ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಡ್ರಗ್ ವಿರೋಧಿ ಕಾರ್ಯಕ್ರಮ”
ಶಿರಸಿ: ಕಾಲೇಜಿನ ಮೊಟೆನ್ಸರ ಹಾಲ್ ನಲ್ಲಿ ಐಕ್ಯೂ ಎಸ್ ಸಿ ಸಂಯೋಜಿತ,ಮಾರುಕಟ್ಟೆ ಪೋಲೀಸ್ ಠಾಣೆ ಹಾಗು ಎನ್.ಸಿ.ಸಿ ವಿಭಾಗದ ವತಿಯಿಂದ ರಾಷ್ಟ್ರೀಯ ಡ್ರಗ್ ವಿರೋಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಡ್ರಗ್ ಸೇವನೆ ಅತ್ಯಂತ ಅಪಾಯಕಾರಿಯಾಗಿದ್ದು,ಸಮಾಜದ ಶಾಂತಿ, ಸುವ್ಯವಸ್ಥೆ ಹಾಳುಮಾಡುತ್ತದೆ ಹಾಗು ಆರೋಗ್ಯ ಹದಗೆಡಿಸುತ್ತದೆ.
ಗಾಂಜಾ ಸೇವನೆ ಕಂಡುಬಂದಲ್ಲಿ ಅಥವಾ ಅನುಮಾನಾಸ್ಪದ ಘಟನೆ ನಡೆದಲ್ಲಿ ' ಎನ್ ಡಿ ಪಿ ಎಸ್ ' ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ವರ್ಷ ೮ ಮಂದಿಯನ್ನು ನಿನ್ನೆ ಬಂಧಿಸಿದ್ದು,ಅವರಲ್ಲಿ ೬ ಮಂದಿಗೆ ಪಾಸಿಟಿವ್ ಬಂದಿರುವದಾಗಿ ಪಿ.ಎಸ್.ಆಯ್.ಭೀಮಾಶಂಕರ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅಶೋಕ್ ನಾಯಕ್ ಮಾತನಾಡಿ, ೧೮೩೫ ರಲ್ಲಿ ಎನ್ ಡಿ ಪಿ ಕಾಯ್ದೆಯನ್ನು ರಾಜೀವ ಗಾಂಧಿ ಅವರು ಜಾರಿ ತಂದಿದ್ದು,
ಇದು ಮಾದಕ ವಸ್ತು ಮಾರಾಟ ,ಸಾಗಾಟ ಮತ್ತು ಬೆಳೆಯುವದನ್ನು ವಿರೋಧಿಸುತ್ತದೆ. ಮತ್ತು ಶೇನ್ ಕೋರ್ಟ್ ನಲ್ಲಿ ಪ್ರಕರಣ ಸಾಬೀತಾದರೆ ೧೦ ಲಕ್ಷ ದಂಡ ಮತ್ತು ೧ ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಲಾಗುವದು.
ಅಬಕಾರಿ ಇಲಾಖೆ ಮತ್ತು ಗಡಿ ಪ್ರದೇಶಗಳಲ್ಲಿ ಬಿ ಎಸ್ ಎಫ್ ,ಆರ್ಮಿ ಅವರು ಕೂಡ ಮಾದಕ ವಸ್ತು ಪ್ರಕರಣ ದಾಖಲಿಸಬಹುದು. ಎಂದು ಮಾಹಿತಿಯನ್ನು ಹಂಚಿಕೊಂಡರು.
ಪ್ರಾಚಾರ್ಯ ಟಿ ಎಸ್ ಹಳೇಮನೆ ಅವರು ಇವತ್ತಿನ ಯುವ ಜನಾಂಗ ಗುಟ್ಕ, ಡ್ರಗ್ಸ, ಮುಂತಾದ ಮಾದಕ ವಸ್ತುಗಳಿಗೆ ಮಾರಿಹೋಗುತ್ತಿದ್ದಾರೆ. ಎಂದು ಸ್ವಾಗತಿಸುವ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ "ಸುನೀಲ್ ಆಚಾರ್ಯ", "ಮಾರುತಿ ನಾಯಕ್",ಹಾಗು ಐಕ್ಯು ಎಸಿ ಸಂಚಾಲಕರಾದ ಡಾ. ಎಸ್ ಎಸ್ ಭಟ್ ಉಪಸ್ಥಿತರಿದ್ದರು.
ಪ್ರೊ.ರಾಘವೇಂದ್ರ ಜಾಜಿಗುಡ್ಡೆ ಅವರು ವಂದಿಸಿದರು.
ಚಿನ್ಮಯ್ ಎಸ್ ಹೆಗಡೆ
B.A 1st year
ಅಕ್ಷಯ ಭಟ್ಟ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ