನ ಒರಿಸ್ಸಾದ ಕಟಕ್ನಲ್ಲಿದ್ದ ಬಂಗಾಳಿ ಕುಟುಂಬದ ಪ್ರಭಾವತಿ ದತ್ತ ಬೋಸ್ ಹಾಗೂ ಜಾನಕಿ ನಾಥ್ ಬೋಸರ ಹದಿನಾಲ್ಕು ಮಕ್ಕಳ ಪೈಕಿಯಲ್ಲಿ ಒಂಬತ್ತನೇಯವರಾದ ಸುಭಾಷ್ ಚಂದ್ರ ಬೋಸ್. ಇವರ ತಂದೆ ಬಂಗಾಳ ಪ್ರಾಂತ್ಯದ ಪ್ರಸಿದ್ಧ ವಕೀಲರಾಗಿದ್ದರಿಂದ  ಇವರಿಗೆ ಶಿಕ್ಷಣವನ್ನು ಪಡೆಯುವಲ್ಲಿ ಯಾವುದೇ ರೀತಿಯ ತೊಂದರೆಯು ಉಂಟಾಗಲಿಲ್ಲ..


1918 ರ ವೇಳೆಗೆ ಇವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಸ್ಟ್ ಚರ್ಚ್ ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದುಕೊಂಡರು. 1919 ರಲ್ಲಿ ಇಂಗ್ಲೆಂಡಿಗೆ ಪಾದಾರ್ಪಣೆ ಮಾಡಿದ ಇವರು ಅಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಎಕ್ಸಾಂ ಅನ್ನು ಬರೆದು ಅದರಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು. ಐ.ಸಿ.ಎಸ್. ಗೆ ಆಯ್ಕೆಯಾದರು. ಆದರೆ ಈ ಹುದ್ದೆಯಲ್ಲಿ ಹೆಚ್ಚು ಬ್ರಿಟಿಷರೇ ಈ ಹುದ್ದೆಯನ್ನು ಅಲಂಕರಿಸುತ್ತಿದ್ದರು. ಬ್ರಿಟಿಷರ ಪರವಾಗಿ ಭಾರತವನ್ನು ಆಳುವ ಆ ಪ್ರತಿಷ್ಠಿತ ಹುದ್ದೆ ಸುಭಾಷರಿಗೆ ಒಲಿದು ಬಂದಿದ್ದಂತು ನಿಜ. ಆದರೆ ಬ್ರಿಟಿಷರ ಆ ಗುಲಾಮಗಿರಿಯನ್ನು ಮಾಡುತ್ತಾ ಭಾರತೀಯರ ಮೇಲೆ ಅಧಿಕಾರವನ್ನು ಚಲಾಯಿಸುವ ಹುದ್ದೆಯು ಇವರಿಗೆ ಇಷ್ಟವಾಗಲಿಲ್ಲ. 1921 ರಲ್ಲಿ ತಮ್ಮ ಈ ಹುದ್ದೆಯನ್ನು ಎಡಗಾಲಿನಲ್ಲಿ ಒದ್ದು ಎದ್ದು ಬಂದರು ನಮ್ಮ ಬೋಸರು..


ನಂತರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು ರಾಷ್ಟ್ರೀಯ ಕಾಂಗ್ರೇಸನ್ನು ಸೇರುತ್ತಾರೆ. 1930 ರಲ್ಲಿ ಇವರು ಕೊಲ್ಕತ್ತಾದ ಮೇಯರ್ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ. ಇದಾದ 3 ವರ್ಷಗಳ ಬಳಿಕ ಬೋಸರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆಂದು ಯುರೋಪಿಗೆ ತೆರಳುತ್ತಾರೆ. ಅಲ್ಲಿ ರಾಜಕೀಯ ಗೆಳೆಯರ ಸಂಖ್ಯೆಯು ಹೆಚ್ಚಾಗುತ್ತದೆ. ಮುಸಲೋನಿಯಂತಹ ನಾಯಕರು ಕೂಡಾ ಬೋಸರಿಗೆ ಹತ್ತಿರವಾಗುತ್ತಾರೆ. ಇಲ್ಲಿ ಇದ್ದಂತಹ ಸಂದರ್ಭದಲ್ಲಿ "THE INDIAN STRUGGLE" ಎಂಬ ಪುಸ್ತಕವನ್ನು ರಚಿಸುತ್ತಾರೆ. ಈ ಪುಸ್ತಕವು ಎಷ್ಟು ಪ್ರಭಾವಶಾಲಿಯಾಗಿತ್ತು  ಎಂದರೆ ಬಿಡುಗಡೆಯಾದ ಕೂಡಲೇ ಬ್ರಿಟಿಷರಿಂದ ನಿಷೇಧಕ್ಕೆ ಒಳಗಾದಂತಹ ಪುಸ್ತಕ.


ನಂತರ ಭಾರತಕ್ಕೆ ಬಂದ ಬೋಸರು ಕಾಂಗ್ರೆಸನ ಅಧ್ಯಕ್ಷರಾದರು. ಆವತ್ತಿಗೆ ಸಂಪೂರ್ಣ ಗಾಂಧಿಮಾಯವಾದ ಕಾಂಗ್ರೆಸಿಗೆ ಸುಭಾಷರ ಕ್ರಾಂತಿಕಾರಿ ನಿಲುವುಗಳು ಪತ್ತೆಯಾಗಲಿಲ್ಲ. ಗಾಂಧೀಜಿ ಹಾಗೂ ಸುಭಾಷರ ನಡುವೆ ಸೈದ್ಧಾಂತಿಕ  ಸಂಘರ್ಷ ಶುರುವಾಯಿತು. ನಂತರ ಇವರು ಗಾಂಧಿಯವರ ಸಲುವಾಗಿಯೇ ರಾಜೀನಾಮೆಯನ್ನು ನೀಡುತ್ತಾರೆ. ಈ ಸಮಯದಲ್ಲಿ ಬ್ರಿಟಿಷರ ವಿರುದ್ದದ ಹೋರಾಟದ ನಿಲುವನ್ನು ಹೊಂದಿದ್ದರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಉಪವಾಸ ಕೂರುವುದು,ಲಾಠಿಗಳಿಗೆ ಮೈ ಒಡ್ಡುವುದು ಸ್ವಾತಂತ್ರ್ಯಕ್ಕಾಗಿ ಅಂಗಲಾಚುವುದು ಇದು ಬೋಸರ ಹೋರಾಟದ ಶೈಲಿಯು ಆಗಿರಲಿಲ್ಲ. ಸ್ವಾತಂತ್ರ್ಯ ಎಂಬುದು ನಮ್ಮ ಜನ್ಮಸಿದ್ದ ಹಕ್ಕು ಅದನ್ನು ಬೇಡಬಾರದು ಅದು ಭಿಕ್ಷೆಯು ಅಲ್ಲ ಅದನ್ನು ಬಲವಂತವಾಗಿ ಕಿತ್ತುಕೊಳ್ಳಬೇಕು ಎಂಬ ಸಿದ್ಧಾಂತವನ್ನು ಹೊಂದಿದವರು. ಅಂದಿನ ದಿನದಲ್ಲಿ ಮಹಾತ್ಮ ಗಾಂಧಿ ಹಾಗೂ ಇನ್ನಿತರ ಹೋರಾಟಗಾರರಿಗಿಂತ ಬೋಸರು ಬ್ರಿಟಿಷರ ಕಣ್ಣಿಗೆ ಅಪಾಯಕಾರಿಯಾಗಿ ಕಂಡಿದ್ದರು. ಇವರು ಹಿಟ್ಲರ್ ರವರನ್ನು ಭೇಟಿಯಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಇವರ ಬಳಿ ಸಹಾಯವನ್ನು ಕೋರಿದರು. ಇವರಲ್ಲಿರುವಂತಹ ಆ ಸ್ವಾತಂತ್ರ್ಯದ ಕೆಚ್ಚು ಹಾಗೂ ವಿಶ್ವಾಸ ಹಿಟ್ಲರ್ ನವರಂತಹ ಮನಸ್ಸನ್ನು ಕೂಡಾ ಗೆದ್ದಿತು..


ಸುಭಾಷರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್ ನ ರೇಡಿಯೋ ಟೋಕಿಯೋ ವರದಿ ಮಾಡಿತ್ತು ಆದರೆ ಸುಭಾಷರು ವಿಮಾನದಲ್ಲಿ ಪ್ರಯಾಣಿಸಿದ್ದೇನೋ ನಿಜ ಆದರೆ ಟೋಕಿಯೋಕ್ಕೆ ಹೊರಟ ವಿಮಾನದಲ್ಲಿ ಅಲ್ಲ. ಅವರು ಮಂಚೂರಿಯಾದ ಪ್ರಾಂತ್ಯದ  ದಿರೇನ್ ಎಂಬಲ್ಲಿಗೆ ಪ್ರಯಾಣಿಸಿದ್ದರು. ಇವರು ರಷಿಯಾಕ್ಕೆ ಪ್ರಯಾಣಿಸಿದ್ದರು. ಆದರೆ ಈ ವಿಷಯವು ಸುಭಾಷರ ಕಡುವೈರಿಯೂ ಹಾಗೂ ರಾಜಕೀಯ ಪ್ರತಿಸ್ಪರ್ಧಿಯು ಹಾಗೂ ತನ್ನ ಗದ್ದುಗೆ ಭದ್ರವಾಗಿರಬೇಕೆಂದು ಬಯಸಿದಂತಹ ಜವಾಹರಲಾಲ್ ನೆಹರೂರವರಿಗೆ ತಿಳಿಯಿತು. ನೆಹರೂರವರು ವಿಷಯ ತಿಳಿದ ಬಳಿಕ ಸುಮ್ಮನಿರಲ್ಲ ಬ್ರಿಟಿಷ್ ಸಾಮ್ರಾಜ್ಯದ ಮಹಾ ಪ್ರಧಾನಿಯಾಗಿದ್ದ ಲಾರ್ಡ್ ಆಟ್ಲಿಯವರಿಗೆ ಪತ್ರವನ್ನು ಬರೆದಿದ್ದರು..


ನಂತರ ನೇತಾಜಿಯವರು ಕಣ್ಮರೆಯಾಗಿ ರಷಿಯಾದ ಸೆರೆ ಆಶ್ರಯದಲ್ಲಿದ್ದರು. 1953 ರಲ್ಲಿ ಚೀನಾ ಗಡಿಯ ಮೂಲಕ ಭಾರತವನ್ನು ತಲುಪಿದರು. ಬಸ್ತಿ ಎಂಬಲ್ಲಿ 9 ವರ್ಷ, ಲಖ್ನೋದಲ್ಲಿ 2 ವರ್ಷ, ನೈಮಿಷಾರಣ್ಯದಲ್ಲಿ 6 ವರ್ಷ ಹಾಗೂ ಉಳಿದದ್ದು ಅಯೋಧ್ಯೆಯ ಬಳಿ ಇರುವ ಗುಪ್ತಾರ ಘಾಟ್ ಬಳಿಯ ರಾಮಭವನದಲ್ಲಿ ನೆಲೆಸಿದ್ದರು ಎಂಬುದಕ್ಕೆ ಸಾಕ್ಷಿಯು ಲೇಖಕ ನಾರಾಣಾಚಾರ್ ಬರೆದ "ಸುಭಾಷರ ಕಣ್ಮರೆ" ಎಂಬ ಪುಸ್ತಕದಲ್ಲಿ ಮುದ್ರಿಸಲಾಗಿದೆ..


ಇತಿಹಾಸವನ್ನು ಅರಿಯದಂತಹ ಜನರು ಭಕ್ತಿಯಿಂದ ಪೂಜಿಸುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೇತಾಜಿ ಬದುಕಿರುವುದೇ ಬೇಡವಾಗಿತ್ತು. ಅವರವರ ಸ್ಥಾನಕ್ಕೆ ಚ್ಯುತಿ ಬಂದೀತೆಂದು ! ಬ್ರಿಟಿಷರಿಗೆ ಪತ್ರವನ್ನು ಬರೆದ ಹಿನ್ನೆಲೆಯೂ ಕೂಡಾ ಇದೇ ಆಗಿತ್ತಿರಬಹುದು. ನೇತಾಜಿಯವರ ಜನಪ್ರಿಯತೆಯ ಮುಂದೆ ತಮ್ಮ ಮಾರೀಚ  ಮಾಯಾಪ್ರಯೋಗವು ಎನೂ ಮಾಡುವುದಿಲ್ಲವೆಂಬುದು ತಿಳಿದಿತ್ತು. ನೇತಾಜಿ ಎಲ್ಲೇ ಅಡಗಿರಲಿ ಶಾಶ್ವತವಾಗಿ ಅಲ್ಲೇ ಇರಲಿ ಸತ್ತ ಸುದ್ದಿಯೇ ನಿಲುವಾಗಿರಲಿ ಎಂಬುದು ಇಂತವರ ಆಶ್ವಾಸನೆಯಾಗಿತ್ತು. ಒಂದು ವೇಳೆ ನಾವು ಪೂಜಿಸುವ ಇಂತಹ ಮಹಾನ್ ಹೋರಾಟಗಾರರೆಂದು ಪ್ರಸಿದ್ದಿಯಾದವರು ಮೊದಲೇ ಸತ್ತಿದ್ದರೆ ಇನ್ನೂ ಬೇಗನೇ ನಮಗೆ ಸ್ವಾತಂತ್ರ್ಯವು ದೊರೆಯುತ್ತಿತ್ತು ಎಂಬುದು ನನ್ನ ಅಭಿಪ್ರಾಯವಾಗಿದೆ.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ