ತುಳಸಿ


       ತುಳಸಿಯ ದರ ಪವಿತ್ರತೆಗೆ ಹೆಸರುವಾಸಿ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಇದು ಸುಖ ಮತ್ತು ಕಲ್ಯಾಣದ ಪ್ರತಿಕ ಎಂದು ನಂಬಲಾಗಿದೆ. ಇದು ಪೌರಾಣಿಕವಾಗಿ ಎಷ್ಟು ದೊಡ್ಡ ಇತಿಹಾಸವನ್ನು ಹೊಂದಿದೆಯೋ ಅದಕ್ಕೂ ಮಿಗಿಲಾದ ಔಷಧಿ ಗುಣಗಳನ್ನು ಇದು ಒಳಗೊಂಡಿದೆ.

         ತುಳಸಿ ಗಿಡ ಒಂದು ಪುಟ್ಟ ಸಸ್ಯ ಜಾತಿಯ ಎಳೆಯದಾದ, ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯ. ಸಸ್ಯದ ಜಾತಿ ಹಾಗೂ ತಳಿಯನ್ನು ಅವಲಂಬಿಸಿ ಎಲೆಗಳು ಸ್ವಲ್ಪಮಟ್ಟಿಗೆ ವಾಯುಹರ ಔಷಧಿಗೆ ಉಪಯೋಗಿಸುವ ಸೋಪು ಬೀಜದ ಮಾದರಿಯ ರುಚಿಯನ್ನು ಹೊಂದಿರುತ್ತದೆ. ಜೊತೆಗೆ ಗಾಡ್ ತೀಕ್ಷ್ಣವಾದ ಸಾಮಾನ್ಯವಾಗಿ ಮೋಹಕ ಪರಿಮಳವನ್ನು ಹೊಂದಿರುತ್ತದೆ.

        ತುಳಸಿ ಸಚಿವ ಮೂಲತಃ ಇರಾನ್, ಭಾರತ ಹಾಗೂ ಏಷ್ಯಾದಉಷ್ಣವಲಯದ ಪ್ರದೇಶಗಳ ಸಸ್ಯವಾಗಿದೆ. ಇದು ಈ ಪ್ರದೇಶದಲ್ಲಿ 5,000ಕ್ಕೂ ಹೆಚ್ಚು ವರ್ಷಗಳಿಂದ ಬೆಳೆಯುತ್ತಾ ಬಂದಿದೆ. ಇದು ಮುಖ್ಯವಾಗಿ ಪ್ರತಿಯೊಬ್ಬ ಭಾರತೀಯ ಹಿಂದೂ ಸಂಪ್ರದಾಯ ಅನುಯಾಯಕರ ಮನೆಯಂಗಳದಲ್ಲಿ ಕಂಗೊಳಿಸುತ್ತಿರುವುದನ್ನು ಕಾಣಬಹುದು.

        ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚು ಪವಿತ್ರತೆ ಇದೆ. ಇಲ್ಲಿ ಪವಿತ್ರ ತೀರ್ಥಗಳನ್ನು ಸಿದ್ಧಪಡಿಸುವಾಗ ತುಳಸಿಯನ್ನು ಬಳಸಲಾಗುತ್ತದೆ. ಅಲ್ಲದೆ ತುಳಸಿಯ ಕುಂಡಗಳನ್ನು ನಾವು ಸಾಮಾನ್ಯವಾಗಿ ಚರ್ಚಿನ ವಿವೇಧನ ಪೀಠದ ಕೆಳಗಡೆ ಇಟ್ಟಿರುವುದನ್ನು ನೋಡುತ್ತೇವೆ. ಅಂದರೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಇತರ ಧರ್ಮದಲ್ಲಿಯೂ ತನ್ನ ಮಹತ್ವದ ಸ್ಥಾನವನ್ನು ಗಳಿಸಿದೆ ಎಂಬುದು ಸಹಜವಾಗಿಯೇ ತಿಳಿದು ಬರುತ್ತದೆ.

             ಭಾರತದಲ್ಲಿ ಮರಣ ಹಂತದಲ್ಲಿರುವವರ ಬಾಯಿಯಲ್ಲಿ ತುಳಸಿಯನ್ನು ಹಾಕಿದರೆ ಅವರು ದೇವರ ಪಾದವನ್ನು ಸೇರುವರೆಂಬ ನಂಬಿಕೆ ಇದೆ. ಅದೇ ರೀತಿ ಜೋಯಿಷ ಜನಪದ ಕಥೆಗಳು ಉಪವಾಸ ಇರುವಾಗತುಳಸಿಯನ್ನು ಸೇವಿಸಿದರೆ ಇದು ಬಲವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

           ತುಳಸಿ ಎಲೆಗಳ ಜೊತೆಯಲ್ಲಿ ತುಳಸಿಯ ಪ್ರತಿಯೊಂದು ಭಾಗವನ್ನು ಔಷಧಿ ವಸ್ತುವನ್ನಾಗಿ ಬಳಸಲಾಗುತ್ತದೆ. ಅದರಲ್ಲಿ ತುಳಸಿ ಬೇರುಗಳು  ಅತ್ಯಂತ ಪ್ರಮುಖವಾಗಿದೆ. ಸಾಂಪ್ರದಾಯಿಕ ಹಿನ್ನೆಲೆ ಜೊತೆಯಲ್ಲಿ ತುಳಸಿ ವಿಶೇಷ ಮಹತ್ವವನ್ನು ಒಳಗೊಂಡಿದೆ.

         ತುಳಸಿಯ ಸೇವನೆಯಿಂದ ಮಾತ್ರವೇ ನಮಗರಿವಿಲ್ಲದಂತೆ ನಮ್ಮ ದೇಹದಲ್ಲಿರುವ ಅನೇಕ ಕಾಯಿಲೆಗಳು ವಾಸಿಯಾಗುತ್ತದೆ. ಉದಾಹರಣೆಗೆ ನಿಶಕ್ತಿ, ನೆಗಡಿ, ಕೆಮ್ಮುಮುಂತಾದ ರೋಗಗಳ   ನಿವಾರಣೆಗೆ  ಇದನ್ನು ಬಳಸಲಾಗುತ್ತದೆ.

            ಎಲೆಗಳ ರೀತಿಯಲ್ಲಿ ತುಳಸಿ  ಬೇರುಗಳನ್ನು ಅನೇಕ ಸಮಸ್ಯೆಗಳು ನಿವಾರಣೆಗೆಂದು ಬಳಸಲಾಗುತ್ತದೆ.  ಶರೀರದ ತಾಪಮಾನವನ್ನು ಕಡಿಮೆ ಮಾಡಲು ತಿಳಿಸಿ ಎಲೆಗಳನ್ನು ಬೆಳೆಸಲಾಗುತ್ತದೆ. ಆಯುರ್ವೇದದಲ್ಲಿ ತುಳಸಿ ಬೇರುಗಳನ್ನು ಜ್ವರ ಕಡಿಮೆ ಮಾಡಲು ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.

          ಜ್ವರ ಬಂದಾಗ ಒಂದು ಕಪ್ ನೀರಿನಲ್ಲಿ ಸುಮಾರಿ 20 ಗ್ರಾಂ ತುಳಸಿ ಬೇರೆ ಮತ್ತು 10 ಕಾಳುಮೆಣಸುಗಳನ್ನು ಹಾಕಿ ನೀರು ಅರ್ಧ ವಾಗುವ ತನಕ ಕುದಿಸಬೇಕು, ನಂತರ ಇದನ್ನು ಕುಡಿದರೆ ಜ್ವರ ಅತ್ಯಂತ ವೇಗವಾಗಿ ಕಡಿಮೆ ಆಗುತ್ತದೆ. ಆದರೂ ಒಮ್ಮೆ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.

           ತುಳಸಿ ಸಾಮಾನ್ಯ ಎಲ್ಲ ರೀತಿಯ ಕಾಯಿಲೆಗೆ ಮದ್ದಾಗಿದೆ. ಇದು ಕಲೆ, ಚರ್ಮ ಸಂಬಂಧ ರೋಗ, ಗಂಟು ನೋವು ಇತ್ಯಾದಿಗಳನ್ನುಕಡಿಮೆ ಮಾಡುತ್ತದೆ. ಒಟ್ಟಿನಲ್ಲಿ ತುಳಸಿ ಎಲೆಗಳ ಜೊತೆ ಜೊತೆಯಲ್ಲಿ ತುಳಸಿಯ ಪ್ರತಿಯೊಂದು ಭಾಗವು ಔಷಧಿಯ ಗುಣಗಳನ್ನು ಒಳಗೊಂಡಿದೆ. ಇದು ಸ್ವಾಸ್ತ್ಯ  ಸಂಬಂಧ ಅನೇಕ ಕಾಯಿಲೆಗಳನ್ನು ನಮಗೆ ಅರಿವಿಲ್ಲದಂತೆ ದೂರ ಮಾಡುತ್ತದೆ.


            ವಾಣಿ ದಾಸ್

            BA1

            ಎಂ. ಎಂ   ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "