"ಗೆಳೆತನ"
ಹುಟ್ಟಿನಿಂದಲೇ ನಾವು ಹಲವಾರು ಸಂಬಂಧಗಳ ಜೊತೆಗೆ ಜನಿಸುತ್ತೇವೆ. ಇನ್ನು ಕೆಲವು ಸಂಬಂಧಗಳು ನಾವು ಸ್ವಯಂಕಾಲ ಕಳೆದಂತೆ ಮಾಡಿಕೊಳ್ಳುತ್ತೇವೆ. ಅಂತಹ ಸಂಬಂಧಗಳ ಸಾಲಿನಲ್ಲಿ ಗೆಳೆತನವು ಒಂದು. ಗೆಳೆತನ ಈ ಜಗತ್ತಿನ ಅತ್ಯಂತ ಸುಂದರವಾದ ಸಂಬಂಧ. ನಮ್ಮ ಜೀವನದಲ್ಲಿ ಬಹಳಷ್ಟು ಸ್ನೇಹಿತರಿರಬಹುದು ಆದರೆ ಅದರಲ್ಲಿ ಕೆಲವು ಸ್ನೇಹಿತರು ಮಾತ್ರ ಅತ್ಯಂತ ಆತ್ಮೀಯರಾಗಿರುತ್ತಾರೆ.
ನಿಜವಾದ ಸ್ನೇಹಿತ ನಮ್ಮ ಕಷ್ಟಕಾಲದಲ್ಲಿ ನಮ್ಮ ಜೊತೆಯಲ್ಲಿ ಇರುವವನು ಎಂದು ಜನ ಹೇಳುತ್ತಾರೆ. ಗೆಳೆತನ ಎಂದರೆ ಒಂದು ಅದ್ಭುತ ಸಂಬಂಧ ಏಕೆಂದರೆ ಯಾವ ಸಮಸ್ಯೆಗಳ ಬಗ್ಗೆ ನಾವು ನಮ್ಮ ಕುಟುಂಬಸ್ಥರ ಬಳಿ ಮಾತನಾಡಲು ಹಂಚುತ್ತೇವೆ ಆ ವಿಷಯವನ್ನು ಯಾವುದೇ ಪೀಠಿಕೆ ಇಲ್ಲದೆ ಅವರ ಮುಂದೆ ಇಡುತ್ತೇವೆ.
ನಮ್ಮ ಜೀವನದ ಉಲ್ಲಾಸ, ಹರ್ಷ, ಖುಷಿ ಮತ್ತು ಶೋಕದ ವಿಷಯವನ್ನು ತಿರುಚೆದೆ ಅದು ಹೇಗಿದ್ದೀಯಾ ಹಾಗೆ ಗೆಳೆಯರ ಮುಂದೆ ಪ್ರಸ್ತುತಪಡಿಸುತ್ತೇವೆ.
ಅವರು ಆ ಸಮಯದಲ್ಲಿ ನಮಗಿಂತಲೂ ಜಾಸ್ತಿ ಖುಷಿ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಾರೆ.
ಗೆಳೆತನವನ್ನು ಯಾವಾಗಲೂ ವ್ಯಕ್ತಿಯ ನಡುವಳಿಕೆ ಚಾರಿತ್ರೆಯನ್ನು ನೋಡಿ ಮಾಡಲಾಗುತ್ತದೆಯೇ ಹೊರತು ಬಡವ -ಶ್ರೀಮಂತ, ಜಾತಿ- ಧರ್ಮ ಅಥವಾ ನಿಜಿ ಯೋಜನೆ ಎಂದು ಮಾಡಿಕೊಳ್ಳಲಾಗುವುದಿಲ್ಲ. ಒಳ್ಳೆ ಗೆಳೆಯರ ಪರಿಚಯ ಮತ್ತು ಸಂಬಂಧಿಗಳ ಪರಿಚಯ ಕೆಟ್ಟ ಕಾಲದಲ್ಲಿ ಆಗುತ್ತದೆ ಎಂಬುದು ಸಹಜ ಸತ್ಯ.
ಒಂದು ಮಗುವಿನ ಜನ್ಮಕಿಂತಲೇ ಮೊದಲು ಬಹಳಷ್ಟು ಸಂಬಂಧದ ಕೊಂಡಿಗಳು ಪೋಣಿಸಿ ಕೊಳ್ಳಲು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆ ಸಾಯುವರೆಗೂ ನಡೆಯುತ್ತಿರುತ್ತದೆ. ಆದರೆ ಗೆಳೆಯನ ಆಯ್ಕೆಯನ್ನು ನಾವು ಸ್ವಯಂ ಮಾಡಿಕೊಳ್ಳುತ್ತೇವೆ.
ಗೆಳೆಯ ಎಂದರೆ ಕುಟುಂಬಸ್ಥನಲ್ಲದವನು ಎನ್ನುವುದು ತಪ್ಪು ಪರಿಕಲ್ಪನೆ. ಏಕೆಂದರೆ ಮನುಷ್ಯನ ಆಯುಷ್ಯ ಹೆಚ್ಚಿದಂತೆ ಪರಿಪಕ್ವತೆಯ ಜೊತೆಗೆ ಅನೇಕ ಪರಿವರ್ತನೆಯಾಗುತ್ತದೆ. ಕುಟುಂಬದ ಸದಸ್ಯರಲ್ಲದವನನ್ನೇ ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕೆಂದಿಲ್ಲ. ಕೆಲವು ಕುಟುಂಬದಲ್ಲಂತೂ ಅಪ್ಪ- ಅಮ್ಮ, ಅಣ್ಣ- ತಂಗಿ ಅಥವಾ ಮನೆ ಇತರ ಸದಸ್ಯರುಗಳು ಸ್ನೇಹಿತರಾಗಿರಬಹುದು. ಯಾರೊಂದಿಗೆ ನಾವು ನಿಶ್ಚಿಂತೆ ಅಂತ ನಮ್ಮ ಮಾತನ್ನು ಇಡಬಲ್ಲವೋ ಅವರು ನಮ್ಮ ಗೆಳೆಯರಾಗುವರು.
ಖಜನೆಯನ್ನು ಹುಡುಕುವುದು ಎಷ್ಟು ಕಷ್ಟಕರವಾದ ಕೆಲಸವೋ ಅದೇ ರೀತಿ ಗೆಳೆಯರು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಅದಕ್ಕಾಗಿ ಗೆಳೆತನವನ್ನು ರಕ್ತ ಸಂಬಂಧಕ್ಕಿಂತ ಮೀರಿದ ಸಂಬಂಧವೆಂದು ನಂಬಲಾಗಿದೆ.
ಭಾವನಾ
BA1
ಎಂ. ಎಂ ಮಹಾವಿದ್ಯಾಲಯ ಶಿರಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ