ಮಳೆಗಾಲದಲ್ಲಿ ಮಲೆನಾಡು

ಮಲೆನಾಡು ಕರ್ನಾಟಕದಲ್ಲಿನ ಪ್ರಾಕೃತಿಕ ಸ್ವರ್ಗ.ಮಲೆನಾಡಿನ ಪ್ರದೇಶ ಹಸಿರ ಸೆರಗನ್ನು ಹೊದೆದುಕೊಂಡಿದೆ. ಕಾಡಿನ ಮಧ್ಯೆ ನಿಶಬ್ದವಾಗಿ, ಸ್ವಚ್ಛಂದವಾಗಿ ಹರಿದ ನದಿಗಳ ಸೊಬಗು ವರ್ಣನೆಗೆ ನಿಲುಕದ್ದು.ವನದೇವಿಯ ನಡುನೆತ್ತಿಯಿಂದ ಬೈತಲೆ ತೆಗೆಯುತ್ತ ಶರವೇಗದಲ್ಲಿ ಧುಮುಕುವ ಬೆಳ್ನೊರೆಯ ಜಲಪಾತಗಳನ್ನು ನಿಂತು ನೋಡಿದರೆ ಹಸಿರುಟ್ಟ ಭೂರಮೆಯ ಕಂಠಕ್ಕೆ ತೊಡಿಸಿದ ಬಿಳಿಹತ್ತಿಯ ಗೆಜ್ಜೆ ವಸ್ತ್ರದಂತೆ ತೋರುತ್ತದೆ.ಹೊಟ್ಟೆ ಒಡೆಯುವವರೆಗೂ ಕೂಗುವ ಮಳೆ ಜಿರಲೆಗಳು ಮಳೆಗಾಲದಲ್ಲಿ ಮಳೆಯೊಂದಿಗೆ ಜುಗಲ ಬಂದಿ ಮಾಡುತ್ತವೆ. ಅನೇಕ ಕಡೆಗಳಿಂದ ಪ್ರವಾಸಿಗರು ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುತ್ತಾರೆ.ದಾಂಡೇಲಿ, ಕೊಡಗು, ಚಿಕ್ಕಮಂಗಳೂರಿನ ಕಡೆ ಮಾರು ಮಾರಿಗೆ ಸಿಗುವ ರೆಸಾರ್ಟ್ಗಳೇ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.ಈ ಮಟ್ಟಿಗೆ ಪ್ರವಾಸಿಗರು ಮಲೆನಾಡಿನತ್ತ ಧಾವಿಸಲು ಕುವೆಂಪು ಕಾರಂತರ ಪ್ರಕೃತಿ ವರ್ಣನೆಯು ಕಾರಣವಾಗಿರಬಹುದು. ಇಲ್ಲಿಗೆ ಬಂದು ಟ್ರಕ್ಕಿಂಗ್ ಮಾಡುವುದು, ಕಾಡಿನಲ್ಲಿ ಟೆಂಟ್ ಹಾಕುವುದು ,ರಿವರ್ ರ್ಯಾಪ್ಟಿಂಗ್ ಹೀಗೆ ವಿವಿಧ ಮನೋರಂಜನೆ ಚಟುವಟಿಕೆಗಳಲ್ಲಿ ತೊಡಗಿ ಸಿಹಿ ಕ್ಷಣಗಳನ್ನು ಅನುಭವಿಸುತ್ತಾರೆ. ನಾವೆಲ್ಲಾದರೂ ಮಲೆನಾಡು ಬಿಟ್ಟು ಹೊರಗಡೆ ಹೋದಾಗ...