ಭಾರತೀಯ ಸೇನೆ
ಒಂದು ದೇಶಕ್ಕೆ ಭೂ ಪ್ರದೇಶ, ಜನ ಸ೦ಖ್ಯೆ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ, ಧಾರ್ಮಿಕ, ರಾಜಕೀಯ ಸಮಾನತೆ, ಕ್ರಷಿ ವ್ಯವಸ್ಥೆ ಹೇಗೆ ಮುಖ್ಯವೋ ಅಂತೆಯೇ ರಕ್ಷಣಾ ಪಡೆಯು ಕೂಡ ಅಷ್ಟೇ ಮುಖ್ಯ ಹಲವಾರು ದೇಶ ಇನ್ನೊಂದು ದೇಶದೊಂದಿಗೆ ವ್ಯವಹಾರ ಸಂಬಂಧವನ್ನು ಬೆಳೆಸುವಲ್ಲಿ ಆ ದೇಶದ ಆರ್ಥಿಕ ವ್ಯವಸ್ಥಯನ್ನಲ್ಲದೆ ರಕ್ಷಣಾ ವ್ಯವಸ್ಥೆಯ ಭಾಳಾದ್ಯತೆಯನ್ನು ಗಮನಿಸುವರು.
ರಕ್ಷಣಾ ಪಡೆ ಕೇವಲ ಗಡಿಯ ರಕ್ಷಣೆ ಮಾತ್ರವಲ್ಲ ನೆರೆಯ ಸಂದರ್ಭದಲ್ಲಿ, ಕಾಡ್ಗಿಚ್ಚು ಮತ್ತಿತ್ತರ ಸಂದರ್ಭ ಬಂದಾಗ ರಕ್ಷಣಾ ಪಡೆಯು ನೆರವಿಗೆ ಬರುತ್ತವೆ ರಕ್ಷಣಾ ಪಡೆ ಎಂಬುದು ಒಂದು ದೇಶದ ಘನತೆ ಮತ್ತು ಪ್ರತಿಷ್ಟೆಯ ಬಿಂಬಕ.
ಭಾರತದ ರಾಷ್ಟ್ರೀಯ ಸೈನ್ಯದ ಕುರಿತಾಗಿ ಹೇಳುವುದಾದರೆ ಇದು ೧೯೪೨ ರಲ್ಲಿ ಪ್ರಾರಂಭವಾದ ಒಂದು ಸಶಸ್ತ್ರ ಪಡೆ ಇದರ ಸಂಸ್ಥಾಪಕರು ಖ್ಯಾತ ಕ್ರಾಂತಿಕಾರಿ ರಾಸ್ ಬಿಹಾರಿ ಭೋಸ್ ಇವರು 2ನೇ ಮಹಾ ಯುದ್ದದ ಸಂದರ್ಭದಲ್ಲಿ ಈ ಪಡೆಯ ನಿರ್ವಹಣಾ ಕಾರ್ಯವನ್ನು ನೇತಾಜಿರವರಿಗೆ ವಹಿಸಿದರು.
ಭಾರತವು ತನ್ನ ವಿಶಾಲತೆಗೆ ತಕ್ಕನಾದ ರಕ್ಷಣಾ ಸಾಮರ್ಥ್ಯವನ್ನು ಹೊಂದಿದ್ದು ಭೂ ಸೇನೆ, ವಾಯು ಸೇನೆ, ಜಲ ಸೇನೆ ಎಂಬ 3 ಮುಖ್ಯ ಅಂಶಗಳನ್ನು ಹೊಂದಿದೆ. ನೌಕಾ ಪಡೆಯು ಜಗತ್ತಿನ 5 ನೇ ದೊಡ್ಡ್ ನೌಕಾಪಡೆಯಾಗಿದ್ದು ಇದರಲ್ಲಿ ಸುಮಾರು ೫೫೦೦೦ ಜನರು ಕಾರ್ಯನಿರತರಾಗಿದ್ದು ಭಾರತೀಯ ನೌಕಾಪಡೆ೧೫೫ ನೌಕೆಯನ್ನು ಹೊಂದಿದ್ದು ಐ ಎನ್ ಎಸ್ ವಿರಾಟ್ ಎಂಬ ವಾಯು ಯುದ್ದ ನೌಕೆಯನ್ನು ಹೊಂದಿದೆ ಭಾರತದ ನೌಕಾಪಡೆಯ ಪಿತಾಮಹ ಶಿವಾಜಿ
ಭಾರತದ ವಾಯು ಪಡೆಯು 8 ಅಕ್ಟೋಬರ್1932 ರಲ್ಲಿ ಸ್ಥಾಪನೆಯಾಗಿದ್ದು. ಶತ್ರು ದೇಶದ ವೈಮಾನಿಕ ದಾಳಿಯನ್ನು ತಡೆದು ಪ್ರತ್ಯುತ್ತರಿಸುವಲ್ಲಿ ಇದರ ಪಾತ್ರವು ಬಹು ಮುಖ್ಯ ಇದರ ಗಾತ್ರ 140.431𝘢𝘤𝘵𝘪𝘷𝘦 𝘱𝘦𝘳𝘴𝘰𝘯𝘯𝘦 𝘢𝘱𝘱𝘳𝘰𝘹 ಇದರ ಮುಖ್ಯ ಕಛೇರಿ ಹೊಸ ಡೆಲ್ಲಿ ಭಾರತದ ವಾಯು ಪಡೆಯ ಧ್ಯೇಯವಾಕ್ಯ"ದೀಪ್ತವಾಗಿ ಆಕಾಶವನ್ನು ಸ್ಪರ್ಶಿಸುವುದು"( 𝘛𝘰𝘶𝘤𝘩 𝘵𝘩𝘦 𝘴𝘬𝘺 𝘸𝘪𝘵𝘩 𝘨𝘭𝘰𝘳𝘺) ಎಂಬುದಾಗಿದೆ
ಮತ್ತೊಂದು ಪ್ರಮುಖ ಅಂಗ ಭೂ ಸೇನೆ ಇದು 1 ಏಪ್ರಿಲ್ 1895 ಎಂದರೆ 127 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದೇ. ಹನ್ನೆರಡು ಲಕ್ಷ ಸಕ್ರಿಯ ಸೈನಿಕರು ಸುಮಾರು ಹತ್ತು ಲಕ್ಷ ಮೀಸಲು ಸೈನಿಕರು ೧೩೬ ವಿಮಾನವನ್ನು ಹೊಂದಿದೆ ಇದರ ಧ್ಯೇಯವಾಕ್ಯ 𝘚𝘌𝘙𝘝𝘐𝘊𝘌 𝘉𝘌𝘍𝘖𝘙𝘌 𝘚𝘌𝘓𝘍
ಇದು ನಮ್ಮ ಹೆಮ್ಮೆಯ ಸೈನ್ಯದ ಸಾಮರ್ಥ್ಯದ ಕುರಿತಾದ ಮಹಿತಿಯಾಗಿದ್ದು ನಾವು ಹಿಂದಿನ 8-10 ಅತ್ಯಂತ ಬಲಿಷ್ಠ ಮತ್ತು ಸಕ್ರಿಯ ಸೇನೆಗಳಲ್ಲಿ ಒಂದಾಗಿರುವುದು ನಮ್ಮ ಪುಣ್ಯವೇ ಸರಿ ಸೈನಿಕರು ತಮ್ಮ ಜೀವನವನ್ನೇ ಮೂಡಿಪಾಗಿರಿಸಿ ಇತರರ ರಕ್ಷಣೆ ಮಾಡುವ ನಿಸ್ವಾರ್ಥ ಮನೋಭಾವದವರಾಗಿದ್ದು ಭಾರತವು ದೊಡ್ಡ ದೊಡ್ಡ ದೇಶಗಳೊಡನೆ ಪೈಪೋಟಿ ನಡೆಸಲು ಮೋದಿ ಮತ್ತು ಅವರ ಸೇನಾ ನೀತಿಯು ಅತ್ಯಂತ ಮಹತ್ವ ಪೂರ್ಣವಾಗಿದೆ.
Akshay R bhat
B.A 1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ