ಶರಾವತಿ ನದಿ ಉಳಿಸಿ
ಶರಾವತಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಅಭಯಾರಣ್ಯದ ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಸುಂದರವಾಗಿ ಹರಿಯುತ್ತಿರುವ ನದಿಯಾಗಿದೆ ಹಾಗೂ ಅನೇಕ ಪ್ರಾಣಿಗಳಿಗೆ , ಜೀವ ಜಂತುಗಳಿಗೆ ಆಸರೆಯಾಗಿದೆ . ಅದೇ ಉತ್ತರ ಕನ್ನಡ ಜಿಲ್ಲೆಯು ಜೀವ ನದಿ ಎಂದೂ ಜಲಪಾತಗಳ ನಾಡೆಂದು ಕರೆಸಿಕೊಂಡಿರುವ ಬಿರುದಿನ ಹಿಂದೆ ಶರಾವತಿಯ ಪಾತ್ರ ಹಿರಿದಾದುದು.
ಕರ್ನಾಟಕದಲ್ಲಿ ಅತಿಯಾದ ಅರಣ್ಯ ಪ್ರದೇಶ ಮತ್ತು ಪ್ರಾಣಿ ಸಂಪನ್ಮೂಲವನ್ನು ಹೊಂದಿದ ಜಿಲ್ಲೆಯೆಂದರೆ ಅದು ನಮ್ಮ ಉತ್ತರಕನ್ನಡ ಎಂದು ಹೇಳಿಕೊಳ್ಳುವುದಕ್ಕೆ ನಮ್ಮ ಜನರಿಗೆ ಹೆಮ್ಮೆಯಾಗುತ್ತದೆ. ಈಗ ಅದೇ ಅರಣ್ಯ ಸಂಪತ್ತಿಗೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡವು ದೊಡ್ಡ ಪೆಟ್ಟುಗಳನ್ನು ತಿಂದಿದೆ. ಸೀಬರ್ಡ್ ನೌಕಾನೆಲೆಯನ್ನು ನಿರ್ಮಿಸಿದ್ದರಿಂದ ಎಷ್ಟೋ ಅರಣ್ಯ ನಾಶವಾಗಿದೆ ಹಾಗೂ ಅದೆಷ್ಟೋ ಜನರು ತಮ್ಮ ನೆಲೆಗಳನ್ನು ಕಳೆದುಕೊಂಡು ಪರಿಹಾರ ಎಂಬ ಮೋಸದ ಬಲೆಗೆ ಒಳಗಾಗಿದ್ದಾರೆ. ಹಾಗೆ ನಮ್ಮ ವಿರೋಧದ ನಡುವೆ ಕೂಡ ಕೈಗಾ ಅಣ್ಣು ಸ್ಥಾವರ ರವನ್ನು ನಿರ್ಮಿಸಿದ್ದಾರೆ. ಆದರೆ ನಮ್ಮ ಹಣೆಬರಹವೇನೂ ಗೊತ್ತಿಲ್ಲ ವಿದ್ಯುತ್ ಸ್ಥಾವರ ನಮ್ಮ ಊರಿನಲ್ಲಿದ್ದರೂ ಕೂಡ
ಎಷ್ಟೋ ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದಾರೆ . ರೈತರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಇದರ ನಡುವೆ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಭಾಗ್ಯವು ನಮಗಿಲ್ಲ. ಜನರಿಗೆ ಅನಿವಾರ್ಯವಿರುವ ಸವಲತ್ತುಗಳನ್ನು ಕೇಳಿದರೂ ಅದಕ್ಕಾಗಿ ಪ್ರತಿಭಟಿಸಿದರು ಸರ್ಕಾರವು ಒಂಚೂರು ಸ್ಪಂದಿಸುತ್ತಿಲ್ಲ ಎಂಬುದು ವಿಷಾದಕರವಾಗಿದೆ ಹಾಗೂ ಈಗ ನಮ್ಮಲ್ಲಿರುವ ಸಂಪತ್ತನ್ನೇ ಕೊಳ್ಳೆ ಹೊಡೆಯುವ ಯೋಜನೆಯನ್ನು ತಂದಿದ್ದಾರೆ. ಇದು ಎಂತಹ ವಿಪರ್ಯಾಸವಲ್ಲವೇ. ಇವರ ಯೋಜನೆಯು ಶರಾವತಿ ನದಿಗೆ ಅಡ್ಡವಾಗಿ ಆಣೆಕಟ್ಟನ್ನು ನಿರ್ಮಿಸಿ ಅದರಿಂದ ನೀರನ್ನು ಪಂಪ್ ಸ್ಟೋರೇಜ್ ಮಾಡಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದ್ದು ಹಾಗೂ ನೀರನ್ನು ಸಹ ಬೇರೆ ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಯೋಜನೆಯಲ್ಲಿ ಬೆಟ್ಟದಲ್ಲಿ ಸುರಂಗ ಮಾರ್ಗ ತೆಗೆಯುವುದಾಗಿ ಹೇಳಿದ್ದಾರೆ.ಈ ಸುರಂಗ ಮಾರ್ಗ ತೆಗೆಯುವಾಗ ಭೂಮಿ ಕಂಪಿಸುತ್ತದೆ. ಇದರಿಂದ ಭೂಮಿ ಕಂಪಿಸಿ ಗುಡ್ಡಗಳು ಕುಸಿಯುತ್ತವೆ. ಹಿಂದಿನ ವರ್ಷ ಅಂಕೋಲಾದಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಿಂದ ಅನೇಕ ಸಾವು ನೋವುಗಳಾಗಿವೆ. ಇದು ಸಹ ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಪರಿಸರ ನಾಶದ ಹೇಯ ಕೃತ್ಯ ಎನ್ನಬಹುದು.ಇಂತಹ ಯೋಜನೆಗಳಿಂದ ಭಾರತದ ಅಮೇಜಾನ್ ಎಂದೇ ಪ್ರಸಿದ್ಧವಾದ ನಮ್ಮ ಸಹ್ಯಾದ್ರಿ ಅಭಯಾರಣ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಏನೂ ಅರಿಯದ ಮುಗ್ಧ ಪ್ರಾಣಿಗಳು, ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳು , ನೂರಾರು ಜೀವಸಂಕುಲಗಳು ಈ ನಮ್ಮ ಉತ್ತರಕನ್ನಡದ ದಟ್ಟ ಅರಣ್ಯದಲ್ಲಿದೆ. ಪಂಪ್ ಸ್ಟೋರೇಜ್ ಯೋಜನೆಯಿಂದ ಜೀವಸಂಕುಲ ನಶಿಸಿ ಹೋಗುತ್ತವೆ ಹಾಗೂ ನೆಲೆ ಕಳೆದುಕೊಳ್ಳುತ್ತವೆ. ಆದರಿಂದ ಈ ಯೋಜನೆಯು ಜಾರಿಗೆಬಾರದಂತೆ ಹೋರಾಟ ನಡೆಸಬೇಕಾಗಿದೆ. ಈ ಯೋಜನೆ ತಡೆಯಲು ಉತ್ತರಕನ್ನಡ ಜನತೆ ಮೊದಲು ಶಾಂತಿಯಿಂದ ಪ್ರತಿಭಟಿಸಿದರು. ಅವರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಉತ್ತರ ಕನ್ನಡ ಜಿಲ್ಲೆಯ ಜನತೆಯ ಆಶಯವಾಗಿದೆ.ಈ ಯೋಜನೆಯನ್ನು ತಡೆಯಲು ಉತ್ತರಕನ್ನಡ ಜಿಲ್ಲೆಯ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಉತ್ತರ ಕನ್ನಡ ಜನತೆಯ ಪರಿಸ್ಥಿತಿ ಯನ್ನು ಅರ್ಥೈಸಿಕೊಂಡು ಯೋಜನೆಯನ್ನು ಜಾರಿಗೆ ಬಾರದ ರೀತಿ ಸರ್ಕಾರ ನಿಗಾವಹಿಸಬೇಕು.
ಇಂದೂಧರ ಏನ್ ನಾಯ್ಕ್
ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಿರ್ಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ