ಮಲೆನಾಡಿನ ಮಳೆಯ ಸೊಬಗು
ಮೂಡಣದ ಅಂಚಿನಲ್ಲಿ ಸುಯ್ ಎಂದು ಗಾಳಿ ಅಲೆ ಮಿರಿಮಿರಿ ಹೊಳೆಯುವ ಮಿಂಚುಗಳ ಥಳಕು ಬೆಳಕು ಮೊಡ ಮೊಡವು ತಾಕಿ ಗುಡುಗುಗಳ ಆರ್ಭಟ ತಾನೇನು ಹಿಂದಿಲ್ಲ ಎನ್ನುವ ಆನೇಕಲ್ಲಿನ ಸುರಿಮಳೆ ಜೊಜ್ಜೊತೆಗೆ ಮೇಘರಾಜನು ಮುತ್ತಿನ ರಾಶಿಯಂತೆ ಸುರಿದು ಭುವಿಗೆ ತಂಪನ್ನೆರೆಯುವ ಸಂಭ್ರಮವೇ ಮಳೆಗಾಲದ ಆಗಮನ.
ಮಳೆಗಾಲ ಬಂದೊಡನೆ ಮಲೆನಾಡಿನ ಜನರಿಗೆ ಏನೋ ಒಂದು ತರಹದ ಸಂತಸ. ರೈತನಿಗಂತೂ ' ಸ್ವರ್ಗಕ್ಕೆ ಮೂರೇ ಗೇಣು ' ಎಂಬಂತೆ ಆಗುತ್ತದೆ.
ಮಳೆಗಾಲದಲ್ಲಿ ಮಲೆನಾಡ ತಾಯಿ ಕಂಗೊಳೆಸುವದೊಂದೆಡೆಯಾದರೆ, ರೈತರು ಹೊಲಕ್ಕೆ ಹೋಗುವದು ಇನ್ನೊಂದೆಡೆ. ಅದನ್ನು ಕಂಡಾಗ 'ನೇಗಿಲ ಹಿಡಿದಾ ಹೊಲದೊಳು ಹಾಡುತ' ಎಂಬ ಸಾಲೇ ನೆನಪಾಗುತ್ತದೆ. ಹೊಲದ ಹೂಳೆತ್ತುವ ಸಮಯದಲ್ಲಿ ಅದರ ಮೇಲೆ ನಡೆಯುವದೇ ಒಂದು ಸಂತಸ.
ವಿಪರ್ಯಾಸವೆಂದರೆ, ರೈತರು ಕಡಿಮೆಯಾಗಿದ್ದಾರೆ ಮತ್ತು ಇರುವ ರೈತರು ನೇಗಿಲ ಬದಲು ಯಂತ್ರ ಬಳಸುತ್ತಿದ್ದಾರೆ.
ಇದರ ನಡುವೆ, ಮಳೆರಾಯನ ಆರ್ಭಟ. ಮಳೆಗಾಲದಲ್ಲಿ ಮಳೆ ಹುಳಗಳ ಶಬ್ದ, ಕಪ್ಪೆಗಳ ಸದ್ದು, ಪಕ್ಷಿಗಳು ಸುಮಧುರವಾಗಿ ಹಾಡಿದರೆ ಮಳೆರಾಯ ತಾನೇನು ಕಮ್ಮಿ ಇಲ್ಲ ಎಂಬಂತೆ ಬರುತ್ತಾನೆ. ಮಳೆರಾಯನ ಆರ್ಭಟಕ್ಕೆ ಓಡಾಡುವ ರಸ್ತೆ ಮುಚ್ಚಿ ಹೋಗುತ್ತದೆ. ಓಡಾಟದ ಮೇಲಿರುವವರಿಗೆ ಮಳೆಗಾಲ ಒಂದು ಜೈಲಿನಂತೆ.
ಮಳೆ ಮತ್ತು ಗಾಳಿ ಹೆಚ್ಚಾದರೆ, ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಆಧುನಿಕ ಮೊಬೈಲ್ ಗಳಿಗೆ ಸಿಗ್ನಲ್ ನ ಕೊರತೆ ಅತೀ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಇದ್ದರೂ ೧-೨ ದಿನಕ್ಕೆ ಮಾತ್ರ.
ಈ ಸಮಸ್ಯೆ ಗಳ ನಡುವೆ ಹಬ್ಬಗಳು ತಾ ಮುಂದು ನಾ ಮುಂದು ಎಂಬಂತೆ ಬರುತ್ತದೆ.
ಇದೆಲ್ಲದರ ನಡುವೆ ಜಾಗತೀಕರಣದ ಹುಚ್ಚು ಹಿಡಿದ ಮಾನವ ಅಭಿವೃದ್ಧಿ ಹೊಂದುತ್ತ ಪ್ರಕ್ರತಿಯ ನಿಯಮ ಒಡೆದು ಮುನ್ನುಗ್ಗುತ್ತಿದ್ದಾನೆ. ಕೆರೆ ಗಳನ್ನು ಮುಚ್ಚಿ ನಗರ ನಿರ್ಮಿಸುತ್ತಿದ್ದಾನೆ. ನಗರ ಬೆಳೆಯುತ್ತ ಇರುವ ಕೆಲ ಹಳ್ಳಿಯೆಡೆಗೆ ಮುಖ ಮಾಡಿದೆ. ಹಳ್ಳಿಗಳು ನಗರ ವಾದರೆ, ಪ್ರಕ್ರತಿಯ ಮುನಿಸನ್ನು ತಡೆವ ಶಕ್ತಿ ಆಧುನಿಕತೆಗಿಲ್ಲ.
ಆದ್ದರಿಂದ ಪ್ರಕ್ರತಿ ಉಳಿಸಲು ಮುಂದಾಗೋಣ.
✍️ ಚಿನ್ಮಯ್ ಹೆಗಡೆ
B.A 1st
Super...
ಪ್ರತ್ಯುತ್ತರಅಳಿಸಿ