ಶಿರಸಿಯಲ್ಲಿ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಯಶಸ್ವಿ

 ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಿತ ಹೊಸ ಮಾರುಕಟ್ಟೆ ಠಾಣೆ ಹಾಗೂ ಎನ್ ಎಸ್ ಎಸ್ ವಿಭಾಗ ಇವರ ವತಿಯಿಂದ ಇಂದು ಮಾದಕ-ದ್ರವ್ಯ ಬಹಿಷ್ಕಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಿಎಸ್ಐ ಭೀಮಶಂಕರ್ ಇವರು ಮಾತನಾಡಿ ಡ್ರಗ್ಸ್ ಸೇವನೆ ಬಹಳ ಅಪಾಯಕಾರಿಯಾಗಿದ್ದು ಇದರ ಸೇವನೆಯಿಂದ ಸಮಾಜದ ಸುವ್ಯವಸ್ಥೆಗೆ ಲೋಪ ಬರುವಂತಹ ಕೃತ್ಯ ನಡೆಯುತ್ತದೆ ಹಾಗೂ ಡ್ರಗ್ಸ್ ಸೇವನೆ ಮಾರಾಟ ಕಂಡುಬಂದಲ್ಲಿ ಎನ್ ಡಿ ಪಿ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಸಿರಸಿ ವ್ಯಾಪ್ತಿಯಲ್ಲಿ 15 ಜನರನ್ನು ಪರೀಕ್ಷೆಗೊಳಪಡಿಸಿದಾಗ 12 ಜನರಿಗೆ ಸೇವನೆ ದ್ರಢಪಟ್ಟಿದೆ ಎಂದರು.

 ಪೊಲೀಸ್ ಸಿಬ್ಬಂದಿ ಅಶೋಕ್ ನಾಯಕ್ ಮಾತನಾಡಿ ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುತ್ತಿರುವುದು ಸೆಷನ್ ಕೋರ್ಟ್ ನಲ್ಲಿ ಸಾಬೀತಾದಲ್ಲಿ ಹತ್ತು ಲಕ್ಷ ದಂಡ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗಡಿಭಾಗದಲ್ಲಿ ಕಂಡುಬಂದಲ್ಲಿ ಇಂಡಿಯನ್ ಆರ್ಮಿ ಕೂಡ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

 ಪ್ರಾಚಾರ್ಯರು ಟಿಎಸ್ ಹಳೆಮನೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು
 ಪ್ರೊ ರಾಘವೇಂದ್ರ ಹೆಗಡೆ ಜಾಜಿ ಗುಡ್ಡೆ ಅವರು ವಂದಿಸಿದರು.

Akshay bhat 
B.A 1 journalism

Chinmay hegde 
B.A 1 journalism

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ನಮ್ಮ ಅರಳೇಶ್ವರ