ನೋಡ ಬಾ ನಮ್ಮೂರ ಸಸ್ಯಲೋಕ "

ಉತ್ತರಕನ್ನಡ ಜಿಲ್ಲೆಯ ಸಹ್ಯಾದ್ರಿಯ ಶೃಂಗ ಶಿರಸಿಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಬಕ್ಕಳ ಎಂಬ ಪುಟ್ಟ ಹಳ್ಳಿ ನಮ್ಮೂರು. ಬಕುಲಾಪುರ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮ ಇಂದು ಬಕ್ಕಳ ಎಂದು ತನ್ನ ಹೆಸರನ್ನು ಕಿರಿದಾಗಿಸಿಕೊಂಡಿದೆ. ಹೆಸರೇನೋ ಚಿಕ್ಕದಾಗಿರಬಹುದು ಆದರೆ ಊರಿನ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಕಾರಣ ಮಾನವನ ಪರಿಸರ ಪ್ರೀತಿಯ ಪ್ರತೀಕವಾಗಿ ನಿರ್ಮಿಸಿರುವ ಬಕ್ಕಳ ಸಸ್ಯಶಾಸ್ತ್ರೀಯ ವನ ಹಾಗೂ ನಿಸರ್ಗದ ಮಡಿಲಿನಲ್ಲಿರುವ ಧಾರ್ಮಿಕ ಕೇಂದ್ರ ಶ್ರೀ ಸತ್ಯನಾಥೇಶ್ವರ ದೇವಾಲಯ.

    ಸಾಮಾನ್ಯವಾಗಿ ಉತ್ತರಕನ್ನಡ ಪ್ರವಾಸ ಕೈಗೊಂಡವರು ಶಾಸ್ತ್ರೀಯ ವನಕ್ಕೆ ಭೇಟಿ ಕೊಡದೆ ತಮ್ಮ ಯಾನವನ್ನು ಕೊನೆಗೊಳಿಸುವುದೇ ಇಲ್ಲ ಅದರಲ್ಲೂ ಜೀವ ವೈವಿಧ್ಯತೆಯ ಪ್ರೀತಿ ಹೊಂದಿರುವ, ವೈದ್ಯಕೀಯ ಆಸಕ್ತಿ ಹೊಂದಿರುವ ಆಯುರ್ವೇದದ ಕುರಿತು ಜ್ಞಾನ ಪಡೆಯಲಿಚ್ಚಿಸುವ ಜನರಿಗೆ ಶಾಸ್ತ್ರೀಯ ವನ ಒಂದು ಹಾಟ್ ಝೋನ್ ಇದ್ದಂತೆ.

  ಸಸ್ಯ ಸಂಕುಲದ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಆ ಮೂಲಕ ಔಷದೀಯ ಸಸ್ಯಗಳ ಉಪಯುಕ್ತತೆಯನ್ನು ಬಹಿರಂಗಪಡಿಸುವುದು ಶಾಸ್ತ್ರೀಯ ವನದ ಮುಖ್ಯ ಉದ್ದೇಶ ಆದುದರಿಂದಲೇ ವಿಭಿನ್ನ ರೀತಿಯ ಸಸ್ಯಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳನ್ನು ಬೆಳೆಸಲಾಗುತ್ತಿದೆ ಕರ್ನಾಟಕ ಅರಣ್ಯ ಇಲಾಖೆಯು ಈ ವನದ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ

  ಶಾಸ್ತ್ರೀಯ ವನದ ವಿಶೇಷತೆ:

ಮರದಿಂದ ನಿರ್ಮಿಸಿದಂತೆ ಕಾಣುವ ಈ ವನದ ದ್ವಾರವು ಮೊದಲಿಗೆ ಜನರ ಕಣ್ಮನ ಸೆಳೆಯುವಂತೆ ಮಾಡುತ್ತದೆ ಹಾದಿಯುದ್ದಕ್ಕೂ ಅಕ್ಕಪಕ್ಕದಲ್ಲಿರುವ ವೈವಿಧ್ಯಮಯ ಸಸ್ಯರಾಶಿ ಜನರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುವುದಂತೂ ಸುಳ್ಳಲ್ಲ ಸುಮಾರು ಐದು ನುರಕ್ಕಿಂತಲೂ ಅಧಿಕ ಆಯುರ್ವೇದ ಸಸ್ಯಗಳನ್ನು ಹೊಂದಿರುವ ವನವು ಸಾಕಷ್ಟು ರೋಗಗಳಿಗೆ ಮುಕ್ತಿನೀಡುವ _____ ಆಗಿದೆ ಎಂದರೆ ಅತಿಶಯೋಕ್ತಿಯಾಗದು

ಇವುಗಳೊಂದಿಗೆ ಆಧುನಿಕ ಜಾತಿಯ ಹೈಬ್ರಿಡ್ ಸಸ್ಯಗಳ ಸಂರಕ್ಷಣೆ ಹಾಗೂ ಸಂಶೋಧನೆಗಾಗಿ ಪ್ರತ್ಯೇಕ ಹಸಿರುಮನೆಯನ್ನು ನಿರ್ಮಿಸಿರುವುದು ಇನ್ನಷ್ಟು ವಿಶೇಷ

ಸಸ್ಯಗಳನ್ನು ನಕ್ಷತ್ರ ರಾಶಿ ಗೃಹ ಋಷಿಮುನಿ ಹಾಗೂ ದೇವರ ಹೆಸರಿನಲ್ಲಿ ವರ್ಗೀಕರಿಸಲಾಗಿದ್ದು ಪ್ರತ್ಯೇಕ ವನಗಳನ್ನು ನಿರ್ಮಿಸಲಾಗಿದೆ ಮುಖ್ಯವಾಗಿ ಶಿವಪಂಚಾಯತ್ ವನವನ್ನು ನಿರ್ಮಿಸಲಾಗಿದ್ದು ಇಲ್ಲಿ ಶಿವನಿಚ್ಚೆಯ ಬಿಲ್ವಪತ್ರೆಯ ಗಿಡಗಳನ್ನು ಪೋಷಿಸಲಾಗಿದೆ ರಾಶಿಗಳಿಗನುಗುಣವಾಗಿ, ಗ್ರಹಗಳ ಹಿನ್ನೆಲೆಯೊಂದಿಗೆ ಸಾಂಕೇತಿಕ ಗಿಡಗಳನ್ನು ಬೆಳೆಸಲಾಗಿದೆ  ವನದಲ್ಲಿ ಎಂಟು ಆಕಾರದ ಕೆರೆಯನ್ನು ನಿರ್ಮಿಸಲಾಗಿದ್ದು ಸುತ್ತಲೂ ಕಾಲ್ಪನಿಕ ಆಕೃತಿಗಳನ್ನು ಸ್ಥಾಪಿಸಲಾಗಿದೆ ಅದರಲ್ಲೂ ಡಾ|| ರಾಜಕುಮಾರ್ ಹಾಗೂ ಋಷಿಮುನಿ, ಜಿಂಕೆ, ನೀರನ್ನು ತರಹೊರಟ ನಾರಿಯ ಆಕೃತಿಗಳು ನಿಜರೂಪದಂತೆ ಕಾಣಿಸುವುದರಿಂದ ಜನರನ್ನು ಆಶ್ಚರ್ಯಗೊಳಿಸುವುದಂತು ಸುಳ್ಳಲ್ಲ ಇದರೊಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ವಿಶ್ರಾಂತಿಗಾಗಿ ಪ್ರತ್ಯೇಕ ಆಸನಗಳನ್ನು ಹೊಂದಿದ್ದು ಪ್ರವೇಶ ಉಚಿತವಾಗಿರುವುದರಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ

    ಈ ವನದ ಸಮೀಪದಲ್ಲಿಯೇ ಜೈನ ಮಠ ವಾದಿರಾಜ ಮಠ ಸ್ವರ್ಣವಲ್ಲಿ ಮಠ ಶಿವಗಂಗಾ ಜಲಪಾತ ಸಹಸ್ರಲಿಂಗ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿದ್ದು ಪ್ರವಾಸಿಗರಿಗೆ ರಸದೌತಣವನ್ನು ಉಣಬಡಿಸುವುದಂತು ಸುಳ್ಳಲ್ಲ

                                                    :- ಶಶಿಧರ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ