ಸಮಯ ಪ್ರಜ್ಞೆ

"ನಾಳೆ ಮಾಡುವುದನ್ನು ಇಂದು ಮಾಡು, ಇಂದು  ಮಾಡುವುದನ್ನು ಈಗಲೇ ಮಾಡು" ಎಂದು ದಾಸರು ತಮ್ಮ ನುಡಿಗಳ ಮೂಲಕ ಸಮಯ ಇರುವಾಗಲೇ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸಿಬೇಕು ಎಂದು ಹೇಳಿದ್ದಾರೆ. ಯಾವ ವ್ಯಕ್ತಿಗೆ ಸಮಯ ಪ್ರಜ್ಞೆ ಇರುತ್ತೋ ಆ ವ್ಯಕ್ತಿ ತನ್ನ ಗುರಿಯನ್ನು ಮುಟ್ಟವುದರಲ್ಲಿ ಬೇರೆ ಮಾತಿಲ್ಲ. ಅದೇ ಯಾವ ವ್ಯಕ್ತಿಗೆ ಸಮಯದ ಬೆಲೆ ಹಾಗೂ ಪರಿಜ್ಞಾನ ಇರುವುದಿಲ್ಲವೋ ಆ ವ್ಯಕ್ತಿ ಮುಂದೊಂದು ದಿನ ಕಣ್ಣೀರು ಹಾಕುತ್ತಾನೆ. ಅವನು ಆ ಸಮಯದ ಸದುಪಯೋಗ ಸರಿಯಾಗಿ ಪಡೆದುಕೊಂಡರೆ ತನಗೆ ಈ ಗತಿ ಬರುತ್ತಿರಲ್ಲಿಲ್ಲವೆಂದು ಮನದಲ್ಲಿ ಕೊರಗುತ್ತಾನೆ. 

                        ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಕಾಯಕ, ಇವೆಲ್ಲವೂಗಳಿಂದ ಕೂಡಿದಾಗ ಮಾತ್ರ ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ. ಸಮಯವನ್ನು ಸರಿಯಾಗಿ ಬಳಕೆ ಮಾಡುವುದು ಚಿತ್ತಾವಧಾನ, ಚಾಕಚಕ್ಯತೆ, ಪ್ರಸಂಗವಧಾನ ಎಂಬ ಅರ್ಥಗಳು ಕೊಡುತ್ತದೆ. ಇದನ್ನು ಬೆಳೆಸಿಕೊಳ್ಳಲು ಹೇಳುವ ನಾವು ನೀವುಗಳು ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಕಾರ್ಯಗಳನ್ನು ಚಾಚು ತಪ್ಪದೆ ಮಾಡಬೇಕು. ವಿದ್ಯಾರ್ಥಿಗಳು ಪಾಠವನ್ನು ಗಮನ ಹರಿಸಿ ಕೇಳಬೇಕು ಹಾಗೆ ನಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನಾವು ಬೇರೆ ಕಡೆಗೆ ಲಕ್ಷ್ಯ ವಹಿಸಬಾರದು, ಆ ಸಮಯ ವ್ಯರ್ಥವಾಗಿ ಹೋಗುತ್ತದೆ. 

                  ಯಾವಾಗಲೂ ಒಳ್ಳೆಯ ಕಾರ್ಯ ಮಾಡಲು ಹೆಚ್ಚು ಸಮಯ ಅವಕಾಶ ತೆಗೆದುಕೊಳ್ಳಬಾರದು ಬಹು ಬೇಗ ಮಾಡಿ ಮುಗಿಸಿಬೇಕು. ನಮ್ಮ ಬಳಿ ಒಂದು ವಿಶೇಷವಾದ ಶಕ್ತಿ ಎಂದರೆ ಮೆದುಳು ಇದೆ. ನಾವು ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು. ಈ ದಿನ ನಾನೇನನ್ನು ಕೈಗೊಳ್ಳಬೇಕೆಂದುಕೊಂಡಿರುವೆನೋ ಅದು ಹಿಂದಿನ ದಿನ ಮಲಗುವ ಮುಂಚೆಯೇ ನಿರ್ಧರಿಸಬೇಕು. ನಮ್ಮ ಜೀವನದಲ್ಲಿ ನಾವು ಕಲಿಯುವ ತರಗತಿಗಳು ಮತ್ತೆಂದೂ ಹಿಂದಿರುಗುವುದಿಲ್ಲ. ಅದು 10 ನೇ ತರಗತಿ ಆಗಿರಬಹುದು, ಇಲ್ಲ 12 ನೇ ತರಗತಿ ಆಗಿರಬಹುದು. ಅದನ್ನು ಮನಸಾರೆಯಾಗಿ ಓದಿ ಆ ತರಗತಿಯಲ್ಲಿಯೇ ಸಾಧ್ಯವಾದಷ್ಟು ಜ್ಞಾನವನ್ನು ಪಡೆದುಕೊಂಡು ಗರಿಷ್ಠ ಮಟ್ಟ ಮುಟ್ಟಬೇಕು. ಯಾಕೆಂದರೆ ಅದು ಮತ್ತೊಮ್ಮೆ ನಮ್ಮ ಜೀವನದಲ್ಲಿ ಮರಳಿ ಬರಲಾರದು. ಸಮಯ ಕಡಿಮೆ ಇದ್ದಾಗಲೂ ನಮ್ಮ ಚಾತುರ್ಯತೆಯಿಂದ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. 

               ಸಮಯವನ್ನು ಹಾಳು ಮಾಡುವದು ಹಣವನ್ನು ಹಾಳು ಮಾಡುವುದಕ್ಕಿಂತಲೂ ಅಪಾಯಕಾರಿ, ಹಣ ಕಳೆದುಕೊಂಡರೆ ಮುಂದೊಂದು ದಿನ ಸಂಪಾದಿಸಬಹುದು. ಆದರೆ ಕೆಲವೊಬ್ಬರು ಮನವೆಂಬ ಮರ್ಕಟನು ಕುಣಿಸಿದಂತೆ ಕುಣಿದು ತಮ್ಮ ಸಮಯವನ್ನು ವ್ಯಯ ಮಾಡುತ್ತಾರೆ. ನಾನಾ ಆಸೆಗಳಿಗೆ, ಚಟಗಳಿಗೆ, ಬಲಿಪಶುವಾಗಿ ಮಾರಿ ಹೋಗುತ್ತಾರೆ. ಮುಂದೊಂದು ದಿನ ತನ್ನ ಗೆಳೆಯರು ಒಳ್ಳೆಯ ಹುದ್ದೆಯಲ್ಲಿದ್ದಾಗ ಆಕಸ್ಮಿಕವಾಗಿ ಭೇಟಿ ಆದಾಗ ಅವರಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆಗ ಕಳೆದು ಹೋದ ಸಮಯವನ್ನು ನೆನೆಯುತ್ತ ನಾನು ಅವನಂತೆ ಸಮಯಕ್ಕೆ ಸರಿಯಾಗಿ ಓದಿನತ್ತ ಆಸಕ್ತಿ ತೋರಿಸಿದ್ದರೇ ಈಗ ನಾನು ಸಹ ಒಂದು ಒಳ್ಳೆಯ ಹುದ್ದೆಯಲ್ಲಿ ಇರಬಹುದಿತ್ತು ಎಂದು ಮನಸ್ಸಿನಲ್ಲೇ ನೊಂದುಕೊಳ್ಳುತ್ತಾನೆ. 

                 ಸಮಯ ಇದ್ದಾಗಲೇ ನಾವು, ನೀವುಗಳು, ತಂದೆ-ತಾಯಿ ಆಗಿರಬಹುದು, ಹೆಂಡತಿ-ಮಕ್ಕಳಾಗಿರಬಹುದು. ಇಲ್ಲ ಬಂಧು-ಬಳಗವೇ ಆಗಿರಬಹುದು ಅವರು ನಮ್ಮಿಂದ ಸ್ವಲ್ಪ ಸಮಯ ಪ್ರೀತಿಯ ಎರಡು ಮಾತು, ಅಕ್ಕರೆಯ ನೋಟ, ಬಯಸುವುದನ್ನು ನಾವು ಅರಿತುಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸುನ್ನು ಕಾಣಲು ಸಾಧ್ಯ. ಮಕ್ಕಳು ಚಿಕ್ಕವರಿದ್ದಾಗ ತನ್ನ ತಂದೆ ತಾಯಿಯರ ಜೊತೆ ಸಮಯವನ್ನು ಕಳೆಯಲು ಹಂಬಲಿಸುತ್ತಾರೆ. ಆಗ ಕೆಲಸದ ಒತ್ತಡದಲ್ಲಿ ತಂದೆ ತಾಯಿಯರಿಗೆ ಮಕ್ಕಳಿಗೆ ಸಮಯ ಕೊಡಲು ಆಗುವುದಿಲ್ಲ. ಅದೇ ಮುಂದೊಂದು ದಿನ ತಂದೆ ತಾಯಿಯರಿಗೆ ವಯಸ್ಸಾದಾಗ ಮಕ್ಕಳೊಂದಿಗೆ ಸಮಯ ಕಳೆಯಲು ಇಚ್ಚಿಸುತ್ತಾರೆ, ಆಗ ಅದೇ ಮಕ್ಕಳಿಗೆ ತಂದೆ ತಾಯಿಯರಿಗೆ ಸಮಯ ಕೊಡಲು ಆಗುವುದಿಲ್ಲ. 

                  ಒಟ್ಟಿನ್ನಲ್ಲಿ ಹೇಳುವುದಾದರೆ ಗಡಿಯಾರ ದಿನನಿತ್ಯ ತಿರುಗುವುದಂತೂ ನಿಜ, ಹೋದ ಸಮಯ ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಆದ್ದರಿಂದ ಸಮಯ ಇದ್ದಾಗಲೇ ನಾವು ಸಮಯ ಪ್ರಜ್ಞೆಯನ್ನು ಅರಿತುಕೊಂಡು ನಡೆದರೆ ನಮ್ಮ ಗುರಿ ಮುಟ್ಟಲು ಸಾಧ್ಯ. ಇಲ್ಲವಾದರೆ ಬಸ್ ಹೋದ ಮೇಲೆ ಟಿಕೇಟ್ ಕೇಳಿದರೆ ಪ್ರಯೋಜನವಿಲ್ಲ. ಕಳೆದು ಹೋದ ಸಮಯ ಮತ್ತೆ ಸಿಗಲ್ಲ. ಆದ್ದರಿಂದ ಸಮಯ ಸಿಕ್ಕಾಗ ಅದರ ಸದುಪಯೋಗ ಮಾಡಿಕೊಳ್ಳಬೇಕು. 


ಮೇಘನಾ ಭೋವಿ

B A I

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ