ಶಿಕ್ಷಣದ ಮಹತ್ವ

ಶಿಕ್ಷಣದ ಮಹತ್ವ:
ಈದೇಶದಲ್ಲಿ ಎಲ್ಲ ವೂ ಚುನಾವಣೆ 

ಅಧಾಂತವಾಗಿ ಚುನಾವಣೆ ಗೆಲ್ಲುವುದೇ ಎಲ್ಲಾ ಚಟುವಟಿಕೆಗಳ
 ಅಡಿಪಾಯವಾಗಿರುವ ಸಂದರ್ಭದಲ್ಲಿ, ವಿದ್ಯಾವಂತರು
ವೈಚಾರಿಕ ನಿಲುವಿನಿಂದ ಯೋಚಿಸದೆ ಜಾತಿ, ಧರ್ಮ,
ಮತ, ಪಕ್ಷ, ಪಾತ್ರ, ಲಿಂಗ ಎಂಬ ಸ್ವಯಂ  ಸ್ಥರಗಳ ಮಧ್ಯ
-ಸಿಲುಕಿಕೊಂಡು, ಪ್ರಜಾಪ್ರಭುತ್ವವನ್ನು ಚುನಾವಣೆ ಗಳಲ್ಲಿ ಮಾತ್ರ ಕಾಣಿಸುತ್ತಿರುವ
ನಾಗರಿಕ ಸಮಾಜದ ಪರಿಸ್ಥಿತಿಯಲ್ಲಿ    
ಡಾ.ಬಿ.ಅರ್. ಅಂಬೇಡ್ಕರರನ್ನು ನೆನಪಿಸಿಕೊಳ್ಳುವುದು 
ಮತ್ತೂ ಅವರು ರಚಿಸಿದ ಸಂವಿಧಾನದ ಅರಿವಿನೊಂದಿಗೆ 
ದೇಶದ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡು ಕೊಳ್ಳುವ ಪ್ರಯತ್ನ ಸದ್ಯದ  
 ಅತಿ ದೊಡ್ಡ ಸವಾಲು.ಈ ಸವಾಲು 
ಎದುರಿಸಬೇಕಾದರೆ ಈ ದೇಶದ ಭಾವಿಪ್ರಜೆಗಳಾದ ಶಾಲಾ 
ಕಾಲೇಜುಗಳ ವಿದ್ಯಾರ್ಥಿಗಳು ಅಂಬೇಡ್ಕರ್‌ರವರ ಚಿಂತನೆಗಳನ್ನು 
ಮೈಗೂಡಿಸಿಕೊಂಡು ಸಂವಿಧಾನದ ಡಿಯಲ್ಲಿ ಜೀವನ ಸಾಗಿಸುವ
ಮತ್ತು ದೇಶವನ್ನು ಮುನ್ನಡೆಸುವ ತಿಳುವಳಿಕೆ ಶಕ್ತಿ
ಸಾಮರ್ಥ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯ.


ಡಾ.ಬಿ.ಆರ್.ಅಂಬೇಡ್ಕರವರು ದಾ ದರ್ಶನಿಕ
ಭಾರತೀಯ ಸುಧಾರಕ, ಗುಲಾಮಗಿರಿಯನ್ನು ತೊಡೆದು ಹಾಕಲು 
ಶಿಕ್ಷಣವೇ ಒಂದು  ಅಸ್ತ್ರವೆಂದು ನಂಬಿದ್ದರು. ಇದು  ಶೋಷಿತರಲ ಶೋಷಿತರ ಲ್ಲಿ
 ಜಾಗೃತಿಯನ್ನು ಮೂಡಿಸಿ ಅವರ ಸಾಮಾಜಿಕ ಸ್ಥಿತಿ
ಆರ್ಥಿಕ ಸುಧಾರಣೆ  ಅವರ ಸ್ಥಿತಿ, ಅರ್ಥಿಕ ಸುಧಾರಣೆ ಮತ್ತು ಅವರ ರಾಜಕೀಯ ಸ್ವಾತಂತ್ರ್ಯ ಪಡೆಯಬೇಕೆಂದು ಅವರ ಅಭಿಲಾಷೆ ಯಾಗಿತ್ತು.
ಅಂಬೇ ಡ್ಕರ್ ರವರ ಪ್ರಕಾರ ಸಮಾಜಕ್ಕೆ ಅನನ್ಯ ಕೊಡುಗೆ
ನೀಡುವಂತೆ ಮಾಡುವ ಪ್ರತಿ ವ್ಯಕ್ತಿಯಲ್ಲಿ ಅನ ಅನನ್ಯ ಸಾಮರ್ಥ್ಯವನ್ನು ಸಾಧಿಸಲು  ನೆರವಾಗುವುದೇ
ಶಿಕ್ಷಣದ ಗುರಿಯಾಗಬೇಕು, ಶಿಕ್ಷಣವು ಮಕ್ಕಳ ಗುರಿಯನ್ನು  ರಚಿಸುವಂತೆ  ಮಾಡುವ 
 ಸಾಮ ರ್ಥ್ಯವನ್ನು ಹೊಂದಿದೆ.ಡಾ.ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ 
 ಶಿಕ್ಷಣದಿಂದ ಯಾರನ್ನೂ ಸಹವಂಚಿತರನ್ನಾಗಿ ಮಾಡ
- ಬಾರದು, ಇದು ಈ ದೇಶದ  ಎಲ್ಲಾ ಜನರನ್ನು ತಲುಪಬೇಕು 
ಮತ್ತು ಶೋಷಿತ ವರ್ಗದವರು ಅದನ್ನು
ಕನಿಷ್ಠ ವೆಚ್ಚದಲ್ಲಿ ಪಡೆಯುವಂತಿರಬೇಕು.
ಆದ್ದರಿಂದ  ಅವರು ಸಂವಿಧಾನದಲ್ಲಿ  ಶಿಕ್ಷಣ
– ವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ
ಹಕ್ಕಾಗಿ  ನೀಡಿದರು.

ಶಿಕ್ಷಣಸಾ ಸ್ವಾತಂತ್ರ್ಯವನ್ನು  ರಕ್ಷಿಸುವ ಮತ್ತು
ಸಮಾಜದಲ್ಲಿ ತುಳಿತಕ್ಕೊಳಗಾದವರ ನ್ನು ಮೇಲೆತ್ತಲು ಇರುವ ಸಾಧನವಾಗಿದೆ.
 ಶಿಕ್ಷಣದಿಂದ ಒಬ್ಬ ವ್ಯಕ್ತಿ ಜೀವನದಲ್ಲಿ
ಉತ್ತಮ ಬೆಳಕು ಕಾಣಬಹುದು. ಶಿಕ್ಷಣದೂರದಷ್ಟಿಕೋನ
ಮತ್ತು ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ಶಿಕ್ಷಣ  ಕೇವಲ 
ಜ್ಞಾನಕ್ಕಾಗಿ ಅಲ್ಲ, ಮಾನವನಲ್ಲಿ  ಜ್ಞಾನ ವೃದ್ಧಿಯ ಜೊತೆಗೆ
'ನೀತಿ, ಸನ್ನಡತೆ ಮತ್ತು ಮಾನವೀಯ ಮೌಲ್ಯಗಳನ್ನು
ಬೆಳಸುವುದೇ ಶಿಕ್ಷಣ. ಪ್ರತಿಯೊಬ್ಬ ವ್ಯಕ್ತಿ ಪ್ರಜ್ಞಾವಂತ ನಾಗರಿಕರು ಬೇಕು,
ಪಡೆದ ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ 
ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ  
ಆಲೋಚಿಸುವಂತೆ ಮಾಡುವದೇ ಆಗಿದೆ. ಶಿಕ್ಷಣ
ಪಡೆದು ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ರಾಜಕೀಯ
ಸಾಮಾಜಿಕ, ಅರ್ಥಿಕ ಮತ್ತು ನೈತಿಕ ಬೆಳವಣಿಗೆ ಸಾಧ್ಯವಾಗುವುದು, ಇದರಿಂದ ಸದೃಢ ಸಮಾಜ, ರಾಷ್ಟ್ರವನ್ನು 
ಕಟ್ಟುವುದು ಸಾಧ್ಯವಾಗುವುದು ಅಂಬೇಡ್ಕರ ಅವರ ನಿಲುವಾಗಿತ್ತು. ಅಂಬೇಡ್ಕರ್  ಅವರ ಬದುಕು ಮತ್ತು
ಬರಹವು ಶಿಕ್ಷಣ, ಸಂಘಟನೆ ಮತ್ತು ಹೋರಾಟದ
ತಳಹದಿಯಲ್ಲಿದೆ.  ಅವರ ಚಿಂತನೆಯ ಮೊದಲ ಮೆಟ್ಟಿಲು 
ಶಿಕ್ಷಣ, ಈ  ಶಿಕ್ಷಣ ಪದ್ಧತಿಯ ಬಗ್ಗೆ ಅವರು ಹೇಳುವುದು
ಹೀಗೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ  ಸ್ಥಾನವನ್ನು ಗಳಿಸಿ  

ಆರ್ಥಿಕ  ಸುಧಾರಣೆ ಹೊಂದಿ, ರಾಜಕೀಯ
ಸ್ವಾತಂತ್ರ್ಯವನ್ನು ಪಡೆದು ಮತ್ತು ಪ್ರತಿ ವ್ಯಕ್ತಿಯೂ

ಸಮಾಜಕ್ಕೆ ಅನನ್ಯ ಕೊಡುಗೆಯನ್ನು ನೀಡುವಂತೆ
ಮಾಡುವುದೇ ಶಿಕ್ಷಣ. ಶಿಕ್ಷಣದಲ್ಲಿ ಜ್ಞಾನವು ಅನುಕಂಪ 
ಮತ್ತು ಸ್ನೇಹಪರತೆಗಳೊಡನೆ ಮಿಶ್ರಣವಾಗಬೇಕು, ಕಲಿಕರ್ಥಿಗಳಲ್ಲಿ ಅಥವಾ  ವಿದ್ಯಾವಂತರಲ್ಲಿ ನಿಸ್ವಾರ್ಥ, ನಿಷ್ಪಕ್ಷಪಾತ
ಮತ್ತೂ ಹೃದಯವಂತಿಕೆಗಳು ತುಂಬಿರಬೇಕು ನೈತಿಕ ಮೌಲ್ಯಗಳಿಲ್ಲದ  ಶಿಕ್ಷಣ ಅತ್ಯಂತ ಅಪಾಯಕಾರಿ ಆದ್ದರಿಂದ ಉತ್ತಮ ನಡತೆ
ಬೆಳವಣಿಗೆಯು ಶಿಕ್ಷಣದ
ಗುರಿಯಾಗಬೇಕು ಮತ್ತು ಸಮಜದ ಸುಧಾರಣೆಗಾಗಿ 
ಕೆಲಸ ನಿರ್ವಹಿಸುವುದು ವಿದ್ಯಾವಂತರ ಪ್ರಮುಖ 
ಗುರಿಯಾಗಿರಬೇಕು. ಜೀವನ ನಿರ್ವಹಣೆಗಾಗಿ ಗಳಿಕೆ
ಮಾಡುವುದಷ್ಟೇ ಜೀವನವಲ್ಲ,
 ಸಮಾಜದ ಜನರ ಮತ್ತು
ಸಮಾಜದ ಸುಧಾರಣೆಗಾಗಿ ಕೊಡುಗೆ ನೀಡುವುದಕ್ಕಾಗಿ 
ಸ್ವಲ್ಪ ಸಮಯವನ್ನು ಮೀಸಲಾಗಿರಿಸಿ ಎಂಬುದು ಅಂಬೇಡ್ಕರ್ 
ಅವರ ಕರೆಯಾಗಿತ್ತು.
ಅಂಬೇಡ್ಕರ್ ರವರು ಪ್ರಜಾಪ್ರಭುತ್ವಕ್ಕಾಗಿ ಶಿಕ್ಷಣ ಎಂಬುದನ್ನು 
ಪ್ರತಿಪಾದಿಸಿದ್ದಾರೆ ಹಾಗೂ ಇದು ಶಿಕ್ಷಣದ ಪ್ರಮುಖ
ಗುರಿಗಳಲ್ಲಿ 
ಒಂದಾಗಿ ಪಠರಿಗಣಿಸಲ್ಪಟ್ಟಿದೆ.

ಏಕೆಂದರೆ ಇದು ವ್ಯಕ್ತಿಗೆ ಪ್ರಜಾಪ್ರಭುತ್ವ 
ಸಮಾಜದ ಪರಿಣಾಮಕಾರಿ ಸದಸ್ಯನಾಗಲು ಸಹಾಯ ಮಾಡುತ್ತದೆ.
ಶಿಕ್ಷಣ ಮಾನವನಲ್ಲಿರುವ  ಅಗಾಧ ಶಕ್ತಿ ಸಾಮರ್ಥ್ಯ ಮತ್ತು
ಪ್ರಯತ್ನಗಳ ಬಗ್ಗೆ ಅಪಾರ ನಂಬಿಕೆಯನ್ನು ಮುಕ್ತ ಮನಸ್ಸಿನಿಂದ  ತಾರ್ಕಿಕವಾಗಿ  

ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ .
Archana Hegde
BA. 2sem

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೋಡ ಬಾ ನಮ್ಮೂರ ಸಸ್ಯಲೋಕ "

ಯುಗಾದಿ

ಪರಿಸರದ ಮೇಲೆ ಮಾನವನ ದೌರ್ಜನ್ಯ