ಭ್ರಷ್ಟ ಜಗತ್ತು...

    ವಸುದೈವ ಕುಟುಂಬಕಂ, ಸರ್ವೇಜನ ಸುಖಿನೋಭವಂತು ಎಂಬ ನಾಣುಡಿಯನ್ನು ನೀಡಿದ ದೇಶ ನಮ್ಮ ಭಾರತ.ಎಲ್ಲರೂ ಒಂದೇ  ಎನ್ನುವ ದೇಶದಲ್ಲಿ ಅನಾದಿ ಕಾಲದಿಂದಲೂ ಬೆಂಬಿಡದೆ ಕಾಡುತ್ತ ಬಂದ ಒಂದು ದೊಡ್ಡ ರೋಗ ಅಂದರೆ ಅದು ಭ್ರಷ್ಟಾಚಾರ. ಭ್ರಷ್ಟಾಚಾರದ ಮೂಲ ಸ್ವಾರ್ಥ, ಸೃಜನಪಕ್ಷಪಾತ, ದೇಶಪ್ರೇಮದ ಕೊರತೆ ,ಅವಶ್ಯಕತೆಗಿಂತ ಮೀರಿದ ಆಸೆಬುರುಕುತನ ಮುಖ್ಯವಾಗಿ ಬದುಕಿನ ಮೌಲ್ಯವಾದ ನೈತಿಕ ಶಿಕ್ಷಣದ ಕೊರತೆಯಾಗಿದೆ. ಪ್ರಜಾಪ್ರಭುತ್ವ ಅಥವಾ ಸರ್ವಾಧಿಕಾರಿಯ ಅಧ್ಯಕ್ಷ ರಾಷ್ಟ್ರ ಗಳಲ್ಲಿ ಅವಿಭಕ್ತ ಕುಟುಂಬ ಮಾಯವಾಗಿ ವಿಭಕ್ತಿ ಕುಟುಂಬಗಳು ಸೃಷ್ಟಿಯಾಗಿ ನಾನು,ನನ್ನದು ಎಂಬ ಸ್ವಾರ್ಥದಿಂದ ಕ್ಷಣಿಕ ಸುಖಕ್ಕಾಗಿ ಮೋಜು ಮಸ್ತಿಗಾಗಿ ದುಡಿಯದೆ ಅನ್ಯಮಾರ್ಗದಲ್ಲಿ ಸಂಪಾದಿಸುವ ವ್ಯವಸ್ತೆಯೇ ಭ್ರಷ್ಟಾಚಾರ..

ಇದು ಸಮಾಜದ ಒಂದು ಭಾಗವಾಗಿ ಬಿಟ್ಟಿದೆ. ನಾವೆಲ್ಲಾ ಸಾಮಾನ್ಯವಾಗಿ ಇತ್ತೀಚಿನ ಸುದ್ದಿಗಳಲ್ಲಿ ನೋಡುತ್ತಾ ಕೇಳುತ್ತಾ ಇದ್ದೇವೆ. ಒಂದು ಮಗು ಹುಟ್ಟಿದಾಗಿನಿಂದ ಸಾಯುವವರೆಗೂ ಲಂಚಕೊಡಬೇಕು. ಎಲ್ಲಿ ನೋಡಿದರೂ ಭ್ರಷ್ಟಾಚಾರ..

ಇತ್ತೀಚೆಗೆ ನಡೆದ PSI ನೇಮಕಾತಿ ಪರೀಕ್ಷೆಯಲ್ಲಾದ ಹಗರಣ.ಇಲ್ಲಿ ನಾನು ಯಾರೋ ಒಬ್ಬರನ್ನು ದೂಷಿಸುತ್ತಿಲ್ಲ ಆದರೆ ಒಟ್ಟಾರೆ ನಮ್ಮ ಜನರ ಮನಸ್ಥಿತಿ ಹದಗೆಟ್ಟಿದೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ಬಯಸುತ್ತಿದ್ದೇನೆ. ಏಕೆಂದರೆ ಈ ಹಗರಣದಲ್ಲಿ ವಿದ್ಯಾರ್ಥಿಗಳಿದ್ದಾರೆ, ಅವರ ತಂದೆ - ತಾಯಿಗಳಿದ್ದಾರೆ, ಶಿಕ್ಷಕರಿದ್ದಾರೆ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿದ್ದಾರೆ,ನಮ್ಮನ್ನಾಳುವ ರಾಜಕಾರಣಿಗಳಿದ್ದಾರೆ, ಸ್ವತಃ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಕೇವಲ ಒಂದು ಅವ್ಯವಹಾರ ನಡೆಸಲು ಅಪ್ರಮಾಣಿಕ ಕೆಲಸ ಮಾಡಲು  ಎಷ್ಟು ಕೈಗಳು  ಒಟ್ಟಿಗೆ ಸೇರಿವೆ ಎಂಬುದನ್ನ ನೋಡಿದಾಗ ನಮ್ಮ ಒಟ್ಟು ಸಮಾಜದ ನೈತಿಕ  ನೆಲಗಟ್ಟು ಎಷ್ಟು ಕೆಟ್ಟು ಹೋಗಿದೆ ಎಂಬುದರ ದರ್ಶನವಾಗುತ್ತದೆ.

              ಇಂದು ಕಷ್ಟ ಪಟ್ಟು ಓದೋರಿಗೆ ಯಾವ ಬೆಲೆಯು ಇಲ್ಲಾ...  ಲಂಚ ಕೊಟ್ಟರೆ ಸಾಕು  ಕೆಲಸ ಸಿಗುತ್ತದೆ. ಲಂಚ ಕೊಡಲಾಗದಿದ್ದವರು ತಮ್ಮ ಕನಸನ್ನು ಕನಸಾಗಿಯೇ ಉಳಿಸಿಕೊಳ್ಳುತ್ತಾರೆ.

 ಇದಕೆಲ್ಲಾ ಮುಖ್ಯ ಕಾರಣ ಅಧಿಕಾರಿಗಳ ಭ್ರಷ್ಟಾಚಾರ..

 ಭ್ರಷ್ಟಾಚಾರ ಇಂದು ನಿನ್ನೆಯದಲ್ಲ ಇದು ಹಿಂದಿನಿಂದ ಬಂದದ್ದಾಗಿದೆ. ಈ ದುಸ್ಥಿತಿಯನ್ನೂ ನೋಡಿಯೆ ಬಸವಣ್ಣನವರು ಹೀಗೆ ಹೇಳಿದ್ದಾರೆ ಅನಿಸುತ್ತದೆ.

 "ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ  

 ಧರೆ ಹತ್ತಿ ಉರಿದಡೆ ನಿಲಲುಬಾರದು. 

 ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ

ನಾರಿ ತನ್ನ ಮನೆಯಲ್ಲಿ ಕಳುವಡೆ

ತಾಯ ಮೊಲೆವಾಲು ನಂಜಾಗಿ ಕೊಲುವಡೆ

ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ" !

              ಇಡಿ ಒಂದು ವ್ಯವಸ್ಥೆಯೆ ನಂಜಾಗಿ ನಿಂತರೆ ಸಾಮಾನ್ಯ ಜನರ ಬದುಕು ನಡೆಯುವುದಾದರು ಹೇಗೆ ಅಷ್ಟಕ್ಕೂ ಇಂತಹ ಒಂದು ಅನೈತಿಕ, ಅಪ್ರಮಾಣಿಕತೆಯ ನಡೆ 

 ಇದೆ ಮೊದಲ ಬಾರಿಗೆ ನಮ್ಮರಾಜ್ಯದಲ್ಲಿ ನಡೆದದ್ದಲ್ಲ.  ದಶಕಗಳಿಂದ ಕಾಡುತ್ತಾ ಬಂದಿರುವ ಪಿಡುಗು ಇದು. ಈ ಪಿಡುಗಿಗೆ ಈಡಾಗಿ ಗೋರಿ ಸೇರಿದವರ ಸಂಖ್ಯೆ ಲೆಕ್ಕಕ್ಕಿಲ್ಲ.

 ಇಂದು ನಮ್ಮ ವ್ಯವಸ್ಥೆಯಲ್ಲಿ ನಡೆಯುತ್ತಿರುವುದು ಶಿಷ್ಟರಿಗೆ ಶಿಕ್ಷೆ, ದುಷ್ಟರಿಗೆ ರಕ್ಷಣೆ. ಎಷ್ಟು ದಿನ ಇದನ್ನೆಲ್ಲಾ ಸಹಿಸಿಕೊಂಡು ಹೋಗುವುದು? ಏಕೆಂದರೆ ಪ್ರತಿಯೊಂದು ನೇಮಕಾತಿ ಪರೀಕ್ಷೆ ನಡೆದಾಗ  ಅದೆಷ್ಟೋ ವಿದ್ಯಾರ್ಥಿಗಳು ಊಟ, ನಿದ್ದೆ, ಬಿಟ್ಟು ಓದಿರುತ್ತಾರೆ, ಏಷ್ಟೋ ತಂದೆ- ತಾಯಿಯಂದಿರು ತಮ್ಮ ಮಗ/ಳು ಒಳ್ಳೆ ಹುದ್ದೆ ಪಡೆದು ಬದುಕಿನ ಭವನೆ ನೀಗಿಸುತ್ತಾರೆ ಎಂಬ ಕನಸನ್ನು ಹೊತ್ತು ದಿನ ದೂಡುತ್ತಿರುತ್ತಾರೆ.ಇಂತಹ ಸಾವಿರಾರು ತಂದೆ-ತಾಯಿಯಂದಿರ ಕನುಸುಗಳಿಗೆ ಕೊಳ್ಳಿ ಇಡುತ್ತದೆ ಈ ಭ್ರಷ್ಟಾಚಾರ..

 ಇಲ್ಲಿ ಯಾರನ್ನೂ ತಿದ್ದುವುದು ಎಂಬುದೇ ಸಮಸ್ಯೆಯಾಗಿದೆ. ಕೆಲವು ವಾಮಮಾರ್ಗ ತುಳಿಯುವ ವಿಧ್ಯಾರ್ಥಿಗಳಿಗೆ ಅವರ ಪಾಲಕರೆ ಆಸರೆ ಆಗಿರುತ್ತಾರೆ ಮತ್ತೆ ಅವರ ಜೊತೆ ಅಧಿಕಾರಿಗಳ ದುರಾಡಳಿತ. ನೇಮಕಾತಿಯಲ್ಲಿನ ಅಕ್ರಮ ಎಂಬುದು ವಿಷಚಕ್ರವಾಗಿ ರೂಪಗೊಂಡಿದೆ.  

                ಬದಲಾದ ಕಾಲದಲ್ಲಿ ಎಲ್ಲವೂ ಬದಲಾದಂತೆ ಬದಲಾಗುತ್ತಾ ಹೋಗ್ಬೇಕು.ಆದರೆ ಏನೇ ಬದಲಾದರೂ ಈ ಭ್ರಷ್ಟಾಚಾರ ಅನ್ನುವ  ಪೇಡಂ ಭೂತ ಬದಲಾಗುತ್ತಿಲ್ಲ. ವಿಷದ ಹಾವು ವಿಷದ ಹಾವಿಗೆ ಮರಿ ನೀಡುವಂತೆ ಭ್ರಷ್ಟರು  ಭ್ರಷ್ಟರನ್ನು ಪೋಷಿಸುತ್ತಾ ಸಾಗುತ್ತಿದ್ದರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನುಸರಿಯಾಗಿ ನಿಭಾಯಿಸಲು ಲಂಚ ಕೇಳುತ್ತಾರೆ . ಇವರ ದುರಾಸೆಯ ದಾಹವನ್ನು ತೀರಿಸಲು ಇಂತದ್ದೆ ದುರಾಸೆ ಹೊಂದಿರುವ ವ್ಯಕ್ತಿಗಳು ತುಪ್ಪ ಸುರಿಯುತ್ತಾರೆ. ಅಲ್ಲಿಗೆ ಭ್ರಷ್ಟಾಚಾರ ಜ್ವಾಲೆ ಧಗಧಗನೆ ವಿಜೃಂಭಿಸುತ್ತಿದೆ. ಭ್ರಷ್ಟಾಚಾರ ಸಮಾಜದಲ್ಲಿ  ಒಂದು ಭಾಗವಾಗಿದೆ ಎಂದು ಒಪ್ಪಿಕೊಳ್ಳುವ ಪರಿಸ್ಥಿತಿ ನಮ್ಮದಾಗಿದೆ ಎನ್ನುವುದೇ ಒಂದು ದುರಂತ....


 " ಲಂಚವಿಲ್ಲದ ಪ್ರಪಂಚ...

                   ನೆನಸಿಕೊಳ್ಳಲಾಗುತ್ತಿಲ್ಲ ಕೊಂಚ"

                          🙏🙏..

                        

                

ಅನುಷಾ M  ಹೊಸಕೊಪ್ಪ

BA 1st

✍️✍️

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು

ನೋಡ ಬಾ ನಮ್ಮೂರ ಸಸ್ಯಲೋಕ "

ಪರಿಸರದ ಮೇಲೆ ಮಾನವನ ದೌರ್ಜನ್ಯ