ಪ್ರಕೃತಿಯಲ್ಲಿ ಅಡಗಿದೆ ಸೌಂದರ್ಯ......

     ಪ್ರಕೃತಿ ಮಾತೆಯ ಅಡಿಯಲ್ಲಿ ಮಾನವ ಜಗತ್ತು ಬದುಕುತ್ತಾ ಇದೆ. ನಾವೆಲ್ಲ ಪ್ರಕೃತಿಯ ಒಂದು ಭಾಗ ಎಂದು ಹೇಳಬಹುದು. ಒಂದು ಕಾಲದಲ್ಲಿ ಪ್ರಕೃತಿ ತನ್ನ ಸೌಂದರ್ಯವನ್ನು ಹಚ್ಚ ಹಸಿರಿನಿಂದ ಕಂಗೊಳಿಸುತಿತ್ತು. ಆದರೆ ಈಗ ಮಾನವ ಸ್ವಾರ್ಥ ಹೆಚ್ಚಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಪ್ರಕೃತಿಯ ವಿನಾಶಕ್ಕೆ ಮಾನವನೆ ಕಾರಣನಾಗಿದ್ದಾನೆ. ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿದರೆ ಮುದೊಂದು ದಿನ ಪ್ರಕೃತಿ ನಮ್ಮನ್ನು ಉಳಿಸುವುದಿಲ್ಲ.
              ಪ್ರಕೃತಿಯನ್ನು ನೋಡುತ್ತಾ ಹೋದರೆ ಕಣ್ಣಿಗೆ ಸೊಬಗನ್ನು ನೀಡುತ್ತದೆ. ಅಲ್ಲಿಯ ಗಿಡ,ಮರ, ಹೂ,ಹಣ್ಣು, ನಾನಾ ರೀತಿಯಾಗಿ ಕೂಗುವ ಪ್ರಾಣಿಗಳು, ಪಕ್ಷಿಗಳ ಕಲರವ, ಬಣ್ಣ,ಬಣ್ಣದ ಚಿಟ್ಟೆಗಳು, ಹಕ್ಕಿಗಳು ಇವೆಲ್ಲಾ ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸಿಗೆ ಮುದವನ್ನು ನೀಡಿ ನಮ್ಮನ್ನು ಆಕರ್ಷಿಸುವಂತೆ ಮಾಡಿದೆ. ಪ್ರಕೃತಿ ಮನಸಿಗೆ ಒಂದುರೀತಿಯ ಶಾಂತಿಯನ್ನು ನೀಡುತ್ತದೆ. ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟು ಪ್ರಕೃತಿಯನ್ನು ಉಳಿಸುವಲ್ಲಿ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಜಾಗೃತಿಯನ್ನು ಪ್ರತಿಯೊಬ್ಬರಲ್ಲೂ ಮೂಡಿಸುವಂತಾಗಬೇಕು.
            ನಿಸರ್ಗ ಒಂದು ಕೊಡುಗೆ, ಅದನ್ನು ವರ್ಣಿಸಲು ಪದಗಳೇ ಸಾಲದು. ಪ್ರಕೃತಿಯ ಒಡಲು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ, ಪ್ರಕೃತಿಯನ್ನು ತನ್ನ ಮಡಿಲಲ್ಲಿ ಜೋಗುಳವಾಡುವ  ಭೂ ತಾಯಿ ಇವಳನ್ನು ಕಾಪಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಕೃತಿಯ ಸೊಬಗಲ್ಲಿ ಪ್ರಾಣಿ,ಪಕ್ಷಿಗಳನ್ನು ಜೀವಿಸಲು ಬಿಡಬೇಕು. ಹಸುರು ಉಸಿರಾಗಬೇಕು ಪ್ರತಿಯೊಬ್ಬ ಮಕ್ಕಳಿಗೂ ಪರಿಸರದ ಮಹತ್ವ ತಿಳಿಸುವುದರ ಜೊತೆಗೆ ಜೂನ್ 5 ರಂದು ಒಂದೊಂದು ಸಸಿಗಳನ್ನು ನೆಟ್ಟು, ಪರಿಸರವನ್ನು ಉಳಿಸುವ ಕಾರ್ಯವನ್ನು ಮಾಡಬೇಕು.
         ಸುಂದರ ಪ್ರಕೃತಿ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡಿದೆ. ಇಂತಹ ಸಂದರ್ಭದಲ್ಲಿ ಆ ಪ್ರಕೃತಿಯ ಸಂಪತ್ತಿನ ಉಳಿವು ನಮ್ಮ ಕೈಯಲ್ಲಿದೆ. ನಮ್ಮ ಬೇಕು ಬೇಡಿಕೆಯನ್ನು,  ನೈಸರ್ಗಿಕ ಸಂನ್ಮೂಲಗಳನ್ನು ನಾವು ಪರಿಸರದಿಂದ ಪಡೆದುಕೊಳ್ಳುವುದು. ಅದರ ಉಳಿವಿಗಾಗಿ ಪ್ರತಿಯೊಬ್ಬರು ಅದರ ಬಗ್ಗೆ ಯೋಚಿಸಬೇಕು. ಎಲ್ಲರೂ ನಿಸರ್ಗದ ಮಕ್ಕಳು ಚಿಗುರುವ ಎಲೆಗಳಂತೆ ನಮ್ಮ ದಿನನಿತ್ಯದ ಜೀವನ ಪರಿಸರದ ಸೌಂದರ್ಯ ಇನ್ನೂ ಹೆಚ್ಚಾಗಲಿ,,,,,ಇದು ಪ್ರಕೃತಿಯಲ್ಲಿ ಅಡಗಿರುವ ಸೌಂದರ್ಯ.......

Veena S Gouda
B.A1st

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ನಮ್ಮ ಅರಳೇಶ್ವರ