ಸಮಾಜದಲ್ಲಿ ಧಾರ್ಮಿಕತೆ ಅರಿವು ಕ್ಷೀಣಿಸುತ್ತಿದೆಯೇ? 

      

  ಪ್ರಾಕ್ಕ್ರತಿಕವಾಗಿ ಮನುಷ್ಯ ಜನ್ಮತಾಳಿದ,ಸಮಾಜ ನಿರ್ಮಿಸಿಕೊಂಡ ಅದರ ಚೌಕಟ್ಟಿನಲ್ಲಿ ಧರ್ಮ ಆಚರಣೆ ಮಾಡಿದ. ಸಮಾಜದಲ್ಲಿ ಧರ್ಮ ಎಂಬ ವಿಚಾರ ಬೆಳೆದ ಮೇಲೆ ಪರಸ್ಪರ ಒಬ್ಬನ್ನೊಬ್ಬರು ಮೇಲು - ಕೀಳು  ಎಂಬ ಭಾವನೆಯಿಂದ ನೋಡಲಾರಂಭಿಸಿದ್ದು ವಿಷಾದನೀಯ..  ಹೀಗೆ ಹೇಳಿದಾಗ ಎಲ್ಲ ಒಗ್ಗಟ್ಟಿನಿಂದ ಇದ್ದೇವೆ ಎಂಬ ಮಾತುಗಳು ಬರಬಹುದು. ಆದರೆ ಒಳ ಮನಸ್ಸಿನ ಯೋಚನೆಗೆ ಏನು ಹೇಳಲಾಗದ ತೊಳಲಾಟ. 

   

  " ಧರ್ಮೋ ರಕ್ಷತಿ ರಕ್ಷಿತಃ " ಎಂದು ಸಂಸ್ಕೃತದಲ್ಲಿ ಹೇಳಲಾಗಿದೆ. ಅಂದರೆ, ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಅರ್ಥವಿದೆ. 

       ಈ ಮಾತು ತ್ರೇತಾಯುಗ ಮತ್ತು ದ್ವಾಪರಯುಗಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಕಲಿಯುಗಕ್ಕೂ ಅನ್ವಯವಾಗುವಂಥ ಸಂಗತಿ. ಅನ್ವಯವಾಗಿಲ್ಲ ಎಂಬುದು ಇದರರ್ಥವಲ್ಲ. ಕಲಿಯುಗದ ಆರಂಭದಲ್ಲಿ ಇದರ ಅನ್ವಯವಾಗುತ್ತಿತ್ತು. ಸಮಯ ನಿಲ್ಲದು ಎಂಬಂತೆ, ಸಮಯ ಕಳೆದಂತೆ ಇದರ ಮಹತ್ವವೂ ಕಡಿಮೆ ಆಗುತ್ತ ಬರುತ್ತಿದೆ. 

    ಇದನ್ನು ಓದಿದವರು ಇದು ಕಲಿಯುಗ ಅಲ್ಲವೇ?? ಅಂದರೆ ಕಲಿಯುವ ಯುಗ ಎಂದು ಹೇಳುತ್ತಾರೆ.    ಆದರೆ ಮೊದಲು ತಿಳಿದ ವಿಷಯವನ್ನು ಮರೆಯುವದು  ಸರಿಯಲ್ಲ. 

                             ಧಾರ್ಮಿಕತೆ ಅರಿವು ಕ್ಷೀಣಿಸುತ್ತಿದೆ ಎಂಬುದನ್ನು ಪುಷ್ಠಿಕರಿಸುವ ಘಟನೆಗಳಿವೆ. ಪ್ರಜ್ಞಾವಂತ ವ್ಯಕ್ತಿಗಳು ಧರ್ಮಾಚರಣೆ ಏಕೆ? ಅದರ ಅನುಕರಣೆ ಏಕೆ ಆಗಬೇಕು? ಎಂಬ ಅಪಾಯಕಾರಿ ಆಲೋಚನೆಗಳು ಭರದಿಂದ ಹರಿಯುತ್ತಿದೆ. ಇದರ ಬಗ್ಗೆ ಪ್ರಖ್ಯಾತ ಟಿ. ವಿ. ಚಾನೆಲ್ಗಳಲ್ಲೂ ಬಂದಿದೆ. ಇಂತಹ ಘಟನೆಗಳಘಟನೆಗಳನ್ನು ವಿಸ್ತರಿಸುತ್ತ ಸಾಗಿದರೆ, ಓದುಗರು ಇದನ್ನು ಧಾರವಾಹಿ ಅಂದು ಕೊಳ್ಳುತ್ತಾರೆ. 

                   ಇದೆಲ್ಲ ಘಟನೆಗಳು ನಡೆಯುತ್ತಿರುವುದು, ವಿದೇಶಿ ಸಂಸ್ಕೃತಿ, ಆಚರಣೆಗಳಿಗೆ ಮನಸೋತ ಜನರಿಂದ. 

        ಆದರೆ ಭಾರತೀಯ ಧರ್ಮ ಎಲ್ಲ ದೇಶಗಳಿಗೂ ಮಾದರಿ.  ಭಾರತವನ್ನು  ವಿಶ್ವಗುರು ಎಂದು ಕರೆಯುತ್ತಾರೆ. ಭಾರತೀಯರು ವಿದೇಶಿ ಆಚರಣೆ, ಸಂಸ್ಕೃತಿ ಯನ್ನು ಆಚರಿಸುತ್ತ ಬರುತ್ತಿರುವುದು ವಿಶಾದನೀಯ. 

                        ಜಗತ್ತಿಗೆ ಭಾರತೀಯ ಸಂಸ್ಕೃತಿ, ಆಚಾರಣೆಗಳ  ಪ್ರಾಮುಖ್ಯತೆಯನ್ನು ತಿಳಿಸಿದ  ಮಹಾನ್ ವ್ಯಕ್ತಿ  ವಿವೇಕಾನಂದರ ತವರೂರು ಭಾರತ.  ಮಹಾನ್ ವ್ಯಕ್ತಿಗಳ ತವರೂರಲ್ಲಿ ಇಂಥ ಆಘಾತಕಾರಿ ಬದಲಾವಣೆಯಿಂದ ನಮ್ಮ ದೇಶದ ಧರ್ಮ ಪರರ ಹಸ್ತ ಸೇರದಿರಲಿ. 


       ಸಮಾಜದಲ್ಲಿ ಧಾರ್ಮಿಕತೆಯ ನೆಲೆ 

       ಸಮುದ್ರದಲ್ಲಿ ಓಲಾಡುವ ಅಲೆ 

        ಕಡಲ ಒಡಲಲ್ಲಿ ಸಿಗುವಂಥ ಸೆಲೆ 

          ಜನ ಮನದಲ್ಲಿ ಅರಿವು ಮೂಡಿದಾಗಲೇ ಧರ್ಮಕ್ಕೆ ಎಲ್ಲಿಲ್ಲದ ಬೆಲೆ.

     

ಚಿನ್ಮಯ್ ಹೆಗಡೆ

B. A ಪ್ರಥಮ ವರ್ಷ

ಶಿರಸಿ, ಉ. ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು

ನೋಡ ಬಾ ನಮ್ಮೂರ ಸಸ್ಯಲೋಕ "

ಪರಿಸರದ ಮೇಲೆ ಮಾನವನ ದೌರ್ಜನ್ಯ