ಸೋಲು ಗೆಲುವಿನ ದಾರಿ ದೀಪ

 


ಸೋಲು ಎಂಬ ಎರಡಕ್ಷರವು ಎಷ್ಟೊಂದು ನೋವು ಕೊಡುತ್ತದೆಯೆಂದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.ಆದರೆ ಸೋಲಿಗೆ ಹಿಂಜರಿಯದೆ ಸೋಲು ಗೆಲುವಿನ ಮೆಟ್ಟಿಲುಗಳೆಂದು ಮುನ್ನಡೆಯಬೇಕು. ಸೋತ ನಮಗೆ ಮುಂದಿನ ಸತತ ಪ್ರಯತ್ನ ಗೆಲುವು ತಂದುಕೊಡುತ್ತದೆ.ಒಂದಲ್ಲ ಒಂದು ದಿನ ಗೆದ್ದು, ಅವಮಾನ ಮಾಡಿಸಿಕೊಂಡವರಲ್ಲಿ ಸನ್ಮಾನವನ್ನು ಮಾಡಿಸಿಕೊಳ್ಳಬೇಕು. ಅದನ್ನೇ 

ಜೀವನದ ಪರಮೋಚ್ಚ ಗುರಿಯಾಗಿಟ್ಟು ಕೊಳ್ಳಬೇಕು. ಗುರಿಯೆಡೆಗೆ ಗಮನವಿದ್ದಾಗಾ ಸದಾ ಮನಸ್ಸಿನಲ್ಲಿ ಸಾಧನೆಯ ಕನಸು ಕಾಣುವಂತಾಗಬೇಕು.

ಡಾ/ ಎ. ಪಿ. ಜೆ ಅಬ್ದುಲ್ ಕಲಾಂ ಅವರು ಒಂದು ಮಾತು ಹೇಳಿದ್ದಾರೆ." ಸೋಲುವುದು ತಪ್ಪಲ್ಲ ಅವು ಭವಿಷ್ಯದ ಹೆದ್ದಾರಿಗಳು. ಭಯ ಪಟ್ಟವನು ಇದ್ದಲ್ಲಿಯೇ ಇರುತ್ತಾನೆ." ಎಂದು


ಸೋಲುಗಳನ್ನು ಕೈ ಚಾಚಿ

 ಸ್ವೀಕರಿಸಿದರೆ ಮಾತ್ರ 

ಗೆಲುವೆಂಬ ಪದದ ಅರ್ಥ ಹಾಗೂ ಆ ಪದದ ಬೆಲೆ ತಿಳಿದು ಬರುತ್ತದೆ. ಸೋತವನಿಗೆ ಅವಕಾಶಗಳಿರುವುದಿಲ್ಲ.ಅವಕಾಶಗಳನ್ನು ನಾವೇ ಸೃಷ್ಟಿಸಿ ಕೊಳ್ಳಬೇಕು ಅಷ್ಟೇ.

ನನಗೆ ನನ್ನ ಸರ್ ಒಬ್ರು ಹೇಳುವ ಮಾತು ನೆನಪಾಯಿತು." ಎಂತಹದ್ದೇ ಕಷ್ಟಗಳಾದರೂ ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ" ಎಂದು. ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿದವರಿಗೆ ಒಂದಲ್ಲ ಒಂದು ಹಾದಿಯಲ್ಲಿ ಗೆಲುವಿದ್ದೆ ಇರುತ್ತದೆ. ಆದರೆ ಪರಿಶ್ರಮ ಹಾಗೂ ಆತ್ಮವಿಶ್ವಾಸಗಳೆರದು ಬಹುಮುಖ್ಯ.


ಮೊದಲ ಪ್ರಯತ್ನದಲ್ಲಿಯೇ ಗೆದ್ದವನು ಬದುಕಲ್ಲಿ ಗೆಲ್ಲುತ್ತಾನೆ. ಆದರೆ ಸೋತವನು ಜಗತ್ತನ್ನೇ ಗೆಲ್ಲುತ್ತಾನೆ. ಯಾಕೆಂದರೆ ಸೋತವನಿಗೆ ಸಂಕಟವಿರುತ್ತೆ.ಸಂಕಟದೊಂದಿಗೆ ಸೇಣಸಾಡುವ ಮನಸ್ಸಿಗೆ ಛಲ ಹೆಚ್ಚಿರುತ್ತದೆ. ಸೋತವನಿಗೆ ಅದರ ಬಗ್ಗೆ ದುಃಖವಿದ್ದರೆ ಮಾತ್ರ ಗೆಲುವಿನ ಹಾದಿಯನ್ನು ಹುಡುಕಲು ಸಾಧ್ಯ.


ನಾನು ಇಷ್ಟೆಲ್ಲಾ ಹೇಳಲು ಕಾರಣವೇನೆಂದರೆ ನಾನು ಸೋಲನ್ನು ಅನುಭವಿಸಿದ್ದೇನೆ. ಆದರೆ ನನಗೆ ಬೇಜಾರಿಲ್ಲ. ಗೆಲುವೇ ಆಗಲಿ, ಸೋಲೇ ಆಗಲಿ ಅದು ಶಾಶ್ವತವಲ್ಲ.ಅದು ಇಂದು ನನ್ನದಾಗುತ್ತದೆ, ನಾಳೆ ಬೇರೆ ಯಾರದ್ದೋ ಆಗುತ್ತದೆ. ಹಾಗೆಯೇ ಪ್ರಯತ್ನ ಎನ್ನುವುದು  ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ.ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು.ಪ್ರಯತ್ನ ಪಟ್ಟವನಿಗೆ ಅದೃಷ್ಟ ಲಭಿಸುತ್ತದೆ! ಹಾಗೆಂದ ಮಾತ್ರಕ್ಕೆ ಪ್ರಯತ್ನ ಪಡದವನ ಅದೃಷ್ಟ ಸ್ಥಿರವಲ್ಲ.ಕೆಲವೊಂದು ಕೆಲಸದಲ್ಲಿ ಪ್ರಯತ್ನವಿಲ್ಲದೆ ಅದೃಷ್ಟದಿಂದಷ್ಟೆ

ಗೆದ್ದಿದ್ದರೆ ಆ ಅದೃಷ್ಟವೂ ಮುಂದೆ ಸಿಗದೆಯೂ ಇರಬಹುದು.ಆದ್ದರಿಂದ ಪ್ರಯತ್ನ ಮತ್ತು ಪರಿಶ್ರಮ ಸಾಧನೆಯ ಮೆಟ್ಟಿಲು ಎಂದು ತಿಳಿದವರು ಹೇಳುತ್ತಾರೆ.


ನಯನಾ ಪೂಜಾರಿ

BA 1st Year

MM arts and science college sirsi

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು

ನೋಡ ಬಾ ನಮ್ಮೂರ ಸಸ್ಯಲೋಕ "

ಪರಿಸರದ ಮೇಲೆ ಮಾನವನ ದೌರ್ಜನ್ಯ