ಬೆಳಕು

ಬೆಳಕು ಏನಿದು ಬೆಳಕು? ಎಲ್ಲಿದೆ ಬೆಳಕು? ಹೇಗಿರುತ್ತದೆ ಬೆಳಕು? ಈ ಬೆಳಕಿನ ಬಗ್ಗೆ ಪ್ರಶ್ನೆಗಳು ನನಗೆ ಆಗಾಗ ಹುಟ್ಟುತ್ತಿರುತ್ತವೆ. 

 ಬೆಳಕಿನ ಬಗೆಗೆ ನನ್ನ ಮನದಲ್ಲಿ ಪ್ರಶ್ನೆಗಳುಮೂಡಿದಾಗಲೆಲ್ಲ ನನ್ನಲ್ಲಿಯೇ ನಾನು ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

 ನನ್ನ ಪ್ರಕಾರ ಬೆಳಕು ಎಂಬುವುದು ಪ್ರತಿಯೊಬ್ಬರಿಗೂ ಬೇರೆ ಬೇರೆ ರೂಪದಲ್ಲಿ ತೋರುತ್ತದೆ.

 ಬೆಳಕು ಒಂದು ಶಾಂತಿಯ ಸಂಕೇತ,  ಬೆಳಕು ಒಂದು ಕ್ರಾಂತಿಯ ಸಂಕೇತ, ಅಭಿವೃದ್ಧಿ, ಯಶಸ್ಸು , ಹೊಸ ಹುಮ್ಮಸ್ಸುಗಳ ಸಮ್ಮಿಲನ. 

  ನಾವುಗಳು  ಜಗತ್ತಿನ ಪ್ರತಿಯೊಂದು ವಸ್ತು ವಿಷಯಗಳನ್ನು ನಮ್ಮ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಹೊಲಿಸುತ್ತೇವೆ , ಹಾಗೆಯೇ ಬೆಳಕು ಕೂಡ..! 

  ಈಗ ಬೆಳಕು , ಇದನ್ನೇ ತೆಗೆದುಕೊಂಡರೆ ಇದನ್ನು ಹಲವಾರು ಜನರು ಹಲವು ದೃಷ್ಟಿಕೋನಗಳಿಂದ ನೋಡುವರು . 

ಬಡವರಿಗೆ ಕಷ್ಟ ಕಾಲದಲ್ಲಿ ನಿಧಿ ಸಿಕ್ಕಾಗ ಆಗುವ ಆನಂದದಲ್ಲಿ , ರೈತನಿಗೆ ಬರಗಾಲದಲ್ಲಿ  ಮಳೆ ಬಂದಾಗ ವ್ಯಕ್ತ ಪಡಿಸುವ ಸಂತೋಷದಲ್ಲಿ , ಒಬ್ಬ ಅಂದನಿಗೆ ದೃಷ್ಟಿ ಬಂದು , ಅವನು ತನ್ನ ತಂದೆ ತಾಯಿಯರನ್ನು ನೋಡಿದ ಮೊದಲ ನೋಟದಲ್ಲಿ, ನಿರಂತರ ಪರಿಶ್ರಮದ ಫಲದಲ್ಲಿ ನಾವು ಬೆಳಕಿನ ಅನುಭವ ಕಾಣಬಹುದು. ಇದನ್ನು  ಕೆಲವರು ಬಹಿರಂಗದಲ್ಲಿಅನಭವಿಸಿದರೆ ,ಕೆಲವರು ಅಂತರಂಗಗಳಲ್ಲಿ ಅನುಭವಿಸುವರು.

 ಕನ್ನಡದ ಷೇಕ್ಸ್ ಪಿಯರ್ ಕುವೆಂಪುರವರ ಗದ್ಯ ಹಾಗೂ ಕಾವ್ಯಗಳಲ್ಲಿ ,  ಬೇಂದ್ರೆ ಅವರ ಪದ್ಯಗಳಲ್ಲಿ , ಡಿವಿಜಿ ಅವರ  ಕಗ್ಗಗಳಲ್ಲಿ  ಅವರ ಪರಿಸರ ಪ್ರೇಮದ ಕಾದಂಬರಿಗಳಲ್ಲಿ ಬೆಳಕನ್ನು ಕಾಣಬಹುದು.

 ಶ್ರೀಮಂತ  ಮಂದಿಗೆ ಬೆಳಕು ಎಂದರೆ ಬರೀ ಪಟಾಕಿಯಾದರೆ , 

ಸಾಮಾನ್ಯ ಜನರಿಗೆ  ದೀಪಾವಳಿಯ ಬೋನಸ್...! 

        ನಿಜ ಈ ಬೆಳಕು ಮನುಷ್ಯ ಜೀವನದಲ್ಲಿ   ಎಂತಹ ಮಹತ್ತರ ತಿರುವುಗಳನ್ನು ತರಬಲ್ಲದು, ಬದುಕು ಎಂಬ ಹಣತೆಗೆ ಕಷ್ಟ ಸುಖ ಸೋಲು ಅವಮಾನ ನಂಬಿಕೆ ಹಠಾ ಛಲ ಎಂಬ ಎಣ್ಣೆಯಿಂದ ಬತ್ತಿ ಹಚ್ಚಿದಾಗ ಅದರಿಂದ ಸೋಸುವ  ಬೆಳಕಿನ ಕಿರಣಗಳು ನಮ್ಮಗಲ್ಲದೆ ಸುತ್ತಲಿನವರಿಗು ಬೇಳಕಾಗುವುದು.

  ಪರಿಸರದ ಪ್ರತಿಯೊಂದು ವಿಷಯವು ಒಂದು ರೀತಿಯಲ್ಲಿ ಅದ್ಭುತವೇ ಸರಿ . ಒಂದು ವಿಶೇಷತೆ , ನಿಗೂಡತೆ ಅದರಲ್ಲಿ  ಇರುವುದು. ಅಂತಹ ಒಂದು ಸುಜಿಗತೆಯಲ್ಲಿ ಬೆಳಕು ಕೂಡ ಒಂದು. ಬೆಳಕಿನ ಸೂಕ್ಷ್ಮತೆಯ ಬಗ್ಗೆ  ಹೇಳಿದಾಗ " ಅರೇ.. ಇದರಲ್ಲಿ ವಿಶೇಷತೆ ಏನಿದೆ..? ", ಎಂದೆನಿಸಹುದು ಅಲ್ಲವೇ? ಆದರೆ ಇದೇ ಬೆಳಕು  ಒಬ್ಬರ ಜೀವನದಲ್ಲಿ ಮಾತ್ರವಲ್ಲದೆ ಇಡೀ ಜಗತ್ತು ಹೆಮ್ಮೆ ಪಡುವಂತಹ ಗೌರವ, ಹೆಸರನ್ನು ತಂದು ಕೊಡುತ್ತದೆ ಎಂದರೆ ಅಂತಹ ಒಂದು ಸೋಜಿಗದ "ಕತೆ" ಇಲ್ಲಿದೆ.

ಒಂದು ಸುಂದರವಾದ ಸೂರ್ಯೋದಯದ   ಸಮಯ ಗಗನದಲ್ಲಿ ರವಿ ಮಾಮನ ಆಗಮನದಿಂದ ಇಡೀ ಆಕಾಶವೇ ನಾಚಿಕೆಯಿಂದ ಕೆಂಪಾದಂತೆ  ರಂಗೇರುತ್ತಿದೆ. ಇತ್ತ ಕ್ಷಿರದಂತ್ತಿರುವ ಸಾಗರದ ಮೇಲೆ ನಮ್ಮ, "ಸುಂದರವಾದ ಶ್ವೇತ ವರ್ಣ ರಂಜಿತ, ಬಂಗಾರದ ರೆಕ್ಕೆಗಳ ಹಾಗೆ ಗೋಚರಿಸುವ, ರಾಜಹಂಸವನ್ನೇ ಮೀರಿಸುವ ನಮ್ಮ ಹಡಗು" ಮುಂದೆ ಸಾಗುತ್ತಿದೆ.

 ಜಹಾಜಿನ ಒಳಗೆ ಹಬ್ಬದ ವಾತಾವರಣ, ಎಲ್ಲ ಪ್ರಯಾಣಿಕರು ಮತ್ಸ್ಯ ವಾತಾವರಣದ ಸುಂದರ ಕ್ಷಣಗಳನ್ನು ಕೆಲವರು  ತಮ್ಮ ಪ್ರೇಯಸಿಯೊಂದಿಗೆ ಇನ್ನೂ ಕೆಲವರು ತಮ್ಮ ಆಪ್ತರೊಂದಿಗೆ ಆಹ್ವದಿಸುತ್ತಿರುವರು.

ನನಗು ಕೂಡ ನನ್ನ ಪ್ರೇಯಸಿಯ ಜೊತೆ ರಮಿಸುವ ಆಸೆ, ಆದರೆ ಏನು ಮಾಡಲಿ ನಾನು ಭಜರಂಗಿಯ ಭಕ್ತ.

  ಅದೇನೇ ಇರಲಿ ನಾನು ಮಾತ್ರ ಸಾಗರದ ಅಲೆಗಳಲ್ಲಿ ತೇಲಿ ಅದರ  ಸೊಬಗನ್ನು ಅಸ್ವಾದಿಸುತ್ತಿದ್ದೆ . ಹಾಗೆಯ ನಾನು ಮುಂದೆ ಸಾಗುತ್ತಿರುವಾಗ ನನ್ನ ದೃಷ್ಟಿ  ಒಬ್ಬ ವ್ಯಕ್ತಿಯ ಕಡೆಗೆ ನೆಟ್ಟಿತು. ಸೂಟು, ಬೂಟು, ತಲೆಯ ಮೇಲೆ ಬಿಳಿಯ ಮೈಸೂರು ಪೇಟ ಹಾಗೂ ದೋತಿಯನ್ನು ಧರಿಸಿದ್ದ ಅವರು ತುಂಬಾ ಗಾ೦ಭಿರ್ಯತೆಯಿಂದ ತೋರುತ್ತಿದ್ದರು. ಆದರೆ ಅವರು ಅಲ್ಲೇ ಸಮುದ್ರದಲ್ಲಿ ಏನನ್ನೋ ದಿಟ್ಟಿಸಿ ನೋಡುತ್ತಾ ನಿಂತಿದ್ದರು .

 ನನಗೆ ಅವರ ಮೇಲೆ ಏನೋ ಕೂತೂಹಲ, ಏನು ಮಾಡುತ್ತಿರುವರು? ಎಂಬ ಪ್ರಶ್ನೆ ಮೂಡಿ ಸುತ್ತಲು ನೋಡಿದೆ ಎಲ್ಲರೂ ತಮ್ಮ ಮೋಜು ಮಸ್ತಿಗಳಲ್ಲಿ ಬ್ಯುಸಿ, ಆದರೆ ಇದ್ಯಾವುದೂ ಅವರ ಅರಿವಿಗೆ ಇಲ್ಲಾ... 

  ಏನೋ ಕೌತುಕ ಎಂಬಂತೆ , ನೀಲಿ ಆಗಸವನ್ನು ಒಂದು ಬಾರಿ , ಆಕಾಶವನ್ನೇ ನುಂಗಿದ ನೀಲಿ ವರ್ಣದ ಸಮುದ್ರವನ್ನು ಒಂದು ಬಾರಿ ನೋಡುತ್ತಿರುವರು.

  ಅಲ್ಲೊಬ್ಬ  ಐರೋಪ್ಯ ವ್ಯಕ್ತಿಯು ಇವರ ಈ ವರ್ತನೆಯನ್ನು ನೋಡಿ ನಗಲಾರಂಬಿಸಿದ, ಇದನ್ನು ನೋಡಿ ಜಹಾಜಿನ ಎಲ್ಲ ಇಂಗ್ಲಿಷರ ಮುಂದೆ ನಗೆ ಪಾಟ ಲಿಕೆಗೆ ಗುರಿಯಾದರು.

   ಆದರೆ ಇದ್ಯಾವ ವರ್ತಮಾನಗಳು ಅವರ ಮೇಲೆ ಪರಿಣಾಮ ಬೀರಲಿಲ್ಲ. 

   ಅದು 1930ನೇ ಇಸವಿ ಇಗ್ಲೆಂಡಿನ ಐಷಾರಾಮಿ ಅರಮನೆಯಲ್ಲಿ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭದ   ಸಂಭ್ರಮ, ದೇಶ ವಿದೇಶಗಳಿಂದ ಗಣ್ಯಾತಿ ಗಣ್ಯರು ಆಗಮಿಸಿದರು.  ನಾನು ನನ್ನ ದೇಶದ ಪ್ರತಿನಿಧಿಯಾಗಿ ಹಾಗೂ ಕಾರ್ಯಕ್ರಮದ ವಿಕ್ಷಕನಾಗಿ ಅಲ್ಲಿಗೆ ತೆರಳಿದ್ದೆ.ಕಾರ್ಯಕ್ರಮ ಆರಂಭವಾಯಿತು. 

   ಕಲೆ, ಸಾಹಿತ್ಯ, ವೈದ್ಯಕೀಯ, ರಾಸಾಯನಿಕ ಹೀಗೆ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ನೊಬೆಲ್ ಅನ್ನು ಪ್ರಧಾನಿಸುತ್ತಿದ್ದರು. ಇಗ ಭೌತಶಾಸ್ತ್ರ ವಿಭಾಗದ ಸಾಧಕರ ಸರದಿ ಒಬ್ಬೊಬ್ಬರು ಬಂದು ಪ್ರಶಸ್ತಿ ಪಡೆಯುತ್ತಿದ್ದರುರು. 

 ಅರೆ!? ಇದೇನು? ನಾನು ಅಂದು ನೋಡಿದ ವ್ಯಕ್ತಿ ಇವರೇ ಅಲ್ಲವೇ? ನನ್ನನು ಮತ್ತೆ ಮತ್ತೆ ಖಾತರಿ ಮಾಡಿಕೊಂಡೆ, ಹೌದು ಅದು ಅವರೇ. ಅವರಿಗೆ ಬೌತಶಸ್ತ್ರದಲ್ಲಿನಸಂಶೋಧನಕ್ಕೆ ನೊಬೆಲ್ ದೊರೆತಿದೆ.

         ನನಗೆ ಆಶ್ಚರ್ಯ, ನನಗೆ ನಾನೇ ಎಂಬಂತೆ ಮತ್ತೆ ಮತ್ತೆ ಚಿವುಟಿಕೊಂಡು ಖಾತರಿ ಪಡಿಸಿಕೊಂಡು,  ಬರೀ ಒಂದು ವರ್ಷದ ಒಳಗಾಗಿ ಇಡೀ ಜಗತ್ತೇ ಹುಬ್ಬೇರಿಸವಂತೆ ಸಾಧನೆಯನ್ನು ಅವರು ಹೇಗೆ ಮಾಡಿದರು? ಎಂದು ನನಗೆ ಕೂತೂಹಲ ಮೂಡಿತು. ಪ್ರಶಸ್ತಿ ಸಮಾರಂಭದಲ್ಲಿ ನಾನು ಅವರನ್ನು ಸಂದರ್ಶಿಸಿಸಿದೆ. ಹಾಗೂ ನಾನು ಮೊದಲೇ ಅವರನ್ನು ನೋಡಿದ,ಬೇಟಿಯಾದ ವೃತ್ತಾಂತವನ್ನೆಲ್ಲ ವಿವರಿಸಿದೆ. ಅವತ್ತು ಆ "ವಿಶೇಷ ವ್ಯಕ್ತಿಗೆ" ಬೆಳಕಿನ ಚದರುವಿಕೆಯ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ದೊರಕಿತು.

   ಅವತ್ತು ಹಡಗಿನಲ್ಲಿ ಎಲ್ಲರೂ ಇವರನ್ನು ಹುಚ್ಚರಣ್ತೆ ನೋಡಿದರೂ ಯೋಚಿಸದೆ ತಮ್ಮಷ್ಟಕ್ಕೆ ತಾವು  ಸಂಶೋಧನೆ ಕೈಗೊಂಡರು. ಇವತ್ತು ಭಾರತದೇಶದಲ್ಲೇ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ತಂದು ಕೊಟ್ಟರು. ಅವರು ಬೇರೆ ಯಾರೂ ಅಲ್ಲ , ನಮ್ಮ ಕನ್ನಡ ನೆಲದ "ಸರ್": ಸಿ.ವಿ  ರಾಮನ್ ಆಗಿದ್ದರು. ತಮ್ಮ ದೇಶಕ್ಕೆ ಮೊದಲ ಬಾರಿ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿಸಿ ಕೊಟ್ಟರು.

   ನೋಡಿದಿರಲ್ಲಾ ಸ್ನೇಹಿತರೇ ಪ್ರಕೃತಿಯ ಸೋಜಿಗವನ್ನು . ಪ್ರತಿಯೊಂದರಲ್ಲೂ ಏನಾದರೊಂದು ವಿಶೇಷತೆಗಳು ಇದ್ದೆ ಇರುತ್ತವೆ. ಅವುಗಳನ್ನು ಗಮನಿಸುವ ಸೂಕ್ಷ್ಮತೆ ಹಾಗೂ ತಾಳ್ಮೆ ಇರಬೇಕಷ್ಟೇ, ಅದರಲ್ಲಿ ಈ ಬೆಳಕು ಕೂಡಾ.

    ಒಬ್ಬರ ಜೀವನದಲ್ಲಿ ಬೆಳಕು ಎನ್ನುವುದು ನೋಬೆಲ್ಲನ್ನೆ ತಂದು ಕೊಡುವುದಾದರೆ , ಅಂತಹ ಬೆಳಕಿನ ಬೆನ್ನಟ್ಟಿ ಸಾಗುವ ಯಾರಿಗೆ ಗೊತ್ತು ನಮಗೂ ಕೂಡ ಮುಂದೊಂದು ದಿನ ನೊಬೆಲ್ ಸಿಕ್ಕರೂ ಅಶರ್ಯವಿಲ್ಲ. ಪರಿಶ್ರಮ ಹಾಗೂ ಹುಚ್ಚುತನ ಇರಬೇಕಷ್ಟೆ.   

    ಅಂತಹ ಒಂದು ಬೆಳಕಿನ  ನಿರೀಕ್ಷೆಯಲ್ಲಿ ಸಾಗುತ್ತಿರುವ  ನಿಮ್ಮೊಳಗೊಬ್ಬ..


-- ಹೆಚ್. ಎಮ್ ಕಾರ್ತಿಕ ಬೈಲಹೊಂಗಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ