ಬೆಳಕು
ಬೆಳಕು ಏನಿದು ಬೆಳಕು? ಎಲ್ಲಿದೆ ಬೆಳಕು? ಹೇಗಿರುತ್ತದೆ ಬೆಳಕು? ಈ ಬೆಳಕಿನ ಬಗ್ಗೆ ಪ್ರಶ್ನೆಗಳು ನನಗೆ ಆಗಾಗ ಹುಟ್ಟುತ್ತಿರುತ್ತವೆ. ಬೆಳಕಿನ ಬಗೆಗೆ ನನ್ನ ಮನದಲ್ಲಿ ಪ್ರಶ್ನೆಗಳುಮೂಡಿದಾಗಲೆಲ್ಲ ನನ್ನಲ್ಲಿಯೇ ನಾನು ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ನನ್ನ ಪ್ರಕಾರ ಬೆಳಕು ಎಂಬುವುದು ಪ್ರತಿಯೊಬ್ಬರಿಗೂ ಬೇರೆ ಬೇರೆ ರೂಪದಲ್ಲಿ ತೋರುತ್ತದೆ. ಬೆಳಕು ಒಂದು ಶಾಂತಿಯ ಸಂಕೇತ, ಬೆಳಕು ಒಂದು ಕ್ರಾಂತಿಯ ಸಂಕೇತ, ಅಭಿವೃದ್ಧಿ, ಯಶಸ್ಸು , ಹೊಸ ಹುಮ್ಮಸ್ಸುಗಳ ಸಮ್ಮಿಲನ. ನಾವುಗಳು ಜಗತ್ತಿನ ಪ್ರತಿಯೊಂದು ವಸ್ತು ವಿಷಯಗಳನ್ನು ನಮ್ಮ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಹೊಲಿಸುತ್ತೇವೆ , ಹಾಗೆಯೇ ಬೆಳಕು ಕೂಡ..! ಈಗ ಬೆಳಕು , ಇದನ್ನೇ ತೆಗೆದುಕೊಂಡರೆ ಇದನ್ನು ಹಲವಾರು ಜನರು ಹಲವು ದೃಷ್ಟಿಕೋನಗಳಿಂದ ನೋಡುವರು . ಬಡವರಿಗೆ ಕಷ್ಟ ಕಾಲದಲ್ಲಿ ನಿಧಿ ಸಿಕ್ಕಾಗ ಆಗುವ ಆನಂದದಲ್ಲಿ , ರೈತನಿಗೆ ಬರಗಾಲದಲ್ಲಿ ಮಳೆ ಬಂದಾಗ ವ್ಯಕ್ತ ಪಡಿಸುವ ಸಂತೋಷದಲ್ಲಿ , ಒಬ್ಬ ಅಂದನಿಗೆ ದೃಷ್ಟಿ ಬಂದು , ಅವನು ತನ್ನ ತಂದೆ ತಾಯಿಯರನ್ನು ನೋಡಿದ ಮೊದಲ ನೋಟದಲ್ಲಿ, ನಿರಂತರ ಪರಿಶ್ರಮದ ಫಲದಲ್ಲಿ ನಾವು ಬೆಳಕಿನ ಅನುಭವ ಕಾಣಬಹುದು. ಇದನ್ನು ಕೆಲವರು ಬಹಿರಂಗದಲ್ಲಿಅನಭವಿಸಿದರೆ ,ಕೆಲವರು ಅಂತರಂಗಗಳಲ್ಲಿ ಅನುಭವಿಸುವರು. ಕನ್ನಡದ ಷೇಕ್ಸ್ ಪಿಯರ್ ಕುವೆಂಪುರವರ ಗದ್ಯ ಹಾಗೂ ಕಾವ್ಯಗಳಲ್ಲಿ , ಬೇಂದ್ರೆ ಅವರ ಪದ್ಯಗಳಲ್ಲಿ , ಡಿವಿಜಿ ಅವರ ಕಗ್ಗಗಳಲ್ಲ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ