ಹೊಸ ಶಿಕ್ಷಣ ನೀತಿ

ಹೊಸ ಶಿಕ್ಷಣ ನೀತಿ                  
ಮನುಷ್ಯ ತನ್ನ ಪೂರ್ಣ ಮಾನವ ಸಾಮಥ್ರ್ಯಗಳಿಸಿಕೊಳ್ಳಲು ಸಮಾನತೆಯಳ್ಳ ಮತ್ತು ನ್ಯಾಯಸಂಗತವಾದ ಸಮಾಜವೂಂದನ್ನು ಅಭಿವೃದ್ಧಿ ಪಡಿಸಲು ಹಾಗೂ ರಾಷ್ಟ್ರದ ಎಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ.  ಶಿಕ್ಷಣವು ಮನುಷ್ಯನ ಜೀವನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಬಾವ ಬೀರುತ್ತದೆ..ಆದರೆ ಇತ್ತೀಚಿಗೆ ದೇಶದಲ್ಲೇ ಕರ್ನಾಟಕವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ(NEP) ಜಾರಿಗೊಳಿಸಿರುವ ಮೊದಲ ರಾಜ್ಯಗಳಲ್ಲಿ ಒಂದಾಗಿದೆ...ಇದರ ಉದ್ದೇಶ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ನೀಡಬೇಕೆಂಬುದು. ಆದರೆ ಇದು ಅವ್ಯವಸ್ಥೆಯಿಂದ ಕೂಡಿದೆ ಹಾಗೂ ತುಂಬಾ ಗೊಂದಲ ವನ್ನು ಸೃಷ್ಟಿ ಮಾಡಿದೆ..   
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲಿಗೆ ಅನುಷ್ಠಾನ ಗೊಳಿಸುತ್ತಿರುವುದಾಗಿ ರಾಜ್ಯ ಸರಕಾರ ಬೆನ್ನು ತಟ್ಟಿಕೂಳ್ಳುತ್ತಿರುವ ನಡುವೆಯೇ ಕಾಲೇಜು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಭೋದಕ - ಭೋದಕೇತರ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಇಲ್ಲದೇ ಗೊಂದಲದಲ್ಲಿರುವುದು ಕಂಡು ಬರುತ್ತಿತ್ತು.. NEP ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳುತ್ತಿರುವ ಪ್ರಶ್ನೆಗಳಿಗೆ ಬಹುತೇಕ  ಎಲ್ಲ ಕಾಲೇಜುಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಯಿಂದ ನಮಗೇ ಅರ್ಥವಾಗಿಲ್ಲ...ನಿಮಗೇನು ವಿವರಿಸೋಣ..?  ಎಂಬ ಮರುಪ್ರಶ್ನೆ ತೋರಿಬರುತ್ತವೆ. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ನೂರೆಂಟು ಗೊಂದಲಗಳಿವೆ. ಕೊರೋನದಿಂದ ಎಲ್ಲವೂ ಅಸ್ತವ್ಯಸ್ತವಾಗಿದ್ದರಿಂದ ಈಗ ಶರವೇಗದ  ಸ್ಥಿತಿಗೆ ವಿದ್ಯಾರ್ಥಿಗಳು - ಪ್ರಾಂಶುಪಾಲರು, ಉಪನ್ಯಾಸಕರು ಹೊಂದಿಕೊಂಡಿದ್ದಾರೆ. ಪಿ.ಯ.ಸಿ ಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಿರುವುದರಿಂದ ಪದವಿ ಕಾಲೇಜುಗಳಲ್ಲಿ ನೂಕುನುಗ್ಗಲಿತ್ತು . ಆದರೆ ಈಗ ಹೊಸ ಶಿಕ್ಷಣ ನೀತಿಯ ನಾಲ್ಕು ವರ್ಷದ ಕೋರ್ಸ್ ನಲ್ಲಿ ಮಧ್ಯದಲ್ಲೇ ಕಾಲೇಜು ತ್ಯಜಿಸಿದರೆ ಪ್ರತಿ ವರ್ಷಕ್ಕೊಂದು ಸರ್ಟಿಫಿಕೇಟ್  ನೀಡಲಾಗುತ್ತಿದೆ, ಇದರಿಂದ  ಸರ್ಟಿಫಿಕೇಟ್ ಸಿಗಬಹುದೇ ಹೊರತು ಶಿಕ್ಷಣವಲ್ಲ , ಯಾವುದೇ  ಪಡವಿಯು  ಪೂರ್ಣವಾಗಿ ಮುಗಿಯದೇ ಹೋದರೆ  ಅರ್ದಂಬರ್ದ ದ ಜೀವನ ವನ್ನು ಮುಂದೆ ನೆಡೆಸ ಬೇಕಾಗುತ್ತದೆ,
ಅದಕ್ಕಾಗಿ  ಈ ನೂತನ ಶಿಕ್ಷಣ ಕಾಯಿದೆಯಲ್ಲಿ   ಮೊದಲಿನ ತರಹದ   ಪೂರ್ಣ ಪ್ರಮಾಣದ 
ಪದವಿ  ಮುಗಿಸಿದವರಿಗೆ ಮಾತ್ರ 
ಸಟ್ರಿಫಿಕೇಟ್  ನೀಡಬೇಕು ಎಂದು  ಮರು ತಿದ್ದುಪಡಿ ಮಾಡಿಕೊಳ್ಳಬೇಕಾಗಿದೆ, ಇದರಿಂದ  ಸಮಾಜಕ್ಕೆ ಒಳ್ಳೆಯ ವಿದ್ಯಾವಂತ ವಿದ್ಯಾರ್ಥಿಗಳನ್ನು ಕೊಡುಗೆ ಯಾಗಿ ನೀಡುವುದರಲ್ಲಿ  ಯಾವುದೇ ಅನುಮಾನವಿಲ್ಲ , ಇದು ಉತ್ತಮ  ರಾಷ್ಟ್ರ ನಿರ್ಮಾಣಕ್ಕೆ 
ಬುನಾದಿ ಆಗಿ  ನಿರ್ಮಾಣವಾಗುತ್ತದೆ........                 

ಕಾವ್ಯಾ ಹೆಗಡೆ                              
 BA 2 sem

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ