ಪೋಸ್ಟ್‌ಗಳು

ಮಾರ್ಚ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಲಿದರು ಸೌದೆಯ ಒಲೆಗೆ

ಇಮೇಜ್
   ಸೌದೆ ಒಲೆ ಎಂದಾಕ್ಷಣ ನಮ್ಮ ಪೂರ್ವಜರ ಹಾಗೂ ಬಾಲ್ಯದ ನೆನಪು ಮರುಕಳಿಸುತ್ತದೆ, ಕಾರಣ ಅಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಗಳು ಮಣ್ಣು ಹಾಗೂ ಇಟ್ಟಿಗೆಗಳಿಂದ ನಿರ್ಮಿಸಿದ ಸೌದೆ ಒಲೆಗಳನ್ನು ಒಳಗೊಂಡಿರುತ್ತಿದ್ದವು, ಹಾಗೂ ಒಲೆಗೆ ಆಧಾರವಾಗಿರುವ ಸೌದೆಗಳನ್ನು ಹಳ್ಳಿಯ ಜನರು ತಾವು ವಾಸ ಮಾಡುತ್ತಿದ್ದ ಸುತ್ತ-ಮುತ್ತಲಿನ ಪ್ರದೇಶಗಳಿಗೆ ಹೋಗಿ ಮಳೆಗಾಲಕ್ಕೂ ಕೂಡ ಸಾಕಾಗುವಷ್ಟು ಸೌದೆಗಳನ್ನು ಮೈಸು ಡುವ ಬಿಸಿಲಿನಲ್ಲಿ ಸಂಗ್ರಹಿಸಿಕೊಂಡು ಮನೆಯಲ್ಲಿ ಕ್ರೂಡಿಕರಿಸುತ್ತಿದ್ದರು. ಇದು ಹಳ್ಳಿಯ ಜನರಿಗೆ ಬಹಳ ಸುಲಭವಾಗಿ ಅನುಕೂಲವಾಗಿತ್ತು, ಆದರೆ ನಗರ ಪ್ರದೇಶದಲ್ಲಿ ವಾಸಿಸುವಂತಹ ಜನರು ಹಣ ನೀಡುವ ಮೂಲಕ ತಮಗೆ ಬೇಕಾಗುವಷ್ಟು ಸೌದೆಗಳನ್ನು ತರಿಸಿಕೊಳ್ಳುತ್ತಿದ್ದರು, ಸೌದೆಗಳನ್ನು ಸಂಗ್ರಹಿಸುವ ಸ್ವರೂಪ ಬೇರೆ ಬೇರೆಯಾಗಿದ್ದರು ಎರಡು ಪ್ರದೇಶಗಳ ಜನರ ಉದ್ದೇಶ ಒಂದೇ ಆಗಿತ್ತು.  ನಮ್ಮ ಮನೆಯಲ್ಲಿ ಅಂತೂ ಹೆಚ್ಚಾಗಿ ಸೌದೆ ಒಲೆಯನ್ನು ಉಪಯೋಗಿಸುತ್ತಿದ್ದೆವು, ಪ್ರತಿನಿತ್ಯವೂ ತಾಯಿ ನಮಗೆ ಒಲೆಯ ಮುಂದೆ ಕುಳಿತುಕೊಂಡು ಅದರಿಂದ ಎದುರಾಗುವ ಬೆಂಕಿಯ ತಾಪ ಮತ್ತು ಹೊಗೆಯನ್ನು ತಾನು ಅನುಭವಿಸಿ, ನಮಗೆ ಮಾತ್ರ ರುಚಿಕರವಾದ ಅಡುಗೆಯನ್ನು ಮಾಡಿ ಉಣಬಡಿಸುತ್ತಿದ್ದಳು. ಅಬ್ಬಾ ಆ ರುಚಿಕರವಾದ ಊಟವನ್ನು ಸವಿಯಲು ನಾನು ಮಾತ್ರ ಹಂಬಲಿಸುತ್ತಿದ್ದೆ, ಕೇವಲ ಅಡುಗೆ ಮಾತ್ರವಲ್ಲದೆ ನಮ್ಮ ದೈನಂದಿನ ಜೀವನಕ್ಕೆ ಅವಶ್ಯವಿರುವ ಕೆಲವು ಪರಿಕರಗಳು ಸೌದೆ ಒಲೆಯ ಮುಖಾಂತರವ...