ನಮ್ಮ ಅರಳೇಶ್ವರ

 


 


ಮುಸ್ಸಂಜೆಯ ತಂಪಿನಲ್ಲಿ ಭಾವಕ್ಕೆ ಭಾವ ಬದಲಾಗಿ ನೋಟಕ್ಕೆ ನೋಟ ಜೊತೆಯಾಗಿ ತಿಳಿ ನೀರಿನ ಮನಸ್ಸಿನಲ್ಲಿ ಹುಣ್ಣಿಮೆಯ ಮಧುಚಂದ್ರ ಅಬ್ಬಬ್ಬಾ ಇದು ಹೊಸ ಲೋಕ ಅದುವೇ ನಮ್ಮ ಅರಳೇಶ್ವರ ಲೋಕ.


                  ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಯಾಲಕ್ಕಿ ಕಂಪಿನ ನಾಡು ಎಂದೇ ಪ್ರಸಿದ್ಧಿ ಪಡೆದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಪುಟ್ಟ ಗ್ರಾಮ ಅದುವೇ ನಮ್ಮ ಅರಳೇಶ್ವರ.

                 ಇದು ಪ್ರಾಚೀನ ಕಾಲದಲ್ಲಿ ಭತ್ತದ ಕಣಜದ ನಾಡು ಎಂದೇ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಮೊದಲು ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ.ವಿಜಯನಗರದ ಅರಸರು,ಕದಂಬರು ಮುಂತಾದ ಅರಸರು ಮುತ್ತು,ರತ್ನ, ಹವಳಗಳನ್ನ ಇಲ್ಲಿ ಮಾರುತಿದ್ದರು.


                 ಈ ಗ್ರಾಮದಲ್ಲಿ ಒಟ್ಟು 540 ಕುಟುಂಬಗಳನ್ನು ಕಾಣಬಹುದು. ಒಟ್ಟು ಜನಸಂಖ್ಯಾ ಪ್ರಮಾಣ 2595.ಅದರಲ್ಲಿ 1338 ರಷ್ಟು ಪುರುಷರು, 1257ರಷ್ಟು ಮಹಿಳೆಯರ ಪ್ರಮಾಣವನ್ನು 2011ರ ಜನಗಣತಿಯ ಪ್ರಕಾರ ತಿಳಿಸಲಾಗಿದೆ.

ಅದೇ ರೀತಿಯಲ್ಲಿ ಅರಳೇಶ್ವರ ಗ್ರಾಮ ಸದಾ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ .ಈ ಗ್ರಾಮವು ಗ್ರಾಮದ ಪಂಚಾಯತ್ ವ್ಯವಸ್ಥೆಯನ್ನು ಹೊಂದಿರುವುದರ ಜೊತೆಗೆ ಊರಿನ ಜನರ ಹಿತರಕ್ಷಣೆಗಾಗಿ ಎಲ್ಲ ಸೌಲಭ್ಯಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಒಳಗೊಂಡಿದೆ. 


                          ಇದಲ್ಲದೆ ಅರಳೇಶ್ವರ ಗ್ರಾಮವು ಧಾರ್ಮಿಕ ಆಚರಣೆಗಳಿಗೂ ಪ್ರಸಿದ್ಧಿ ಪಡೆದ ಗ್ರಾಮಗಳಲ್ಲಿ ಒಂದಾಗಿದೆ.ಈ ಗ್ರಾಮದ ಅಕ್ಕಪಕ್ಕದ ಊರುಗಳಲ್ಲಿ ಅನೇಕ ಸಾಧು-ಸಂತರದ ಪುಟ್ಟರಾಜ ಗವಾಯಿಗಳು, ಹಾನಗಲ್ಲ ಗುರು ಕುಮಾರ ಸ್ವಾಮಿಗಳು ಇನ್ನು ಅನೇಕರು ಬೆಳೆದ ನಾಡಾಗಿದೆ.ಪ್ರತಿವರ್ಷ ಗ್ರಾಮದಲ್ಲಿ ಅನೇಕ ದೇವರುಗಳ ಜಾತ್ರೆಯನ್ನು ಅತಿ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ದಿನಾಂಕ 10/4/2024 ರಿಂದ 21/4/2024 ರವರೆಗೆ ಊರಿನ ಆದಿದೇವನಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆಯನ್ನು ಆಚರಿಸಲಾಯಿತು. ಈ ಜಾತ್ರೆಯ ಪ್ರಯುಕ್ತ ಊರಿನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಹಬ್ಬ ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಊರಿನ ಎಲ್ಲ ಯುವಕರು ಸೇರಿ ಬೃಹತ್ ರಕ್ತದಾನ ಹಬ್ಬವನ್ನು ಆಚರಿಸಿದರು.

                         

                ಇದಷ್ಟೇ ಅಲ್ಲದೆ ಅರಳೇಶ್ವರ ಗ್ರಾಮದಲ್ಲಿನ ಯುವಕರು ದೇಸಿ ಸೊಗಡಿನ ಕಬ್ಬಡ್ಡಿಯಲ್ಲಿ ಅರಳೇಶ್ವರ ತಂಡದ ಮಿಂಚು ಆಟಗಾರರು ಗಮನ ಸೆಳೆಯುತ್ತಿದ್ದಾರೆ. 8

 ವರ್ಷಗಳ ಹಿಂದೆ ಗೆಳೆಯರು ಸೇರಿ ಜೈ ಭಜರಂಗಿ ಎಂಬ ಹೆಸರಿನಲ್ಲಿ ತಂಡವನ್ನು ನಿರ್ಮಿಸಿಕೊಂಡು ಸುತ್ತಲಿನ ಗ್ರಾಮಗಳಲ್ಲಿ ಹಾಗೂ ತಾಲೂಕು, ಜಿಲ್ಲೆಗಳಲ್ಲಿ ಆಯೋಜಿಸಲಾಗುವ ಟೂರ್ನಿಗಳಲ್ಲಿ ಪಾಲ್ಗೊಂಡು ಜಯವನ್ನು ಸಾಧಿಸಿದ್ದಾರೆ. ಇದರ ಬಳಿಕ ತಂಡಕ್ಕೆ ಅರಳೇಶ್ವರದ ಅಶ್ವ ಎಂದು ಮರುನಾಮಕರಣ ಮಾಡಲಾಯಿತು. ಹಾವೇರಿ ಜಿಲ್ಲೆ ಅಷ್ಟೇ ಅಲ್ಲದೆ ತುಮಕೂರು,ದಾವಣಗೆರೆ, ಗದಗ್, ಧಾರವಾಡ, ಶಿವಮೊಗ್ಗ ಹೀಗೆ ಹಲವೆಡೆಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿಯೂ ಸಹ ಈ ತಂಡ ಭಾಗವಹಿಸಿ ಜಯಸಾಧಿಸಿದೆ.

                    ಇದಲ್ಲದೆ ಅರಳೇಶ್ವರ ಗ್ರಾಮದಲ್ಲಿ ಕದಂಬರ ಕಾಲದ ಪ್ರಸಿದ್ಧ ದೇವಾಲಯವಾದ ಶ್ರೀ ಕದಂಬಲಿಂಗೇಶ್ವರ ದೇವಸ್ಥಾನವು ಇಂದಿಗೂ ಸಹ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.ಜೊತೆಗೆ ನಮ್ಮ ಊರು ಇತ್ತೀಚಿನ ದಿನಗಳಲ್ಲಿ ಹೋರಿ ಹಬ್ಬಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.

            ಇನ್ನು ಊರಿನಲ್ಲಿ ಉತ್ತಮವಾದ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಹಂತದವರೆಗೂ ಉತ್ತಮ ಶಿಕ್ಷಣ ನೀಡುವ ವಿದ್ಯಾಮಂದಿರಗಳನ್ನು ಸಹ ಕಾಣಬಹುದು. 


                                                 ದಿವ್ಯಾ ಲೇಖಿ

      

          ಎಂ ಎಂ ಮಹಾವಿದ್ಯಾಲಯ ಶಿರಸಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ