ಇದೇನಾ ಸ್ವಾತಂತ್ರ್ಯ...?ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಅಧಿಕಾರಿಗಳ ಟೇಬಲ್ ಕೆಳಗೆ ಬಂತು,ಉಳ್ಳವರ ಮನೆಗೆಬಂತು.
ಸ್ವಾತಂತ್ರ್ಯ ಸಿಕ್ಕು 74 ವರ್ಷಗಳಾದರೂ ನಿಜವಾಗಿಯೂ ನಾವು ಸ್ವತಂತ್ರರೇ? ಎಂದು ನಮ್ಮನ್ನ ನಾವು ಕೇಳಿಕೊಂಡಾಗ ನಮ್ಮಲ್ಲಿ ಉದಯಿಸುವ ಪ್ರಶ್ನೆ..
ಸ್ವಾತಂತ್ರ್ಯ ಎಂದರೇನು? ದೇಶಕ್ಕೆ ಬ್ರಿಟಿಷರ ಆಳ್ವಿಕೆಯಿಂದ ಸಿಕ್ಕಿದ್ದೇನೋ ನಿಜ ,ಆದರೂ ನಾವು ನಿಜವಾಗಿಯೂ ಸ್ವತಂತ್ರರೇ? ಎಂಬುದು ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.
ನಾವು ಭಾರತೀಯರು ಇಂದು ಸಹ, ಭಾರತಕ್ಕೆ ಸ್ವಾತಂತ್ರ್ಯ ತಂದ ಶ್ರೇಯಸ್ಸನ್ನ ಕೆಲವೇ ಜನರಿಗೆ ನೀಡುತ್ತಿದ್ದೇವೆ.. ಸ್ವಾತಂತ್ರ್ಯಹೋರಾಟದ ನೇತೃತ್ವ ವಹಿಸಿ ಬಲಿದಾನ ನೀಡಿದವರು ಅನೇಕರಿದ್ದಾರೆ. ಇಂದು ನಾವು ಕೆಲವರನ್ನ ಅಷ್ಟೇ ಆರಾಧಿಸುತ್ತೇವೆ..ಅಂದರೆ ಲಾಲ್ ಬಹದ್ದೂರ್ ಶಾಸ್ತ್ರಿಯಂತಹವರನ್ನು ಮರೆತೇ ಬಿಡುತ್ತೇವೆ. ಹಾಗೆಯೇ ನವೆಂಬರ್19 ಝಾನ್ಸಿರಾಣಿಯ ಜನುಮ ದಿನವೊಂದು ನಗಣ್ಯವೇ ಆಗಿ ಬಿಡುತ್ತದೆ. ತನ್ನ ಮಗನನ್ನು ಕಟ್ಟಿಕೊಂಡು ಅಲ್ಲಿಂದಲೇ ಭಾರತದ ಕ್ಷಾತ್ರತೇಜವನ್ನು ಸುರಿಸಿದ್ದ ಮಹಿಳೆಯ ಜನುಮದಿನ ನಮಗೆ ವಿಶೇಷ ದಿನವಲ್ಲ. ಬದಲಿಗೆ,ದೇಶವನ್ನು ಇಬ್ಬಾಗ ಮಾಡಿ ಹೋದವರೆಲ್ಲ ನಮಗೆ ಆದರ್ಶವಾಗುತ್ತಾರೆ ಮತ್ತೆ ನಾವು ಮುಂದಿನ ಪೀಳಿಗೆಗೂ ಹೇಳಿಕೊಡುವುದು ಮತ್ತದೇ ಗುಲಾಮ ಗಿರಿಯನಷ್ಟೇ ಹೊರತು ಬೇರೇನು ಅಲ್ಲ....
ಇದನ್ನೆಲ್ಲವನ್ನು ಈಗ ಒಬ್ಬ ಶ್ರೀ ಸಮಾನ್ಯನಾದಂತವನು ಹೇಳಿಬಿಟ್ಟರೆ ಅವನೊಬ್ಬ ಬಲಪಂತಿಯವನಾಗಿ ಬಿಡುತ್ತಾನೆ,ದಲಿತ ವಿರೋಧಿಯು ಆಗುತ್ತಾನೆ ಇದು ಇಗಿನ ರಾಜಕಾರಣದ ಪ್ರಭಾವ. ದೇವರು ವರ ಕೊಟ್ಟರು ಪೂಜಾರಿ ಕೊಡದ ಹಾಗೆ ಅಧಿಕಾರಿಗಳ ದರ್ಪ. ಕಾಸಿದ್ದೋನೆ ಬಾಸು ಎನ್ನುವ ಹಾಗೆ ಬಗೆ ಬಗೆ ಅಧಿಕಾರಿಗಳ ಮೊಡರ್ನ ಲಂಚವತಾರಗಳು ತಲೆ ಎತ್ತಿ ನಿಂತಿದೆ.
ಮಾತೆತ್ತಿದರೆ ಸ್ವತಂತ್ರ ಭಾರತದ ಪ್ರಜೆ ನಾನು,ಎನುಬೇಕಾದ್ರು ಮಾತಡಬಹುದು ಎನ್ನುವ ಈಗಿನ ಬುದ್ದಿಜೀವಿಗಳು ವಿತ್ತಂಡವಾದವನ್ನು ಮಂಡಿಸುತ್ತಾ ಸ್ವತಂತ್ರ ಸಿಕ್ಕು ಇಷ್ಟೂ ವರ್ಷವಾದರೂ ನಮ್ಮ ಈಗಿನ ಪರಿಸ್ಥಿತಿ ಹೇಗಿದೆ ಎನ್ನುವ ಪರಿಕಲ್ಪನೆಯು ಅವರಿಗಿಲ್ಲವಾಗಿರುವುದು ಒಂದು ದುರಂತವೇ ಸರಿ.
ಸ್ವಾತಂತ್ರ್ಯಸಿಗುವ ಮುನ್ನ ಬ್ರಿಟಿಷರ ದಬ್ಬಾಳಿಕೆಯಲ್ಲಿ ಇದ್ದ ನಾವು ಸ್ವತಂತ್ರರು ಎಂಬ ಹೆಸರಿನಲ್ಲಿ ನಾವೇ ಆರಿಸಿ ತಂದ ರಾಜಕಾರಣಿಗಳು ನಮ್ಮನ್ನು ಅಳುತ್ತಿರುವುದು ನೋಡುತ್ತಿದ್ದೇವೆ. ಹಿಂದೆ ಬ್ರಿಟಿಷರುನಮ್ಮನ್ನುಗುಲಮಾರಂತೆ ನೋಡಿ ನಮ್ಮ ಬಳಿ ದುಡಿಸಿಕೊಂಡು ಲಾಭವನ್ನು ಅವರ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದರು.ಇಂದು ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ಸಾಮಾನ್ಯ ಜನರು ನೀಡಿರುವ ತೆರಿಗೆಯನ್ನುಅಭಿವೃದ್ದಿಯ ಹೆಸರಿನಲ್ಲಿಕೊಳ್ಳೆಹೊಡೆದು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ತಮ್ಮ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯದ ಪೂರ್ವದಲ್ಲಿ ಬ್ರಿಟಿಷರ ಚಾಟಿ ಏಟಿಗೆ ನಡಗುತ್ತಿದ್ದರು ನಮ್ಮಜನ. ಸ್ವಾತಂತ್ರ್ಯ ನಂತರ ರಾಜಕೀಯ ಪುಡಾರಿಗಳ ಏಟಿಗೆ ಬೆದರುತ್ತಿದ್ದಾರೆ.
ಇಷ್ಟೇ ವ್ಯತ್ಯಾಸ..
ಅಷ್ಟೇ ಅಲ್ಲದೆ ಸರ್ವೆಜನಾ ಸುಖಿನೋಭವಂತು ಅನ್ನೋ ರಾಷ್ಟ್ರ ನಮ್ಮದು. ಎಷ್ಟೋ ನಿರಾಶ್ರಿತರಿಗೆ ಆಶ್ರಯ ನೀಡಿರುವ ದೇಶ ನನ್ನದು.ಆದರೆ ಈಗಿನ ಕೆಲವು ಭ್ರಷ್ಟ ರಾಜಕೀಯ ಪಕ್ಷಗಳು ಹಿಂದೆ ಬ್ರಿಟಿಷರು ಅನುಸರಿಸಿದ್ದ ಒಡೆದು ಅಳುವ ನೀತಿಯನ್ನು ಅನುಸರಿಸಿದ್ದಾರೆ. ಜಾತಿ ,ಧರ್ಮ,
ಬಡವ,ಶ್ರೀಮಂತ,ಇದರಿಂದ ಮಾನವನಿಗೆ ಎಂದೂ ಸ್ವಾತಂತ್ರ್ಯಸಿಗದಂತಹ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುತ್ತಾ ಹೋಗಿದ್ದಾರೆ. ಹಾಗಂತ ಎಲ್ಲಾ ರಾಜಕಾರಣಿಗಳು,ಅಧಿಕಾರಿಗಳು ಭ್ರಷ್ಟರು ಎನ್ನಲಾಗುವುದಿಲ್ಲ.ಅವರಲ್ಲಿ ದೇಶಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದವರು ಇದ್ದಾರೆ.ಆದರೆ ಅಂತವರಿಗೆ ಇವರು ಮುಂದುವರೆಯಲು ಬಿಡುವುದಿಲ್ಲ.ಇದೆಲ್ಲಾತಿಳಿದು ಸುಮ್ಮನಿರುವ ನಾವುಗಳು ಒಂದು ರೀತಿಯಲ್ಲಿ ದೇಶದ್ರೋಹಿಗಳೆ ಆಗಿದ್ದೇವೆ ಎನ್ನುವುದು ನನ್ನ ಭಾವನೆ.
ಈಗಿನ ಸ್ವಾತಂತ್ರ್ಯ ಶ್ವೇಚ್ಚಾಚಾರ್ಯದಿಂದ ಕೂಡಿದೆ, ಸ್ವಾರ್ಥದಿಂದ ಕೂಡಿದೆ ,ಅಧಿಕಾರ ಶಾಹಿಯಿಂದ ಕೂಡಿದೆ. ಹಾಗಾಗಿ ಕವಿಯ ವಾಣಿಯಂತೆ..
ಆ ಸ್ವತಂತ್ರ ಸ್ವರ್ಗಕ್ಕೆ ನಮ್ಮ ನಾಡು ಏಳಲೇಳಲೇಳಲಿ....
ಎಲ್ಲಿಮನವು ನಿರ್ಭಯದಿ ತಲೆಯನ್ನೆತ್ತಿ ತಿರುಗುವದೋ
ಎಲ್ಲಿ ಆ ಸುಧಾಪಾನ ಎಲ್ಲರಿಗೂ ಸಿಗುವುದೋ
ಆ ಸ್ವತಂತ್ರ ಸ್ವರ್ಗಕ್ಕೆ ನಮ್ಮನಾಡು ಏಳಲೇಳಲೇಳಲಿ....
ಅಂದರೆ ಆರ್ಥಿಕ ಸ್ವಾತಂತ್ರ್ಯ, ಧಾರ್ಮಿಕಸ್ವಾತಂತ್ರ್ಯ, ರಾಜಕೀಯಸ್ವಾತಂತ್ರ್ಯ ಎಲ್ಲರಿಗೂ ಸಮನಾಗಿರಬೇಕು ಎಂದರ್ಥ. ಈ ದೇಶದಲ್ಲಿ ಸರ್ವರೂ ಸಾಲಗರರಲ್ಲದೆ,ಸ್ವಾಭಿಮಾನದಿಂದ ಸಮೃದ್ಧಿಯಿಂದ ತಲೆಯನ್ನೇತ್ತಿ ಜಗತ್ತಿನಲ್ಲೆ ಮುಂದುವರಿಯಬೇಕು. ಎಲ್ಲರಿಗೂ ಸಮಾನಹಕ್ಕು ,ಹಕ್ಕಿನ ಜೊತೆಗೆ ಅವರವರ ಕರ್ತವ್ಯವನ್ನು ಪಾಲಿಸುವುದು ತೀರಾ ಅವಶ್ಯಕವಾಗಿದೆ. ಇದರಿಂದ ನಮ್ಮ ದೇಶ ಮುಂದುವರೆದು ನಿಜವಾದ ಸ್ವಾತಂತ್ರ್ಯಹೊಂದಬೇಕೆನ್ನುವುದು ನನ್ನ ಆಶಯ..🙏🙏🙏
ಅನುಷಾ M ಹೊಸಕೊಪ್ಪ
BA 1st
✍️✍️
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ