*'ಲಿಪಿಗಳ ರಾಣಿ 'ಕನ್ನಡದ ಮೇಲೆ ಹಿಂದಿ ಹೇರಿಕೆ ಸಲ್ಲದು*.


ಭಾರತದ ರಾಷ್ಟೀಯ ಭಾಷೆ 'ಹಿಂದಿ' ಎಂದು ಸ್ವಾತಂತ್ರ್ಯ ನಂತರ ಬಹುತೇಕ ಭಾರತೀಯರನ್ನು ನಂಬಿಸಿಬಿಡಲಾಗಿತ್ತು. ಇದರ ಪರಿಣಾಮವಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದೆಲ್ಲೆಡೆ ಹಿಂದಿ ತನ್ನ ಪ್ರಭಾವವನ್ನು ಬೀರಿ  ಸಣ್ಣ ಪುಟ್ಟ ಭಾಷೆಗಳ ಸ್ಥಾನವನ್ನು ತಾನು ಗಿಟ್ಟಿಸಿಕೊಂಡು ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಪಟ್ಟಿಯಲ್ಲಿ ಹಿಂದಿ ಅಗ್ರಗಣ್ಯ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಸುಮಾರು 590 ಮಿಲಿಯನ್ ಜನರು ಹಿಂದಿ ಮಾತನಾಡುತ್ತಿರುವರು.


'ಒಂದು ದೇಶ ಒಂದು ಭಾಷೆ ' ಎಂಬ ತತ್ವದಡಿಯಲ್ಲಿ ಲಿಪಿಗಳ ರಾಣಿ ಎಂದು ಕರೆಯಲ್ಪಡುವ ಕನ್ನಡ ನೆಲದ ಮೇಲೂ ಕೂಡ ಹಿಂದಿಯನ್ನು ಹೇರುತ್ತಾ ಬಂದಿದ್ದಾರೆ. ೨೫೦೦ ವರ್ಷಗಳ ಅಗಾಧ ಇತಿಹಾಸ ಇರುವ ಕನ್ನಡದ ಮೇಲೆ ಹಿಂದಿ ಇನ್ನು ಅಂಬೆಗಾಲು ಇಡುತ್ತಿರುವ ಹಸುಗೂಸಿದ್ದಂತೆ. ಕನ್ನಡಿಗರು ಹಳೆಗನ್ನಡದಿಂದ ನಡುಗನ್ನಡ ಕಾಲಕ್ಕೆ ಬಂದಾಗಲೂ ಹಿಂದಿ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಿರಲಿಲ್ಲ. 19 ನೆ ಶತಮಾನದಲ್ಲಿ ಹಿಂದಿ ತನ್ನ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವೀಯಾಯಿತು.


'ಹಿಂದಿ ನಮ್ಮ ರಾಷ್ಟೀಯ ಭಾಷೆ ' ಎನ್ನುವ ಮತಿಹೀನರಿಗೆ ಹಿಂದಿ ಹೇಗೆ ಕವಲೊಡೆಯಿತು ಎಂಬುವುದೇ ಇನ್ನು ಸರಿಯಾಗಿ ತಿಳಿದಿಲ್ಲ. ಭಾರತಕ್ಕೆ ಪರ್ಶಿಯನ್ನರ ಆಕ್ರಮಣದಿಂದ ಪರ್ಶಿಯನ್ ಭಾಷೆಯು ಹಿಂದಿಯ ಮೇಲೆ ಪ್ರಭಾವ ಬೀರಿತು ಪ್ರಭಾವ ಬೀರಿತು. ಅಲ್ಲದೆ ಪ್ರಾಕೃತ ಭಾಷೆಯಿಂದ ಅಪಭ್ರoಶವಾಗಿ ಹಿಂದಿ ಹುಟ್ಟಿದೆ.19 ನೇ ಶತಮಾನದಲ್ಲಿ ಹಿಂದಿ ಆಡಳಿತ ಭಾಷೆಯಾಯಿತು. ತದನಂತರ ಪರ್ಷಿಯನ್ ಭಾಷೆಯ ಪದಗಳನ್ನು ತೆಗೆದು ಅದಕ್ಕೆ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ಶಬ್ದಗಳನ್ನು ಎರವಲು ಪಡೆದುಕೊಂಡಿತು. ವಿಶೇಷ ಸಂಗತಿಯೆಂದರೆ ಹಿಂದಿಗೆ ಮೂಲತಃ ಲಿಪಿಯಿಲ್ಲ ಅದು ಬಳಸುತ್ತಿರುವಿದು ದೇವನಾಗರಿ ಲಿಪಿಯನ್ನು ಎಂದರೆ ಕೆಲವರು  ಆಶ್ಚರ್ಯಚಕಿತರಾಗಬಹುದು.


ಹಿಂದಿ ಆಡಳಿತ ಭಾಷೆಯಾದ ಮೇಲೆ ' ಹಿಂದಿ ಪ್ರಚಾರ ಸಭಾ ' ಹುಟ್ಟಿ ಹಿಂದಿಯನ್ನು ದಕ್ಷಿಣ ಭಾರತೀಯರ ಮೇಲೆ ಹೇರಲು ಶುರು ಮಾಡಿದರು. ಹಿಂದಿ ಹೇರಿಕೆಗೆ  ತೀವ್ರತರವಾದ ಪ್ರತಿರೋಧ ವ್ಯಕ್ತವಾಯಿತು. ಅದರಂತೆ ಗುಜರಾತ್ ಹೈಕೋರ್ಟ್ ೨೦೧೦ ರಲ್ಲಿ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ  ಎಂದು ಪರಿಗಣಿಸಿಲ್ಲ ಎಂಬ ತೀರ್ಪು ನೀಡಿತು. ಸಂವಿಧಾನದ 8 ನೇ ಪರಿಚ್ಚೇಧದಲ್ಲಿರುವ 344 A ಹಾಗೂ 351 ರ ಪ್ರಕಾರ 22 ಭಾಷೆಗಳಿಗೆ ಮಾನ್ಯತೆ ಲಭಿಸಿದೆ. ಹೊರತಾಗಿ ಯಾವುದೇ ಭಾಷೆ ರಾಷ್ಟೀಯ ಭಾಷೆಯಲ್ಲ ಎಂಬುದು ಸಾಬೀತಾಗಿದೆ.


ಹಿಂದಿಯು ತ್ರಿಭಾಷ ಸೂತ್ರದಡಿಯಲ್ಲಿ ಭಾರತವನ್ನು ವ್ಯಾಪಿಸಿತು. ಅಲ್ಲದೆ ಹಿಂದಿಯ ಹೇರಿಕೆಯಿಂದ ಅನೇಕ ಭಾಷೆಗಳು ನಶಿಸಿವೆ. ಉದಾಹರಣೆಯೆಂದರೆ ಬಿಹಾರದ ಭೋಜಪುರಿ, ಮಗಧಿ, ಉತ್ತರಪ್ರದೇಶದ ಅವಧಿ ಇಂತಹ ಎಷ್ಟೋ ಭಾಷೆಗಳು ಇಂದು ಕಣ್ಮರೆಯಾಗಿದೆ. ಆದರೂ ಹಿಂದಿ ಮಾತನಾಡುವವರ ವಾದವೆಂದರೆ ಹಿಂದಿಯನ್ನು ದೇಶದ 43% ರಷ್ಟು ಹಿಂದಿ ಮಾತನಾಡುತ್ತಾರೆ ಆದಕಾರಣ ಹಿಂದಿ ರಾಷ್ಟೀಯ ಭಾಷೆ ಏಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ರೂಪವಾಗಿ ಅಣ್ಣಾಮೋರೈರವರ ಮಾತು ಹೀಗಿದೆ, ' ಹೆಚ್ಚು ಜನ ಮಾತನಾಡುವ ಭಾಷೆ ರಾಷ್ಟೀಯ ಭಾಷೆಯಾದರೆ ರಾಷ್ಟೀಯ ಪಕ್ಷಿ ನವಿಲಿಗಿಂತ ಕಾಗೆಗಳು ಹೆಚ್ಚು ಕಾಣಸಿಗುತ್ತವೆ  ಅದನ್ನೇ ರಾಷ್ಟೀಯ ಪಕ್ಷಿಯಾಗಿ ಮಾಡಬಹುದಲ್ಲ ; ಎಂಬ ಉತ್ತರ ರೂಪವು ಸಮಂಜಸವಾಗಿದೆ.


ನಾವು ಕನ್ನಡಿಗರು ಹಿಂದಿ ಕಲಿಕೆಯನ್ನು ವಿರೋಧಿಸುತ್ತಿಲ್ಲ ಆದರೆ ಕನ್ನಡ ನೆಲದ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದೇವೆ. ಕನ್ನಡಿಗರು ವಿಶಾಲ ಹೃದಯದವರು ಆದರೆ ಅದರ ದುರ್ಬಳಕೆಯಾದರೆ ಅದರ ವಿರುದ್ಧ ಸಿಡಿದೇಳುವ ಕನ್ನಡದ ಕಲಿಗಳು. ಕನ್ನಡವನ್ನು ಕಬಳಿಸುವ ಹಿಂದಿಯನ್ನು ವಿರೋಧಿಸೋಣ.


✍️ನಾಗರಾಜ್ ಶೇಟ್✍️

BA ಪ್ರಥಮವರ್ಷ

ಶಿರಸಿ ಉತ್ತರಕನ್ನಡ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ