ಒಂದು ದೋಷವು ಅನೇಕ ಗುಣಗಳನ್ನು ನುಂಗುವುದು



            ಪ್ರಾಮಾಣಿಕತೆಗೆ ಇನ್ನೊಂದು ಹೆಸರಾದ ಪುಣ್ಯಕೋಟಿ ಕಥೆಯನ್ನು ನಾವು ಬಾಲ್ಯದಿಂದ ಕೇಳುತ್ತಲೇ ಬಂದಿದ್ದೇವೆ. ಅಂತಹ ಪ್ರಾಮಾಣಿಕತೆಗೆ ಪಾತ್ರವಾದ ಹಸುವಿನ ತಾಳ್ಮೆ ಮತ್ತು ಧೈರ್ಯ ಪ್ರಾಮಾಣಿಕ ಅಂಶಗಳನ್ನು ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಳ್ಳುವ ಅಂಶ. ಪ್ರಾಮಾಣಿಕತೆಗೆ ಒಂದು ಚಿಕ್ಕದಾದ ಕಥೆ ಇದೆ.

                    ಒಂದು ಊರಿನಲ್ಲಿ ಶಾಮ, ಭೀಮ, ರಾಮ, ಎಂಬಂತಹ ಮೂವರು ಗೆಳೆಯರು ಇದ್ದರು. ಈ ಗೆಳೆಯರು ಬಾಲ್ಯದಿಂದಲೇ ಒಟ್ಟಿಗೆ ಇದ್ದವರಾಗಿದ್ದರು. ತಮ್ಮ ಉನ್ನತ ಶಿಕ್ಷಣಕ್ಕೆ ಎಂದು ಪಟ್ಟಣಕ್ಕೆ ವಲಸೆ ಹೋದರು.  ಶಾಮ ಈತನು  ತುಂಬಾ ಬುದ್ಧಿವಂತ. ಆದರೆ ಅವನಿಗೊಂದು ಕಾಯಿಲೆ ರೀತಿ ಇದ್ದಂತದ್ದು ಓದಿದ್ದು ಏನು ತಲೆಗೆ ಹತ್ತದಿರುವುದು. ಭೀಮ ಈತನು ಬಾಲ್ಯದಲ್ಲಿ ತುಂಬಾ ಚುರುಕನಾಗಿದ್ದ ಆದರೆ ದಿನಗಳು ಕಳೆದಂತೆ ಗೆಳೆಯರ ಬಳಗದಲ್ಲಿ ಸೇರಿ ತುಂಬಾ ಸೋಮಾರಿ ಮತ್ತು ದುರಾಬ್ಯಾಸಕ್ಕೆ ತೊಡಗಿ ತನ್ನ ಜೀವನದ ದಿಕ್ಕನ್ನೇ ಬದಲಿಸಿಕೊಂಡನು. ರಾಮ ಈತನು ತುಂಬಾ ಸಭ್ಯವಂತ ಸಂಯೋಮವು ಉಳ್ಳವನಂಥವನು ಮತ್ತು ತಂದೆ- ತಾಯಿಗಳಿಗೆ ಪ್ರಾಮಾಣಿಕವಾದ ಮಗನಾಗಿದ್ದನು. ಈ ಮೂವರು ಸ್ನೇಹಿತರು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಒಳ್ಳೆಯ ಹುದ್ದೆಗಳ ಅರ್ಜಿ ಆಹ್ವಾನಕ್ಕೆ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಶಾಮ ತನಗೆ ವಿದ್ಯಾಭ್ಯಾಸದ ಸಾಮರ್ಥ್ಯದ ಕೊರತೆಯಿಂದಾಗಿ ಆಯ್ಕೆಯಲ್ಲಿ ವಿಫಲನಾದನು ಶಾಮ ಪ್ರಯತ್ನ ಮಾಡದೆ ನನ್ನಿಂದ ಇದು ಸಾಧ್ಯವಿಲ್ಲವೆಂದು ಇದರಿಂದ ದೂರ ಹೋದನು.

                      

                 ಭೀಮ ಈತ ಯಾವುದೇ ಪ್ರಯತ್ನವನ್ನು ಮಾಡದೆ ಯಾವುದೇ ಪರೀಕ್ಷೆಯಲ್ಲಿ ತೊಡಗಲಿ ಲಂಚ ಗುಳಿತನದಿಂದ ವಿದ್ಯಾಭ್ಯಾಸ ಮುಗಿಸಿ ಹುದ್ದೆಯನ್ನು ಲಂಚದಿಂದಲೇ ಪಡೆದುಕೊಂಡಿದ್ದನು. ಈತನು ತನ್ನ ಜೀವನವನ್ನು ಐಶಾರಾಮಿಯಾಗಿ ಖುಷಿಯಿಂದ ಗೆಳೆಯರ ಬಳಗದ ಜೊತೆಗೆ ಊರೆಲ್ಲಾ ಸುತ್ತುತ್ತಾ ತನಗೆ ಬಂದು ಸಂಬಳವನ್ನೆಲ್ಲ ಇದಕ್ಕಾಗಿಯೇ ಖರ್ಚನ್ನು ಮಾಡುತ್ತ ಜೀವನವನ್ನು ಕಳೆಯುತ್ತಿದ್ದನು. ಈ ಸಂದರ್ಭದಲ್ಲಿ ಒಂದು ದಿನ ಈತನಿಗೆ ತನ್ನ ಹುದ್ದೆಯಲ್ಲಿ ನಷ್ಟವನ್ನು ಅನುಭವಿಸಿ ಒಂದು ದಿನ ತನ್ನ ತಂದೆ ತಾಯಿಯನ್ನು ಸಹ ತನ್ನೊಂದಿಗೆ ಬೀದಿಗೆ ತಂದನು. ಹೀಗೆ ಭೀಮ ತನ್ನ ಬದುಕಲ್ಲಿ ತುಂಬಲಾರದಷ್ಟು ನಷ್ಟ ಅನುಭವಿಸಿ ನಂತರ ಆತ್ಮಹತ್ಯೆಗೆ ಶರಣಾದನು.

                    ರಾಮ ಮೊದಲಿನಿಂದಲೂ ತಂದೆ ತಾಯಿಗೆ ಒಳ್ಳೆಯ ಮಗನಾಗಿ ಗುರುಗಳಿಗೆ ಒಳ್ಳೆಯ ಶಿಷ್ಯನಾಗಿ ಉತ್ತಮರ ಗೆಳೆತನ ಮಾಡುತ್ತಾ, ಯಾವಾಗಲೂ ವಿದ್ಯಾಭ್ಯಾಸಕ್ಕಾಗಿಯೇ ತನ್ನ ಸಮಯವನ್ನು ಮೀಸಲಿಡುತ್ತಿದ್ದನು. ಹಲವಾರು ಕಷ್ಟಗಳನ್ನು ಅನುಭವಿಸಿದ ರಾಮ ಮನೆಯ ಬಡತನದ ಜೊತೆಗೆ ಅಭ್ಯಾಸವನ್ನು ಮುಂದುವರಿಸುತ್ತಾ, ಸ್ಪರ್ಧಾ ಪರೀಕ್ಷೆಗಳನ್ನು ಎದುರಿಸುತ್ತಾ, ಹಲವಾರು ವರ್ಷಗಳ ನಂತರ ಒಂದು ಉತ್ತಮವಾದ ಹುದ್ದೆಯನ್ನು ಅಲಂಕರಿಸಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡು ಉತ್ತಮ ರೀತಿಯಲ್ಲಿ ತನ್ನ ಜೀವನವನ್ನು ಕಟ್ಟಿಕೊಂಡನು. 


                    ಶಾಮ, ಭೀಮ, ರಾಮ, ಈ ಮೂವರಲ್ಲೂ ಸಾಮರ್ಥ್ಯವಿತ್ತು. ಆದರೆ ಕಾಯುವ ತಾಳ್ಮೆ, ಶಾಂತಿ, ಸಂಯಮ, ಮತ್ತು ಪ್ರಮುಖವಾಗಿ ಪ್ರಾಮಾಣಿಕತೆ ಹಾಗೂ ಪ್ರಯತ್ನ ಇವುಗಳ ಕೊರತೆ ಶಾಮ ಮತ್ತು ಭೀಮನಲ್ಲಿ ಇದ್ದದ್ದರಿಂದಾಗಿ ತಮ್ಮ ಜೀವನದಲ್ಲಿ ಗೆಲುವು ಕಾಣದೆ ವಿಫಲರಾದರು. ರಾಮ ಎಲ್ಲಾ ಕಷ್ಟಗಳನ್ನು ಎದುರಿಸಿ ತಾಳ್ಮೆ ಶಾಂತಿ ಸಂಯಮ ಮತ್ತು ಪ್ರಮಾಣಿಕತೆಯಿಂದ ಮುಂದೆ ಸಾಗಿ ಜೀವನದಲ್ಲಿ ಉತ್ತಮ ಸ್ಥಾನ ಪಡೆದು ಗೆಲುವನ್ನು ಸಾಧಿಸಿದನು.


                     ಈ ಕಥೆಯಿಂದ ತಿಳಿಯಬೇಕಾದ ಅಂಶವೇನೆಂದರೆ , ಪ್ರಾಮಾಣಿಕತೆ ಇದ್ದರೆ ಜೀವನದಲ್ಲಿ ಏನಾದರೂ ಪಡೆದೆ ತೀರುತ್ತೇವೆ. ಅಡ್ಡ ದಾರಿಯಿಂದ ಸಾಗಿದರೆ ಅಪಾಯ ಖಂಡಿತವಾಗಿಯೂ ಕಟ್ಟಿಟ್ಟ ಬುತ್ತಿ ಅಂತಿರುತ್ತದೆ.

 


         

                                        ಕಾವ್ಯ ತಿಪ್ಪಕ್ಕನವರ್ 

           ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "