"ಅಪ್ಪಾಜಿ ಎಂಬ ಅಪರೂಪದ ವಜ್ರ"

      ಅಪ್ಪಾಜಿ ಅಂದರೆ ಒಂದು ಶಕ್ತಿ,ಸ್ಫೂರ್ತಿ.. ಅಪ್ಪಾಜಿ ಅಂದರೆ ಧೈರ್ಯ,ಆಕಾಶ,ಆ ಮನೆಯ ಕಾಳಜಿ,ಸಂಸಾರದ ಜವಾಬ್ದಾರಿಯನ್ನು ಹೊತ್ತ ಯಜಮಾನ. ತನಗಾಗಿ ಏನನ್ನು ಬಯಸದ ಜೀವ, ಎಲ್ಲವನ್ನು ತನ್ನವರಿಗಾಗಿ ತ್ಯಾಗ ಮಾಡುವ ತ್ಯಾಗಮಯಿಗಾರ. ಪ್ರೀತ-ಪ್ರೇಮ, ಸುಖ-ದುಃಖ, ಸಂತೋಷ,ಸ್ನೇಹವನ್ನು ಹಂಚುವ ಸಾಹುಕಾರ.

 ಜೀವನದಲ್ಲಿ ಕಷ್ಟಗಳು ಬಂದಾಗ ಹೆದರದೆ ಸಮಾಧಾನದಿಂದ ಕಷ್ಟವನ್ನು ಎದುರಿಸಿದ ಸರದಾರ ಅಪ್ಪಾಜಿ...

 ಮೊದಲಿನಿಂದಲೂ ಅಪ್ಪಾಜಿ ಎಂದರೆ ಏನೋ ಭಯ , ಅವರೊಂದಿಗೆ ಮಾತು ಕಡಿಮೆ ಅವಶ್ಯಕತೆಗಿಂತ ಮೀರಿದ ಮಾತಿಲ್ಲ ಏನೇ ಕೇಳಬೇಕಾದರು ಅಮ್ಮನ ಮಧ್ಯಸ್ಥಿಕೆಯಲ್ಲಿಯೆ. ಚಿಕ್ಕವರಿದ್ದಾಗಲೇಲ್ಲಾ ರಾತ್ರಿ ನಾವು ಮಲಗಿದ್ದಾಗ ಬರುತ್ತಿದ್ದರು,ನಾವು ಶಾಲೆಗೆ ಹೋದ ಮೇಲೆ ಏಳುತ್ತಿದ್ದರು. ನಮ್ಮ ಒಡನಾಟ ದೊಡಪ್ಪಾಜಿಯ ಜೊತೆ ಇದ್ದಷ್ಟು ಅಪ್ಪಾಜಿಯ ಜೊತೆ ಇರುತ್ತಿರಲಿಲ್ಲ.ಆದರೂ ರಾತ್ರಿ ಏನಾದ್ರೂ ಊಟ ಮಾಡದೆ ಮಲಗಿದ್ರೆ ಅದೆಷ್ಟೇ ಹೊತ್ತಾದ್ರೂ ಎಬ್ಬಿಸಿ ಊಟ ಮಾಡಿಸುತ್ತಿದ್ದರು. ಏನಾದರೂ ಹೊರಗಿನಿಂದ ತಿಂಡಿ ತಂದಿದ್ದರೆ ಬೆಳಗಿನವರಗೂ ಕಾಯದೆ ಮಲಗಿದ ನಮ್ಮನ್ನು ಎಬ್ಬಿಸಿ ತಿನ್ನಿಸುತ್ತಿದ್ದ ನೆನಪು  ಇನ್ನು ಹಚ್ಚಹಸಿರು. ರಾತ್ರಿ ನಿದ್ದೆಯಲ್ಲಿ ತಿಂದ ನನಗೆ ಬೆಳಗ್ಗೆ ಎಚ್ಚರ ಆದಾಗ ಕನಸಲ್ಲಿ ತಿಂದಂತೆ ಆಗಿರುತ್ತಿತ್ತು.

 ಅಪ್ಪಾಜಿಗೆ ನಾವು  ಇಬ್ಬರು ಮಕ್ಕಳು ಇಬ್ಬರೂ ಅನ್ನೋದಕ್ಕಿಂತ ನಾವು ನಾಲ್ವರು. ನಮ್ಮದು ಅವಿಭಕ್ತ ಕುಟುಂಬ ದೊಡ್ಡಪ್ಪಾಜಿಗೆ ಇಬ್ಬರು ಗಂಡುಮಕ್ಕಳು ನಾವು ಇಬ್ಬರು ಹೆಣ್ಣುಮಕ್ಕಳು .ಇಬ್ಬರು ಅಪ್ಪಾಜಿಯರು ನಮಗೆ ಯಾವ ಭೇದ ಭಾವ ಮಾಡದೆ ನಾಲ್ವರು ಒಡಹುಟ್ಟಿದವರಂತೆ ನೋಡಿಕೊಂಡಿದ್ದಾರೆ. ಇದು ನಮ್ಮ ಮನೆಯ ವಿಶೇಷನೆ ಅನ್ನಬಹುದು.

                     ನಾವು ನಾಲ್ವರಲ್ಲಿ ನಾನೇ  ಹಠಮಾರಿ, ವಾದಮಾಡುವ ಗುಣ..  ಅಪ್ಪಾಜಿ ಜೊತೆ ಹೆಚ್ಚು ಬೈಸ್ಕೊಂಡವಳು ನಾನೇ ಹಾಗೆ ಅದರ ಎರಡರಷ್ಟು  ಪ್ರೀತಿ ಮಾಡಿದ್ದು ನನಗೆ.. ಏಕೆಂದರೆ  ನಮ್ಮನೇಲಿ ನಾನೆ ಚಿಕ್ಕೋಳು..

                     ನನಗೆ ಸ್ವಲ್ಪ ಕೋಪ ಜಾಸ್ತಿ ನನಗೆ ಏನಾದ್ರೂ ಅಂದ್ರೆ ಸಹಿಸಿಕೊಳ್ಳುತ್ತೇನೊ ಏನೋ ಯಾರಾದ್ರೂ ಅಪ್ಪಾಜಿಗೆ ಏನಾದ್ರೂ ಅಂದ್ರೆ ತುಂಬಾ ಕೋಪ ಬರುತಿತ್ತು.. ಎಷ್ಟೋ ಸಲ ಅವರಿಗೆ ಯಾರಾದ್ರೂ ಏನಾದರು ಹೇಳಿದರೆ ತಿರುಗಿಸಿ ಹೇಳಿ ಬಂದಿರೋದು ಇದೆ.. 

                ಒಳ್ಳೆಯವರಿಗೆ, ಪ್ರಾಮಾಣಿಕರಿಗೆ ವಿರೋಧಿಗಳು ತುಂಬಾ ಜನ ಇರುತ್ತಾರೆ , ಅವರ ಮೇಲೆ ಸುಳ್ಳು ಆಪಾದನೆಯ ಸುರಿಮಳೆ ಸುರಿಸುತ್ತಾರೆ. ಹಾಗೆಯೆ ತಮ್ಮದಲ್ಲದ ತಪ್ಪಿಗೆ ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ಪ್ರಾಯಶಃ ಅವರು ಈ ತರ ಮಾಡುವುದರಿಂದ ಇನ್ನು ಅಪ್ಪಾಜಿಯ  ಗೌರವ ಹೆಚ್ಚಾಗುತ್ತೆ ಹೊರತು ಕಡಿಮೆ ಆಗೋದಿಲ್ಲ. ನಮಗೆ ಕೆಟ್ಟದ್ದನ್ನ ಬಯಸೋರಿಗೆ ಒಳ್ಳೇದನ್ನ ಬಯಸೋ ಗುಣ ಅಪ್ಪಾಜಿಯದು. ಅವರು ನಮಗೆ ಹೇಳಿಕೊಟ್ಟಿರೋದು ಒಂದೆ ನಮ್ಮಿಂದ ಬೇರೆಯವರಿಗೆ ಸಹಾಯ ಮಾಡಲಿಕ್ಕಾಗಲಿಲ್ಲ ಅಂದ್ರೂ ಪರವಾಗಿಲ್ಲ ಆದರೆ ನಮ್ಮಿಂದ ಬೇರೆಯವರಿಗೆ ಯಾವ ತೊಂದರೆನು ಆಗಬಾರದು..

                ಈ ಉಸಿರು ಇರುವರೆಗೂ ಅಪ್ಪಾಜಿ ನಿಮ್ಮ ನೆನಪು ಹಸಿರು.. ನೀವು ಗಳಿಸಿದ ಹಣಕ್ಕಿಂತ  ನೀವು ಉಳಿಸಿಕೊಂಡಿರುವ ಹೆಸರು ದೊಡ್ಡದು.. ನಿವೇನು ದೊಡ್ಡ ಅಧಿಕಾರಿಯಲ್ಲ ಆದರೂ ನಿಮ್ಮ ಬಗ್ಗೆ ದೊಡ್ಡ ವ್ಯಕ್ತಿಗಳು ಗೌರವ ತೋರುವುದನ್ನು ಕಂಡಗಲೆಲ್ಲ.. ನಿಮ್ಮ ಮಗಳು ಅಂತಾ ಹೆಮ್ಮೆ ಪಡುವುದು ಸುಳಲ್ಲ..  ಇರುವುದರಲ್ಲೆ ಖುಷಿ ಪಡಿಸುವ ನಿಮ್ಮಗುಣ ಯಾರಿಗೂ ಇಲ್ಲ..

                ಅನ್ಯಾಯ,ಮೋಸ, ವಂಚನೆ,ಇಂದ ದೂರ ಇದ್ದು ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿರುವ ನಿಮ್ಮನ್ನ ತಂದೆಯಾಗಿ ಪಡೆಯಲು ನಿಜಕ್ಕೂ ನಾನು ಪುಣ್ಯ ಮಾಡಿದ್ದೆ.

                ನಿಮ್ಮ ಆಸೆಯಂತೆ ಚೆನ್ನಾಗಿ ಓದಿ, ನನ್ನ ಗುರಿ ತಲುಪಿ ಸ್ವಾವಲಂಬಿ ಆಗುತ್ತೇನೆ ಹಾಗೆ ಕೊನೆಯ ತನಕ ನಿಮ್ಮ ಗೌರವಕ್ಕೆ ಯಾವ ತರಹದ  ನನ್ನಿಂದ ದಕ್ಕೆ ಬಾರದ ಹಾಗೆ ಒಳ್ಳೆಯ ಮಗಳಾಗಿ ಇರುತ್ತೇನೆ.  

  ಯಾರೇ ಬಂದು ಸಹಾಯ ಕೇಳಿದರು ತಮ್ಮ ಕೈಯಲ್ಲಿ ಆದಷ್ಟೂ ಸಹಾಯ ಮಾಡುವ ಗುಣ ನಿಮ್ಮದು.. ಚಿಕ್ಕವರಿಂದ ಹಿಡಿದು ಇಲ್ಲಿಯ ತನಕ ಯಾವದರಲ್ಲೂ ಕಡಿಮೆ ಮಾಡದ ನಿಮಗೆ ನನ್ನ ಕಡೆಯಿಂದ...

    "Happy fathers day"...ಅಪ್ಪಾಜಿ.😍

                🙏🙏


ಅನುಷಾ M ಹೊಸಕೊಪ್ಪ

BA1st

✍️✍️

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು

ನೋಡ ಬಾ ನಮ್ಮೂರ ಸಸ್ಯಲೋಕ "

ಪರಿಸರದ ಮೇಲೆ ಮಾನವನ ದೌರ್ಜನ್ಯ