"ಹಸಿರೆಲೆಯ ಮೇಲೆ ಹಳ್ಳಿಯ ಹೊಂಗನಸು "
ಬೆಳಿಗ್ಗೆ ಎದ್ದ ತಕ್ಷಣ ಶುರುವಾಗುವ ನಮ್ಮ ಜೀವನ ಎಂಬ ದಿನಚರಿಯು ಅದರಲ್ಲೂ ಹಳ್ಳಿಯ ಜೀವನ ಶೈಲಿಯನ್ನು ನೋಡುತ್ತಾ ಹೋದಂತೆ ಈಗ ಕೋಳಿ ಕೂಗುವ ಶಬ್ದ ಕೇಳಿ ಎದ್ದೇಳುವ ಪರಿಸ್ಥಿತಿ ಇಂದು ಎಲ್ಲ ಮನೆಗಳಲ್ಲಿ ಕಾಣ ಬರುತ್ತಿರುವುದೇ ಸಹಜ. ಹಾಗೆಯೇ ಹಳ್ಳಿಯ ವಿವಿಧ ಕೆಲಸ ಕಾರ್ಯಗಳನ್ನು ನೋಡುತ್ತಾ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಕಾಡುಗಳು ಈಗ ನೋಡಲು ಸಿಗುವುದು ತುಂಬಾ ಕಡಿಮೆ. ಹಾಗೆಯೇ ಹಸಿರು ಗದ್ದೆಗಳುಬಯಲುಗಳಂತು ಇಲ್ಲವೇ ಇಲ್ಲ. ಆರಾಮದಾಯಕವಾದ ಕಾರು ಬೈಕುಗಳು ಹೊಗೆಗಳು ಅಂತಹ ಯಂತ್ರೋಪಕರಣಗಳ ಬಳಕೆಯಿಂದ ಅದರ ಎಲ್ಲಾ ಕೆಲಸಗಳನ್ನು ಮಾಡುವ ಪರಿಸ್ಥಿತಿ ಎದುರಾಗಿದೆ. ಹಳ್ಳಿಗಳು ಜನರ ಜೀವನಾಡಿ ಗಳಾಗಿದ್ದವು ಆದರೆ ಈಗ ಹರಿದು ಚಿದ್ರ ಚಿದ್ರವಾದ ಜೇಡರ ಬಲೆ ಹೇಗೆ ನಮ್ಮ ಕಣ್ಣಿಗೆ ಕಾಣುತ್ತದೆಯೋ ಹಳ್ಳಿಗರ ಜೀವನ ಶೈಲಿಯೂ ಹಾಗೆ ಆಗಿದೆ. ಇದಕ್ಕೆ ಕಾರಣ ಜನರ ತಾನು ತನ್ನದು ಎಂಬ ಮನಸ್ಥಿತಿ. ಆದರೆ ಅವರಿಗೆ ಮೊದಲು ತಿಳಿದಿರುವುದಿಲ್ಲ ಒಂದೊಂದು ದಿನ ಕಳೆದಂತೆ ಗೊತ್ತಾಗುತ್ತದೆ ಸುಖಕರ ಜೀವನದ ಸುಧೀರ್ಘ ನಿಟ್ಟುಸಿರು ಹಳ್ಳಿಯ ಜನರೇ ಎಂದು. ಸಂಪ್ರದಾಯದಿಂದ ಕೂಡಿದ ಹಳ್ಳಿಯ ಸೊಗಡು ಇಂದು ಬರಡಾಗುವ ಸನ್ನಿವೇಶ ಎದುರಾಗಿದೆ. ಇಂದು ಮನುಷ್ಯ ಆರೋಗ್ಯವನ್ನು ಲೆಕ್ಕಿಸದೆ ಹಣಗಳಿಸುವತ್ತ ಮುಖ ಮಾಡಿದ್ದಾನೆ. ಕುಡಿಯುವ ನೀರಿಗೂ ಕಷ್ಟ ಪಡುತ್ತಿರುವ ಸ್ಥಿತಿಗೆ ಇಂದು ಮಾನವ ಸಮಾಜ ಹಾಗೂ ಹಳ್ಳಿಗಳು ಲಗ್ಗಿಟ್ಟಿವೆ. ಹಳ್ಳಿಯ ಹಸಿರು ಮರಗಳು ...