ಜ್ಞಾನ ದೀವಿಗೆ



 ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ ಗ್ರಂಥಗಳನ್ನು ಓದಿ ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಇಂದಿನ ಯುಗದಲ್ಲಿ ನಾವು ನಮ್ಮ ಜ್ಞಾನವನ್ನು ಅಭಿವೃದ್ಧಿಗೊಳಿಸಲು  ಗ್ರಂಥಾಲಯದ ಉಪಯೋಗ ಬಹಳ ಅವಶ್ಯಕವಾಗಿದೆ. ಗ್ರಂಥಗಳಿರುವ ಆಲಯವೇ ಗ್ರಂಥಾಲಯವಾಗಿದೆ. ಅದರ ಸದುಪಯೋಗವನ್ನು ನಾವು ಹೆಚ್ಚು ಹೆಚ್ಚು ಪಡೆದುಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ಎಲ್ಲಾ  ಶಾಲಾ- ಕಾಲೇಜುಗಳಲ್ಲಿ ಗ್ರಂಥಾಲಯ ತೆರೆದಿದೆ. ಅದೇ ರೀತಿ ನಮ್ಮ ಕಾಲೇಜಿನಲ್ಲಿಯೂ ಇದೆ.ಶೈಕ್ಷಣಿಕ, ಧಾರ್ಮಿಕ,ರಾಜಕೀಯ, ಸಾಮಾಜಿಕ ತಂತ್ರಜ್ಞಾನ, ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಸಂಬಂಧಿಸಿದೆ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿರುತ್ತದೆ. ಅದರ ಜೊತೆ ಕಥೆ,ಕವನ,ನಾಟಕಮತ್ತು ಸಾಹಿತ್ಯ ಪ್ರಬಂಧಗಳು ಹೇಗೆ ಮುಂತಾದ ಪುಸ್ತಕಗಳು ಸಿಗುತ್ತವೆ. ಪುಸ್ತಕಗಳ ಜೊತೆ  ವಾರಪತ್ರಿಕೆಗಳು ಮಾಸಪತ್ರಿಕೆಗಳು ಕೂಡ ಲಭ್ಯವಿರುತ್ತದೆ.

 ನಾವು ನಮ್ಮ ಅಮೂಲ್ಯವಾದ ಸಮಯವನ್ನು ಪುಸ್ತಕಗಳನ್ನು ಓದುವುದರ ಮೂಲಕ  ಅದರ ಬಳಕೆಯನ್ನು ಮಾಡಿಕೊಳ್ಳಬೇಕು. ಗ್ರಂಥಾಲಯವು ಒಂದು ವಿಶ್ವವಿದ್ಯಾಲಯವಿದ್ದಂತೆ.

 ಮನುಷ್ಯನ ದೇಹಕ್ಕೆ ಅನ್ನ,ನೀರು,ಗಾಳಿ ಎಷ್ಟು ಮುಖ್ಯವಾಗಿರುತ್ತದೆಯೋ ಹಾಗೆ ಮಾನವನ ವಿಕಾಸಕ್ಕೆ ಪುಸ್ತಕಗಳು ಅವಶ್ಯಕವಾಗಿರುತ್ತದೆ. ನನ್ನನ್ನು ತಲೆತಗ್ಗಿಸಿ ಓದು ನಾನು ನಿನ್ನನ್ನು ತಲೆಯೆತ್ತಿ ನೋಡುವಂತೆ ಮಾಡುತ್ತೇನೆ.  ನಾವು ಗ್ರಂಥಾಲಯಕ್ಕೆ ಹೋದಾಗ ಗಂಭೀರವಾಗಿ ಅಧ್ಯಯನ ಮಾಡಬೇಕು. ಮಾತನಾಡದೆ ನಿಶಬ್ದವಾಗಿ ಬೇರೆಯವರಿಗೆ ತೊಂದರೆ ಆಗದಂತೆ ವರ್ತಿಸಬೇಕು. ಪುಸ್ತಕಗಳು ನಮ್ಮ ಆತ್ಮೀಯ ಮಿತ್ರರಿದ್ದಂತೆ ಒಳ್ಳೆಯ ಆಲೋಚನೆಗಳಿಗೆ ದಾರಿ ದೀಪವಾಗುತ್ತವೆ. ಇದರಿಂದ ನಾವು ನಮ್ಮ ಜೀವನವನ್ನು ರೂಪಿಸಲು ಅತ್ಯುತ್ತಮ  ಹಾದಿಯಾಗಿದೆ. ಕೇವಲ ಪುಟಗಳನ್ನು ತಿರುಚುವ ಮೂಲಕ ಪುಸ್ತಕಗಳನ್ನು ಬಳಸಿಕೊಳ್ಳಬೇಡಿ. ಅದರ ಉಪಯುಕ್ತತೆಯನ್ನು ಪಡೆದುಕೊಳ್ಳಿ. ಕೇವಲ ತುರ್ಗಾಣಿಕೆಗೆ ಪುಸ್ತಕವನ್ನು ತೆಗೆದುಕೊಳ್ಳುವುದು ಸರಿಯಲ್ಲ.ಒಂದೇ ಒಂದು ಪುಸ್ತಕ ಅನೇಕ ರೀತಿಯ ಜ್ಞಾನ ನೀಡುತ್ತದೆ. ವಿದ್ಯೆಯೆಂಬುದು ಜಗತ್ತಿನ ಅತ್ಯುತ್ತಮವಾದ ಸಂಪತ್ತಾಗಿದೆ. ಜ್ಞಾನವನ್ನು ನಾಮ  ಒಮ್ಮೆ ಪಡೆದುಕೊಂಡರೆ ಅದು ನಮ್ಮನ್ನು ಯಾವತ್ತು ಕೈ ಬಿಡುವುದಿಲ್ಲ. ವಿದ್ಯೆಗಿಂತ ಮಿಗಿಲಾದಿ ಶಕ್ತಿ ಇನ್ನೊಂದಿಲ್ಲ.


ಚಂದನಾ ಜಿ.

ಎಂ. ಎಂ ಕಲಾ ವಿಜ್ಞಾನ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "