ಆಕಾಶದಲ್ಲಿ ಮೀನಿನಂತೆ....

ಆಕಾಶಕ್ಕೆ ಏಣಿ ಯಾರೂ ಹಾಕೋಕೆ ಆಗಲ್ಲ!" ಯಾರೋ ಹೇಳಿದ ಮಾತು ನೆನಪಾಯಿತು. ಹೀಗೆ ಬರುವಾಗ 'ಪ್ರತಿ ಕನಸುಗಳು ನಮ್ಮ ಮನಸ್ಸಿನ ಹಿಡಿತದಲ್ಲಿರಬೇಕು'.ಯಾರೋ ಹಿರಿಯರು ಅವರ ಸಹದ್ಯೋಗಿಗಳಿಗೆ ಹೇಳುತ್ತಿರುವ ಮಾತಿನ ಸಂದರ್ಭ ನನ್ನ ಎದುರಿತ್ತು.

   ನನಗೆ ಒಂದು ಕ್ಷಣ ಮೋಗದಲ್ಲಿ ಮಂದಹಾಸ ಬೀರಿತ್ತು. ಅದೇಕೆಂದರೆ ನನ್ನ ಮನಸಿನಲ್ಲಿ ನಡೆಯುತ್ತಿರುವ ಯೋಚನೆಗೂ, ಇಲ್ಲಿ ನಡೆಯುತ್ತಿರುವ ಸಂದರ್ಭಕ್ಕೂ ಸಾಮ್ಯತೆ ಇದೆ ಅಲ್ಲವೇ!ಎಂದು ಮನಸಿನಲ್ಲಿಯೇ, ಅಂದುಕೊಂಡೆ. ಹೀಗೆ ಯೋಚಿಸುತ್ತ ಹೋದರೇ, 'ಎಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ.ಆದರೆ ಇನ್ನೆಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ. ಸಾಧಿಸುವ ಹುಮ್ಮಸ್ಸು ಇರುವುದಿಲ್ಲ?

 ನಮಗೆ ಕನಸುಗಳು ಅತೀ ಆದರೆ, ದೇವರು ಕೂಡ ಒಮ್ಮೊಮ್ಮೆ ಶತ್ರುವಾಗಿ ಬಿಡುತ್ತಾನೆ. ಏಕೆಂದರೆ ಮನದಲ್ಲಿ ಸಾವಿರ ಚಿಂತೆ ಇದ್ದರೂ, ಇರುಳಲ್ಲಿ ಚಂದ್ರನನ್ನು ಮರೆತು ಹಗಲಲ್ಲಿ ನಕ್ಷತ್ರಗಳನ್ನು ಹುಡುಕುವ ಆಸೆ. ಈ ಒಂದೊಂದು ಟೈಮಲ್ಲಿ ವಿಚಿತ್ರವಾಗಿ ಆಡುವುದನ್ನ ನೋಡಿದರೆ, ಹುಟ್ಟಿಸುವ ದೇವರಿಗೂ ಮಾನವನ ಬಗ್ಗೆ ತಿಳಿಯುವುದಿಲ್ಲ ಅಂತ ಅನಿಸುತ್ತದೆ.

  ಹೀಗೆ ಹುಟ್ಟಿದ ಮಗು ಅದರ ಪೋಷಕರ ಸ್ವಾಧೀನದಲ್ಲಿ ಬೆಳೆಯುತ್ತದೆ. ಹಾಗೇ ಪಾಲಕರ ಕನಸುಗಳು ಆ ಮಗುವಿನಲ್ಲಿ ಕಾಣುತ್ತಾರೆ. ಪಾಲಕರು ಮಕ್ಕಳಿಗೂ ಹೊಸ ಹೊಸ ಆಕಾಶದಂತೆ ವಿಶಾಲವಾದ ಕನಸುಗಳು ಕಾಣುವಂತೆ ಓಲೈಸುತ್ತಾರೆ. ಆ ಮಗು ಬೆಳೆಯುತ್ತ ಹೊಸ ಕಾಣುತ್ತಾ, ಅದನ್ನು ಗುರಿ ತಲುಪಲು ಪ್ರಯತ್ನಿಸುತ್ತದೆ. ಆ ಪ್ರಯತ್ನ ಬೆಳೆಯುತ್ತ -ಬೆಳೆಯುತ್ತ ಕುಂಠಿತವಾಗುತ್ತದೆ. ಅದಕ್ಕೆ ಕಾರಣಗಳು ನೂರಾರು ಇರಬಹುದು. ಆದರೆ ಕನಸನ್ನು ಕಾಣುವಾಗ ಇರುವ ಹುಮ್ಮಸ್ಸು, ಅದನ್ನು ಬಿಟ್ಟುಕೊಡುವ ಮುಂಚೆ ಏನೇ ಆಗಲಿ ನನ್ನ ಗುರಿಯನ್ನು ತಲುಪೇ ತಲುಪುತ್ತೇನೆ ಎಂಬ ಆತ್ಮವಿಶ್ವಾಸ ಏಕೆ ಇರುವುದಿಲ್ಲ?.

     ನಮಗೆ ಕನಸುಗಳನ್ನು ಮನಸಿನಲ್ಲಿ ಹುಟ್ಟು ಹಾಕುವವರೇ ಒಂದೊಂದೊಮ್ಮೆ ನಮಗೆ ವಿಶ್ವಾಸ ತುಂಬುವುದರಲ್ಲಿ ವಿಫಲರಾಗಿರುತ್ತಾರೆ. ಇಲ್ಲಿ ಪರಿಸ್ಥಿತಿಗಳ ಕೈಗೊಂಬೆಗಳಾಗಿ ನುಜ್ಜು -ಗುಜ್ಜಾದವರೇ ಜಾಸ್ತಿ ಈ ಜಗದಲ್ಲಿ.

   ಕನಸುಗಳನ್ನು ಕಂಡರೇ ಅಬ್ದುಲ್ ಕಲಾಂ ಹಾಗೂ ಅಂಬೇಡ್ಕರವರ ರೀತಿ ಕಾಣಬೇಕು. ಎಷ್ಟೋ ನಾನಾ ರೀತಿಯ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಮೇಲೆ ಬಂದವರು ನಮ್ಮ ನಡುವೆ ಇದ್ದಾರೆ. ಏನೇ ಕಷ್ಟ ಬಂದರೂ ಸರಿಯೇ! 'ಆಕಾಶದಲ್ಲಿ ಮೀನಿನಂತೆ ಆಗುವ ಬದಲು, ಹಾರುವ ಪಕ್ಷಿಯಾಗೋಣ. ಹಾಗೆ ನೀರಿನಲ್ಲಿ ನಲಿದಾಡುವ ಮೀನಿನಂತೆ ಆಗೋಣ'.ಕಂಡ ಕನಸುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ...

ದೀಕ್ಷಿತಾ ನಾಯ್ಕ್

B.A 1st

ಪತ್ರಿಕೋದ್ಯಮ ವಿಭಾಗ

ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ನಮ್ಮ ಅರಳೇಶ್ವರ