ಸ್ವಾತಂತ್ರ್ಯ ಸಂಗ್ರಾಮ


ಬಾಲ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಹಬ್ಬದ ಸಂಭ್ರಮ ನನ್ನ ಮನಸ್ಸಿನಲ್ಲಿ ಇತ್ತು . ಹೊಸ ಬಟ್ಟೆ ಹಾಕಿಕೊಂಡು ಶಾಲೆಯಲ್ಲಿ ಧಿಘಿ ಧಿಘಿ ಕುಣಿದು ಯಾರೋ ಮಾಡಿದ ಭಾಷಣ ಅರ್ಥವಾಗದೆ , ಮುಕ್ತಾಯದಲ್ಲಿ ನಮಗೆ ತಿನ್ನಲು ಸಿಹಿ ಕೊಡುತ್ತಿದ್ದರು. ತಿಂದು ಮನೆಗೆ ಬರುತ್ತಿದ್ದೆವು. ಜೀವನದ ಮೊದಲ ಘಟ್ಟದ ಅನುಭವ ಇದಾಗಿತ್ತು.

 ಮುಂದೆ ಪ್ರೌಢ ಶಾಲೆಗೆ ಬಂದ ನಂತರ ಸ್ವಾತಂತ್ರ್ಯವೆಂದರೆ ಏನು ? ಯಾಕೆ ಒಂದು ರಾಷ್ಟ್ರಕ್ಕೆ ಆಳ್ವಿಕೆಯ ಹಕ್ಕು, ಸಾರ್ವಭೌಮತ್ವ ಏಕೆ ಬೇಕು ? ಇಂದಿತ್ಯಾದಿ ಪ್ರಶ್ನೆಗಳು ಮಿದುಳನ್ನು ಕೊರೆಯಲು ಶುರು ಮಾಡಿದವು. ಎಸ್.ಎಸ್.ಎಲ್.ಸಿ.ಯಲ್ಲಿರುವಾಗ ಇಂದು ನಾವು ಅನುಭವಿಸುವ ' ಸ್ವಾತಂತ್ರ್ಯ ಸಂಗ್ರಾಮದಿಂದ , ತ್ಯಾಗ  ಬಲಿ ದಾನಗಳಿಂದ ದೊರಕಿದ್ದು ಎಂಬ ತಿಳುವಳಿಕೆ ಬಂತು . ಅದರ ಪೂರ್ಣ ಅರ್ಥ ತಿಳಿಯಲು ಶಾಲೆಯಲ್ಲಿದ್ದ ವಾಚನಾಲಯದಲ್ಲಿ  ಇರುವ ಪುಸ್ತಕಗಳನ್ನು ಹುಡುಕಾಡಿದೆ . ಆಗ ನಾನು ಕಲಿಯುವ ಇತಿಹಾಸ ನನ್ನ ನೆರವಿಗೆ ಬಂತು .

 ಜಗತ್ತು ಮಲಗಿರುವಾಗ ಭಾರತ ಎಚ್ಚರವಾಗಿತ್ತು ಎಂಬ ತಿಳುವಳಿಕೆ ಮನಸ್ಸಿಗೆ ಬಂದಾಗ ಭಾರತಕ್ಕೆ ಇರುವ ಪರಂಪರೆ , ರಾಮಾಯಣ , ಮಹಾಭಾರತದ ಕಥೆಗಳು , ಋಷಿ ಮುನಿಗಳ ಬೀಡಾದ ಭಾರತ ಅಂದು ದೊಡ್ಡ ಜ್ಞಾನಭಂಡಾರವೇ ಆಗಿತ್ತು ಎಂಬುದು ತಿಳಿದುಬಂತು. ಭಾರತದ ನೆಲ,ಜಲ,ಧರ್ಮಗಳ ಮೌಲ್ಯ, ವೇದ-ಉಪನಿಷತ್ತುಗಳ ತಿರುಳು, " ವಸುದೈವ ಕುಟುಂಬಕಂ"  ಜಗತ್ತೇ ಒಂದು ಕುಟುಂಬ ಎಂಬ ವಿಶಾಲ ಪರಿಕಲ್ಪನೆ ಇವೆಲ್ಲ ನನ್ನನ್ನು ಆಕರ್ಷಿಸಿದವು. ಕ್ರಿಸ್ತಶಕ ಪೂರ್ವದಲ್ಲೇ ಗ್ರೀಕ್,ಚೀನಾ, ಶ್ರೀಲಂಕಾಗಳಿಂದ ಜ್ಞಾನಿಗಳು ಭಾರತಕ್ಕೆ ಬಂದು ವಿಧ್ಯೆ ಕಲಿತು ಹೋದರು ಎಂಬುದನ್ನು ನಾನು ಓದಿ ತಿಳಿದುಕೊಂಡೆ.

ಆದರೆ ಆಂತರಿಕ ಕಚ್ಚಾಟ ರಾಜ್ಯಗಳ ಮಧ್ಯೆ ಮತ್ತು ಭಾರತದಲ್ಲಿರುವ ಖನಿಜ ಸಂಪತ್ತು ವಿದೇಶಿಗಳನ್ನು ಆಕರ್ಷಿಸಿತು. ಒಬ್ಬರ ಹಿಂದೊಬ್ಬರಂತೆ ಬಂದು ಆಕ್ರಮಣ ಮಾಡಿದರು. ಹೂಣರು,ಗ್ರೀಕ್ ದೊರೆಗಳು, ತದನಂತರ ಮೊಘಲರು  ಭಾರತಕ್ಕೆ ಬಂದು ನಮ್ಮಸ್ವಾತಂತ್ರ ಕಸಿದುಕೊಂಡರು. ನಂತರ ತಕ್ಕಡಿ ಹಿಡಿದುಕೊಂಡು ಬಂದ ಬ್ರಿಟಿಷರು ತಳವೂರಿದರು. ಪೋರ್ಚುಗೀಸರು ಬಂದು ಗೋವಾ ನುಂಗಿದರು. ಈ ರೀತಿ ಭಾರತ ಪರಕೀಯರ ಆಳ್ವಿಕೆಗೆ ಒಳಗಾಗಿತ್ತು. ಮುಂದೆ ಭಾರತದ ಕೆಲವು ಜನ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಮತ್ತು ಇತರ ದೇಶಗಳಿಗೆ ಹೋದವರಲ್ಲಿ ಭಾರತವನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಿಗೊಳಿಸುವ ವಿಚಾರಧಾರೆ ಬಂತು. ವಿವೇಕಾನಂದರು ಪರ್ಯಟನ ಮಾಡಿ ಭಾರತದ ಸಮಸ್ಯೆಗಳನ್ನು ನೋವನ್ನು ಜಗತ್ತಿಗೆ ಸಾರಿದರು, ದಾದಾಭಾಯಿನವರೋಜಿ ಬಿಪಿನ ಚಂದ್ರ ಪಾಲರು ಮುಂತಾದ ಮಹನೀಯರು ಸಮ ಮನಸ್ಕರನ್ನು ಕಂಡು ವಿಚಾರಿಸಿ ಒಂದು ಸಂಘಟನಾತ್ಮಕ ಕಾರ್ಯಕ್ರಮ ನಡೆಯಿತು. ಮುಂದೆ ಬ್ರಿಟಿಷ್ ಸಂಜಾತೆ ಅನಿ ಭೇಝಂಟ ಎಂಬ ಮಹಿಳೆ, ಸರ್ ಹ್ಯೂಮ ಮುಂತಾದವರು ಹೋರಾಟಕ್ಕೆ ಬಂದು ಸಂಘಟನೆ ಕಟ್ಟಿ ಅದಕ್ಕೆ ಕಾಂಗ್ರೆಸ್ ಎಂದು ಹೆಸರಿಟ್ಟರು.

ಮೋಹನ್ ಕರಮ ಚಂದ್ರ ಗಾಂಧಿ, ಸುಭಾಷ್ಚಂದ್ರಬೋಷ್, ಲಾಲ್ ಲಜಪತರಾಯ್ ಮುಂತಾದವರು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 

' ಜಲಿಯನ್ವಾಲಾಬಾಗ್ ಹತ್ಯಾಕಂಡ' ಒಂದು ದುರಂತ ಕತೆ. ಅಮೃತಸರದ ಒಂದು ಮೈದಾನದಲ್ಲಿ ಯುಗಾದಿ ಹಬ್ಬ ಆಚರಿಸುವಂತೆ ಮಕ್ಕಳು, ಸ್ತ್ರೀಯರು, ವಯಸ್ಕರು ಸೇರಿ ಹಬ್ಬ ಆಚರಿಸುವಾಗ ಅಲ್ಲಿ ಸ್ವತಂತ್ರ ಹೋರಾಟಗಾರರು ಇದ್ದಾರೆ ಎಂದು ತಿಳಿದು ಜನರಲ್ ಡೈಯರ್‌ ಎಂಬ ರಾಕ್ಷಸ ಬ್ರಿಟಿಷ್ ಕಮಾಂಡರ್ ಹೊರಗೆ ಹೋಗುವ ಎಲ್ಲಾ ಗೇಟುಗಳನ್ನು ಮುಚ್ಚಿ ಹಬ್ಬ ಆಚರಿಸುವವರ ಮೇಲೆ ತನ್ನ ಸೈನಿಕರನ್ನು ಕಳಿಸಿ ಗುಂಡಿಕ್ಕಿ ಕೊಂದ. ಇಂದಿಗೂ ಅಲ್ಲಿ ಒಂದು ದೊಡ್ಡ ಬಾವಿ ಇದೆ.ಅದಕ್ಕೆ ಹಾರಿ ಪ್ರಾಣಬಿಟ್ಟ ಅಮಾಯಕರ ಚಿತ್ರವಿದೆ ಹಾಗೂ ಬಾವಿಯಲ್ಲಿ ಗುಂಡಿನ ಗುರುತಿದೆ.

ಜಗತ್ತಿನಲ್ಲಿ ಒಂದಲ್ಲ ಒಂದು ಅವಗಡ ನಡೆಯುತ್ತದೆ. ಅಷ್ಟಕ್ಕೆ ಎರಡನೇ ಮಹಾಯುದ್ಧದ ಕರಿನೆರಳಿನ ಛಾಯೆ ದೇಶವನ್ನು ಮುತ್ತಿತು. ಒಂದೆಡೆ ಜರ್ಮನ್- ಜಪಾನ್ -ಫ್ರಾನ್ಸ್ ರಾಷ್ಟ್ರಗಳು ಒಂದಾದರೆ,ಬ್ರಿಟಿಷ್-ಅಮೆರಿಕನ್ ರಾಷ್ಟ್ರಗಳು ಒಂದಾಗಿ ಒಬ್ಬರ ಮೇಲೆ ಮತ್ತೊಬ್ಬರು ಎರಗಿದರು. ಈ ಸಮಯ ಉಪಯೋಗಿಸಿ ಬ್ರಿಟಿಷರಿಗೆ ಪಾಠ ಕಲಿಸಿ ಎಂದು ಸುಭಾಷ್ ಚಂದ್ರ ಬೋಸರು ದೃಢಸಂಕಲ್ಪ ಕೈಗೊಂಡರು. ಬ್ರಿಟಿಷ್ ಸರ್ಕಾರ ಅವರನ್ನು ಗೃಹಬಂಧನದಲ್ಲಿಟ್ಟರು. ಅವರು ಅಲ್ಲಿಂದ ತಪ್ಪಿಸಿಕೊಂಡು ಇಟಲಿ,ಜರ್ಮನ್ ಮತ್ತು ಇತರ ದೇಶಗಳ ಸಂಬಂಧ ಬೆಳೆಸಿ ಅಜಾದಹಿಂದ್ ಎಂಬ ಸರ್ಕಾರವನ್ನು ವಿದೇಶಿ ನೆಲದಲ್ಲಿ ಸ್ಥಾಪಿಸಿ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ಸೈನ್ಯ ಕಟ್ಟಿ ಸರ್ಕಾರ ಸ್ಥಾಪಿಸಿ ಮೊದಲ ಸ್ವತಂತ್ರ ಭಾರತ ಪ್ರಧಾನಿಯಾದರು. ಅಮೆರಿಕ ಬ್ರಿಟನ್ ಮತ್ತು ಇತರೆ ಬಲಾಢ್ಯ ದೇಶಗಳು ಒಂದಾಗಿ ಯುದ್ಧದ ದಿಕ್ಕು ತಪ್ಪಿಸಿದರು. ಜರ್ಮನಿ ಫ್ರಾನ್ಸ್ ಸೋತವು. ಜಪಾನಿನ ಮೇಲೆ ಅಮೆರಿಕ ಅನುಭವ ಸರ್ವ ನಾಶ ಮಾಡಿದವು. ನಾಗಸಾಕಿ ಎಂಬ ಪಟ್ಟಣ ಭಸ್ಮವಾಗಿ ಇಂದಿಗೂ ಅಲ್ಲಿನ ಜನತೆ ನೋವನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ಸಹಾಯ ಪಡೆಯಲು ಹೊರಟ ಸುಭಾಷರು ವಿಮಾಣಾಪಘಾತದಲ್ಲಿ ಸತ್ತರು ಎಂದು ಬ್ರಿಟಿಷ್ ಸರ್ಕಾರ ಘೋಷಿಸಿತು. 

1947 ರಲ್ಲಿ ಸ್ವಾತಂತ್ರ ಸಿಕ್ಕರೂ ಪೂರ್ತಿ ಅಧಿಕಾರ ಸಿಕ್ಕಿರಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಅಧೀನರಾಗಿ ಮೊದಲು ಲಾರ್ಡ್ ಮೌಂಟ್ ಬ್ಯಾಟನ್ ನಂತರ ರಾಜಾಜಿ ಅವರು ನೇತೃತ್ವದಲ್ಲಿ ಇರಬೇಕಾಯಿತು.

ಆ ವೇಳೆಯಲ್ಲಿ ಭಾರತದ ಸಂವಿಧಾನದ ಸೃಷ್ಟಿಯಾಯಿತು. ಡಾ ಬಿ ಆರ್ ಅಂಬೇಡ್ಕರ್ ಅವರು ಮುಖ್ಯ ರೂವಾರಿ ಆಗಿದ್ದರು. 1950 ಜನವರಿಯಲ್ಲಿ ಭಾರತ ಪೂರ್ಣಪ್ರಮಾಣದ ಗಣರಾಜ್ಯವಾಗಿ ತಲೆ ಎತ್ತಿನಿಂತಿತು.

ಏನೆಲ್ಲ ಸಮಸ್ಯೆಗಳಿದ್ದರೂ ಇಂದು ನಮ್ಮ ನೆರೆಹೊರೆಯ ಮುಸ್ಲಿಂ ದೇಶಗಳಲ್ಲಿ ಬೌದ್ಧ ದೇಶಗಳಲ್ಲಿ, ಆಗಾಗ ಸೇನಾ ಅಧಿಕಾರಕ್ಕೆ, ಏಕಪಕ್ಷದ ಅಧಿಕಾರಕ್ಕೆ ಒಳಗಾಗುತ್ತಿದ್ದರೆ ಭಾರತ ಮಾತ್ರ ಎಲ್ಲಾ ಅಡೆ ತಡೆಗಳನ್ನು ನಿವಾರಿಸಿ ನಿಭಾಯಿಸಿಕೊಂಡು ಸಾವಿಧಾನಿಕ ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯುತ್ತಿರುವುದು ವಿಶೇಷ. ಇದು ಸಾಧ್ಯವಾಗಿದ್ದು ನಮ್ಮ ಜನರಲ್ಲಿ ಇರುವ ಅಚ್ಚ ಅಳಿಯದ ದೇಶಪ್ರೇಮ ಮತ್ತು ಸಾತ್ವಿಕ ಮನೋಭಾವ. ಎಷ್ಟೆಲ್ಲಾ ಸಾಂಸ್ಕೃತಿಕ - ಸೈನ್ಯಗಳ ದಾಳಿಗಾಳಾದರೂ ಈ ದೇಶ ತನ್ನ ಸಾಂಸ್ಕೃತಿಕ-ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದೆ, ಈ ದೇಶದ ಮಣ್ಣಿನ ಗುಣ ಮತ್ತೆ ಮತ್ತೆ ಮೊದಲಿನ ಸ್ಥಿತಿಗೆ ಮರಳುವುದು, ಜಗತ್ತಿಗೆ ಒಳಿತನ್ನೇ ಬಯಸುವುದು.


ಪ್ರಜ್ಞಾ ಹೆಗಡೆ

ಬಿ ಎ ೧

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೋಡ ಬಾ ನಮ್ಮೂರ ಸಸ್ಯಲೋಕ "

ಯುಗಾದಿ

ಡಮಾಮಿ