"ಹಸಿರೆಲೆಯ ಮೇಲೆ ಹಳ್ಳಿಯ ಹೊಂಗನಸು "
ಬೆಳಿಗ್ಗೆ ಎದ್ದ ತಕ್ಷಣ ಶುರುವಾಗುವ ನಮ್ಮ ಜೀವನ ಎಂಬ ದಿನಚರಿಯು ಅದರಲ್ಲೂ ಹಳ್ಳಿಯ ಜೀವನ ಶೈಲಿಯನ್ನು ನೋಡುತ್ತಾ ಹೋದಂತೆ ಈಗ ಕೋಳಿ ಕೂಗುವ ಶಬ್ದ ಕೇಳಿ ಎದ್ದೇಳುವ ಪರಿಸ್ಥಿತಿ ಇಂದು ಎಲ್ಲ ಮನೆಗಳಲ್ಲಿ ಕಾಣ ಬರುತ್ತಿರುವುದೇ ಸಹಜ.
ಹಾಗೆಯೇ ಹಳ್ಳಿಯ ವಿವಿಧ ಕೆಲಸ ಕಾರ್ಯಗಳನ್ನು ನೋಡುತ್ತಾ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಕಾಡುಗಳು ಈಗ ನೋಡಲು ಸಿಗುವುದು ತುಂಬಾ ಕಡಿಮೆ. ಹಾಗೆಯೇ ಹಸಿರು ಗದ್ದೆಗಳುಬಯಲುಗಳಂತು ಇಲ್ಲವೇ ಇಲ್ಲ. ಆರಾಮದಾಯಕವಾದ ಕಾರು ಬೈಕುಗಳು ಹೊಗೆಗಳು ಅಂತಹ ಯಂತ್ರೋಪಕರಣಗಳ ಬಳಕೆಯಿಂದ ಅದರ ಎಲ್ಲಾ ಕೆಲಸಗಳನ್ನು ಮಾಡುವ ಪರಿಸ್ಥಿತಿ ಎದುರಾಗಿದೆ.
ಹಳ್ಳಿಗಳು ಜನರ ಜೀವನಾಡಿ ಗಳಾಗಿದ್ದವು ಆದರೆ ಈಗ ಹರಿದು ಚಿದ್ರ ಚಿದ್ರವಾದ ಜೇಡರ ಬಲೆ ಹೇಗೆ ನಮ್ಮ ಕಣ್ಣಿಗೆ ಕಾಣುತ್ತದೆಯೋ ಹಳ್ಳಿಗರ ಜೀವನ ಶೈಲಿಯೂ ಹಾಗೆ ಆಗಿದೆ. ಇದಕ್ಕೆ ಕಾರಣ ಜನರ ತಾನು ತನ್ನದು ಎಂಬ ಮನಸ್ಥಿತಿ. ಆದರೆ ಅವರಿಗೆ ಮೊದಲು ತಿಳಿದಿರುವುದಿಲ್ಲ ಒಂದೊಂದು ದಿನ ಕಳೆದಂತೆ ಗೊತ್ತಾಗುತ್ತದೆ ಸುಖಕರ ಜೀವನದ ಸುಧೀರ್ಘ ನಿಟ್ಟುಸಿರು ಹಳ್ಳಿಯ ಜನರೇ ಎಂದು. ಸಂಪ್ರದಾಯದಿಂದ ಕೂಡಿದ ಹಳ್ಳಿಯ ಸೊಗಡು ಇಂದು ಬರಡಾಗುವ ಸನ್ನಿವೇಶ ಎದುರಾಗಿದೆ.
ಇಂದು ಮನುಷ್ಯ ಆರೋಗ್ಯವನ್ನು ಲೆಕ್ಕಿಸದೆ ಹಣಗಳಿಸುವತ್ತ ಮುಖ ಮಾಡಿದ್ದಾನೆ. ಕುಡಿಯುವ ನೀರಿಗೂ ಕಷ್ಟ ಪಡುತ್ತಿರುವ ಸ್ಥಿತಿಗೆ ಇಂದು ಮಾನವ ಸಮಾಜ ಹಾಗೂ ಹಳ್ಳಿಗಳು ಲಗ್ಗಿಟ್ಟಿವೆ. ಹಳ್ಳಿಯ ಹಸಿರು ಮರಗಳು ಧರೆಗುರುಳಿ ಹೆದ್ದಾರಿಗಳು ನಿರ್ಮಾಣವಾಗಿವೆ.
ಬದಲಾಗುತ್ತಿರುವ ವಿದ್ಯಮಾನದಲ್ಲಿ ಆರಾಮದಾಯಕವಾಗಿ ಓಡಾಡುವಂತಹ ಕಾರು ಬೈಕುಗಳು ಇಂದು ಎಲ್ಲೆಂದರಲ್ಲಿ ಕಾಣುವ ಸ್ಥಿತಿ. ಬಸ್ ನಲ್ಲಿ ಓಡಾಡುವ ಜನರೇ ಇಲ್ಲ. ಹಳ್ಳಿಯ ಪರಿಸರ ನಾಶವಾಗಲು ಕಾರಣ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ. ಮುಂಚಿನ ಕಾಲದಲ್ಲಿ ಸೋಗೆ ಮನೆಗಳು. ಅಷ್ಟು ಸಣ್ಣ ಸಣ್ಣ ಜೋಪಡಿಯಲ್ಲೇ ಹಳ್ಳಿ ಹಳ್ಳಿಗರ ಜೀವನ ವ್ಯವಸ್ಥೆ ಆಗಿತ್ತು. ಆದರೆ ಈಗ ದೊಡ್ಡ ದೊಡ್ಡ ಸೈಟ್ ಮತ್ತು ಕಟ್ಟಡಗಳ ನಿರ್ಮಾಣದಿಂದ ರೋಗಗಳು ಮನುಷ್ಯನ ದೇಹಕ್ಕೆ ಲಗ್ಗೆ ಇಟ್ಟಿವೆ.
ಆಗಿನ ಕಾಲದ ಆಹಾರ ಪದ್ಧತಿ ಹೇಗಿತ್ತೆಂದರೆ ಮನೆಯಲ್ಲಿಯೇ ಆಹಾರಗಳನ್ನು ತಾವೇ ಮಾಡಿಕೊಳ್ಳುವ ರೀತಿ ಇತ್ತು. ಆದರೆ ಈಗ ನಗರದ ತಿಂಡಿ ತಿನಿಸುಗಳಿಗೆ ಜನ ಮುಗಿ ವ್ಯವಸ್ಥೆ ಎದುರಾಗಿದೆ. ಕುಳಿತುಕೊಂಡಲ್ಲೆ ತಿಂದು ತಿಂದು ಬೊಜ್ಜು ಎಂಬ ಕಾಯಿಲೆಗೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ. ಇದು ಒಂದು ಬೇಸರದ ಸಂಗತಿಯಾಗಿದೆ.
ಗಾಯತ್ರಿ ಎಂ.
M. M arts and science college sirsi
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ