" ಭೂಮಿ ಬರಿದಾಗಿದೆ "


ಭೂಮಿಯನ್ನು ದೇವರು ಎಂದು ಪೂಜಿಸಲಾಗುತ್ತದೆ. ಭೂ ತಾಯಿಯ ತಾಳ್ಮೆ ಮತ್ತು ಸಹನಾ ಶಕ್ತಿಯಿಂದಾಗಿ ಇಡೀ ಜಗತ್ತು ತಲೆ ಎತ್ತಿ ನಿಂತಿದೆ.ಲಕ್ಷ ಕೋಟಿ ಜೀವ ಸಂಕುಲವನ್ನು ಜೀವ ವೈವಿದ್ಯತೆಯನ್ನು ಈ ಭೂಮಿ ಸಲಹುತಿದ್ದಾಳೆ. ನಮಗೆ  ಅಗತ್ಯವಿರುವ ಎಲ್ಲ ವಸ್ತುಗಳನ್ನು ಭೂಮಿ ನಮಗೆ ಒದಗಿಸುತ್ತಾ ಬಂದಿದೆ. ಆದರೆ ನಾವು ದುರಾಸೆಯ ಮನುಷ್ಯರಾದ ಕಾರಣ ನಮ್ಮ ಸ್ವಾರ್ಥ ಸಾಧನೆಗಾಗಿ ಭೂಮಿಯನ್ನೇ ಹಾಳು ಗೆಡವಲು ಹೊರಟಿದ್ದೇವೆ.


ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಒಂದಿಲ್ಲೊಂದು ಅನಾಹುತ ಸಂಭವಿಸುತ್ತಿರುವುದನ್ನು ನೋಡಿದ್ದೇವೆ,ಈ ಘಟನೆಗಳು ಸಂಭವಿಸಲು ಮುಖ್ಯ ಕಾರಣಿಕರ್ತನೆಂದರೆ ಮಾನವ. ಹೆಚ್ಚಾತ್ತಿರುವ ಆತನ ದುರಾಸೆಯ ಪರಿಣಾಮದಿಂದಾಗಿ ಜಗತ್ತು ವಿನಾಶದೆಡೆಗೆ ಸಾಗುತ್ತಿದೆ.


ಕಾಲದಿಂದ ಕಾಲಕ್ಕೆ ಪ್ರಕೃತಿಯ ಸೌಂದರ್ಯ ಕ್ಷಿಣಿಸುತ್ತಾ ಬರುತ್ತಿದೆ ಅರಣ್ಯನಾಶ, ಯತೆಚ್ಚ ಗಣಿಗರಿಕೆಯ ಪರಿಣಾಮದಿಂದಾಗಿ ಭೂಮಿಯ ಅಂತರ್ಜಲ ಮಟ್ಟ ಕುಸಿಯುತ್ತಿದೆ ಕುಡಿಯುವ ನೀರಿಗಾಗಿ ಆಹಾಕಾರ ಕೇಳುತ್ತಿದೆ ಕೆರೆ ಕಟ್ಟೆಗಳೆಲ್ಲ ಬತ್ತಿ ಬರಿದಾಗಿದೆ ನೀರನ್ನೇ ಅವಲಂಬಿಸಿರುವ ಪಕ್ಷಿಗಳು ಬೇರೆ ಊರುಗಳಿಗೆ ವಲಸೆ ಹೋಗುವ ಸಂದರ್ಭ ಏರ್ಪಟ್ಟಿದೆ ಇನ್ನು ನೀರಿನಲ್ಲೇ ಜೀವಿಸುವ ಜಲಚರಗಳು ನೀರಿಲ್ಲದೆ ಸಾವನ್ನಪ್ಪುತ್ತಿವೆ.


ಇವೆಲ್ಲದಕ್ಕೂ ಮುಖ್ಯ ಕಾರಣ ಕಾಡಿನ ನಾಶ. ಸಕಾಲಕ್ಕೆ ಬಾರದ ಮಳೆಯಿಂದ ಅದನ್ನೇ ಅವಲಂಬಿಸಿರುವ ರೈತ ಆತಂಕಕ್ಕೆ ಈಡಾಗುವ ಪರಿಸ್ಥಿತಿ ಬಂದೋದಗಿದೆ.ಇದರ ಜೊತೆಗೆ ಬಿಸಿಲಿನ ಜಳ ಹಾಗು ಜಾಗತಿಕ ತಾಪಮಾನ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪವು ಹೆಚ್ಚುತ್ತಿದೆ. ಇಂದು ವಿಶ್ವ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಜಾಗತಿಕ ತಪಮಾನ.ಇದು ಹಸಿರು ಮನೆ ಅನಿಲ ಹಾಗೂ ಆಮ್ಲ ಮಳೆಯನ್ನು  ಉಂಟುಮಾಡುತ್ತದೆ. ಇವುಗಳು ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಇದು ಒಜೋನ್ ಪದರದ ನಾಶಕ್ಕೆ ಕಾರಣವಾಗಿದೆ.


ಸೂರ್ಯನ ನೆರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ಪ್ರವೇಶಿಸಿ ಮನುಷ್ಯನ ಚರ್ಮದ ಮೇಲೆ ಹಾನಿಯನ್ನು ಉಂಟುಮಾಡುತ್ತದೆ. ವಿವಿಧ ರೀತಿಯ ಚರ್ಮ ರೋಗಗಳು ಉಂಟಾಗುತ್ತವೆ.


ಈ ಮಾನವನ ಜಾಗತಿಕಾರಣ ಎಂಬ ಪರಿಕಲ್ಪನೆಯಿಂದಾಗಿ ಕೇವಲ ಅರಣ್ಯಗಳು ಮಾತ್ರವಲ್ಲ ಅಮೂಲ್ಯ ಜೀವರಾಶಿಗಳು ಅವನತಿಯೇಡೆಗೆ ಸಾಗಿದೆ. ಕೆಲವು ಜೀವ ಸಂಕುಲಗಳು ಅಳಿದು ಹೋಗಿವೆ. ಮುಂದಿನ ಪೀಳಿಗೆಯವರು ಕೆಲವೊಂದು ಪ್ರಾಣಿ ಹಾಗೂ ಪಕ್ಷಿಗಳನ್ನು ಚಿತ್ರಗಳ ಮೂಲಕ ನೋಡುವ ಸಂದರ್ಭ ಬರುವ ದಿನ ಬಹಳ ದೂರವಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.


ತನ್ನ ಸ್ವಾರ್ಥ ಸಾಧನೆಗಾಗಿ ಇತರರಿಗೆ ತೊಂದರೆ ನೀಡುತ್ತಿರುವ ಮನುಷ್ಯ ಬದಲಾವಣೆ ಹೆಸರಿನಲ್ಲಿ ಜಗತ್ತನ್ನು ಸರ್ವನಾಶ ಮಾಡಲು ಹೊರಟಿದ್ದಾನೆ ಇದು ತನಗೆ ಮುಳುವಾಗುತ್ತದೆ ಎಂಬ ಅರಿವಿಲ್ಲದೆ ರಾಕ್ಷಸ ತನದಿಂದ ಮೆರೆಯುತ್ತಿದ್ದಾನೆ


ಇನ್ನಾದರೂ ಏಚೆತ್ತುಕೊಂಡು ಗಿಡ - ಮರ ಬೆಳೆಸಿ ಪರಿಸರ ಸಮತೋಲನ ಕಾಯ್ದು ಕೊಂಡರೆ ಮಾತ್ರ ಭೂಮಿಯ ಉಳಿವು ಸಾಧ್ಯ.



ಅರ್ಚನಾ ನಾಯ್ಕ

B. A  1st

ಪತ್ರಿಕೋದ್ಯಮ ವಿಭಾಗ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "