ಮೊಬೈಲ್ ಎಂಬ ಮಾಯಾಲೋಕ



 ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರಚೆನ್ನಾಗಿದೆ  ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ     ನನಗೆ ನೆಮ್ಮದಿ ಸಿಕ್ಕಿದೆ ಮೊದಲು ನಿಂದಲೂ ನಾನು ಅತಿ ಸಂತೋಷವಾಗಿದ್ದೇನೆ. ಎಂದು ಹೇಳಲಿ ನೋಡೋಣ ಮೊಬೈಲ್ ಇದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಆಗ ತಾನೇ ಅಮ್ಮ ಎಂದು ಹೇಳಲು ಕಲಿತ ಮಗುವಿನಿಂದ ಹಿಡಿದು ಬಿಳಿ ಗಡ್ಡ ಬೆಳೆದ  ಜೀವಕ್ಕೂ ಬೇಕು. ಮನುಷ್ಯನ ಎಲ್ಲಾ ಸಂಬಂಧಿಗಳಿಗಿಂತಲೂ ಶ್ರೇಷ್ಠ ಎಂದು ಅಂದುಕೊಂಡಿದ್ದೇವೆ. ಮೊಬೈಲ್ ಎಂಬ ಮಾಯಾವಿಯು ಮೊದಮೊದಲು ಬಂದಾಗ ಬಿಗಿದ್ದೇವೆ.


ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತದೆ ಎಂದು ಆದರೆ ಇಂದು ನಾವು ಅದರ ಸುಳ್ಳಿಗೆ ಸಿಲುಕಿದ್ದೇವೆ ಮೊಬೈಲ್ ಇದು ಕೇವಲ ಫೋನ್ ಮಾಡುಲು ಮೆಸೇಜ್ ಮಾಡಲು ಅಷ್ಟೇ  ಉಳಿದಿದ್ದರೆ ಬಹುಶ: ಮೊಬೈಲ್ ಒಂದು ಮೆಸೇಜ್ ಆಗುತ್ತಿರಲಿಲ್ಲ. ಇದು ಮೊಬೈಲ್ ಮಾಡಬೇಕಾದ ಕೆಲಸವನಷ್ಟು ಮಾಡದೇ ಟಿವಿ ರೇಡಿಯೋ ಪುಸ್ತಕ ಹೀಗೆ ಅನೇಕ ವಸ್ತುವಿನ ಕೆಲಸದ ಪಾರ್ಟ್ ಟೈಮ್ ಲೆಕ್ಕದಲ್ಲಿ ಕೆಲಸ ಮಾಡುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಅನಿರ್ವಾಯತೆ ಇದೆ .ಎಷ್ಟರಮಟ್ಟಿಗೆ ಎಂದರೆ ಮೊಬೈಲ್ ಇಲ್ಲದೆ ನಾವಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ .ಮೊಬೈಲ್ ಈ ಪ್ರಪಂಚಕ್ಕೆ ಕಾಲಿಡುವುದಕ್ಕಿಂತ ಮೊದಲು ನಮ್ಮ ಪೂರ್ವಜರು ಅದು ಹೇಗೆ ಬದುಕಿದ್ದಾರೋ ಎಂಬ ಅನುಮಾನ ಬರುವಷ್ಟು.


ಆದರೆ ಈಗ ಅದ್ಯಾವ ಮನೆಯಲ್ಲಿ ಕೂಡ ಚಿಕ್ಕ ಮಕ್ಕಳ ಚಿರಾಟ ಕೇಳಿ ಬರುವುದು ಇಲ್ಲ ಮೊದಲೆಲ್ಲಾ ಪಕ್ಕದ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಕೇಳಿಸಿಕೊಳ್ಳುವ ಕೆಟ್ಟ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಕದ ಮನೆಯ ಸುದ್ದಿ ಬಿಡಿ ನಮ್ಮ ಪಕ್ಕದವರ ಮಾರು ಕೇಳಿಸಿಕೊಳ್ಳುವುದು ನಮಗೆ ಬೇಕಾಗಿಲ್ಲ ಹಿಂದೆ ಊಟ ಮಾಡಿಸಲು ತಾಯಿ ಚಂದ್ರನನ್ನು ತೋರಿಸಿ ಊಟ ಮಾಡಿಸುತ್ತಿದ್ದಳು ಆದರೆ ಈಗ ಮೊಬೈಲ್ ನಲ್ಲಿ ಕಾರ್ಟೂನ್ ಅಥವಾ ಮನರಂಜನೆ ನೀಡುವ ವಿಡಿಯೋ ನೋಡಿ ಊಟ ಮಾಡಿಸುವ ಪರಿಸ್ಥಿತಿ ಎದುರಾಗಿದೆ ಇಡೀ ಪ್ರಪಂಚವೇ ತಮ್ಮ ಮೊಬೈಲ್ ಅನ್ನು ಕಿಸಿಯಲ್ಲಿಟ್ಟುಕೊಂಡು ನಿರಂತರವಾಗಿ ಹತ್ತು ನಿಮಿಷ ನೆಮ್ಮದಿಯಿಂದ ಇರುವ ಮಹಾನುಭಾವ ರಿಲ್ಲಹಾಗೇನಾದರೂ ಇದ್ದರೆ ಅವರು ಈ ಗ್ರಹದವರೇ ಅಲ್ಲ. 


ಮೊಬೈಲ್ ನಮಗೆ ನಿಜವಾಗಿಯೂ ಉತ್ತಮ ಗೆಳೆಯನಾಗಬಲ್ಲ. ಯಾವಾಗೆಂದರೆ- ನಾವು ಮೊಬೈಲ್ ನ್ನು ನಮ್ಮ ದುಡಿಮೆಗೆ ಮತ್ತು ಲಾಭಕ್ಕಷ್ಟೇ ಉಪಯೋಗಿಸಿ, ನಮ್ಮ ಒತ್ತಡದ ಜೀವನದ ನಡುವೆ ಸಿಕ್ಕ ಸ್ವಲ್ಪ ಸಮಯವನ್ನು ನಮ್ಮವರಿಗೋಸ್ಕರ ಮೀಸಲಿಟ್ಟು, ಜೀವನವನ್ನು ಸಮಾಜದೊಂದಿಗೆ ಬೆರೆಸಿ ನಮ್ಮಿಂದ ನಾಲ್ಕು ಜನಕ್ಕೆ ಉಪಯೋಗವಾಗುವಂತೆ ಬದುಕಿದಾಗ ಮಾತ್ರ. ಅದು ಬಿಟ್ಟು, ಮೊಬೈಲ ನ ನಶೆ ಹತ್ತಿಸಿಕೊಂಡು ಅದೇ ಸರ್ವಸ್ವ ಎಂದು ಭಾವಿಸಿ ಬದುಕಿದರೆ ಕೊನೆವರೆಗೂ ನಮಗೆ ಸಿಗುವುದು, ನಮ್ಮಿಂದ ಉಳಿದವರಿಗೆ ದೊರೆಯುವುದು ಕೇವಲ ಏಕಾಂತ ಮಾತ್ರ.              


ಆದರ್ಶ ಎಸ್ ಎಸ್

BA1

ಎಂ ಎಂ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ನಮ್ಮ ಅರಳೇಶ್ವರ