ಶರಾವತಿ ನದಿ ಉಳಿಸಿ ಶರಾವತಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಅಭಯಾರಣ್ಯದ ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಸುಂದರವಾಗಿ ಹರಿಯುತ್ತಿರುವ ನದಿಯಾಗಿದೆ ಹಾಗೂ ಅನೇಕ ಪ್ರಾಣಿಗಳಿಗೆ , ಜೀವ ಜಂತುಗಳಿಗೆ ಆಸರೆಯಾಗಿದೆ . ಅದೇ ಉತ್ತರ ಕನ್ನಡ ಜಿಲ್ಲೆಯು ಜೀವ ನದಿ ಎಂದೂ ಜಲಪಾತಗಳ ನಾಡೆಂದು ಕರೆಸಿಕೊಂಡಿರುವ ಬಿರುದಿನ ಹಿಂದೆ ಶರಾವತಿಯ ಪಾತ್ರ ಹಿರಿದಾದುದು. ಕರ್ನಾಟಕದಲ್ಲಿ ಅತಿಯಾದ ಅರಣ್ಯ ಪ್ರದೇಶ ಮತ್ತು ಪ್ರಾಣಿ ಸಂಪನ್ಮೂಲವನ್ನು ಹೊಂದಿದ ಜಿಲ್ಲೆಯೆಂದರೆ ಅದು ನಮ್ಮ ಉತ್ತರಕನ್ನಡ ಎಂದು ಹೇಳಿಕೊಳ್ಳುವುದಕ್ಕೆ ನಮ್ಮ ಜನರಿಗೆ ಹೆಮ್ಮೆಯಾಗುತ್ತದೆ. ಈಗ ಅದೇ ಅರಣ್ಯ ಸಂಪತ್ತಿಗೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡವು ದೊಡ್ಡ ಪೆಟ್ಟುಗಳನ್ನು ತಿಂದಿದೆ. ಸೀಬರ್ಡ್ ನೌಕಾನೆಲೆಯನ್ನು ನಿರ್ಮಿಸಿದ್ದರಿಂದ ಎಷ್ಟೋ ಅರಣ್ಯ ನಾಶವಾಗಿದೆ ಹಾಗೂ ಅದೆಷ್ಟೋ ಜನರು ತಮ್ಮ ನೆಲೆಗಳನ್ನು ಕಳೆದುಕೊಂಡು ಪರಿಹಾರ ಎಂಬ ಮೋಸದ ಬಲೆಗೆ ಒಳಗಾಗಿದ್ದಾರೆ. ಹಾಗೆ ನ...
ಪೋಸ್ಟ್‌ಗಳು
ಅಕ್ಟೋಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ