"ಸಮಾನತೆಯಲ್ಲಿ ಸ್ತ್ರೀ ಸಶಕ್ತಿಕರಣ"
ಬ್ರಹ್ಮ ಸೃಷ್ಟಿಸಿದ ಸಮಾಜದಲ್ಲಿ ಲಿಂಗಭೇದ ಗಳು ಸೃಷ್ಟಿಯಾಯಿತು. ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎನ್ನುವ
ಎರಡು ಪ್ರಭೇದಗಳು ಉಂಟಾದವು, ಅವರ ಬೆಳವಣಿಗೆ ಮತ್ತು ಉದ್ಯೋಗಗಳು ವಿಭಿನ್ನವಾಗಿದ್ದವು.
ಕಾಲಾನಂತರ ಸ್ವಾವಲಂಬಿ ಜೀವನ ಅಸ್ತಿತ್ವಕ್ಕೆ ಬರತೊಡಗಿತು. ಪ್ರಾರಂಭದಲ್ಲಿ ಪುರುಷಪ್ರಧಾನ ಸಮಾಜ ನಮ್ಮದಾಗಿತ್ತು. ಮನೆ ಯಜಮಾನನು ದುಡಿದು ತರುವುದು ಹಾಗೂ ಯಜಮಾನಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ದು ಆಗಿನ ಸಂಪ್ರದಾಯವಾಗಿತ್ತು.
ಶಿಕ್ಷಣದಲ್ಲಿ ಸ್ತ್ರೀಯರಿಗೆ ಸೀಮಿತತೆ ಇತ್ತು.ಸಮಯ ಕಳೆದಂತೆ ಶಿಕ್ಷಣದ ಮಹತ್ವ ಹೆಚ್ಚಿತು. . ನಂತರ ಮುಂದುವರೆದುಕೊಂಡು ಬಂದಿತು. ಕೆಲ ಮೂಢನಂಬಿಕೆ ಕಾರಣ ಶಿಕ್ಷಣದ ಸ್ತ್ರೀ ಪ್ರಗತಿಯಲ್ಲಿ ಅಂಧಕಾರದ ಛಾಯೆಯಿತ್ತು. ಅದರ ತೆರವಿಗೆ ಅನೇಕ ವರ್ಷಗಳು ಬೇಕಾದವು.
ಸ್ತ್ರೀಯರು ಹೆಚ್ಚು ಶಿಕ್ಷಣ ಕಲಿಯಲಾರಂಭಿಸಿದ ನಂತರ "ನಾವು ಯಾರಿಗೂ ಕಮ್ಮಿ ಇಲ್ಲ". ಎಂಬ ಯೋಚನೆ ಮೂಡಿತು. ಅದರ ಅಡಿಯಲ್ಲಿ ಸಮಾನತೆ ಹಕ್ಕು ಮತ್ತು ಸ್ತ್ರೀ ಸಶಕ್ತಿಕರಣ ಎಂಬ ಯೋಜನೆ ರಚನೆಯಾಯಿತು. ಪುರುಷರು ಮತ್ತು ಸ್ತ್ರೀಯರಿಗೆ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕೊಡುವುದು ಸಮಾನತೆ ಯಾದರೆ,
ಸ್ತ್ರೀಯರನ್ನು ಎಲ್ಲಾ ಸಂದರ್ಭಗಳಲ್ಲೂ ಧೈರ್ಯಗುಂದದೆ ಮುನ್ನಡೆಸಲು ಸಶಕ್ತಿಕರಣ ಸಹಾಯಮಾಡುತ್ತದೆ. ಆರಂಭದಲ್ಲಿ ಸಮಾನತೆ ಯನ್ನು ಅಲಕ್ಷಿಸಿ ದರಾದರೂ ನಂತರ ಸ್ತ್ರೀಯರು ಸೇನೆ, ವ್ಯವಹಾರ, ಮತ್ತು ಆಡಳಿತ, ಹೀಗೆ ಮುಂತಾದ ಅತ್ಯುತ್ತಮ ಕ್ಷೇತ್ರಗಳಲ್ಲಿ ಸೇರ್ಪಡೆಯಾದರು. ಇದರಿಂದ ದೇಶದ ಆರ್ಥಿಕತೆಯ ಬಲ ಹೆಚ್ಚಿತು.
ಸ್ತ್ರೀ ಸಶಕ್ತೀಕರಣದಿಂದ ಮಹಿಳೆಯರು ಏನೇ ಆದರೂ ದೃತಿಗೆಡದೆ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದಾರೆ.
ಮಹಿಳೆಯರಿಲ್ಲದ ಹುದ್ದೆಯನ್ನು ಕಾಣುವುದು ಕಷ್ಟವೇನೋ?.. ಅಷ್ಟರಮಟ್ಟಿಗೆ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ.
ಕೆಲ ಗಣ್ಯಾತಿಗಣ್ಯರು ಇಂತಹ ಅತ್ಯುತ್ತಮ ಕಾರ್ಯಕ್ಕೆ ನಾಂದಿ ಹಾಡಿದರು. ಆದರೆ ಎಲ್ಲಾ ಕೆಲಸದಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ ಎಂಬಂತೆ, ಇಂತಹ ಮಹತ್ವಪೂರ್ಣ ಯೋಜನೆಯಿಂದ ಕೆಟ್ಟ ಪ್ರಯೋಜನ ಪಡೆಯುತ್ತಿರುವ, ಪಡೆಯಲು ಹೊರಟಿರುವವರಿಗೆ, ಏನು ಹೇಳಲಾಗದ ತೊಳಲಾಟ..
ಯಾರದೋ ತಪ್ಪಿಗೆ ಮುಂದೊಂದು ದಿನ ಬೆಲೆ ತೆರುವ ಸಂದರ್ಭ ಬರಬಹುದು. ನಾರಿಯರನ್ನು ಪೂಜಿಸುವ ದೇಶದಲ್ಲಿ ನಾರಿಯರಿಗೆ ಕೆಲವರಿಂದ ಅಪಮಾನ ಉಂಟಾಗಿ ಇಡೀ ನಾರಿ ಕುಲವೇ ಚಿಂತಾಕ್ರಾಂತ ರಾಗುವ ಪರಿಸ್ಥಿತಿ ಬರದಿರಲಿ. ಅಂತಹ ದುಷ್ಕೃತ್ಯ ಮಾಡುವವರನ್ನು ತಡೆಯದಿದ್ದರೆ ಮುಂದೆ ಬೆಲೆ ತರುವುದು ಖಚಿತ.
- ಚಿನ್ಮಯ್ .ಸ. ಹೆಗಡೆ
B.A.1st year
👍
ಪ್ರತ್ಯುತ್ತರಅಳಿಸಿ