"ವೈದ್ಯವೃತ್ತಿ"


ಸಂಕಟ ಬಂದಾಗ ವೆಂಕಟರಮಣ' ಎನ್ನುವ ಹಾಗೆ ನಾವೆಲ್ಲರೂ, ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರನ್ನು ನೆನೆಸಿಕೊಳ್ಳುತ್ತೇವೆ. 'ವೈದ್ಯೋ ನಾರಾಯಣೋ ಹರಿ' ಎಂದು ಆತ (ಆಕೆ) ನನ್ನು ಹೊಗಳಿ ನಮ್ಮ ಕಷ್ಟ ಕೋಟಲೆಗಳನ್ನು ತೋಡಿಕೊಳ್ಳುತ್ತೇವೆ. ಆತನ (ಆಕೆಯ) ಉಪಚಾರದಿಂದ ರೋಗ ವಾಸಿಯಾದ ತಕ್ಷಣ ಆತ (ಆಕೆ ನನ್ನು ಮರೆತು ಬಿಡುತ್ತೇವೆ. 'ತಮ್ಮ ಕೆಲಸ ಆದ ಮೇಲೆ ಉಪಾಧ್ಯಾಯ ಮತ್ತು ವೈದ್ಯ ನಿಷ್ಪಯೋಜಕರಾಗುತ್ತಾರೆ' ಎನ್ನುವ ವಚನವನ್ನು ನಿಜ ಮಾಡುತ್ತೇವೆ. ಇದರಲ್ಲಿ ಅತಿಶಯವೇನಿಲ್ಲ.


ನಮ್ಮ ದೇಹ ಮತ್ತು ಮನಸ್ಸಿನ ಬಗ್ಗೆ ಕಾಳಜಿಯಿಂದ ಆಳವಾಗಿ ಅಭ್ಯಾಸ ಮಾಡಿ ಚಿಂತಾಕ್ರಾಂತರಾಗಿ ನರಳುತ್ತಿರುವವರನ್ನು ಮತ್ತೆ 'ಜೀವನ್ಮುಖಿ'ಗಳಾಗಿ ಮಾಡುವ ವೈದ್ಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ, ಈ ಕರ್ತವ್ಯ ಋಣ ಸಂದಾಯ ಎಂದರೆ ತಪ್ಪೇನಿಲ್ಲ ವನ್ನು ನೆನಪಿಸಲು ಪ್ರತಿ ವರ್ಷ ಜುಲೈ ಒಂದೇ ದಿನಾಂಕ 'ರಾಷ್ಟ್ರೀಯ ವೈದ್ಯದಿನ", ವನ್ನಾಗಿ ಆಚರಿಸುವುದು ರೂಢಿಗೆ ಬಂದಿದೆ.


ಶಿಕ್ಷಕ ವೃತ್ತಿಯಷ್ಟೇ ಪವಿತ್ರ ಎನ್ನಿಸುವ ವೈದ್ಯ ವೃತ್ತಿ ನಮ್ಮ ದೇಶದಲ್ಲಿ ಸುಮಾರು 2500 ವರ್ಷಗಳಿಂದ ಆಚರಣೆಯಲ್ಲಿದೆ. ವೇದಗಳಲ್ಲಿ ಎಲ್ಲೆಲ್ಲೋ ಅಡಕವಾಗಿದ್ದ ಆಯುರ್ವೇದ ತತ್ತ್ವಗಳನ್ನು ಕ್ರೋಢೀಕರಿಸಿ, ತಮ್ಮ ಚಿಂತನೆಗಳನ್ನು ಸೇರಿಸಿ ಬರೆದ 'ಸುಶ್ರುತ ಸಂಹಿತೆ'ಯನ್ನು ಹಿಂದೂ ವೈದ್ಯ ವಿಜ್ಞಾನದ ಬೈಬಲ್‌ ಎಂತಲೂ, ಇದನ್ನು


ರಚಿಸಿದ ಸುಶ್ರುತರನ್ನು (ಸುಮಾರು ಕ್ರಿ.ಪೂ. 600) ಪಾಸ್ಟಿಕ್‌ ಸರ್ಜರಿಯ ಆದ್ಯ ಪ್ರವರ್ತಕ


ಎನ್ನಬಹುದು. “ಕಾಯಿಲೆಗಳನ್ನು ವಾಸಿ ಮಾಡುವ ಕಲಾಕೌಶಲ್ಯದ ವೃತ್ತಿಗಳಲ್ಲಿ ಮೊಟ್ಟ ಮೊದಲನೆಯದೇ ಶಸ್ತ್ರ ವೈದ್ಯನ ಕಸಬು, ಅದು ಅತ್ಯಂತ ಶ್ರೇಷ್ಟವಾದದ್ದು. ಪರಿಶುದ್ಧವಾದದ್ದು. ಇದು ಭೂಲೋಕದಲ್ಲಿ ಕೀರ್ತಿಗಳಿಸುವ ಮೂಲಸಾದನ, ಸ್ವರ್ಗದ ಕರುಗೆಗೆ ಪಾತ್ರವಾಗುವಂತಹುದು.” ಈ ಮಾತುಗಳನ್ನಾಡಿದ ಸುಶ್ರುತರು ಭಾರತದ ವೈದ್ಯವಿಜ್ಞಾನದ ದಾರಿದೀಪ,


ವೈದ್ಯ ವಿಜ್ಞಾನ ಪದ್ಧತಿಯಲ್ಲಿ ಶಾಶ್ವತವಾಗಿ ಉಳಿಯುವ ಇನ್ನೊಬ್ಬ ಆಚಾರ್ಯರೆಂದರೆ, ಚರಕ ಮಹರ್ಷಿ' (ಈತನ ಕಾಲ ಸುಮಾರು ಕ್ರಿ.ಶ.320) .ಈತ ವೈದ್ಯರ ಬಗ್ಗೆ ಅಂದು ಆಡಿದ ಮಾತುಗಳು ಇಂದಿಗೂ ಪ್ರಸ್ತುತ. ವೈದ್ಯನಿಗೆ ಒಳ್ಳೆಯ ನಡತೆ ಇರಬೇಕು. ರೋಗಿಗೆ ಅವನ್ನು ನೀಡುವ ನೆರವು ಕೇವಲ ಸ್ವಂತ ಗಳಿಕೆ ಹಾಗೂ ಸಪ್ರಯೋಜನಕ್ಕಾಗಿರದೆ, ಮಾನವ ಕುಲದ ಒಳಿತಿಗಾಗಿರಬೇಕು. ವೈದ್ಯಕೀಯ ಚಿಕಿತ್ಸೆಯನ್ನು ವ್ಯಾಪಾರಿ ವಸ್ತುವಿನಂತೆ ಮಾರಿಕೊಳ್ಳುವವನು ಚಿನ್ನದ ಗಣಿಯಲ್ಲಿ ಮಿನುಗುವ ಬಂಗಾರದ ಚೂರುಗಳನ್ನು ಕಡೆಗಣಿಸಿ, ಬರಿ ಕಲ್ಲು ಮಣ್ಣಿನ ಅದಿರನ್ನು ಕೂಡಿಹಾಕಿಕೊಳ್ಳುತ್ತಾನೆ.”


ಭಾರತದ ಅರಕೆ ಸುಶ್ರುತರು ಇದ್ದರೆನ್ನಲಾದ ಸರಿಸುಮಾರಿನಲ್ಲಿಯೇ ಗ್ರೀಸ್‌ನಲ್ಲಿ ಇದ್ದ ಆಧುನಿಕ ವೈದ್ಯ ಪದ್ಧತಿಯ ಪಿತಾಮಹ ಎನ್ನಿಸಿಕೊಂಡಿದ್ದ ಹಿಪಾಕ್ರಟೀಸ್‌ (ಕಾಲ ಸುಮಾರು ಕ್ರಿ.ಪೂ 460 ರಿಂದ 370) ವೈದ್ಯವೃತ್ತಿಯನ್ನು ಅವಲಂಬಿಸಿರುವವರಿಗೆ ಹೀಗೆ ದೀಕ್ಷೆಯನ್ನು ರೂಪಿಸಿದರು.


ನನ್ನ ಸಾಮರ್ಥ್ಯ ವಿವೇಚನೆಗೆ ಅನುಗುಣವಾಗಿ ರೋಗಿಗಳನ್ನು ಉಪಚರಿಸುತ್ತೇನೆ. ಹೊಕ್ಕ ಮನೆಯ ರೋಗಿಗಳ ಒಳ್ಳೆಯದಕ್ಕೆ ಪ್ರಯತ್ನಿಸುತ್ತೇನೆ. ಪ್ರಕಟಗೊಳಿಸಬಾರದ ವಿಚಾರವಾದರೆ ವೈದ್ಯಕೀಯ ಜೀವನದಲ್ಲಿ ನಾನು ಕೇಳಿದುದನ್ನಾಗಲಿ, ನೋಡಿದುದನ್ನಾಗಲಿ ಖಂಡಿತ ಹೊರಗೆಡಹುದಿಲ್ಲ”. ಇದೇ ದೀಕ್ಷೆಯನ್ನು (ಹಿಪಾಕ್ರೆಟಿಯನ್ ಓತ್) ಇಂದಿನ ಡಾಕ್ಟರುಗಳೂ ಆರಂಭದಲ್ಲಿ ಉಚ್ಚರಿಸುತ್ತಾರೆ.


ಸುಶ್ರುತ, ಹಿಪಾಕ್ರಟೀಸ್ ಮುಂತಾದವರು ಕೇವಲ ವೈದ್ಯರಾಗಿರದೆ, ಸಾಮಾನ್ಯ ಜನರಿಗೆ ತಿಳಿವಳಿಕೆಯನ್ನು ನೀಡಿದರು.


ಸಿಟ್ಟು, ಸೆಡವು, ಹಗೆತನ, ಒರಟುತನ, ಉದ್ರೇಕ, ಜಿಪುಣತನ, ಸೋಮಾರಿತನ, ಅಸತ್ಯ, ದುರಾಸೆಗಳನ್ನು ನಿನ್ನಿಂದ ದೂರಮಾಡು, ಬ್ರಹ್ಮಚರ್ಯವನ್ನು ಪಾಲಿಸು, ಗುರು ಹಿರಿಯರನ್ನು ಗೌರವಿಸು, ಕೂದಲು, ಉಗುರುಗಳನ್ನು ಕತ್ತರಿಸಿಕೊಂಡು ಶುಚಿಯಾಗಿರು ಇದು ಸುಶ್ರುತರ ಸಲಹೆ,


ಮಾನವನ ಜೀವನ ಕಣಿಕ, ಆಗ ದೊರೆಯುವ ಅವಕಾಶಗಳೂ ಕಣಿಕವಾದುದ ಸ್ವಂತ ಅನುಭವಗಳು ದೋಷ ಯುಕ್ತವಾಗಿದ್ದು, ಸರಿಯಾದ ನಿರ್ಣಯಕ್ಕೆ ಬರುವುದೂ ಸದಾ ಸುಲಭವಲ್ಲ.


“ವೈದ್ಯರ ಸನ್ನದನ್ನು ಪಡೆದುಕೊಂಡಿರುವವರು ಬಹಳ ಜನರಿರುತ್ತಾರೆ. ಆದರೆ ನಿಜವಾದ ಅರ್ಥದ ವೈದ್ಯರು ಕೆಲವರು ಮಾತ್ರವೇ" ಈ ಮಾತನ್ನು ಹಿಪಾಕ್ರೆಟೀಸ್ ಸರಳವಾಗಿ ಹೀಗೆ ವಿವರಿಸುತ್ತಾರೆ - 'ನಿನ್ನ ವಿದ್ಯಾ ಗುರುವನ್ನು ನಿನ್ನ ತಂದೆಯೆಂದು ಪರಿಗಣಿಸು. ನೀನು ಅನುಸರಿಸುವ ವಿಧಾನಗಳು ರೋಗಿಯ ಕಲ್ಯಾಣಕ್ಕಾಗಿ ಮಾತ್ರವೇ ಅಲ್ಲದೆ, ಅವನಿಗೆ ಹಿಂಸೆ ಮಾಡುವುದಕ್ಕೆ ಆಗಲಿ ಅಥವಾ ಅನ್ಯಾಯ ಎಸಗುವುದಕ್ಕೆ ಆಗಲಿ ಉಪಯೋಗಿಸಬೇಡ: ಯಾರಿಗೂ, ಯಾವ ಸಮಯದಲ್ಲೂ ವಿಷಪ್ರಾಶನ ಮಾಡಿಸಬೇಡ: ಗರ್ಭಪಾತವನ್ನೆಂದಿಗೂ ಉಂಟು ಮಾಡಬೇಡ, ಪುರುಷ ಅಥವಾ ಸ್ತ್ರೀಯ ಮಾನಾನಿಯಾಗದಂತೆ ನೋಡಿಕೊ."


ಹಿಪಾಕ್ರಟೀಸ್ಗಿಂತ ಚಿಕ್ಕವಾಗಿ, ಸೂಕ್ಷ್ಮ ವಾಗಿ ವೈದ್ಯನ ಕೆಲಸವನ್ನು ವಿವರಿಸಲು ಸಾಧ್ಯವೇ? ಆದುನಿಕ ವೈದ್ಯವಿಜ್ಞಾನವು ತನ್ನ ಕಬಂಧ ಬಾಹುಗಳನ್ನು ಎಷ್ಟೋ ಉದ್ದ, ಅಗಲ, ಆಳಕ್ಕೆ ವಿಸ್ತರಿಸಿದರೂ ವೈದ್ಯನ ಕರ್ತವ್ಯ ಮೈ ಮನಗಳ ಆರೋಗ್ಯವನ್ನು ಕಾಪಾಡುವುದಷ್ಟೇ ಅಲ್ಲದೆ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದೂ ಆಗಿದೆ.


ಕೈಗಾರಿಕಾ ಕ್ರಾಂತಿ, ನಗರೀಕರಣ, ಉದಾರೀಕರಣ ಮತ್ತು ವಿದ್ಯುನ್ಮಾನ ಸಮೂಹ ಮಾಧ್ಯಮಗಳ ಪ್ರಾಬಲ್ಯದಿಂದ ಪ್ರಪಂಚದ ಒಂದು ಮೂಲೆಯಲ್ಲಿ ಆದ ಸಂಶೋಧನೆ ಕ್ಷಣಾರ್ಧದಲ್ಲಿ ಇಡೀ ಪ್ರಪಂಚಕ್ಕೆ ಹರಡುತ್ತದೆ. ಕುಳಿತ ಜಾಗದಿಂದ ಏಳದೆಯೇ ಸಂಶೋಧನಾ ಫಲಗಳ ವಿವರಗಳನ್ನು ಪಡೆದುಕೊಳ್ಳುವ ಇಂದಿನ ವೈದ್ಯರು, ಇವರ ಚಿಕಿತ್ಸೆಯನ್ನು ಪಡೆದುಕೊಳ್ಳುವ ರೋಗಿಗಳು ಅದೃಷ್ಟವಂತರಲ್ಲವೇ?


ಸೋಜಿಗ ಎನಿಸುವ ಸತ್ಯ ಸಂಗತಿಯೆಂದರೆ, ಮೈಮನಗಳಿರುವ ಪರಸ್ಪರ ಸಂಬಂಧ, ಹೊಲಿಸ್ಟಿಕ್ ಮೆಡಿಸಿನ್‌ನ ಕಲ್ಪನೆ, ಶುಭ್ರತೆ (ಮಡಿ)ಯ ಮಹತ್ವ, ಸಂತಾನಹರಣ ಚಿಕಿತ್ಸೆ, ರೋಗನಿದಾನ, ಉದ್ವೇಗಗಳ ಹತೋಟಿ, ಆತಂಕ ನಿವಾರಣಾ ಕ್ರಮ ಮುಂತಾದವುಗಳ ಮೂಲಕತ್ವಗಳು ಭಾರತೀಯ ವೈದ್ಯ ಪದ್ಧತಿಯಲ್ಲಿ ಕಂಡು ಬರುತ್ತವೆ.


ವೈದ್ಯರ ದಿನದಂದು, ತಾವು ಗಳಿಸಿದ ಜ್ಞಾನವನ್ನು ಬರಹದ ಮೂಲಕ, ಭಾಷಣಗಳ ಮೂಲಕ ಪ್ರಸಾರ ಮಾಡಿ ಜನ ಜಾಗೃತಿಯನ್ನುಂಟು ಮಾಡಿದ, ಮಾಡುತ್ತಿರುವ ವೈದ್ಯರನ್ನು ಕೃತಜ್ಞತೆಯಿಂದ ನೆನೆಯಬೇಕು. ವೈದ್ಯ ವಿದ್ಯಾಲಯಗಳು, ಪತ್ರಿಕೆಗಳು, ಅಂತರ್ಜಾಲ, ಈ ಮೊದಲು ಪುಸ್ತಕಗಳು ಮಾಡುತ್ತಿದ್ದ ಕೆಲಸವನ್ನು ಹೆಚ್ಚು ಸಮರ್ಥವಾಗಿ ಮಾಡುತ್ತಿವೆ. ಈ ದೃಷ್ಟಿಯಲ್ಲಿ ವೈದ್ಯರು ಕೇವಲ ಔಷಧಿಕೊಡುವವರಾಗಿ ಉಳಿಯದೆ, ಸಮಾಜದ ಋಣವನ್ನೂ ತೀರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಕನ್ನಡದಲ್ಲಿ ಬರೆದು ಜನ ಸಾಮಾನ್ಯರಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸಿದ ಕೆಲವರು ಪ್ರಸಿದ್ಧ ಮಹಿಳೆ, ಮಹನಿಯರನ್ನು ನೆನೆಯೋಣ. ಇವರು ವೈದ್ಯಕೀಯದ ಪ್ರಮುಖ ಅಂಗಗಳಾದ ಸಾರ್ವಜನಿಕ ಆರೋಗ್ಯ, ಶರೀರ ಕ್ರೀಯಾಶಾಸ್ತ್ರ, ಅಂಗ ರರಾಸ್ತ್ರ, ತಿರುವೈದ್ಯ, ಪ್ರಸೂತಿ ವಿಜ್ಞಾನ, ಮನೋಚಿಕಿತ್ಸೆ, ಆಹಾರ ಪದ್ಧತಿ, ಶಸ್ತ್ರಚಿಕಿತ್ಸೆ, ಮನೋವಿಕಾಸ, ಔಷಧಿ ಶಾಸ್ತ್ರಗಳನ್ನು ಕುರಿತು ಜನಪ್ರಿಯ ಲೇಖನಗಳನ್ನು (ಪುಸ್ತಕಗಳನ್ನು ಬರೆದು ಉಪಕಾರ ಮಾಡಿದ್ದಾರೆ. ಹೀಗೆ ಮಾಡಿದವರಲ್ಲಿ ಪ್ರಮುಖರೆಂದರೆ ರಾಶಿ ಕಾವ್ಯನಾಮದ ಡಾ.ಎಂ. ಶಿವರಾಂ, ಡಾ.ಅನುಪಮಾ ನಿರಂಜನ, ಡಾ.ಸಿ ಅನ್ನಪೂರ್ಣಮ್ಮ, ಡಾ.ಲೀಲಾವತಿ ದೇವದಾಸ್, ಡಾ.ಹೆಚ್, ಗಿರಿಜಮ್ಮ, ಡಾ.ಸುನಂದಾ ಕುಲಕರ್ಣಿ, ಡಾ.ಕೆ.ಎ.ಅಶೋಕ ಪೈ, ಡಾ.ಸ.ಜ. ನಾಗಲೋಟಿಮಠ, ಡಾ.ಸಿ.ಆರ್. ಚಂದ್ರಶೇಖರ್, ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ.ನಾ. ಸೋಮೇಶ್ವರ ಮುಂತಾದವರು.


ಈ ಮಹಿಳಾ ಮತ್ತು ಪುರುಷ ವೈದ್ಯರಂತಹ ಸಾವಿರಾರು ವೈದ್ಯರು ಉಚಿತ ವೈದ್ಯಕೀಯ ಶಿಬಿರಗಳು, ತಪಾಸಣಾ ಕೇಂದ್ರಗಳು, ಸಲಹಾ ಕೇಂದ್ರಗಳು ನೇರವಾಗಿ ಪೋನಿನಮೂಲಕ ಸಂಪರ್ಕ ಇಂತಹ ಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಕೆಲವು ವೈದ್ಯರಂತೂ ಸ್ಥಳೀಯರ ಸಹಕಾರದಿಂದ ತರಬೇತಿ ಕೇಂದ್ರಗಳನ್ನು ಆರಂಭಿಸಿ ತುರ್ತು ಚಿಕಿತ್ಸಾ ಘಟಕ ಮತ್ತು ಆಂಬ್ಯುಲೆನ್ಸ್‌ಗಳನ್ನು ಏರ್ಪಡಿಸಿದ್ದಾರೆ. ಇವರೆಲ್ಲ ನಿಜವಾದ ಅರ್ಥದಲ್ಲಿ ನಾರಾಯಣಾರೆ 


ಇತರ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ ಸಮಸ್ಯೆಗಳು ಇಲ್ಲವೆ ಇಲ್ಲ, ಶಿಕ್ಷಣಕ್ಕೆ ತಗಲುವ ದುಬಾರಿ ವೆಚ್ಚ, ಸ್ವಂತ ಶಾಪ್‌ನ್ನು ತೆರೆಯುವ ಖರ್ಚು, ಶಸ್ತ್ರಚಿಕಿತ್ಸೆಯ ಭಾರಿ ಫೀಜು, ಮುಂತಾದವುಗಳ ಕಡೆ ಇನ್ನೂ ಗಮನ ಹರಿಯಬೇಕಾಗಿದೆ. ಆದರೂ ಸಹ, ಇಂದು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ವಿಶ್ವವಿಖ್ಯಾತ ವೈದ್ಯರು ಅವರು ನಡೆಸುತ್ತಿರುವ ವಿಶೇಷ ಶಸ್ತ್ರ ಚಿಕಿತ್ಸೆಗಳಿಂದ ಪ್ರಪಂಚದ ಗಮನ ಸೆಳೆದಿದ್ದಾರೆ.


                  _ಸನಾತನ ಎಸ್ ಜಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ