ಎತ್ತ ಕಡೆ,ನಮ್ಮ ನಡೆ.
ಭಾರತ ಭವ್ಯ ಪರಂಪರೆ ಹೊಂದಿದ ರಾಷ್ಟ್ರ.ಸಂಸ್ಕೃತಿ,ಸಂಪ್ರದಾಯಗಳ ತವರೂರು.ವೇದ,ಉಪನಿಷತ್ತುಗಳು,ಪುರಾಣಗಳೆಂಬ ಜ್ಞಾನನಿಧಿಗಳಿಂದ ತುಂಬಿದ ಗ್ರಂಥಾಲಯ. ವಿವಿಧ ಧರ್ಮೀಯರು,ಸಂಪ್ರದಾಯಗಳು
ಆಚಾರಣೆಗಳ,ಭಾಷೆಗಳ ನೆಲೆಬೀಡು.ವಿಶ್ವದಲ್ಲಿರುವ ವೈಶಿಷ್ಟ್ಯಗಳೆಲ್ಲ ಒಂದೆಡೆ ವಿಹರಿಸುವ ವಸುಧಾ ವಲಯ.ಒಟ್ಟಾರೆ ಒಬ್ಬ ಮನುಷ್ಯ ಉತ್ತಮ ಜೀವನ ಮತ್ತು ಸ್ವಾಸ್ತ್ಯ ಸಮಾಜ ರೂಪಿಸಿಕೊಳ್ಳಲು ಅವಶ್ಯಕ ವಾದ ಎಲ್ಲಾ ಅಂಶಗಳು ಭಾರತದಲ್ಲಿವೆ.ಆದರೂ ಭಾರತದಲ್ಲಿ ಇಂದು ಅನೇಕ ಸಮಸ್ಯೆ ತಾಂಡವವಾಡುವತ್ತಿವೆ.
ಭವ್ಯ ಪರಂಪರೆಯ ಬೃಹತ್ ವೃಕ್ಷಕ್ಕೆ ಕೊಡಲಿ ಪೆಟ್ಟುಬೀಳುತ್ತಿದೆ.ಭವ್ಯ ಭಾರತದ ಹಿರಿಮೆ ಹೆಚ್ಚಿಸಬೇಕಾಗಿದ್ದ ಭಾರತೀಯರೇ ಭಾರತದ ಹಿರಿಮೆಯನ್ನು ಮಣ್ಣು ಪಾಲು ಮಾಡುತ್ತಿರುವುದು ವಿಷಾದನೀಯ.
ವಿವಿಧ ಧರ್ಮಿಯರು ನೆಲೆಸಿರುವ ಏಕೈಕ ರಾಷ್ಟ್ರ ಭಾರತ.ಅಂದು ಯಾವುದೇ ಭೇಧವಿಲ್ಲದೇ ಎಲ್ಲಾ ಧರ್ಮೀಯರಿಗೂ ಮಮತೆಯ ಮಡಿಲು ಹಂಚಿದ ಭಾರತಮಾತೆಯ ಮಡಿಲಲ್ಲಿಂದು ಧರ್ಮಯುದ್ದಗಳ ಆರ್ಭಟ ಶುರುವಾಗಿದೆ.ವಿವಿಧತೆಯಲ್ಲಿ ಏಕತೆ ಸಾಧಿಸಬೇಕಾದ ಭಾರತೀಯರು ಇಂದು ವಿವಿಧತೆಯಲ್ಲಿ ಮತ್ತೂ ವೈವಿದ್ಯತೆಯನ್ನು ಸೃಷ್ಟಿಸುತ್ತಿದ್ದಾರೆ.ಧರ್ಮದ ತತ್ವಗಳ ಪಾಲನೆಯನ್ನು ತ್ಯಜಿಸಿ ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದಿದ್ದಾರೆ.
ಧರ್ಮದ ಹಿತೋಪದೇಶಗಳನ್ನು,ತತ್ವಗಳನ್ನು ಗಾಳಿಗೆ ತೂರಿ,ಆಚರಣೆ,ಸಂಪ್ರದಾಯಗಳನ್ನು ಮೂಲೆಗೆ ಅಟ್ಟಿ ಆಡಂಬರದ ಜೀವನ ಅಳವಡಿಸಿಕೊಂಡು ಅರ್ಥವಿಲ್ಲದ ಧರ್ಮ ರಕ್ಷಣೆ ಎಂಬ ಮಹಸಂಗ್ರಾಮವನ್ನೆ ಆರಂಭಿಸಿದ್ದಾರೆ.ಧರ್ಮ ರಕ್ಷಣೆ ಎಂಬ ಮಹಾಹೋಮಕ್ಕೆ ರಾಜಾಕೀಯವೆಂಬ ತುಪ್ಪ ಬೀಳುತ್ತಿದೆ.ಸಹಬಾಳ್ವೆಯ ಸಂಗಜೀವನ ನಡೆಸುತ್ತಿದ್ದವರ ಮನಸ್ಸಿನಲ್ಲಿ ಧ್ವೇಷ,ಅಸಮಾನತೆಯ ಹೊಗೆ ಆಡುತ್ತಿದೆ."ಸರ್ವ ಜನಾಂಗದ ಶಾಂತಿಯ ತೋಟ"ವಾಗಬೇಕಾದ ಭಾರತ ಇಂದು ಧರ್ಮ ರಕ್ಷಣೆಯ ಮಹಾಸಂಗ್ರಾಮಕ್ಕೆ ಸಿಲುಕಿ ಅಶಾಂತಿ,ಧ್ವೇಷ ತುಂಬಿದ ರಣರಂಗವಾಗುತ್ತಿದೆ.
ದಾನ ಧರ್ಮ ತುಂಬಿದ ಕರ್ಮಭೂಮಿ ಭಾರತ ಇಂದು ಭ್ರಷ್ಟರಿಂದ ಕೂಡಿದ ಭ್ರಷ್ಟ ಭೂಮಿಯಾಗುತ್ತಿದೆ.ಶ್ರೇಷ್ಟ ಆಡಳಿತಗಾರರ ಆಳ್ವಿಕೆ ಕಂಡ ಭಾರತ ಇಂದು ಕಪಟಿಗಳ,ಕುತಂತ್ರಿಗಳ ದುರಾಡಳಿತವನ್ನೆದುರಿಸುತ್ತಿದೆ. ಜನಸೇವೆಗೆಂದು ಬಂದ ರಾಜಕಾರಣಿಗಳೆ ಸುಲಿಗೆ ಮಾಡುತ್ತಿದ್ದಾರೆ.
ಸದ್ಗುಣ,ಸದಾಚಾರಗಳಿಂದ ತುಂಬಿದ್ದ ಭಾರತ ಅನ್ಯಾಯ,ಅಕ್ರಮಗಳ ಗೂಡಾಗುತ್ತಿದೆ.ದೇಶ ಸೇವೆಗೆಂದು ಅಧಿಕಾರ ಹಿಡಿಯುವರಿಗಿಂತ ಸ್ವಾರ್ಥ ಸಾಧನೆಗೆ ಇಳಿಯುವವರೆ ಹೆಚ್ಚಾಗಿದ್ದಾರೆ.
ಶುಬ್ರನದಿಗಳ ಸ್ವಚ್ಚಂದ
ಪರಿಸರ ಹೊಂದಿದ್ದ ಪವಿತ್ರ ರಾಷ್ಟ್ರ ಇಂದು ಕಸ ತುಂಬುವ ಪ್ಯಾಕ್ಟರಿಯಾಗಿ ಬದಲಾಗುತ್ತಿದೆ.ಜಲದಲ್ಲಿ ಮುಳುಗಿದ ಮಾತ್ರಕ್ಕೆ,ಗಾಳಿಯನ್ನು ಸೇವಿಸಿದ ಮಾತ್ರಕ್ಕೆ ರೋಗರುಜಿನ ಗುಣಪಡಿಸುವಂತಿದ್ದ ಭಾರತದ ಸ್ವಚ್ಚ ಪರಿಸರ ಮಾಯವಾಗಿದೆ.ದೇಶವನ್ನು ಸ್ವಚ್ಚ ಗೊಳಿಸಲು ಸ್ವಚ್ಚ ಭಾರತ ಮಿಷನ್ ಎಂಬ ಯೋಜನೆಯನ್ನು ಪ್ರಾರಂಭಿಸುವಸ್ಟು ಕೊಳಕಾಗಿದೆ. ತಂದೆ ತಾಯಿಯರನ್ನು ದೇವರಂತೆ ಬಿಂಬಿಸುತ್ತಿದ್ದ ರಾಷ್ಟ್ರದಲ್ಲಿ ಇಂದು ವೃದ್ದಾಶ್ರಮಗಾಳು ತಲೆಎತ್ತಿವೆ. ಕರ್ಮಭೂಮಿ ಭೋಗ ಭೂಮಿ ಯಾಗುತ್ತಿದೆ.ದೇಶದ ಅಭಿವೃದ್ಧಿಗೆ ಸಹಕರವಾಗ ಬೇಕಾಗಿರುವ ಯುವಕರೇ ಮಾರಕವಾಗುತಿದ್ದಾರೆ.
ಕರ್ತವ್ಯಗಳನ್ನು ಮರೆತು ವರ್ತಿಸುತಿದ್ದಾರೆ.
ಸದ್ಗುಣ ಸದಾಚಾರಗಳನ್ನು,ಜೀವನ ಪಾಠವನ್ನು ಕಲಿಸುವ ರಾಮಾಯಣ, ಮಹಾಭಾರತದಂತ ಪುಣ್ಯಗ್ರಂಥಗಳಿವೆ. ಉತ್ಸಾಹ ಚಿಮ್ಮಿಸಲು ಸ್ವಾಮಿ ವಿವಕಾನಂದರಂತಹ ಮಹಾನುಭಾವರ ಜೀವನವಿದೆ. ಬಡಿದೆಬ್ಬಿಸಲು ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಝಾನ್ಸಿ ರಾಣಿ ಮುಂತಾದ ಸಾಹಸಿಗಳ ಚರಿತ್ರೆಯಿದೆ. ಉತ್ತಮ ಆಡಳಿತಗಾರರು, ಅನೇಕ ರಾಜರು, ರಾಜವಂಶಗಳ ಯಶಸ್ವಿ ಆಡಳಿತ ವ್ಯವಸ್ಥೆಯ ಇತಿಹಾಸವಿದೆ. ಸಹಬಾಳ್ವೆ ನಡೆಸಲು ಅಬ್ದುಲ್ ಕಲಾಂ, ಗಾಂಧೀಜಿ, ಶಿಶುನಾಳ ಶರೀಫರಂತಹ ಧರ್ಮ ಸಹಿಷ್ಣುಗಳ ಜೀವವಿದೆ.ಆದರು ಭಾರತದಲ್ಲಿ ಅಶಾಂತಿ, ಅರಾಜಕತೆ, ಭ್ರಷ್ಟತೆ, ಅನೈತಿಕತೆ, ಹೆಚ್ಚುತ್ತಿದೆ. ಭವ್ಯ ಪರಂಪರೆಯ ಇತಿಹಾಸವನ್ನು ಮುಂದುವರಿಸಬೇಕಾದ ನಾವೇ ಅದನ್ನು ಮೊಟಕುಗೊಳಿಸುತ್ತಿದ್ದೇವೆ. ಉತ್ತಮದಿಂದ ಅತ್ಯುತ್ತಮಕ್ಕೆ ಹೋಗುವುದನ್ನು ಬಿಟ್ಟು ಕೆಳಗಿಳಿಯುತ್ತಿದ್ದೇವೆ.
ಉತ್ತಮ ಜೀವನ ವ್ಯಕ್ತಿತ್ವ, ಸದೃಢ ರಾಷ್ಟ್ರ ನಿರ್ಮಿಸಲು ಅವಶ್ಯಕವಾದ ಎಲ್ಲಾ ರೀತಿಯ ಮೌಲ್ಯಗಳನ್ನು ಭಾರತ ಹೊಂದಿದೆ. ನೀತಿ, ನ್ಯಾಯ,ಧರ್ಮ, ಉಪಕಾರ,ಉತ್ತಮ ನಾಗರಿಕ ಜೀವನ ವ್ಯವಸ್ಥೆಯಿದ್ದ ಭಾರತದಲ್ಲಿ ಇಂದು ಅನ್ಯಾಯ, ಅಹಿಂಸೆ, ಅರಾಜಕತೆ, ವ್ಯರ್ಥ ಗಲಭೆಗಳು ಮನೆ ಮಾಡುತ್ತಿವೆ. ಉತ್ತಮತೆಯಿಂದ ಅಧಮತೆಯತ್ತ ಭಾರತೀಯರ ಹೆಜ್ಜೆ ಸಾಗುತ್ತಿದೆ. ಈ ಹೆಜ್ಜೆಗಳ ದಿಕ್ಕು ಬದಲಿಸಬೇಕಿದೆ. ಒಮ್ಮೆ ಹಿಂತಿರುಗಿ ನಮ್ಮ ಇತಿಹಾಸ ಪರಂಪರಯನ್ನು ಸರಿಯಾಗಿ ವೀಕ್ಷಿಸಿ, ಅವಲೋಕಿಸಿ ಎತ್ತ ಸಾಗಬೇಕೆಂದು ನಿರ್ಧರಿಸಬೇಕಿದೆ. ಸದ್ಗುಣ, ಸದಾಚಾರ, ನೈತಿಕತೆ, ಪ್ರಾಮಾಣಿಕತೆ ಸೌಹಾರ್ದತೆಗಳಿಂದ ತುಂಬಿದ ಅಭಿವೃದ್ದಿಯುತ ಅರ್ಥಪೂರ್ಣ ಸ್ವಾಸ್ಥ್ಯ ರಾಷ್ಟ್ರದತ್ತ ನಮ್ಮ ನಡೆಯೋ ಅಥವಾ ಅನ್ಯಾಯ, ಅಕ್ರಮ, ದುರಾಚಾರಗಳಿಂದ ಕೂಡಿದ ತಿರುಳಿಲ್ಲದ ಭ್ರಷ್ಟ ರಾಷ್ಟ್ರದತ್ತವೋ ಎಂದು ಇಂದೆ ನಿರ್ಧರಿಸಬೇಕು.
ಅನಿತಾ. ಬೀ.ಗೌಡ
B.A 1st
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ