ಮನಸ್ಸಿಗೆ ಇರುವ ಶಕ್ತಿ

 ಮನಸ್ಸಿಗೆ ಇರುವ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆಯ ಪ್ರಸಂಗವನ್ನು ನೋಡಬೇಕು. ಮಹಾಭಾರತದ ವನ ಪರ್ವತಗಳಲ್ಲಿ ಅದರ ವಿವರಣೆ ಬರುತ್ತದೆ . ಕೊಳದ ಬಳಿ  ಯಕ್ಷನು

 ಧರ್ಮರಾಯನಿಗೆ ಸುಮಾರು 125 ಪ್ರಶ್ನೆಗಳನ್ನು ಕೇಳುತ್ತಾನೆ ಅವೆಲ್ಲದಕ್ಕೂ ಸಮರ್ಪಕವಾಗಿ ಉತ್ತರ ನೀಡಿದ್ದರಿಂದ ಧರ್ಮರಾಯನ ಸಹೋದರರೆಲ್ಲರೂ ಮತ್ತೆ ಜೀವ ಪಡೆಯುತ್ತಾರೆ. ಆ ಎಲ್ಲಾ ಪ್ರಶ್ನೆಗಳಲ್ಲಿ ಎರಡು ಪ್ರಶ್ನೆಗಳು:- ಒಂದನೆಯದು ಗಾಳಿಗಿಂತ ವೇಗವಾಗಿ ಚಲಿಸುವುದು ಯಾವುದು ಮತ್ತು ಎರಡನೆಯದು ಯಾವುದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಶೋಕ ಉಂಟಾಗುವುದಿಲ್ಲ? ಎಂಬುದು ಈ ಎರಡು ಪ್ರಶ್ನೆಗೆ  ಯುಧಿಷ್ಠಿರ  "ಮನಸ್ಸು" ಎಂದು ಉತ್ತರಿಸುತ್ತಾನೆ.

     ಮಾನವನ ಇತರ ಅವಯವಗಳಂತೆ ಸ್ಪಷ್ಟವಾಗಿ ಗುರುತಿಸಲಾಗದ ಆದರೆ ಮನುಷ್ಯನ ಇಡೀ ಜೀವನದ ಸಾಧನೆ-ವಿಫಲತೆಗಳನ್ನು ನಿರ್ಧರಿಸುವ ಶಕ್ತಿಯ ಮನಸ್ಸು.ಇದನ್ನು ಮೆದುಳು ಮತ್ತು ನರಮಂಡಲದೊಂದಿಗೆ ಗುರುತಿಸಲಾಗುತ್ತದೆ. ಆದರೂ ಸ್ಪಷ್ಟವಾಗಿ ಇದು ಇಲ್ಲೇ ಇದೆ ಎಂದು ಮುಟ್ಟಿ ತೋರಿಸುವಂತಹದ್ದಲ್ಲ. ಮನಸ್ಸನ್ನು ಒಟ್ಟು ಅರಿವಿನ ಅಂಶಗಳಾದ ಪ್ರಜ್ಞ , ಕಲ್ಪನೆ , ಗ್ರಹಿಕೆ,ಚಿಂತನೆ, ಭಾಷೆ, ನೆನಪಿನ ಶಕ್ತಿಯೊಂದಿಗೆ ಹಾಗೂ ಅಜ್ಞಾತ ಅಂಗಾಂಶಗಳಾದ ಭಾವನೆ ಮತ್ತು ಪ್ರವೃತ್ತಿಯೊಂದಿಗೆ ಜೋಡಿಸಲಾಗುತ್ತದೆ. ಸಹಜವಾಗಿ ಮಾತನಾಡುವಾಗ "ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ " ಎಂದು  ಜನ ಹೇಳುವುದನ್ನು ನಾವು ಕೇಳಿರಬಹುದು ಅಥವಾ ನಾವು ಹಾಗೆ ಹಲವು ಸಂದರ್ಭಗಳಲ್ಲಿ ಇತರರಿಗೆ ಹೇಳಿರಬಹುದು ಆದರೆ ಹಾಗೆ ಹೇಳಿದ ಬಳಿಕ ಅದನ್ನು ನಾವು ನೀವು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ.

       ಯಾವುದೇ ಸಾಧನೆಯ ಹಿಂದೆ ಮನಸ್ಸು ಇರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಹಠಕ್ಕೆ ಬಿದ್ದು ಸಾಧಿಸಬೇಕೆಂಬ ಮನಸು ಎಂತಹ ಎತ್ತರಕ್ಕಾದರೂ ನಮ್ಮನ್ನು ಕೊಂಡೊಯ್ಯಬಹುದು. ಮನಸ್ಸಿನ ಶಕ್ತಿ ಕುರಿತು ನೆಪೋಲಿಯನ್ ಹೀಗೆ ಹೇಳಿದ್ದಾರೆ:-"whatever the mind of man can conceive and believe, it can achieve." ಮನುಷ್ಯನ ಮನಸ್ಸು ಏನನ್ನು  ಗ್ರಹಿಸುತ್ತದೆಯೋ, ನಂಬುತ್ತದೆಯೋ ಅದನ್ನು ಸಾಧಿಸುವ ಶಕ್ತಿ ಅದಕ್ಕಿದೆ ಎಂಬುವುದು ಇದರ ಅರ್ಥ. ಒಬ್ಬನ ಮನಸ್ಸು ಮೌಂಟ್ ಎವರೆಸ್ಟ್ ಎರಬಲ್ಲೆ ಎಂದಿತು; ಆತ ಅದನ್ನು ಏರಿದ. ಮತ್ತೊಬ್ಬನ ಮನಸ್ಸು ಆಕಾಶದಲ್ಲಿ ಹಾರಬಲ್ಲೆ ಎಂದಿತು;  ಆತ ವಿಮಾನ ಕಂಡುಹಿಡಿದ. ಮೊಗದೊಬ್ಬನ ಮನಸ್ಸು ಉದಾತ್ತ ಉನ್ನತವಾದ ಗುಮ್ಮಟ ಮೂರ್ತಿಯನ್ನು ಕೆತ್ತಬಲ್ಲೆ ಎಂದಿತು ;ಆತ ಕೆತ್ತಿದ. ಹಾಗೆಯೇ ಹಾಲು ಪತ್ರಿಕೆ ಮಾರುತ್ತಿದ್ದವ ಈ ದೇಶದ ರಾಷ್ಟ್ರಪತಿಯಾದ ,ಚಹಾ ಮಾಡುತ್ತಿದ್ದವ ಈ ದೇಶದ ಪ್ರಧಾನಿಯಾದ,  ಅಕ್ಕಿ ಗಿರಣಿಯಲ್ಲಿ ಲೆಕ್ಕ  ಬರೆಯುತ್ತಿದ್ದವ ಮುಖ್ಯಮಂತ್ರಿಯಾದ ಇದು ಮನಸ್ಸಿಗೆ ಇರುವ ಶಕ್ತಿ.

     ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಋಷಿಮುನಿಗಳು ತಪ್ಪಸನ್ನು ಮಾಡಿದ್ದನ್ನು ಕೇಳಿರುತ್ತೇವೆ ತಪಸ್ಸು ಎಂಬುದು ಒಂದು ದಿನ, ಎರಡು ದಿನ ,ನಾಲ್ಕು ತಿಂಗಳದಲ್ಲ ಅದು ಹಲವು ವರ್ಷಗಳದ್ದು.ಗುರಿ ದೊಡ್ಡದಿದ್ದಷ್ಟು ತಪಸ್ಸು ದೀರ್ಘ. 

    "Slow progress good more then no progress" ಎನ್ನುವಂತೆ ಪ್ರಯತ್ನವು ನಿಧಾನವಾದರೂ ನಿರಂತರವಾಗಿರಲಿ.

       ಅಂತಹ ಪ್ರಯತ್ನದಲ್ಲಿ ಸಾಗುತ್ತಿರುವ ನಿಮ್ಮೊಳಗೊಬ್ಬ -

 ಕಾರ್ತಿಕ್ .ಮ. ಹಳಿಜೋಳ

 ಪತ್ರಿಕೋದ್ಯಮ ವಿಭಾಗ, 

ಎಮ್ ಎಮ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್  ಶಿರಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "