ಬಸ್ ನಿಲ್ದಾಣ 

ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಸ್ ನಿಲ್ದಾಣ ಇರುತ್ತದೆ.ನಗರ ಮತ್ತು ಗ್ರಾಮೀಣ ಪ್ರದಶಗಳಲ್ಲಿರುವ ಬಸ್ ನಿಲ್ದಾಣದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ ಏನೆಂದರೆ ನಗರದಲ್ಲಿನ ಬಸ್ ನಿಲ್ದಾಣಗಳಲ್ಲಿ ಸುಮಾರು ಎಲ್ಲ ಬಸ್ ಗಳನ್ನು ನಿಲ್ಲಿಸುತ್ತಾರೆ.ಆದರೆ ಗ್ರಾಮಣ ಬಸ್ ನಿಲ್ದಾಣದಲ್ಲಿ ಕೆಲವೊಂದು ಬಸ್ ಗಳನ್ನು ಮಾತ್ರ ನಿಲ್ಲಿಸುತ್ತಾರೆ.

                                                                            ಗ್ರಾಮೀಣ ಬಸ್ ನಿಲ್ದಾಣ ಒಂದು ದಿನಕ್ಕೆ ಎರಡು ಮೂರು ಬಸ್ ಮಾತ್ರ ನಿಲ್ಲಿಸಲಾಗುತ್ತದೆ. ಬೆಳಿಗ್ಗೆ ಶಾಲಾ ಕಾಲೇಜು ಮಕ್ಕಳಿಗೆ ನಂತರ ಮದ್ಯಾಹ್ನ ಒಂದು ಹಾಗೂ ಸಾಯಂಕಾಲಕ್ಕೆ ಒಂದು ಬಸ್ ಇರುತ್ತದೆ. ಇಂತಹ ಬಸ್ ನಿಲ್ದಾಣಗಳ ಗೋಡೆಯಮೇಲೆ ನೂರಾರು ಜನರ ಕಲೆ ಮತ್ತು ಅವರ ಕಲ್ಪನಾಲೋಕದ ಚಿತ್ರಣಗಳು ಮತ್ತು ಗೋಡೆಯ ಮೂಲೆಗಳಲ್ಲಿ ಭಿತ್ತಿಪತ್ರಗಳು ಅಂತಿಸಿರುತ್ತರೆ. ಕೆಲವೊಂದು ಪ್ರದೇಶಗಳಲ್ಲಿ ಬಸ್ ನಿಲ್ದಾಣವೆಂದರೆ ಇಂಟರ್ನೆಟ ಅಥವಾ ನೆಟ್ವರ್ಕ್ ಬಳಸಲಾಗುವಂತಹ ಸ್ಥಳವೆಂದು ಹೇಳಬಹುದು. ಆದರೆ ಬಸ್ ನಿಲ್ದಾಣ ವೆಂದರೆ ನಮ್ಮೆಲ್ಲರ ಅನುಕೂಲಕ್ಕೆ ಮಾಡಿದಂತಹ ಒಂದು ವ್ಯವಸ್ಥೆಯಾಗಿದೆ ಅಂತಹ ವ್ಯವಸ್ಥೆಯನ್ನು ನಾವು ಸ್ವಚ್ಛಂದವಾಗಿ ಇಡಬೇಕು. ಬಸ್ ನಿಲ್ದಾಣವು ಮಳೆಗಾಲದ ಅಂತಹ ಸಮಯದಲ್ಲಿ ನಮಗೆ ಆಶ್ರಯವನ್ನು ನೀಡುತ್ತದೆ ಹಾಗೂ ರಕ್ಷಣೆಯನ್ನು ಒದಗಿಸುತ್ತದೆ ಸ್ವಚ್ಛತಾ ದಿನವನ್ನು ಹೊರತುಪಡಿಸಿ ಉಳಿದಂತಹ ದಿನಗಳಲ್ಲಿಯೂ ನಾವು ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸರವನ್ನು ಹಿತವಾಗಿ ಸ್ವಚ್ಛವಾಗಿರಿಸಿ ಕಾಪಾಡಿಕೊಳ್ಳಬೇಕು ವಾರದಲ್ಲೊಮ್ಮೆ ಭೇಟಿ ನೀಡಿ ನಮ್ಮ ಅತ್ಯಮೂಲ್ಯ ಸಮಯವನ್ನು ನೀಡಬೇಕು ಯಾವುದೇ  ಪಕ್ಷಪಾತ ಅಥವಾ ಸ್ವ ಉಪಯೋಗ ಮಾಡಿಕೊಳ್ಳಲು ಸ್ವಚ್ಛತೆಯ ನಾಟಕ ಮಾಡದೆ ಅಥವಾ ದಿನಪತ್ರಿಕೆಯಲ್ಲಿ ಫೋಟೋ ಬರಬೇಕೆಂದು ಮಾಡದೆ ಒಂದು ಹವ್ಯಾಸ ವೆಂದು ತಿಳಿಯೋಣ. ಕೆಲವೊಂದು ಬಸ್ ನಿಲ್ದಾಣಗಳು  ಹಳೆಯದಾಗಿರುತ್ತದೆ. ಅಂತಹ ಬಸ್ ನಿಲ್ದಾಣಗಳನ್ನು ಗುರುತಿಸಿ ಅವುಗಳನ್ನು ದುರಸ್ತಿಪಡಿಸುವ ಪ್ರಯತ್ನವನ್ನು ಮಾಡಬೇಕು.

ನಮ್ಮ ಅನುಕೂಲಕ್ಕಾಗಿ ಇರುವಂತಹ ವ್ಯವಸ್ಥೆಗಳನ್ನು ಸರಿಯಾಗಿ ಇರಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಅವುಗಳನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಹೋಗಬೇಕು. ನಮ್ಮ ನಡೆ ಸ್ವಚ್ಛತೆಯ ಕಡೆ.


ಮಂಜುನಾಥ

BA |

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ

ಯುಗಾದಿ