ನಮ್ಮ ಮುಂಡಗೋಡ
ಭಾರತದ ಕರ್ನಾಟಕ ರಾಜ್ಯದ. ಪ್ರವಾಸಿತಾಣಗಳಿಗೆ ಹೆಸರು ವಾಸಿಯಾದ ಉತ್ತರ ಕನ್ನಡ ಜಿಲ್ಲೆಯ ಒಂದು ಪಟ್ಟಣ ವಾಗಿದೆ. ಮುಂಡಗೋಡ ಭತ್ತದ ವ್ಯಾಪಕ ಕೃಷಿಗೆ ಹೆಸರು ವಾಸಿಯಾಗಿದೆ.
ಪ್ರವಾಸಿಯ ತಾಣಗಳಿಗೆ ಹೆಸರು ವಾಸಿಯಾದ ಉತ್ತರ ಕನ್ನಡ ಜಿಲ್ಲೆಯಂತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಗೋಡ ಕೂಡ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುತ್ತದೆ.
" ಮುಂಡಗೋಡ ಟಿಬೇಟಿಯನ್ ಕ್ಯಾಂಪ್ "
ಪ್ರಸಿದ್ಧಿಯಾಗಿರುವ ಟಿಬೇಟಿಯನ್ ಕ್ಯಾಂಪ್ ಭಾರತದಲ್ಲಿ ಬೇರೆಲ್ಲೂ ಕಾಣಸಿಗದ ವಿಶಿಷ್ಟ ವಾಸ್ತುಶಿಲ್ಪದ ಬೃಹತ ಕಟ್ಟಡ, ಒಟ್ಟು ಏಳು ಭೌದ್ಧ ವಿಹಾರ, ಬುದ್ಧನ ಪ್ರತಿಮೆ, ಟಿಬೇಟಿಯನ್ಸ ಪೇಟೆ, ಟಿಬೇಟಿಯನ ಚಿತ್ರಕಲೆ ನೋಡುಗರನ್ನು ಬೇರೆಯ ಲೋಕಕ್ಕೆ ಕರೆದೊಯ್ಯುತ್ತೆ.
ಇವರು ತಮ್ಮ ಮೂಲ ದೇಶವಾದ " ಟಿಬೇಟ " ಮೇಲೆ ಚೀನಾ ದಾಳಿಯನ್ನು ಮಾಡಿದಾಗ ತಮ್ಮ ಜೀವ ಉಳಿಸಿಕೊಳ್ಳಲು ಬೇರೆ -ಬೇರೆ ದೇಶದಲ್ಲಿ ಆಶ್ರಯತಾಣವನ್ನು ಹುಡುಕಿಕೊಂಡು ಬಂದು 1959 ರಲ್ಲಿ ಅಲ್ಲಿಂದ ಹೋರಟು ಭಾರತಕ್ಕೆ ಬಂದರು.
ಭಾರತದ ಐದು ಪ್ರದೇಶಗಳಲ್ಲಿ 1966 ರಿಂದಲೇ ನೆಲೆಗೊಂಡಿದ್ದಾರೆ.
ಬೇರೆ ನಾಲ್ಕು ಪ್ರದೇಶಗಳಿಗಿಂತ ಮುಂಡಗೋಡ ಟಿಬೇಟ ಜಾಸ್ತಿ ಮತ್ತು ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕಾಣವಾಗಿದೆ.
ಮುಂಡಗೋಡ ತಾಲೂಕಿನ ಮತ್ತೊಂದು ಪ್ರವಾಸಿಗರ ತಾಣವೆಂದರೆ.
"ಅತ್ತಿವೇರಿ ಪಕ್ಷಿಧಾಮ "
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ ಅತ್ತಿವೇರಿ ಪಕ್ಷಿಧಾಮ ದೇಶ - ವಿದೇಶಿ ಹಕ್ಕಿಗಳನ್ನು ಆಕಷಿ೯ಸುತ್ತದೆ.
ಸೂರ್ಯ ಉದಯಿಸುವ ಮುನ್ನವೇ ಹಕ್ಕಿಗಳ ಚಿಲಿಪಿಲಿ ಸದ್ದು. ಎಲ್ಲಿ ನೋಡಿದರೂ ಅಲ್ಲಿ ಪಕ್ಷಿಗಳು ಪಕ್ಷಿಗಳ ಹಾರಾಟ, ಕೂಗಾಟ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಣ್ಣಿಗೆ ಕಾಣಸಿಗುವ ಸ್ವದೇಶಿ ಪಕ್ಷಿಗಳ ಕಲರವ ನೋಡಲು ನಮ್ಮ ಎರಡು ಕಣ್ಣುಗಳು ಸಾಲದು. ಈ ಪಕ್ಷಿಧಾಮ 2.23 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ. ಅರಣ್ಯ ಪ್ರದೇಶ ಮಧ್ಯದಲ್ಲಿ 22 ಬೇರೆ ಬೇರೆ ದೇಶಗಳ 79 ಪ್ರಭೇಧದ ವಲಸೆ ಹಕ್ಕಿ ಗಳಿಗೆ ಆಶ್ರಯವನ್ನು ನೀಡುತ್ತಿದೆ.
ಮತ್ತೊಂದು ಧಾರ್ಮಿಕ ದೇವಾಲಯವಾದ.
ಬೇಡಸಗಾಂವ್ ನಲ್ಲಿರುವ " ರಾಮಲಿಂಗೇಶ್ವರನ ದೇವಸ್ಥಾನ"ವು ಹೆಚ್ಚು ಪ್ರಸಿದ್ಧಿಯಾಗಿದೆ. ನಾಲ್ಕು ಅಡಿ, ಎಂಟು ಇಂಚುಗಳ ಲಿಂಗವು ಶ್ರೀಮಂತ ಕಾಡಿನ ಮಧ್ಯೆ ನೆಲೆಗೊಂಡಿರುವ ದೈವಿಕ ಸೌಂದರ್ಯ ವಾಗಿದೆ.
ಬಿಜ್ಜಳ ರಾಜನು ತನ್ನ ರಾಮಲಿಂಗೇಶ್ವರನ ಪರಾಕ್ರಮವನ್ನು ತೋರಿಸಿದ ಸ್ಥಳ ಇದು. ಆ ಕಾಲದಲ್ಲಿ ಬೆಡಸಗಾಮೆ ಎಂದು ಕರೆಯಲಾಗುತ್ತಿತ್ತು. ಈಗ ಅದನ್ನು ಬೆಡಸಗಾಂವ್ ಎಂದು ಕರೆಯಲಾಗುತ್ತದೆ.
ರಾಮ ಲಕ್ಷ್ಮಣರು ತಮ್ಮ ವನವಾಸದಲ್ಲಿ (ಕಾಡಿನಲ್ಲಿ ವಾಸಿಸುತ್ತಿದ್ದಾಗ) ಭಗವಾನ್ ಶಿವನನ್ನು ಪೂಜಿಸುತ್ತಿದ್ದರು. ಎಂದು ನಂಬಲಾಗಿದೆ. ಅಂದಿನಿಂದ ಈ ಸ್ಥಳವನ್ನು ರಾಮಲಿಂಗೇಶ್ವರ ಎಂದು ಕರೆಯುತ್ತಾರೆ. ದೇವಾಲಯದ ನೈಋತ್ಯ ಭಾಗದಿಂದ ಐದು ಅಡಿ ಎತ್ತರದಿಂದ ಶುದ್ಧನೀರು ಕೇಳಕ್ಕೆ ಇಳಿಯುವುದು ಭಕ್ತರ ಆಕರ್ಷಣೆಯಾಗಿದೆ.
ಗಣೇಶ ಖಂಡೋಜಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ