ಹೆಚ್ಚುತ್ತಿರುವ ವೃದ್ಧಾಶ್ರಮಗಳು

ಹಿಂದಿನ ಕಾಲದಲ್ಲಿ ತಂದೆ ತಾಯಿಯನ್ನು ದೇವರಂತೆ ಕಾಣುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಈ ಕಾಲದಲ್ಲಿ ಹೆತ್ತ ತಂದೆ ತಾಯಿಯನ್ನು ಮಕ್ಕಳು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಇದೊಂದು ಪಾಪ ಕೃತ್ಯ.ಇತ್ತೀಚೆಗಂತೂ ವೃದ್ಧಾಶ್ರಮಗಳ ಸಂಖ್ಯೆ ಬಹಳ ಹೆಚ್ಚುತ್ತಿದೆ.

          ತಂದೆ ತಾಯಿ  ತಮ್ಮ ಮಕ್ಕಳು ಓದಬೇಕು, ಚೆನ್ನಾಗಿ  ಓದಿ ದೊಡ್ಡ ನೌಕರಿ ಪಡೆಯಬೇಕು  ಆಗ ಸಮಾಜದಲ್ಲಿ ತಮಗೆ ಸಿಗುವ ಗೌರವವೇ ಬೇರೆಯಾಗಿರುತ್ತದೆ ಎಂದುಕೊಳ್ಳುತ್ತಿದ್ದರು.

ಹಾಗಾಗಿ ಮಕ್ಕಳನ್ನು ಲಕ್ಷ ಲಕ್ಷ ಕೊಳ್ಳೆ ಹೊಡೆಯುವ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಒಂದೊಳ್ಳೆಯ ವಿದ್ಯೆಯನ್ನು ಗಳಿಸಿ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬೇರೆ ದೇಶಗಳಿಗೆ ಹೋಗಿಬಿಡುತ್ತಾರೆ.ನಂತರ ಅಲ್ಲೇ ಉದ್ಯೋಗವನ್ನು ಹುಡುಕಿ ಮದುವೆ ಕೂಡ ಮಾಡಿಕೊಂಡು ಅಲ್ಲೇ ಠಿಕಾಣಿ ಹೂಡುತ್ತಾರೆ.                        


ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲಿ ಸ್ವತಂತ್ರವಾಗಿ ಬದುಕಲು  ಸಾಧ್ಯವಾಗುವುದಿಲ್ಲ.ಹಾಗೂ ವೃದ್ದಾಪ್ಯ ವಯಸ್ಸಿನಲ್ಲಿ  ವಯಸ್ಕರಿಗೆ ಆರೈಕೆಯ ಅವಶ್ಯಕತೆ ಬಹಳ ಇರುತ್ತದೆ. ವೃದ್ಧರಿಗೆ ಇವೆಲ್ಲವನ್ನು ನೀಗಿಸುವ ಒಂದೇ ಒಂದು ಮಾರ್ಗ ಎಂದರೆ ಅದೇ ವೃದ್ಧಾಶ್ರಮಗಳು. ನಮ್ಮ ದೇಶದಲ್ಲಿ ಅತಿ ಹೆಚ್ಚು ವೃದ್ಧಾಶ್ರಮಗಳು ಸ್ಥಾಪಿಸಲ್ಪಟ್ಟಿವೆ. ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಂಡಾದ ಮೇಲೆ  ಹಿಂದೆ ತಮಗಾಗಿ ಪ್ರತಿನಿತ್ಯ ಕಷ್ಟಪಟ್ಟು ಬೆವರು ಸುರಿಸಿದ ತಂದೆ ತಾಯಿ ನೆನಪು ಬರುವುದಿಲ್ಲ. ತಂದೆ ತಾಯಿಗೆ ವಯಸ್ಸಾದಂತೆ ಅವರಲ್ಲಿ ದುಡಿಯುವ ಶಕ್ತಿ ಕುಗ್ಗುತ್ತಾ ಹೋಗುತ್ತದೆ. ಅವರ ಸೇವೆ ಮಾಡುವುದು ಮಗನ / ಮಗಳ  ಜವಾಬ್ಧಾರಿಯಾಗಿರುತ್ತದೆ. ಆ ಜವಾಬ್ಧಾರಿಯನ್ನು ನಿರ್ವಹಿಸುವುದು ಮಕ್ಕಳ ಕರ್ತವ್ಯ ಆಗಿರುತ್ತದೆ.ತಂದೆ ತಾಯಿಗೆ ವಯಸ್ಸಾದಾಗ ಆ ಕರ್ತವ್ಯವನ್ನು ನಿರ್ವಹಿಸದೇ ಇರುವವರು  ಬದುಕಿದ್ದು ಪ್ರಯೋಜನವಿಲ್ಲ .ವೃದ್ದಾಶ್ರಮಗಳಿಗೇನೋ ಸೇರಿಸುತ್ತಾರೆ ಆದರೆ ಅದರಿಂದ ಅವರ ಮನಸ್ಸಿಗೇಷ್ಟು ನೋವಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತಾರೆ.

ಮಕ್ಕಳು ಹಣದ ಹಿಂದೆ ಬಿದ್ದು ತಂದೆ ತಾಯಿಯ ಯನ್ನು ಒಬ್ಬಂಟಿಯಾಗಿ ಬಿಡುತ್ತಿದ್ದಾರೆ.ಮತ್ತು ಅವರನ್ನು ಪೋಷಿಸಲು ಸಾಧ್ಯವಿಲ್ಲವೆಂದು  ವೃದ್ದಾಶ್ರಮಗಳಿಗೆ ಸೇರುಸುತ್ತಿದ್ದಾರೆ.

    ಮಕ್ಕಳು ಸಣ್ಣವರಿದ್ದಾಗ ತಮಗೆ ಏನಿಲ್ಲದಿದ್ದರು ಪರವಾಗಿಲ್ಲ ಮಕ್ಕಳು ಚೆನ್ನಾಗಿರಲಿ ಎಂದು ಹೇಗೋ ಕಷ್ಟ ಪಟ್ಟು  ನಮ್ಮನ್ನು  ತಂದೆ  ತಾಯಿ ರಕ್ಷಿಸಿದ್ದಾರೆ.ಆದರೆ ಮಕ್ಕಳು ತಂದೆ ತಾಯಿಗೆ ಇದರ ಪ್ರತಿಫಲವಾಗಿ ಏನು ಕೊಟ್ಟಿದ್ದಾರೆ ? ಹಲವಾರು ಕೆಲಸದ ಒತ್ತಡ ,ಸಮಯದ ಅಭಾವ ಮುಂತಾದ ಕಾರಣಗಳಿಂದ ತಂದೆ ತಾಯಿ ಮಕ್ಕಳ ಪ್ರೀತಿ ಯಿಂದ ದೂರವಾಗುತ್ತಿದ್ದಾರೆ .ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ.

                        ಭಾರತದಲ್ಲಿ ಒಟ್ಟು 1000ಕ್ಕಿಂತ ಹೆಚ್ಚು

ವೃದ್ಧಾಶ್ರಮಗಳಿವೆ .ಅಂದರೆ 100ಕ್ಕೆ 46%. ಒಬ್ಬೊಬ್ಬರು ಸಮಾಜ ಸೇವೆಯನ್ನು ಮಾಡುವುದಕ್ಕಾಗಿ  ತಮ್ಮದೇ ಸ್ವಂತ ಖರ್ಚಿನಲ್ಲಿ ಉದಾಹರಣೆಗೆ ಜನಸ್ನೇಹಿ ಯೋಗೇಶ್ ರವರು ಹಲವಾರು ವೃದ್ಧರಿಗೆ,ಅನಾಥರಿಗೆ  ದಾರಿದೀಪವಾಗಿದ್ದಾರೆ. ಇಂತಹ ಹಲವಾರು ಸಮಾಜ ಸೇವಕರು ನಮ್ಮ ಸಮಾಜದಲ್ಲಿ ಇಂದೂ ಕೂಡ ಇದ್ದಾರೆ.ನಾವು ನಮ್ಮ  ತಂದೆ ತಾಯಿಯನ್ನು ವೃದ್ಧಶ್ರಮಗಳಿಗೆ ಸೇರಿಸಿದರೆ ಅದನ್ನು ನೋಡಿ ನಮ್ಮ ಮಕ್ಕಳು ಕೂಡ ನಮ್ಮನ್ನು ಸೇರಿಸುತ್ತಾರೆ.ಯಾವ ತಂದೆ ತಾಯಿಯು ಪ್ರತಿಫಲವನ್ನು ಬಯಸುವುದಿಲ್ಲ .ಆದರೆ ನಾವು ಅವರ ವೃದ್ದಾಪ್ಯ ವಯಸ್ಸಿನಲ್ಲದರೂ  ಅವರ ಸೇವೆಯನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು.

         ಇದರಿಂದ ತಂದೆ ತಾಯಿ  ಮತ್ತು ಮಕ್ಕಳ ನಡುವಿನ  ಪ್ರೀತಿ. ,ಆರೈಕೆ ಮತ್ತು ಅಂತರ ಕಡಿಮೆಯಾಗುತ್ತಿದೆ.        

                 ಅರ್ಪಿತಾ ಮರಾಠಿ  

ಎಂ.ಎಂ. ಆರ್ಟ್ಸ್ ಆ್ಯಂಡ್  ಸೈನ್ಸ್ ಕಾಲೇಜ್ ಸಿರ್ಸಿ

                                                

                 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಡಕೆ ಬೀಳದಿರಲಿ ಕೆಳಕ್ಕೆ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಅಳಿವಿನಂಚಿನಲ್ಲಿರುವ ಕಗ್ಗ